ಚಳಿಗಾಲದಲ್ಲಿ ಕಾಡುವ ಕಿವಿ ನೋವು ನಿವಾರಣೆಗೆ ಹೀಗೆ ಮಾಡಿ!

|

Updated on: Feb 03, 2024 | 6:03 PM

ಚಳಿಗಾಲದಲ್ಲಿ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುವುದು ಸಾಮಾನ್ಯ. ಈ ಸಮಯದಲ್ಲಿ ನಮ್ಮ ದೇಹವನ್ನು ಬೆಚ್ಚಗಿರಿಸಿಕೊಳ್ಳುವುದು ಬಹಳ ಮುಖ್ಯ. ಹೊರಗೆ ಹೋಗುವಾಗ ಸ್ಕಾರ್ಫ್, ಜಾಕೆಟ್, ಗ್ಲೌಸ್​ಗಳನ್ನು ಹಾಕಿಕೊಂಡು ಹೋಗಿ. ಆದರೂ ನಿಮಗೆ ಚಳಿಗಾಲದಲ್ಲಿ ಕಿವಿ ನೋವು ಕಾಣಿಸಿಕೊಳ್ಳುತ್ತಿದ್ದರೆ ಅದಕ್ಕೆ ಪರಿಹಾರ ಇಲ್ಲಿದೆ.

ಚಳಿಗಾಲದಲ್ಲಿ ಕಾಡುವ ಕಿವಿ ನೋವು ನಿವಾರಣೆಗೆ ಹೀಗೆ ಮಾಡಿ!
ಕಿವಿ ನೋವು
Image Credit source: iStock
Follow us on

ಕಿವಿ ನೋವು ಬಹಳ ಕಿರಿಕಿರಿಯುಂಟುಮಾಡುತ್ತದೆ. ಚಳಿಗಾಲದಲ್ಲಿ ಅನೇಕ ಜನರಿಗೆ ಕಿವಿನೋವು ಹೆಚ್ಚಾಗುತ್ತದೆ. ಶೀತ, ಶುಷ್ಕ ಗಾಳಿಗೆ ಒಡ್ಡಿಕೊಳ್ಳುವುದು, ಹವಾಮಾನದಲ್ಲಿನ ಬದಲಾವಣೆಗಳು, ಸೈನಸ್ ಸೋಂಕುಗಳು ಸೇರಿದಂತೆ ಹಲವಾರು ಅಂಶಗಳಿಂದ ಕಿವಿ ನೋವು ಉಂಟಾಗುತ್ತದೆ. ಇದರಿಂದ ಉಸಿರಾಟದ ಸೋಂಕಿನ ಹೆಚ್ಚಿನ ಅಪಾಯ ಉಂಟಾಗುತ್ತದೆ. ಚಳಿ ವಾತಾವರಣ ಮತ್ತು ವಾತಾವರಣದ ಬದಲಾವಣೆಯಿಂದ ಉಂಟಾಗುವ ಕಿವಿಯ ಉರಿಯೂತ ಮತ್ತು ಶುಷ್ಕತೆಯಿಂದ ನೋವು ಉಲ್ಬಣಗೊಳ್ಳಬಹುದು. ಅದಕ್ಕೆ ಏನು ಮಾಡಬೇಕೆಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

ಸೈನಸೈಟಿಸ್ ಮತ್ತು ಉಸಿರಾಟದ ಸೋಂಕುಗಳು ಕಿವಿಯಲ್ಲಿ ದಟ್ಟಣೆ ಮತ್ತು ಉರಿಯೂತವನ್ನು ಉಂಟುಮಾಡಬಹುದು. ಇದು ಯುಸ್ಟಾಚಿಯನ್ ಟ್ಯೂಬ್ ಮೇಲೆ ಪರಿಣಾಮ ಬೀರಿ ಕಿವಿ ನೋವಿಗೆ ಕಾರಣವಾಗಬಹುದು. ಕೆಲವರಿಗೆ ತನ್ನಷ್ಟಕ್ಕೆ ತಾನೇ ಕಿವಿ ನೋವು ವಾಸಿಯಾಗುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯುವುದು ಅನಿವಾರ್ಯವಾಗುತ್ತದೆ. ನಿರಂತರವಾದ ಅಥವಾ ತೀವ್ರವಾದ ಕಿವಿ ನೋವನ್ನು ನಿರ್ಲಕ್ಷಿಸಬಾರದು. ಏಕೆಂದರೆ ಇದು ಕಿವಿ ಸೋಂಕಿನಂತಹ ಗಂಭೀರ ಸಮಸ್ಯೆಯ ಲಕ್ಷಣವಾಗಿರಬಹುದು. ಇಂತಹ ಸಂದರ್ಭದಲ್ಲಿ ಕಿವಿಯೊಳಗೆ ಕ್ಲೀನ್ ಮಾಡುವುದನ್ನು ಅವಾಯ್ಡ್ ಮಾಡುವುದು ಒಳ್ಳೆಯದು. ಇದರಿಂದ ಕಿವಿಗೆ ಗಾಯವಾಗಿ ನೋವು ಇನ್ನಷ್ಟು ಹೆಚ್ಚಾಗಬಹುದು.

ಚಳಿಗಾಲದಲ್ಲಿ ಕಿವಿ ನೋವಿನಿಂದ ರಕ್ಷಿಸಿಕೊಳ್ಳಲು ಇಲ್ಲಿವೆ ಸಲಹೆಗಳು:

ಇಯರ್‌ಮಫ್‌ಗಳನ್ನು ಧರಿಸಿ:

ನಿಮ್ಮ ಕಿವಿಗಳನ್ನು ರಕ್ಷಿಸಲು ಮತ್ತು ಬೆಚ್ಚಗಾಗಿಸಲು ಜೋಡಿ ಇಯರ್‌ಮಫ್‌ಗಳನ್ನು ಬಳಸಿ. ಅವು ಕಿವಿಗೆ ಆರಾಮವಾಗಿ ಹೊಂದಿಕೊಳ್ಳುವಂತಿರಲಿ. ತೀರಾ ಬಿಗಿಯಾಗಿದ್ದರೆ ಅದನ್ನು ಬಳಸಬೇಡಿ.

ಇದನ್ನೂ ಓದಿ: ಪುರುಷರಂತೆ ಮಹಿಳೆಯರಿಗೂ ಪ್ರಾಸ್ಟೇಟ್​ ಕ್ಯಾನ್ಸರ್​ ಬರುತ್ತದಾ?

ಟೋಪಿ ಬಳಸಿ:

ನೀವು ನಿಮ್ಮ ಕಿವಿಗಳನ್ನು ಬೆಚ್ಚಗಿರಿಸಲು ತಲೆ ಮತ್ತು ಕಿವಿಗಳನ್ನು ಮುಚ್ಚುವ ಕ್ಯಾಪ್ ಧರಿಸುವ ಮೂಲಕ ಚಳಿಯ ಗಾಳಿಯಿಂದ ಕಿವಿಗಳನ್ನು ರಕ್ಷಿಸಬಹುದು.

ಬೆಚ್ಚಗಿನ ಬಟ್ಟೆಗಳನ್ನು ಆರಿಸಿ:

ಉಣ್ಣೆಯಂತಹ ಬೆಚ್ಚಗಿನ ವಸ್ತುಗಳಿಂದ ಮಾಡಿದ ಟೋಪಿಗಳು, ಬಟ್ಟೆಗಳು ಮತ್ತು ಇಯರ್‌ಮಫ್‌ಗಳನ್ನು ಆಯ್ಕೆ ಮಾಡಿ.

ಕಿವಿಗಳನ್ನು ಒಣಗಿಸಿ:

ಸ್ನಾನ ಮಾಡಿದಾಗ ಅಥವಾ ಮುಖ ತೊಳೆಯುವಾಗ ಕಿವಿಗಳು ಒದ್ದೆಯಾದರೆ ಅವುಗಳನ್ನು ಒಣಗಿಸಿಕೊಳ್ಳಿ. ಒದ್ದೆಯಾದ ಕಿವಿಗಳು ಶೀತ ಹವಾಮಾನಕ್ಕೆ ಹೆಚ್ಚು ದುರ್ಬಲವಾಗಬಹುದು. ಮಳೆ ಅಥವಾ ಹಿಮದ ವಾತಾವರಣದಲ್ಲಿ ನಿಮ್ಮ ಕಿವಿಗಳಿಗೆ ಹೆಚ್ಚು ನೀರು ಸೋಕದಂತೆ ನೋಡಿಕೊಳ್ಳಿ.

ಹೈಡ್ರೇಟೆಡ್ ಆಗಿರಿ:

ಚರ್ಮದ ಆರೋಗ್ಯ ಸೇರಿದಂತೆ ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ದಿನವೂ ಸಾಕಷ್ಟು ನೀರು ಕುಡಿಯುವುದು ಅತ್ಯಗತ್ಯ. ಶುಷ್ಕತೆಯನ್ನು ತಡೆಯಲು ಕಿವಿಗೆ ಮಾಯಿಶ್ಚರೈಸರ್ ಕ್ರೀಂ ಹಚ್ಚಿ.

ಇದನ್ನೂ ಓದಿ: Ear Pain: ಕಿವಿ ನೋವು ಕಾಣಿಸಿಕೊಂಡರೆ ಎಚ್ಚರ! ಈ ರೀತಿ ಮಾಡಲೇಬೇಡಿ

ಅತಿಯಾಗಿ ಕಿವಿ ಸ್ವಚ್ಛಗೊಳಿಸಬೇಡಿ:

ತುಂಬಾ ಸ್ವಚ್ಛವಾಗಿರುವ ಕಿವಿಗಳು ತಮ್ಮ ನೈಸರ್ಗಿಕ ತೈಲಗಳನ್ನು ಕಳೆದುಕೊಳ್ಳಬಹುದು. ಇದು ಶುಷ್ಕತೆಗೆ ಒಳಗಾಗಬಹುದು. ನಿಮ್ಮ ಕಿವಿಗಳನ್ನು ತುಂಬಾ ಆಳವಾಗಿ ಸ್ವಚ್ಛಗೊಳಿಸಲು ಇಯರ್ ಬಡ್​ಗಳನ್ನು ಬಳಸಬೇಡಿ.

ವೈದ್ಯರನ್ನು ಸಂಪರ್ಕಿಸಿ:

ಚಳಿಗಾಲದಲ್ಲಿ ನಿಮ್ಮ ಕಿವಿಯಲ್ಲಿ ನೋವು ಇದ್ದರೆ ನೀವು ವೈದ್ಯರನ್ನು ಭೇಟಿ ಮಾಡಬೇಕು. ನಿಮ್ಮಷ್ಟಕ್ಕೆ ನೀವೇ ಮನೆಯಲ್ಲಿರುವ ಯಾವುದೋ ಎಣ್ಣೆ ಮತ್ತಿತರ ಔಷಧಿಯನ್ನು ಕಿವಿಗೆ ಹಾಕಬೇಡಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ