Guava Benefits: ಈ ಸಮಸ್ಯೆಗಳಿಂದ ಬಳಲುತ್ತಿರುವವರು ಪೇರಲೆ ಹಣ್ಣು ಸೇವಿಸಲೇಬೇಕು
Guava Benefits: ಪೇರಲೆ( Guava )ಹಣ್ಣಿನಲ್ಲಿ ಹಲವು ಔಷಧೀಯ ಗುಣಗಳಿದ್ದು, ತೂಕ ಇಳಿಕೆ ಸೇರಿದಂತೆ ಹಲವು ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಚಳಿ ಹಾಗೂ ಬೇಸಿಗೆಯ ಕಾಲದಲ್ಲಿ ಸಾಮಾನ್ಯವಾಗಿ ಪೇರಲೆ ಹಣ್ಣುಗಳು ಮತ್ತು ತರಕಾರಿಗಳು ಹೇರಳವಾಗಿ ದೊರೆಯುತ್ತವೆ.
ಪೇರಲೆ( Guava )ಹಣ್ಣಿನಲ್ಲಿ ಹಲವು ಔಷಧೀಯ ಗುಣಗಳಿದ್ದು, ತೂಕ ಇಳಿಕೆ ಸೇರಿದಂತೆ ಹಲವು ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಚಳಿ ಹಾಗೂ ಬೇಸಿಗೆಯ ಕಾಲದಲ್ಲಿ ಸಾಮಾನ್ಯವಾಗಿ ಪೇರಲೆ ಹಣ್ಣುಗಳು ಮತ್ತು ತರಕಾರಿಗಳು ಹೇರಳವಾಗಿ ದೊರೆಯುತ್ತವೆ. ಆದರೆ ಚಳಿಗಾಲದಲ್ಲಿ ಬಿಸಿ ಆಹಾರದ ಮೊರೆ ಹೋಗುವವರೆ ಹೆಚ್ಚು. ಪೇರಲೆ ಹಣ್ಣಿನಲ್ಲಿ ಫೋಲೇಟ್ ಎಂಬ ಅಂಶವಿದ್ದು, ಇದುಅಧಿಕ ರಕ್ತದೊತ್ತಡವನ್ನು ಕೂಡ ನಿಯಂತ್ರಿಸುತ್ತದೆ. ಹಾಗೆಯೇ ಈ ಹಣ್ಣು ಸೋಡಿಯಂನ ನಕರಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಿ ತೂಕ ಇಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ನಿಮ್ಮ ಡಯಟ್ನಲ್ಲಿ ಸೀಬೆಹಣ್ಣನ್ನು ಸೇರಿಸುವುದು ಉತ್ತಮ.
ಪೇರಳೆಯಲ್ಲಿ ಕ್ಯಾಲರಿಯು ತುಂಬಾ ಕಡಿಮೆ ಪ್ರಮಾಣದಲ್ಲಿದೆ ಮತ್ತು ನೂರು ಗ್ರಾಂ ಪೇರಳೆಯಲ್ಲಿ 68 ಕ್ಯಾಲರಿ ಮಾತ್ರ ಇದೆ.
ಹೊಟ್ಟೆ ದೀರ್ಘಕಾಲ ತುಂಬಿರುವಂತೆ ಮಾಡುತ್ತದೆ ಇದರಲ್ಲಿ ಇರುವಂತಹ ಆಹಾರದ ನಾರಿನಾಂಶವು ಹೊಟ್ಟೆಯು ದೀರ್ಘಕಾಲ ತುಂಬಿರುವಂತೆ ಮಾಡುವುದು ಹಾಗೂ ಪದೇ ಪದೇ ತಿನ್ನುವುದನ್ನು ಕಡಿಮೆ ಮಾಡುವುದು. ಬೊಜ್ಜು ಉಂಟು ಮಾಡಲು ಪ್ರಮುಖ ಕಾರಣವಾಗಿರುವ ಅತಿಯಾಗಿ ತಿನ್ನುವುದನ್ನು ಇದು ತಡೆಯುವುದು.
ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲಿದೆ ಆಹಾರದಲ್ಲಿನ ನಾರಿನಾಂಶವು ರಕ್ತನಾಳದಲ್ಲಿ ಹೀರಿಕೊಳ್ಳುವಂತಹ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿ ಇಡುವುದು ಹಾಗೂ ಮಧುಮೇಹವನ್ನು ನಿರ್ವಹಿಸಲು ಸಹಕಾರಿ. ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವ ಇದು ಮಧುಮೇಹವನ್ನು ನಿಯಂತ್ರಿಸುವುದು. ಇದು ರಕ್ತದಲ್ಲಿ ಸಕ್ಕರೆ ಅಂಶವನ್ನು ತುಂಬಾ ನಿಧಾನವಾಗಿ ಬಿಡುಗಡೆ ಮಾಡುವುದು. ಇದರಿಂದ ಬೇಗನೆ ಸಕ್ಕರೆ ಮಟ್ಟವು ಏರುವುದು ತಪ್ಪುವುದು. ನೀವು ಮಧುಮೇಹಕ್ಕೆ ಔಷಧಿ ಸೇವನೆ ಮಾಡುತ್ತಲಿದ್ದರೆ, ಆಗ ನೀವು ಇದನ್ನು ಸೇವನೆ ಮಾಡುವ ಮೊದಲು ವೈದ್ಯರ ಸಲಹೆ ಪಡೆಯಿರಿ.
ಕಣ್ಣಿನ ಆರೋಗ್ಯ ವಯಸ್ಸಾಗುವ ವೇಳೆ ಕಾಡುವ ಅಕ್ಷಿಪಟಲದ ಅವನತಿ, ಕ್ಯಾಟರ್ಯಾಕ್ಟ್, ಗ್ಲುಕೋಮಾವನ್ನು ತಡೆಯುವುದು. ಕಣ್ಣಿನ ಆರೋಗ್ಯಕ್ಕೆ ಮುಖ್ಯವಾಗಿ ವಿಟಮಿನ್ ಎ ಅಗತ್ಯವಾಗಿ ಬೇಕು. ಇದು ಕಣ್ಣುಗಳು ಒಣಗುವುದನ್ನು ತಡೆಯುವುದು ಮತ್ತು ಇರುಳುಗಣ್ಣಿನ ಅಪಾಯವನ್ನು ದೂರವಿಡುವುದು.
ಕ್ಯಾನ್ಸರ್ನಿಂದ ರಕ್ಷಣೆ ವಿಟಮಿನ್ ಎ, ವಿಟಮಿನ್ ಸಿ ಮತ್ತು ಇತರ ಕೆಲವೊಂದು ಪೈಥೋನ್ಯೂಟ್ರಿಯೆಂಟ್ಸ್, ಪಾಲಿಫೆನಾಲ್ ಮತ್ತು ಫ್ಲಾವನಾಯ್ಡ್ ಅಂಶಗಳು ಫ್ರೀ ರ್ಯಾಡಿಕಲ್ ನಿಂದಾಗಿ ಅಂಗಾಂಶಗಳಿಗೆ ಆಗುವ ಹಾನಿ ತಪ್ಪಿಸುವುದು.
ಅಂಗಾಂಶಗಳನ್ನು ಫ್ರೀ ರ್ಯಾಡಿಕಲ್ ನಿಂದ ರಕ್ಷಿಸುವ ಪೇರಳೆ ಹಣ್ಣು ವಿವಿಧ ರೀತಿಯ ಕ್ಯಾನ್ಸರ್ ನಿಂದ ರಕ್ಷಣೆ ನೀಡುವುದು. ಮುಖ್ಯವಾಗಿ ಕರುಳು, ಗುದ, ಹೊಟ್ಟೆ ಇತ್ಯಾದಿ ಕ್ಯಾನ್ಸರ್ ಬರದಂತೆ ತಡೆಯುವುದು. ಪೇರಳೆ ಹಣ್ಣಿನಲ್ಲಿ ಇರುವ ಲೈಕೋಪೆನೆ ಎನ್ನುವ ಅಂಶವು ಕ್ಯಾನ್ಸರ್ ಕಾರಕ ಅಂಗಾಂಶಗಳು ಬೆಳವಣಿಗೆ ಆಗದಂತೆ ತಡೆಯುವುದು.
ಊತ, ಗಂಟುಗಳಲ್ಲಿ ನೋವು ನಿವಾರಿಸಲಿದೆ ಒಸಡಿನಲ್ಲಿ ರಕ್ತಸ್ರಾವ, ಊತ, ಗಂಟುಗಳಲ್ಲಿ ನೋವು, ನಿಶ್ಯಕ್ತಿ, ಬಳಲಿಕೆ, ಕೆಂಪು ಕಲೆಗಳು, ಊದಿಕೊಂಡ ಗಾಯ ಇತ್ಯಾದಿಗಳು ಸ್ಕರ್ವಿಯ ಲಕ್ಷಣಗಳು, ಪೇರಳೆಯಲ್ಲಿರುವ ವಿಟಮಿನ್ ಸಿ ಇವುಗಳಿಂದ ರಕ್ಷಣೆ ನೀಡುವುದು. ಮಿತವಾಗಿ ಪೇರಲೆ ಸೇವನೆ ಮಾಡಿ ಮಿತ ಪ್ರಮಾಣದಲ್ಲಿ ಪೇರಲೆ ಸೇವನೆ ಮಾಡಿ. ಅತಿಯಾಗಿ ಸೇವನೆ ಮಾಡಿದರೆ ಅದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ತೀರ ಕೆಳಮಟ್ಟಕ್ಕೆ ಇಳಿಯಬಹುದು. ಅತಿಯಾಗಿ ತಿಂದರೆ ಅದರಿಂದ ಅನಿಯಮಿತ ಎದೆಬಡಿತ, ವೇಗವಾದ ಹೃದಬಡಿತ, ನಿಶ್ಯಕ್ತಿ, ಪೇಲವ ಚರ್ಮ, ಆತಂಕ, ಬೆವರು, ಹಸಿವು ಉಂಟಾಗಬಹುದು. ಗ್ಯಾಸ್ಟ್ರಿಕ್ ಸಮಸ್ಯೆಯೂ ಉದ್ಭವವಾಗಲಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ