ಎದೆಹಾಲು ಕುಡಿಸುವುದರಿಂದ ತಾಯಿಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ
ಎದೆಹಾಲು ಕುಡಿಸುವುದರಿಂದ ತಾಯಿಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದೇ ಎಂಬುದರ ಕುರಿತು ಅಮೆರಿಕದಲ್ಲಿ ಅಧ್ಯಯನವೊಂದು ನಡೆದಿದೆ. ವುಮೆನ್ ಹೆಲ್ತ್ ಜರ್ನಲ್ನಲ್ಲಿ ಪ್ರಕಟವಾದ ವರದಿಯಲ್ಲಿ ಎದೆಹಾಲು ಕುಡಿಸುವುದರಿಂದ ತಾಯಿಯ ಮಾನಸಿಕ ಆರೋಗ್ಯ ಕುಂಠಿತವಾಗಲಿವೆ ಎಂಬ ಅಂಶದ ಮೇಲೆ ಬೆಳಕು ಚೆಲ್ಲಲಾಗಿದೆ.
ಎದೆಹಾಲು (Breast Milk)ಕುಡಿಸುವುದರಿಂದ ತಾಯಿಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದೇ ಎಂಬುದರ ಕುರಿತು ಅಮೆರಿಕದಲ್ಲಿ ಅಧ್ಯಯನವೊಂದು ನಡೆದಿದೆ. ವುಮೆನ್ ಹೆಲ್ತ್ ಜರ್ನಲ್ನಲ್ಲಿ ಪ್ರಕಟವಾದ ವರದಿಯಲ್ಲಿ ಎದೆಹಾಲು ಕುಡಿಸುವುದರಿಂದ ತಾಯಿಯ ಮಾನಸಿಕ ಆರೋಗ್ಯ (Mental Health) ಕುಂಠಿತವಾಗಲಿವೆ ಎಂಬ ಅಂಶದ ಮೇಲೆ ಬೆಳಕು ಚೆಲ್ಲಲಾಗಿದೆ. 36 ಮಂದಿಯ ಅಧ್ಯಯನ ನಡೆಸಲಾಗಿದ್ದು, ಈ 39 ಮಂದಿಯಲ್ಲಿ ಮಹಿಳೆಯ ಮಾನಸಿಕ ಸ್ಥಿತಿ ಹಾಗೂ ಎದೆ ಹಾಲು ಕುಡಿಸುವುದರ ನಡುವೆ ಸಂಬಂಧವಿದೆಯೇ ಎಂಬುದನ್ನು ಅಧ್ಯಯನ ಮಾಡಲಾಗಿದ್ದು, ಅದರಲ್ಲಿ 29 ಮಂದಿ ಹಲವು ರೀತಿಯ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿರುವುದು ತಿಳಿದುಬಂದಿದೆ. ಹಲವು ಮಂದಿ ಡಿಪ್ರೆಷನ್ಗೆ ಒಳಗಾಗಿದ್ದಾರೆ ಎನ್ನುವುದು ಗೊತ್ತಾಗಿದೆ.
ಮಗುವಿಗೆ ತಾಯಿ ಎದೆಹಾಲು ಉಣಿಸುವುದರಿಂದ ಮಗು ಮತ್ತು ತಾಯಿಯ ನಡುವಿನ ಬಂಧವು ವೃದ್ಧಿಯಾಗುತ್ತದೆ. ಮಗುವಿನ ಬೆಳವಣಿಗೆಗೆ ಅಗತ್ಯವಾದ ಎಲ್ಲಾ ಪೋಷಕಾಂಶಗಳು ತಾಯಿಯ ಹಾಲಿನಲ್ಲಿ ಇರುತ್ತದೆ. ಹಾಗಾಗಿ ಮಗುವಿನ ಬೆಳವಣಿಗೆಯು ಸೂಕ್ತ ರೀತಿಯಲ್ಲಿ ಉಂಟಾಗುವುದು. ತಾಯಿ ಸೂಕ್ತ ಸಮಯಗಳ ಕಾಲ ಮಗುವಿಗೆ ಹಾಲುಣಿಸುವುದರಿಂದ ಅಂಡಾಶಯದ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಸೇರಿದಂತೆ ಇನ್ನಿತರ ಕ್ಯಾನ್ಸರ್ ಮತ್ತು ಅನಾರೋಗ್ಯ ಸಮಸ್ಯೆಯನ್ನು ತಡೆಯಬಹುದು.
ತಾಯಿಯ ದೈಹಿಕ ಆರೋಗ್ಯ ಸುಧಾರಣೆ: ಮಗುವಿಗೆ 2 ವರ್ಷಗಳ ಕಾಲ ಹಾಲುಣಿಸುವುದರಿಂದ ದೇಹದಲ್ಲಿ ಸಾಕಷ್ಟು ಬದಲಾವಣೆ ಆಗುವುದು. ಹಾರ್ಮೋನ್‍ಗಳಲ್ಲಿ ಬದಲಾವಣೆ ಉಂಟಾಗುವುದು. ಗರ್ಭಾವಸ್ಥೆಯಲ್ಲಿ ಹಿಗ್ಗಿದ ಗರ್ಭಕೋಶ, ಅಂಡಾಶಯ, ಎದೆಯ ಗಾತ್ರ, ವಿಸ್ತಾರವಾದ ಸೊಂಟಗಳೆಲ್ಲಾ ಗರ್ಭಾವಸ್ಥೆಯ ಮೊದಲ ಸ್ಥಿತಿಗೆ ಹಿಂತಿರುತ್ತವೆ. ಸಡಿಲವಾದ ಚರ್ಮಗಳು ಬಿಗಿತವನ್ನು ಕಂಡುಕೊಳ್ಳುತ್ತವೆ. ದೇಹವು ಸೂಕ್ತ ಆರೋಗ್ಯ ಹಾಗೂ ಆಕಾರವನ್ನು ಮರಳಿ ಪಡೆದುಕೊಳ್ಳಲು ಸಹಾಯವಾಗುವುದು.
ತೂಕದಲ್ಲಿ ಇಳಿಕೆ: ಗರ್ಭಾವಸ್ಥೆ ಮತ್ತು ಪ್ರಸವದ ನಂತರ ತಾಯಿಯ ದೇಹದಲ್ಲಿ ಸಾಕಷ್ಟು ಕೊಬ್ಬಿನಾಂಶ ತುಂಬಿಕೊಳ್ಳುತ್ತವೆ. ಅವು ಕೆಲವೊಮ್ಮೆ ಜೀವನ ಪರ್ಯಂತ ಉಳಿದುಕೊಳ್ಳುತ್ತವೆ. ಅತಿಯಾದ ತೂಕ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ತಾಯಿ ಮಗುವಿಗೆ ಹಾಲುಣಿಸುವುದರಿಂದ ತನ್ನ ದೇಹದಲ್ಲಿ ಇರುವ ಅನಗತ್ಯ ಕೊಬ್ಬು ಮತ್ತು ತೂಕವನ್ನು ಕಳೆದುಕೊಳ್ಳುತ್ತಾಳೆ. ಜೊತೆಗೆ ಸುಂದರವಾದ ದೇಹವನ್ನು ಮರಳಿ ಪಡೆಯಲು ಸಾಧ್ಯವಾಗುವುದು.
ಮಹಿಳೆಯು ಹಲವು ರೀತಿಯ ತಾರತಮ್ಯ, ಕೌಟುಂಬಿಕ ಹಿಂಸೆ ಇತ್ಯಾದಿಗಳಿಂದ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಾಳೆ. ಮೊದಲೆಲ್ಲಾ ಮಹಿಳೆ ಮನೆ ಕೆಲಸಕ್ಕೆ ಮಾತ್ರ ಸೀಮಿತವಾಗಿದ್ದಳು, ಇಂದು ಆಕೆ ಮಾಡದ ಕೆಲಸವಿಲ್ಲ. ಆಕೆ ಎಲ್ಲಾ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸಿದ್ದಾಳೆ.
ಅಂತಹ ಮಹಿಳೆ ತನ್ನ ಮಾನಸಿಕ ಆರೋಗ್ಯದ ನಿರ್ಲಕ್ಷ್ಯವಹಿಸಿದರೆ ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಇಂದಿನ ಮಹಿಳೆಯರು ತಮ್ಮ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹು ಮುಖ್ಯವಾಗಿದೆ. ಯಾವುದೇ ಕಾರಣವಿಲ್ಲದೆ ದುಃಖ, ಖಿನ್ನತೆ, ಗೊಂದಲಮಯ ಆಲೋಚನೆ ಅಥವಾ ಏಕಾಗ್ರತೆಯ ಕಡಿಮೆ ಸಾಮರ್ಥ್ಯ, ಅತಿಯಾದ ಭಯ ಅಥವಾ ಚಿಂತೆಗಳು, ಅಪರಾಧದ ತೀವ್ರ ಭಾವನೆಗಳು, ಏರಿಳಿತದ ಮನಸ್ಥಿತಿ ಬದಲಾವಣೆಗಳು,ಗಮನಾರ್ಹವಾದ ಆಯಾಸ, ಕಡಿಮೆ ಶಕ್ತಿ ಅಥವಾ ನಿದ್ರೆಯ ಸಮಸ್ಯೆಗಳು ಉಂಟಾಗುತ್ತವೆ.
ನಿಮ್ಮ ಕುಟುಂಬದ ಮಹಿಳೆಯರಲ್ಲಿ ಇಂತಹ ರೋಗಲಕ್ಷಣಗಳನ್ನು ನೀವು ಗಮನಿಸಿದರೆ, ಬೇಗನೆ ಚಿಕಿತ್ಸೆ ಪಡೆಯಲು ವೈದ್ಯರು ಶಿಫಾರಸು ಮಾಡುತ್ತಾರೆ. ಮಾನಸಿಕ ಚಿಕಿತ್ಸಕರು ರೋಗಿಗಳಿಗೆ ಈ ಸಮಸ್ಯೆಗಳನ್ನು ನಿಭಾಯಿಸುವ ಕೌಶಲ್ಯಗಳನ್ನು ಕಲಿಯಲು ಸಹಾಯ ಮಾಡುತ್ತಾರೆ ಮತ್ತು ರೋಗನಿರ್ಣಯಕ್ಕೆ ಸಂಬಂಧಿಸಿದ ಉತ್ತಮ ದೈನಂದಿನ ಒತ್ತಡಗಳು ಮತ್ತು ರೋಗಲಕ್ಷಣಗಳನ್ನು ನಿರ್ವಹಿಸುವ ತಂತ್ರಗಳನ್ನು ಕಲಿಸುತ್ತಾರೆ.
ಮಹಿಳೆಯರಿಗೆ ಸ್ವಯಂ ಕಾಳಜಿ ಮುಖ್ಯ: ಮಹಿಳೆಯರು ತಮ್ಮ ಸಮಯವನ್ನು ಗೌರವಿಸಬೇಕು ಮತ್ತು ಅದನ್ನು ಪವಿತ್ರವೆಂದು ಪರಿಗಣಿಸಬೇಕು. ಇದು ಐಷಾರಾಮಿ ಹೊರತಾಗಿ ಅವರಿಗೆ ಅಗತ್ಯವಾಗಿರುತ್ತದೆ. ಹೀಗಾಗಿ ನಿಮ್ಮ ಕುಟುಂಬದ ಮಹಿಳೆಯರನ್ನು ತಮಗಾಗಿ ಸಮಯ ಕಳೆಯಲು ಪ್ರೋತ್ಸಾಹಿಸುವುದು ಅತ್ಯಗತ್ಯ.
ಮತ್ತಷ್ಟು ಆರೋಗ್ಯ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ