AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀರು ಬದಲಾದರೆ ಕೂದಲು ಉದುರುತ್ತದೆ ಎಂಬುದು ಸತ್ಯವೇ? ತಜ್ಞರು ನೀಡಿದ ಮಾಹಿತಿ ಇಲ್ಲಿದೆ

ಕೂದಲು ಉದುರುವಿಕೆಯ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಸಾಮಾನ್ಯ ಆದರೆ ಅನೇಕ ಬಾರಿ ನಾವು ಈ ಸಮಸ್ಯೆಯ ಹಿಂದಿನ ಕಾರಣಗಳನ್ನು ಅರ್ಥಮಾಡಿಕೊಳ್ಳುವುದನ್ನು ಬಿಟ್ಟು, ವಿಭಿನ್ನ ಕಾರಣಗಳನ್ನು ನಾವೇ ನೀಡುವ ಮೂಲಕ ದೂಷಿಸಿಕೊಳ್ಳಲು ಪ್ರಾರಂಭಿಸುತ್ತೇವೆ. ಆದರೆ ನಾವು ಆಗಾಗ ನೀರು ಬದಲಾವಣೆ ಮಾಡಿದರೆ ಕೂದಲು ಉದುರುವಿಕೆಗೆ ಕಾರಣವಾಗಬಹುದೇ? ಹಾಗಾದರೆ ಈ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳುವುದು ಹೇಗೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ನೀರು ಬದಲಾದರೆ ಕೂದಲು ಉದುರುತ್ತದೆ ಎಂಬುದು ಸತ್ಯವೇ? ತಜ್ಞರು ನೀಡಿದ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Jan 02, 2025 | 6:01 PM

Share

ಇತ್ತೀಚಿನ ದಿನಗಳಲ್ಲಿ, ಕೂದಲು ಉದುರುವಿಕೆಯ ಸಮಸ್ಯೆ ಸಾಮಾನ್ಯವಾಗಿದೆ. ಎಲ್ಲಾ ವಯಸ್ಸಿನವರು, ಅಂದರೆ ಯುವಕ, ಯುವತಿಯರಿಂದ ಹಿಡಿದು ವಯಸ್ಸಾದವರ ವರೆಗೆ, ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ದೊಡ್ಡ ವಿಷಯವಲ್ಲ ಎನಿಸಿದರೂ ಕೂಡ ನಮ್ಮ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರುತ್ತದೆ. ಅದರ ಜೊತೆಗೆ ಮಾನಸಿಕ ಒತ್ತಡವನ್ನು ಉಂಟುಮಾಡಬಹುದು. ಸಾಮಾನ್ಯವಾಗಿ ಕೂದಲು ಉದುರುವುದಕ್ಕೆ ಅನೇಕ ಕಾರಣಗಳಿರಬಹುದು, ಅವುಗಳಲ್ಲಿ ಮನೆ ಬದಲಿಸುವುದು ಕೂಡ ಸೇರಿಕೊಳ್ಳುತ್ತದೆ. ಅಂದರೆ ಒಂದು ಸ್ಥಳದಿಂದ ಮೊತ್ತೊಂದು ಸ್ಥಳಕ್ಕೆ ಹೋದಾಗ ನೀರು ಬದಲಾಗುತ್ತದೆ. ಹಾಗಾಗಿ ನಾವು ಇರುವಲ್ಲಿ ಸ್ನಾನಕ್ಕೆ ಬಳಸುವ ನೀರು ಕೂಡ ಕೂದಲು ಉದುರುವುದಕ್ಕೆ ಮುಖ್ಯ ಕಾರಣವಾಗಿರಬಹುದು. ಅಂದರೆ ನೀವು ಇತ್ತೀಚಿಗೆ ಹೊಸ ನಗರವೊಂದಕ್ಕೆ ಸ್ಥಳಾಂತರಗೊಂಡಿದ್ದು ನಿಮಗೆ ಕೂದಲು ಉದುರುವ ಸಮಸ್ಯೆ ಪ್ರಾರಂಭವಾಗಿದ್ದರೆ, ಅದು ನೀರಿನ ಬದಲಾವಣೆಯಿಂದಾಗಿರಬಹುದು. ಇದರ ಬಗ್ಗೆ ವಿವರವಾಗಿ ತಿಳಿದುಕೊಳ್ಳಿ. ಹಾಗಾದರೆ ಈ ಸಮಸ್ಯೆಯಿಂದ ಪರಿಹಾರ ಪಡೆದುಕೊಳ್ಳುವುದು ಹೇಗೆ? ಇದು ನಿಜವೇ? ನೀರು ಬದಲಾದರೆ ಕೂದಲು ಉದುರುತ್ತದೆಯೇ? ಈ ಎಲ್ಲಾ ಪ್ರಶ್ನೆಗೆ ಉತ್ತರ ಇಲ್ಲಿದೆ.

ನೀರು ಬದಲಾದರೆ ಕೂದಲು ಉದುರುತ್ತದೆಯೇ?

ಶ್ರೀ ಬಾಲಾಜಿ ಆಕ್ಷನ್ ಮೆಡಿಕಲ್ ಇನ್ಸ್ಟಿಟ್ಯೂಟ್ನ ಹಿರಿಯ ಸಲಹೆಗಾರ, ಚರ್ಮರೋಗ ತಜ್ಞ ಡಾ. ವಿಜಯ್ ಸಿಂಘಾಲ್ ಅವರು ಹೇಳುವ ಪ್ರಕಾರ, ಕೂದಲು ಉದುರುವುದು ನೀರಿನ ಬದಲಾವಣೆಯಿಂದಲ್ಲ, ಆದರೆ ಅದರ ಕಳಪೆ ಗುಣಮಟ್ಟದಿಂದ ಎಂದು ಅವರು ಹೇಳುತ್ತಾರೆ. ಏಕೆಂದರೆ ನೀರು ಚೆನ್ನಾಗಿಲ್ಲದಿದ್ದರೆ ಅಥವಾ ಗುಣಮಟ್ಟ ಸರಿಯಾಗಿ ಇಲ್ಲದಿದ್ದರೆ ಆಗ ಅದರಿಂದ ಕೂದಲು ಉದುರುವುದು ಅಥವಾ ತೆಳ್ಳಗಾಗುವ ಸಮಸ್ಯೆಗೆ ಕಾರಣವಾಗಬಹುದು. ನೀರಿನಲ್ಲಿ ಹೆಚ್ಚು ಕ್ಲೋರಿನ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ನಂತಹ ಕಠಿಣ ಲೋಹ ಅಥವಾ ಕೊಳಕು ಇದ್ದರೆ, ಅದು ಕೂದಲು ಮತ್ತು ನೆತ್ತಿಯನ್ನು ಹಾನಿಗೊಳಿಸುತ್ತದೆ. ಅಂತಹ ನೀರಿನಿಂದ ಕೂದಲನ್ನು ತೊಳೆದರೆ ನೆತ್ತಿಯಲ್ಲಿರುವ ತೇವಾಂಶ ಹೋಗಿ ಕೂದಲು ಒಣಗುತ್ತದೆ. ಅಲ್ಲದೆ ಇದರಿಂದ ಕೂದಲು ದುರ್ಬಲಗೊಂಡು ಒಡೆಯಲು ಕಾರಣವಾಗುತ್ತದೆ. ಅಲ್ಲದೆ, ಇದು ಕೂದಲಿನ ನೈಸರ್ಗಿಕ ತೇವಾಂಶವನ್ನು ಕೂಡ ತೆಗೆಯುತ್ತದೆ. ಹಾಗಾದರೆ ಇದನ್ನು ಯಾವ ರೀತಿ ತಡೆಗಟ್ಟಬೇಕು? ಬೆಂಗಳೂರಿನಲ್ಲಿ ಪದೇ ಪದೇ ಮನೆ ಬದಲಿಸುವವರು ಯಾವ ವಿಷಯಗಳನ್ನು ಗಮನದಲ್ಲಿರಿಸಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಿ.

ತಡೆಗಟ್ಟಲು ಹೀಗೆ ಮಾಡಿ;

  • ನೀರನ್ನು ಶುದ್ಧೀಕರಿಸಲು ಫಿಲ್ಟರ್ ಬಳಸಿ. ಇದು ನೀರಿನ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ಕೂದಲಿಗೆ ಹಾನಿ ಮಾಡುವುದಿಲ್ಲ.
  • ಕೂದಲಿನ ತೇವಾಂಶವನ್ನು ಕಾಪಾಡಿಕೊಳ್ಳಲು ಮಾಯಿಶ್ಚರೈಸರ್ ಗಳೊಂದಿಗೆ ಶಾಂಪೂ ಮತ್ತು ಕಂಡೀಷನರ್ ಗಳನ್ನು ಬಳಸಿ. ಇದು ಕೂದಲು ಒಣಗುವುದನ್ನು ತಡೆಯುತ್ತದೆ.
  • ವಾರಕ್ಕೊಮ್ಮೆ ತೆಂಗಿನಕಾಯಿ, ಆಮ್ಲಾ ಅಥವಾ ಬಾದಾಮಿ ಎಣ್ಣೆಯಿಂದ ನೆತ್ತಿಯನ್ನು ಮಸಾಜ್ ಮಾಡಿ. ಈ ರೀತಿ ಮಾಡುವುದರಿಂದ, ಕೂದಲಿನ ಬೇರುಗಳು ಬಲಗೊಳ್ಳುತ್ತವೆ ಮತ್ತು ನೆತ್ತಿಯ ತೇವಾಂಶವು ಉಳಿಯುತ್ತದೆ.
  • ಕೂದಲಿನ ಆರೋಗ್ಯಕ್ಕಾಗಿ, ನಿಮ್ಮ ಆಹಾರದಲ್ಲಿ ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜ ಸಮೃದ್ಧ ಆಹಾರಗಳನ್ನು ಸೇರಿಸಿ.

ಸಮಸ್ಯೆ ಉಲ್ಬಣಗೊಳ್ಳುತ್ತಿದ್ದರೆ, ತಕ್ಷಣ ಚರ್ಮರೋಗ ತಜ್ಞರನ್ನು ಸಂಪರ್ಕಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಭಾರಿ ಅಗ್ನಿ ಅವಘಡ
ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್​ ಹಾಲ್​ನಲ್ಲಿ ಭಾರಿ ಅಗ್ನಿ ಅವಘಡ
ಹಗಲಿನಲ್ಲಿ ನಿದ್ರೆ ಮಾಡಬಹುದಾ ಅಥವಾ ಮಾಡಬಾರದಾ?
ಹಗಲಿನಲ್ಲಿ ನಿದ್ರೆ ಮಾಡಬಹುದಾ ಅಥವಾ ಮಾಡಬಾರದಾ?
ಇಂದು ಈ ರಾಶಿಯವರಿಗೆ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು
ಇಂದು ಈ ರಾಶಿಯವರಿಗೆ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು
ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ
ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ಡಿಕೆಶಿ​ ಪಿಎಸ್ ಕಾರು ಅಪಘಾತ: ಬೈಕ್​ ಸವಾರ ಸಾವು, ಕಾರು ಪಲ್ಟಿ
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ