ಹವಾಮಾನ ಬದಲಾವಣೆ(Seasonal changes) ಯಿಂದಾಗಿ ಶೀತ, ಜ್ವರ, ಕೆಮ್ಮು(Cough) ಹರಡುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದೆ. ಜ್ವರ ಎರಡು ಮೂರು ದಿನಗಳಲ್ಲಿ ಕಡಿಮೆಯಾದರೂ ಕೂಡ ಕೆಮ್ಮು ದೀರ್ಘಕಾಲದ ವರೆಗೆ ಉಳಿದು ಬಿಡುತ್ತದೆ. ಇದು ನಿಮ್ಮ ಪ್ರತಿದಿನದ ಕೆಲಸ ಕಾರ್ಯಗಳಲ್ಲಿ ಅಡ್ಡಿಯುಂಟು ಮಾಡುತ್ತದೆ. ಜೊತೆಗೆ ದೀರ್ಘಕಾಲದ ಕೆಮ್ಮಿನಿಂದಾಗಿ ಗಂಟಲು ಉರಿ, ಎದೆ ನೋವು ಮುಂತಾದ ಸಮಸ್ಯೆಗಳು ಕಂಡುಬರುತ್ತದೆ.ಒಣ ಕೆಮ್ಮಿನಿಂದ ನೀವು ಬಳಲುತ್ತಿದ್ದರೆ ಈ ಎರಡು ಪದಾರ್ಥಗಳನ್ನು ಬಳಸಿ, ಕೆಮ್ಮು ಶಮನ ಮಾಡಬಹುದು. ಆದ್ದರಿಂದ ನಿಮ್ಮ ಅಡುಗೆ ಮನೆಯಲ್ಲಿ ಲಭ್ಯವಿರುವ ಪದಾರ್ಥಗಳನ್ನು ಬಳಸಿ ಸಿಂಪಲ್ ಮನೆಮದ್ದು ತಯಾರಿಸಿ.
ಒಣ ಕೆಮ್ಮು ಹಾಗೂ ಕಫ, ಸ್ರವಿಸುವ ಮೂಗು ಈ ಎಲ್ಲಾ ಸಮಸ್ಯೆಗಳಿಗೆ ಮೂಲಂಗಿ ಮತ್ತು ಒಂದು ಚಮಚ ಜೇನು ತುಪ್ಪದಿಂದ ಪರಿಹಾರ ಕಂಡು ಕೊಳ್ಳಬಹುದು ಎಂದು ಆರೋಗ್ಯ ತಜ್ಞರಾದ ಡಾ. ಲಿಲಿ ಚೋಯ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ಪೋಸ್ಟ್ ಇಲ್ಲಿದೆ.
ಇದನ್ನೂ ಓದಿ: ನಿರಂತರವಾಗಿ ಕೆಮ್ಮು ಬರುತ್ತಿದೆಯೇ, ನಿಮಗೆ ಎದೆಯ ಸೋಂಕು ಅಥವಾ ಸಾಮಾನ್ಯ ಶೀತವಿದೆಯೇ, ತಿಳಿಯುವುದು ಹೇಗೆ?
ಮೂಲಂಗಿಯಂತಹ ನಾರಿನ ಅಂಶವಿರುವ ತರಕಾರಿಗಳು ಕೆಮ್ಮಿಗೆ ಉತ್ತಮ ಪರಿಹಾರವಾಗಿದೆ. ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿವೆ ಮತ್ತು ಚಳಿಗಾಲದ ಜ್ವರಕ್ಕೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತವೆ. ಜೊತೆಗೆ ವಿಟಮಿನ್ ಸಿ ಸುಧಾರಿಸುವ ರೋಗನಿರೋಧಕ ಶಕ್ತಿಯಲ್ಲಿ ಸಮೃದ್ಧವಾಗಿರುವ ಮೂಲಂಗಿ ಉರಿಯೂತವನ್ನು ಕಡಿಮೆ ಮಾಡಲು ಮತ್ತು ಶೀತದ ವಿರುದ್ಧ ಕೆಲಸ ಮಾಡಲು ಸಹಾಯ ಮಾಡುತ್ತದೆ ಎಂದು ಆಹಾರ ತಜ್ಞ ಗರಿಮಾ ಗೋಯಲ್ ಹೇಳುತ್ತಾರೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 10:49 am, Fri, 13 January 23