ಇಂದಿನ ಬ್ಯುಸಿ ಬ್ಯುಸಿ ಲೈಫಿನಲ್ಲಿ ಯಾವಾಗ ನಿದ್ರೆ ಮಾಡುತ್ತೇವೋ, ಯಾವಾಗ ನಿದ್ದೆಯಿಂದ ಏಳುತ್ತೇವೋ… ಅಸಲಿಗೆ ತಿಳಿಯದಾಗಿದೆ. ಅಂತಹುದರಲ್ಲಿ ಬೆಳಗಿನ ತಿಂಡಿಯನ್ನು ಜಾಗ್ರತೆಯಿಂದ ಆರಿಸಿಕೊಳ್ಳಬೇಕಿದೆ. ಸಿಕ್ಕಿದ್ದೆಲ್ಲಾ ತಿನ್ನತೊಡಗಿದರೆ ಆಹಾರ ಕೈಕೊಡುವುದು ಗ್ಯಾರಂಟಿ.
ಹೌದು! ಇಂದಿನ ಬ್ಯುಸಿ ಬ್ಯುಸಿ ಲೈಫಿನಲ್ಲಿ ಯಾವಾಗ ನಿದ್ರೆ ಮಾಡುತ್ತೇವೋ, ಯಾವಾಗ ನಿದ್ದೆಯಿಂದ ಏಳುತ್ತೇವೋ… ಅಸಲಿಗೆ ತಿಳಿಯದಾಗಿದೆ. ಈ ಜೀವನ ಕ್ರಮದಲ್ಲಿರುವಾಗಲೇ ಅನೇಕ ಮಂದಿ ಬೆಳಗಿನ ತಿಂಡಿ/ ಟಿಫಿನ್ ತಿನ್ನುವುದೆ ಇಲ್ಲ. ಮಧ್ಯಾಹ್ನ ಊಟ ಮಾಡಿದರಾಯಿತು ಬಿಡು ಎಂಬ ಉದಾಸೀನತೆ, ಬೇಸರಗಳು ಮನೆಮಾಡಿವೆ. ಅಥವಾ ಸ್ವಲ್ಪವೇ ತಿಂಡಿ ಅಂದರೆ ಲಘು ಫಲಾಹಾರ ತಿಂದು ಸುಮ್ಮನಾಗುತ್ತಾರೆ. ಆದರೆ ಅಸಲಿಗೆ ಹಾಗೆ ಮಾಡಲೇಬಾರದು/ ಅಂತಹ ಜೀವನ ಕ್ರಮ ಅಳವಡಿಸಿಕೊಳ್ಳಲೇಬಾರದು ಎನ್ನುತ್ತಾರೆ ಆಹಾರ ಪರಿಣತರು ಮತ್ತು ವೈದ್ಯರೂ ಸಹ!
ಉದಯ ಕಾಲದಲ್ಲಿ ತಪ್ಪದೆ ಬ್ರೇಕ್ ಫಾಸ್ಟ್ ತಿನ್ನಬೇಕೆಂದು ವೈದ್ಯರು ಸೂಚಿಸುತ್ತಾರೆ. ಉತ್ತಮ ಪೋಷಕಾಂಶಗಳಿರುವ ಅಲ್ಪಾಹಾರವನ್ನು ಸೇವಿಸಿದರೆ ಆ ದಿನಕ್ಕೆ ಅಗತ್ಯವಿರುವ ಎನರ್ಜಿ ದೇಹಕ್ಕೆ ಲಭ್ಯವಾಗುತ್ತದೆ ಎನ್ನುತ್ತಾರೆ ಆಹಾರ ತಜ್ಞರು. ಬೆಳಗ್ ಬೆಳಗ್ಗೆ ಏನಾದರೂ ಹೊಟ್ಟೆಗೆ ಬಿದ್ದರೇನೇ ಬಂಡಿ ಮುಂದಕ್ಕೆ ಸರಾಗವಾಗಿ ಓಡುವುದು ಎಂದು ಮನೆಯಲ್ಲಿ ಹಿರಿಯರು ಹೇಳುತ್ತಾರೆ. ಬೆಳಗ್ಗೆ ವೇಳೆ ಸರಿಯಾದ ಪೋಷಕಾಂಶಯುಕ್ತ ತಿನಿಸು ತಿನ್ನದೇ ಇದ್ದರೆ ಆರೋಗ್ಯ ಸಮಸ್ಯೆಗಳು ಕಾಡತೊಡಗುತ್ತವೆ. ಇದರ ಬಗ್ಗೆ ಕೆಲವು ಟಿಪ್ಟ್ ನೀಡುತ್ತಾರೆ ಆಧುನಿಕ ವೈದ್ಯರು. ಅವು ಈ ಕೆಳಗಿನಂತಿವೆ:
ಬೆಳಗಿನ ವೇಳೆ ಎಣ್ಣೆ ಪದಾರ್ಥ ತಿನ್ನಬಾರದು. ಎಣ್ಣೆಯಿಂದ ಮಾಡಿದ ಪೂರಿ, ಪರೋಟಾ ಅಂತಹ ಕರಿದ ತಿಂಡಿತಿನಿಸುಗಳನ್ನು ತಿನ್ನಬಾರದು. ಹಾಗೆಯೇ, ಹೆಚ್ಚು ಸಕ್ಕರೆ ಹಾಕಿ ಮಾಡಿದ ಅಲ್ಪಾಹಾರಗಳನ್ನು ಸಹ ಸೇವಿಸಬಾರದು. ವೈಟ್ ಬ್ರೆಡ್, ರೀಫೈನ್ಡ್ ಗ್ರೈನ್ಸ್ ನಿಂದ ಮಾಡಿದ ತಿಂಡಿ ತಿನ್ನಬಾರದು. ಪ್ರೋಟೀನ್ ಶೇಕ್ಸ್ ಅಂತಾ ಅದೂ ಇದೂ ಸೇವಿಸಬಾರದು. ಇವುಗಳಿಂದ ದೂರವಿದ್ದಷ್ಟೂ ಆರೋಗ್ಯ ನಿಮ್ಮ ಹತ್ತಿರವೇ ಸುಭದ್ರವಾಗಿರುತ್ತದೆ. ಬೆಳಗಿನ ವೇಳೆ ಎಣ್ಣೆ ರಹಿತ ಟಿಫಿನ್ ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ ಆಹಾರ ಪರಿಣತರು. ಹಾಗಾಗಿ ಇವುಗಳನ್ನು ಚಾಚೂ ತಪ್ಪದೆ ಪಾಲಿಸುವುದರಲ್ಲೇ ನಿಮ್ಮ ಹಿತ ಅಡಗಿದೆ! (Source)
ಹೆಚ್ಚಿನ ಆರೋಗ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:18 pm, Sat, 14 May 22