ಕುಶಾಲನಗರ ಖಾಸಗಿ ಶಾಲೆಯ 26 ವಿದ್ಯಾರ್ಥಿಗಳಿಗೆ ಕೊರೊನಾ ದೃಢ; ಒಮಿಕ್ರಾನ್ ಆತಂಕ ಹಿನ್ನೆಲೆ ಭಾನುವಾರ ಸಿಎಂ ಸಭೆ

ಕುಶಾಲನಗರ ಖಾಸಗಿ ಶಾಲೆಯ 26 ವಿದ್ಯಾರ್ಥಿಗಳಿಗೆ ಕೊರೊನಾ ದೃಢ; ಒಮಿಕ್ರಾನ್ ಆತಂಕ ಹಿನ್ನೆಲೆ ಭಾನುವಾರ ಸಿಎಂ ಸಭೆ
ಸಾಂದರ್ಭಿಕ ಚಿತ್ರ

ರಾಜ್ಯದಲ್ಲಿ ಒಮಿಕ್ರಾನ್ ಎರಡನೇ ಹಂತದಲ್ಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ವಿದೇಶದಿಂದ ಬಂದವರಿಗಷ್ಟೇ ಅಲ್ಲ ಸ್ಥಳೀಯವಾಗಿ ಹರಡುತ್ತಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ಹೀಗಾಗಿ ತಜ್ಞರಿಂದ ಚರ್ಚಿಸಿ ಮತ್ತಷ್ಟು ಟಫ್ ರೂಲ್ಸ್ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

TV9kannada Web Team

| Edited By: ganapathi bhat

Dec 25, 2021 | 5:27 PM

ಮಡಿಕೇರಿ: ಜಿಲ್ಲೆಯ ಕುಶಾಲನಗರದ ಖಾಸಗಿ ಶಾಲೆಯ 26 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಸುಮಾರು 680 ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಖಾಸಗಿ ಶಾಲೆಯಲ್ಲಿ 385 ವಿದ್ಯಾರ್ಥಿಗಳ ಕೊರೊನಾ ಪರೀಕ್ಷೆ ವರದಿ ಬಂದಿದೆ. ಆ ಪೈಕಿ 26 ವಿದ್ಯಾರ್ಥಿಗಳಿಗೆ ಕೊವಿಡ್19 ವರದಿ ಪಾಸಿಟಿವ್ ಎಂದು ಬಂದಿದೆ. ಇಂದು ಇನ್ನೂ 300 ವಿದ್ಯಾರ್ಥಿಗಳ ಟೆಸ್ಟ್ ರಿಪೋರ್ಟ್ ಬರಲಿದೆ ಎಂದು ಮಾಹಿತಿ ಲಭ್ಯವಾಗಿದೆ.

ಕರ್ನಾಟಕ ರಾಜ್ಯದಲ್ಲಿ ಒಮಿಕ್ರಾನ್ ಹೆಚ್ಚಳದ ಆತಂಕದ ಹಿನ್ನಲೆ ನಾಳೆ (ಡಿಸೆಂಬರ್ 26) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಲಿದೆ. ಗೃಹ ಕಚೇರಿ ಕೃಷ್ಣಾದಲ್ಲಿ 9 ಗಂಟೆಗೆ ಮಹತ್ವದ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ. ರಾಜ್ಯದಲ್ಲಿ ಒಮಿಕ್ರಾನ್ ಎರಡನೇ ಹಂತದಲ್ಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ವಿದೇಶದಿಂದ ಬಂದವರಿಗಷ್ಟೇ ಅಲ್ಲ ಸ್ಥಳೀಯವಾಗಿ ಹರಡುತ್ತಿದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ಹೀಗಾಗಿ ತಜ್ಞರಿಂದ ಚರ್ಚಿಸಿ ಮತ್ತಷ್ಟು ಟಫ್ ರೂಲ್ಸ್ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಓಮಿಕ್ರಾನ್ ವೇಗವಾಗಿ ಹರಡಿದ್ರು ತೀವ್ರತೆ ಕಡಿಮೆ ಇರಲಿದೆ. ಸಾವಿನ ಆತಂಕ ಕಡಿಮೆ ಇದ್ದರೂ ಕೊರೊನಾ ವೇಗವಾಗಿ ಹರಡುವ ಭೀತಿ ಇದೆ. ಹೀಗಾಗಿ ಕೆಲವೊಂದು ಸಭೆ ಸಮಾರಂಭಗಳಿಗೆ ಮತ್ತೆ ಇಂತಿಷ್ಟೇ ಜನ ಅಂತಾ ಸೀಮಿತಗೊಳಿಸಲುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ನೈಟ್ ಕರ್ಫ್ಯೂ ವಿಚಾರವನ್ನ ತಜ್ಞರು ಸಿಎಂ ಮುಂದೆ ಪ್ರಸ್ತಾಪಿಸುವುದು ಖಚಿತವಾಗಿದೆ. ಬಾರ್, ರೆಸ್ಟೋರೆಂಟ್, ಪಬ್, ಹೋಟೆಲ್​ಗಳಲ್ಲಿ 50:50 ರೂಲ್ಸ್ ನಿಯಮ ಜಾರಿ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಕರ್ನಾಟಕ ರಾಜ್ಯದ ಗಡಿ ಜಿಲ್ಲೆಗಳಲ್ಲಿ ತೀವ್ರ ಕಟ್ಟೇಚ್ಚರಕ್ಕೆ ಸೂಚಿಸಲಾಗುತ್ತೆ. ಎರಡನೇ ಡೋಸ್ ಎಲ್ಲರಿಗೂ ಬೇಗ ಕಂಪ್ಲೀಟ್ ಮಾಡಲು ಸಿಎಂ ಸೂಚಿಸಲಿದ್ದಾರೆ. ಹೊಸ ವರ್ಷಚಾರಣೆ ಹಿನ್ನಲೆ ಮುಂದಿನ 15 ದಿನ ಕಠಿಣ ನಿಯಮ ಜಾರಿಮಾಡಲಿದ್ದಾರೆ. ಇದರ ಜೊತೆ ನೈಟ್ ಪಾರ್ಟಿಗಳಿಗೆ ಮುಂದಿನ 15 ದಿನ ಬ್ರೇಕ್ ಹಾಕುವ ಸಾಧ್ಯತೆ ಇದೆ. ಈ ಬಗ್ಗೆ ನಾಳೆ ತಜ್ಞರ ಜೊತೆ ಸಭೆ ಬಳಿಕ ಮತ್ತೊಂದು ಹೊಸ ಮಾರ್ಗಸೂಚಿ ಬಿಡುಗಡೆಯಾಗಲಿದೆ ಎಂದು ಮಾಹಿತಿ ಲಭ್ಯವಾಗಿದೆ. ನಾಳಿನ ಸಭೆಯಲ್ಲಿ ತಜ್ಞರ ಜೊತೆಗೆ ಆರೋಗ್ಯ ಇಲಾಖೆ ಸಚಿವರು, ಕಂದಾಯ ಸಚಿವರು, ಗೃಹ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಬಿಬಿಎಂಪಿ ಆಯುಕ್ತರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ಕೊರೊನಾ ರೂಪಾಂತರ ಆಗುವ ಲಕ್ಷಣ ಇದೆ; ಸಂಶಯ, ಅಸಹನೆ, ದ್ವೇಷ, ರಾಜಕೀಯ ಕಲಹ ಹೆಚ್ಚಾಗುತ್ತೆ: ಕೋಡಿಮಠ ಶ್ರೀ ಭವಿಷ್ಯ

ಇದನ್ನೂ ಓದಿ: ವಿಶ್ವದಲ್ಲಿ ಕೊರೊನಾ 4 ಬಾರಿ ಉಲ್ಬಣವಾಗಿದೆ: ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 358 ಕ್ಕೆ ಏರಿಕೆಯಾಗುತ್ತಿದ್ದಂತೆ ಕೇಂದ್ರದಿಂದ ಎಚ್ಚರಿಕೆ

Follow us on

Related Stories

Most Read Stories

Click on your DTH Provider to Add TV9 Kannada