ಪ್ರತಿದಿನ ಈ 6 ಆಹಾರ ಸೇವನೆ ಮಾಡಿ, ಹೃದಯಕ್ಕೆ ರಕ್ಷಣೆಯಾಗಿ ನಿಲ್ಲುತ್ತದೆ

ಹೃದಯದ ಆರೋಗ್ಯವನ್ನು ಕಾಪಾಡುವ ಕೆಲಸವನ್ನು ಪ್ರತಿದಿನ ಪ್ರತಿಯೊಬ್ಬ ವ್ಯಕ್ತಿಯೂ ಮಾಡಬೇಕು. ಹೃದಯವು ದೇಹಕ್ಕೆ ಅತಿ ಮುಖ್ಯವಾಗಿರುತ್ತದೆ, ಇತ್ತೀಚೆಗೆ ಆಗುತ್ತಿರುವ ಹೃದಯಾಘಾತಕ್ಕೆ ಕಾರಣ ಕೂಡ ಈ ಅಂಶವು ಆಗಿದೆ, ಅದರಲ್ಲೂ ಯುವಸಮೂಹ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ಹಾಗಾಗಿ ಹೃಯದ ಆರೋಗ್ಯಕ್ಕೆ ಈ 5 ಆರೋಗ್ಯ ಆಹಾರಗಳು ಮುಖ್ಯ, ಅವುಗಳು ಯಾವುದು ಇಲ್ಲಿದೆ ನೋಡಿ .

ಪ್ರತಿದಿನ ಈ 6 ಆಹಾರ ಸೇವನೆ ಮಾಡಿ, ಹೃದಯಕ್ಕೆ ರಕ್ಷಣೆಯಾಗಿ ನಿಲ್ಲುತ್ತದೆ
ಸಾಂದರ್ಭಿಕ ಚಿತ್ರ
Updated By: ಅಕ್ಷಯ್​ ಪಲ್ಲಮಜಲು​​

Updated on: May 20, 2025 | 4:47 PM

ಹೃದಯ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಅಗತ್ಯವಾಗಿರುತ್ತದೆ. ಹೃದಯ ಮನುಷ್ಯನ ದೇಹ ಬಹುಮಖ್ಯ ಅಂಗವಾಗಿರುತ್ತದೆ. ಇದು ತುಂಬಾ ಸೂಕ್ಷ್ಮ ಭಾಗ ಕೂಡ ಹೌದು. ಹೃದಯ ಆರೋಗ್ಯ (heart-friendly breakfast) ಉತ್ತಮವಾಗಿರಬೇಕೆಂದರೆ ಅದಕ್ಕೆ ಆರೋಗ್ಯಕರವಾದ ಆಹಾರಗಳನ್ನು ನೀಡಬೇಕು. ಈ ಕಾರಣಕ್ಕೆ ತಜ್ಞರು ಪದೇ ಪದೇ ಹೃದಯ ಆರೋಗ್ಯಕ್ಕೆ ಹೆಚ್ಚಿನ ಸಲಹೆಯನ್ನು ನೀಡುತ್ತಾರೆ. ಹೀಗಿನ ಯುವಕರಲ್ಲಿ ಹೃದಯಾಘಾತದ ತೊಂದರೆ ಬರಲು ಇದು ಕೂಡ ಪ್ರಮುಖ ಕಾರಣವಾಗಿದೆ,. ಇತ್ತೀಚೆಗೆ ನಡೆದ ಘಟನೆ ನಟ ಹಾಗೂ ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್​ ಪೂಜಾರಿ ಸಾವು ಕೂಡ ಹೃದಯಾಘಾತದಿಂದ ಆಗಿದೆ. ಇದಕ್ಕೆ ಅನೇಕ ವೈದ್ಯರು ತಮ್ಮ ಸಲಹೆಗಳನ್ನು ಹಾಗೂ ಕಾರಣಗಳನ್ನು ನೀಡಿದ್ದರು. ಹೆಚ್ಚಿನ ವೈದ್ಯರು ನೀಡಿರುವ ಕಾರಣ ಅದು ಆಹಾರ ಪದ್ಧತಿಯಿಂದ ಆಗಿರಬಹುದು ಎಂದು ಹೇಳಿದರು. ಆ ಕಾರಣದಿಂದ ಹೀಗಿನ ವಾತಾವರಣಕ್ಕೆ ಅಥವಾ ಈ ಸಮಯದಲ್ಲಿ ಹೃದಯ ಆರೋಗ್ಯ ಕಾಪಾಡಿಕೊಳ್ಳಲು ಯಾವ ರೀತಿಯ ಆಹಾರಗಳನ್ನು ಸೇವನೆ ಮಾಡಬೇಕು. ಬೆಳಿಗ್ಗಿನ ಉಪಾಹಾರದಿಂದ ಹಿಡಿದು ರಾತ್ರಿ ಊಟದ ವರೆಗೂ ಆರೋಗ್ಯಯುತವಾದ ಆಹಾರವನ್ನು ಸೇವನೆ ಮಾಡಬೇಕು. ಅದರಲ್ಲೂ ಬೆಳಿಗ್ಗಿನ ಉಪಾಹಾರಕ್ಕೆ ಯಾವ ರೀತಿ ಇರಬೇಕು ಎಂಬುದನ್ನು ನವದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ವೈದ್ಯ ಡಾ. ಮುಖೇಶ್ ಗೋಯೆಲ್ ಸಲಹೆ ನೀಡಿದ್ದಾರೆ

ನವದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಗಳ ಕಾರ್ಡಿಯೋಥೊರಾಸಿಕ್ ಮತ್ತು ಹೃದಯ ಮತ್ತು ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆಯ ಹಿರಿಯ ಸಲಹೆಗಾರರಾದ ಡಾ. ಮುಖೇಶ್ ಗೋಯೆಲ್ ಅವರು ಇದಕ್ಕೆ ಸಲಹೆ ನೀಡಿದ್ದಾರೆ. ಉತ್ತಮ ರುಚಿಯನ್ನು ಮಾತ್ರವಲ್ಲದೆ ಹೃದಯರಕ್ತನಾಳದ ಆರೋಗ್ಯವನ್ನು ಕಾಪಾಡುವ ಉಪಾಹಾರಗಳನ್ನು ಸೇವನೆ ಮಾಡಬೇಕು. ಫೈಬರ್-ಭರಿತ ಓಟ್ ಮೀಲ್ ನಿಂದ ಒಮೆಗಾ-3-ಪ್ಯಾಕ್ಡ್ ಸ್ಮೂಥಿಗಳವರೆಗೆ ನಿಮ್ಮ ಉಪಾಹಾರದಲ್ಲಿ ಹೆಚ್ಚು ಪೋಷಕಾಂಶ ಇರುತ್ತದೆ. ಇದು ಹೃದಯವನ್ನು ಪೋಷಿಸಲು ಮತ್ತು ದಿನದ ಉಳಿದ ಸಮಯದಲ್ಲಿ ಹೆಚ್ಚು ಚಟುವಟಿಕೆಯಿಂದ ಇರಲು ಸಹಾಯ ಮಾಡುತ್ತದೆ.

ಇದನ್ನೂ ಓದಿ
ಹೆಣ್ಣಿನ ಸಿಂಧೂರ ಮುಟ್ಟಿದವರು ಅಂದು ಪುರಾಣದಲ್ಲೂ ಉಳಿದಿಲ್ಲ, ಇಂದು ಉಳಿದಿಲ್ಲ
ಈ ನಾಲ್ಕು ರಾಶಿಯವರಿಗೆ ಚಿನ್ನ ಧರಿಸುವುದು ಅತ್ಯಂತ ಶುಭ
ಮೇ 8 ಮೋಹಿನಿ ಏಕಾದಶಿ; ಪೂಜಾ ವಿಧಾನ ಮತ್ತು ಮಹತ್ವ
ಶಿವನ ವಿಶೇಷ ಅನುಗ್ರಹ ಪಡೆಯಲು ಈ ಸರಳ ಪರಿಹಾರವನ್ನು ಪ್ರಯತ್ನಿಸಿ
  • ಧಾನ್ಯದ ಓಟ್ ಮೀಲ್: ಧಾನ್ಯದ ಓಟ್ ಮೀಲ್ ಹೃದಯ ಆರೋಗ್ಯವನ್ನು ಹೆಚ್ಚಿಸುತ್ತದೆ. ಹಾಗೂ ಇದಕ್ಕೆ ಹಣ್ಣುಗಳನ್ನು ಸೇರಿಸಿದರೆ ಇನ್ನು ಉತ್ತಮವಾಗಿರುತ್ತದೆ. ಇದರಲ್ಲಿ ಬೀಟಾ-ಗ್ಲುಕನ್ ನ ಸಮೃದ್ಧ ಅಂಶಗಳನ್ನು ಇದು ಒಳಗೊಂಡಿರುತ್ತದೆ, ಇದರ ಜತೆಗೆ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯಕವಾಗಿದೆ. ಬೆರಿಹಣ್ಣುಗಳು ಅಥವಾ ಸ್ಟ್ರಾಬೆರಿಗಳಂತಹ ತಾಜಾ ಹಣ್ಣುಗಳನ್ನು ಸೇರಿಸುವುದರಿಂದ ರುಚಿಯನ್ನು ಹೆಚ್ಚಿಸುವುದಲ್ಲದೆ, ಉತ್ಕರ್ಷಣ ನಿರೋಧಕಗಳು ಮತ್ತು ಹೆಚ್ಚುವರಿ ಫೈಬರ್ ಅಂಶವನ್ನು ನೀಡುತ್ತದೆ. ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಕೂಡ ಉಪಕಾರಿಯಾಗಿದೆ.
  • ಗ್ರೀಕ್ ಮೊಸರು; ಗ್ರೀಕ್ ಮೊಸರು ಉತ್ತಮ ಗುಣಮಟ್ಟದ ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ, ಇದು ಸ್ನಾಯುವಿನ ದ್ರವ್ಯರಾಶಿ ಮತ್ತು ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಬಾದಾಮಿ, ವಾಲ್‌ನಟ್ಸ್ ಅಥವಾ ಪಿಸ್ತಾದಂತಹ ಮಿಶ್ರ ಬೀಜಗಳೊಂದಿಗೆ ಇದನ್ನು ಸೇವನೆ ಮಾಡಿದ್ರೆ ಹೃದಯಕ್ಕೆ ಆರೋಗ್ಯವನ್ನು ಕಾಪಾಡುತ್ತದೆ. ಫೈಬರ್ ಮತ್ತು ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ಅಗತ್ಯ ಸೂಕ್ಷ್ಮ ಪೋಷಕಾಂಶಗಳನ್ನು ನೀಡುತ್ತದೆ.
  • ಆವಕಾಡೊ: ನಿರಂತರ ಶಕ್ತಿಯನ್ನು ಒದಗಿಸುವ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳನ್ನು ನೀಡುತ್ತದೆ ಆವಕಾಡೊ, ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಮೂಲಕ ಮತ್ತು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ಮೂಲಕ ಲಿಪಿಡ್ ಪ್ರೊಫೈಲ್‌ಗಳನ್ನು ಸುಧಾರಿಸುತ್ತದೆ.
  • ಮಿಶ್ರ ತರಕಾರಿ: ಮಿಶ್ರ ತರಕಾರಿಗಳೊಂದಿಗೆ ಮೊಟ್ಟೆಯ ಬಿಳಿ ಆಮ್ಲೆಟ್ ಸೇವನೆ ಮಾಡಿದ್ರೆ ಇದು ಕೊಬ್ಬಿನ ಅಂಶಗಳನ್ನು ಹಾಗೂ ಅಧಿಕ ಪೋಷಕಾಂಶವನ್ನು ನೀಡುತ್ತದೆ. ಇದು ಹೃದಯ ಸ್ನೇಹಿ ಆಯ್ಕೆಯಾಗಿದೆ. ಪಾಲಕ್, ಟೊಮೆಟೊ ಮತ್ತು ಬೆಲ್ ಪೆಪ್ಪರ್‌ಗಳಂತಹ ವಿವಿಧ ತರಕಾರಿಗಳನ್ನು ಸೇರಿಸುವುದರಿಂದ ಊಟದ ಫೈಬರ್ ಮತ್ತು ಪೋಷಕಾಂಶದ ಅಂಶವನ್ನು ಹೆಚ್ಚಿಸುತ್ತದೆ, ಮತ್ತು ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತದೆ, ಇದು ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ.
  • ಹಸಿರು ಸ್ಮೂಥಿ : ಹಸಿರು ಸ್ಮೂಥಿಗಳೆಂದರೆ ಪಾಲಕ್, ಬಾಳೆಹಣ್ಣು, ಅಗಸೆಬೀಜ. ಇವುಗಳು ಪೊಟ್ಯಾಸಿಯಮ್, ಫೈಬರ್ ಮತ್ತು ಸಸ್ಯ ಆಧಾರಿತ ಒಮೆಗಾ-3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿದೆ. ಆರೋಗ್ಯಕರ ರಕ್ತದೊತ್ತಡಕ್ಕೆ ಉತ್ತಮ, ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮೂಲಕ ಮತ್ತು ಒಟ್ಟಾರೆ ಹೃದಯರಕ್ತನಾಳದ ಆರೋಗ್ಯವನ್ನು ಉತ್ತೇಜಿಸುತ್ತದೆ.
  • ಕಡಿಮೆ ಕೊಬ್ಬಿನ ಹಾಲು; ಇದನ್ನು ಬಾದಾಮಿಗಳೊಂದಿಗೆ ಧಾನ್ಯ ಸೇರಿಸಿ ಕುಡಿಯಬೇಕು. ಇದು ಕಾರ್ಬೋಹೈಡ್ರೇಟ್‌ಗಳ ಉತ್ತಮ ಮೂಲವಾಗಿದೆ,ಸ್ಥಿರವಾದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹೃದಯ ಮತ್ತು ಮೂಳೆ ಆರೋಗ್ಯಕ್ಕೆ ಅಗತ್ಯವಾದ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಅನ್ನು ಸೇರಿಸುತ್ತದೆ

ಜೀವನಶೈಲಿ ಸದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ