ನಿತ್ಯ 7-10 ತಾಸು ಮೊಬೈಲ್ ಬಳಸುವ ಯುವಕರನ್ನು ಕಾಡುತ್ತಿರುವ ಸಮಸ್ಯೆಗಳು

Smart Phone Use: ನೀವು ದಿನನಿತ್ಯ 7-10 ತಾಸುಗಳ ಕಾಲ ಸ್ಮಾರ್ಟ್​ಫೋನ್(SmartPhone) ಬಳಕೆ ಮಾಡುತ್ತಿದ್ದರೆ ನಿಮ್ಮ ಮಾನಸಿಕ ಆರೋಗ್ಯ( Mental Health) ಹದಗೆಡಬಹುದು ಎಂದು ಸಂಶೋಧನೆ ಹೇಳಿದೆ.

ನಿತ್ಯ 7-10 ತಾಸು ಮೊಬೈಲ್ ಬಳಸುವ ಯುವಕರನ್ನು ಕಾಡುತ್ತಿರುವ ಸಮಸ್ಯೆಗಳು
Smartphone
Follow us
TV9 Web
| Updated By: ನಯನಾ ರಾಜೀವ್

Updated on:May 15, 2022 | 12:24 PM

ನೀವು ದಿನನಿತ್ಯ 7-10 ತಾಸುಗಳ ಕಾಲ ಸ್ಮಾರ್ಟ್​ಫೋನ್(Smartphone) ಬಳಕೆ ಮಾಡುತ್ತಿದ್ದರೆ ನಿಮ್ಮ ಮಾನಸಿಕ ಆರೋಗ್ಯ( Mental Health) ಹದಗೆಡಬಹುದು ಎಂದು ಸಂಶೋಧನೆ ಹೇಳಿದೆ. ಸಾಫಿಯನ್ ಲ್ಯಾಬ್ ನೀಡಿರುವ ಮಾಹಿತಿ ಪ್ರಕಾರ ದಿನದಿಂದ ದಿನಕ್ಕೆ ಸ್ಮಾರ್ಟ್​ ಬಳಕೆ ಪ್ರಮಾಣ ಹೆಚ್ಚಾಗುತ್ತಿದೆ ಇದು 18-24 ವರ್ಷದೊಳಗಿನ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಹದಗೆಡುತ್ತಿದೆ ಎಂಬುದು ತಿಳಿದುಬಂದಿದೆ. ವರದಿ ಪ್ರಕಾರ ಜನರು ನಿತ್ಯ 7-10ತಾಸುಗಳ ಕಾಲ ಮೊಬೈಲ್ ಬಳಕೆ ಮಾಡುತ್ತಿದ್ದಾರೆ, ಮಕ್ಕಳು ಕುಟುಂಬದವರ ಜತೆ ಕಾಲ ಕಳೆಯುವ ಪ್ರಮಾಣ ಕೂಡ ಕಡಿಮೆಯಾಗಿದೆ.

ಕೊರೊನಾ ಬಂದ ಬಳಿಕ ಪ್ರಾಥಮಿಕ ಶಾಲಾ ಹಂತದ ಮಕ್ಕಳು ಕೂಡ ಮೊಬೈಲ್ ಬಳಕೆ ಶುರು ಮಾಡಿದ್ದಾರೆ. ದಿನನಿತ್ಯದ ಜೀವನದಲ್ಲಿ ಮೊಬೈಲ್​ ಫೋನ್​ ಇಂದು ಅನಿವಾರ್ಯವಾಗಿದೆ. ದೂರದ ಸ್ನೇಹಿತರಿಗೆ, ಬಂಧುಗಳಿಗೆ ತುರ್ತು ಸುದ್ದಿ ಮುಟ್ಟಿಸಲು, ಸಂದೇಶ ತಲುಪಿಸಲು, ವ್ಯವಹಾರದ ಮಾತುಕತೆಗೆ ಮೊಬೈಲ್​ ಅವಶ್ಯಕ. ಆದರೆ ಅತಿಯಾದರೆ ಅಮೃತವು ವಿಷವೆನ್ನುವಂತೆ ಮೊಬೈಲ್​ ಎಷ್ಟು ಉಪಯುಕ್ತವೋ ಅಷ್ಟೇ ಅಪಾಯಕಾರಿ ಕೂಡ.

ಸ್ಮಾರ್ಟ್​ ಫೋನ್​ ಆರೋಗ್ಯದ ಮೇಲೆ ಉಂಟು ಮಾಡುವ ಪರಿಣಾಮ

ಬೆನ್ನು ಹುರಿಯ ಸಮಸ್ಯೆ: ಸಾಕಷ್ಟು ಮಂದಿ ಸ್ಮಾರ್ಟ್​ ಫೋನ್​ ಬಳಕೆದಾರರು ಬೆನ್ನು ಹುರಿಯ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ, 2015ರ ಮೊಬೈಲ್​ ಸಮೀಕ್ಷೆಯಂತೆ ಶೇ.45 ರಷ್ಷು ಮೊಬೈಲ್​ ಬಳಸುವ 16 ರಿಂದ 24 ವರ್ಷದ ಯುವಕರು ಬೆನ್ನು ಹುರಿಯ ನೋವಿನಿಂದ ಬಳಲುತ್ತಿದ್ದಾರೆ. ಇನ್ನೂ ಪ್ರತಿ ದಿನವು ಶೇ.25 ರಷ್ಟು ಬಳಕೆದಾರರಲ್ಲಿ ಬೆನ್ನು ಹುರಿ ನೋವು ಕಾಣಿಸಿಕೊಳ್ಳುತ್ತಿರುವುದು ಸಾಮಾನ್ಯ ಎನ್ನಲಾಗಿದೆ.

ಆತಂಕ ಮತ್ತು ಖಿನ್ನತೆ: ಸಮೀಕ್ಷೆಯ ಪ್ರಕಾರ ಅತಿಯಾದ ಮೊಬೈಲ್​ ಬಳಕೆಯಿಂದ ಬಳಕೆದಾರರಲ್ಲಿ ಖಿನ್ನತೆ ಮತ್ತು ಆತಂಕ ಹೆಚ್ಚಾಗುತ್ತದೆ. ಹೆಚ್ಚಾಗಿ ಗೇಮ್ಸ್​​, ವೀಡಿಯೋವನ್ನು ವೀಕ್ಷಕರಲ್ಲಿ ಈ ಸಮಸ್ಯೆ ಕಂಡುಬರುತ್ತದೆ.

ನರದ ಸಮಸ್ಯೆ: ಯುವಕರು ಹೆಚ್ಚಾಗಿ ಸ್ಮಾರ್ಟ್​ ಫೋನ್​ ಬಳಸುತ್ತಾರೆ. ಹಾಡು, ಗೇಮ್ಸ್​, ಸಾಮಾಜಿಕ ಜಾಲತಾಣವನ್ನು ವೀಕ್ಷಿಸುವಲ್ಲಿ ಹೆಚ್ಚಾಗಿ ಸ್ಮಾರ್ಟ್​ಫೋನ್​ನಲ್ಲಿ ಸಮಯ ಕಳೆಯುತ್ತಾರೆ. ಕುಳಿತಲ್ಲೇ ಕುಳಿತು ಮೊಬೈಲ್​ ಬಳಕೆಯಲ್ಲಿ ತಲ್ಲೀನರಾಗುವ ಯುವಕರಲ್ಲಿ ನರದ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ.

ಕಣ್ಣಿನ ಸಮಸ್ಯೆ: ಸ್ಮಾರ್ಟ್​ಫೋನ್​ ಬಳಕೆದಾರರು ಅತಿಯಾದ ಮೊಬೈಲ್​ ಬಳಕೆಯಿಂದ ಕಣ್ಣಿನ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಮೊಬೈಲ್​ ಡಿಸ್​ಪ್ಲೇ ಮೂಲಕ ಮೂಡುವ ಬೆಳಕು ಬಳಕೆದಾರರ ಕಣ್ಣಿನ ದೃಷ್ಠಿಗೆ ಹಾನಿಯುಂಟು ಮಾಡುತ್ತದೆ ಎಂದು ಸಂಶೋಧನೆಯೊಂದು ತಿಳಿಸಿದೆ.

ನಿದ್ರಾಹೀನತೆ: ಶೇ.68 ರಷ್ಟು ಸ್ಮಾರ್ಟ್​ಫೋನ್​ ಬಳಕೆಯ 18 ರಿಂದ 29 ವರ್ಷದ ಜನರಲ್ಲಿ ನಿದ್ರಾಹೀನತೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಯುವಕರಲ್ಲಿ ಈ ಸಮಸ್ಯೆಯು ಹೆಚ್ಚಾಗಿ ಕಂಡುಬರುತ್ತಿದ್ದು, ರಾತ್ರಿ ವೇಳೆಯಲ್ಲಿ ಅತಿಯಾದ ಮೊಬೈಲ್​ ಬಳಕೆಯಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗಿದೆ.

ಸೂಚನೆ: ಈ ಮಾಹಿತಿಗಳು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಮೀಕ್ಷಾ ವರದಿ ಆಧರಿಸಿದ ಲೇಖನವಾಗಿದೆ.

ಆರೋಗ್ಯ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:10 pm, Sun, 15 May 22