ಮಳೆಗಾಲದಲ್ಲಿ ನಾನ್ ವೆಜ್ ತಿನ್ನುತ್ತಿದ್ದೀರಾ? ತಪ್ಪದೆ ಈ ವಿಷಯಗಳನ್ನು ತಿಳಿದುಕೊಳ್ಳಿ, ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ

| Updated By: ಸಾಧು ಶ್ರೀನಾಥ್​

Updated on: Jul 03, 2022 | 6:06 AM

Non vegetarian food: ಮಳೆಯಲ್ಲಿ ಜೀರ್ಣಕ್ರಿಯೆ ಕಡಿಮೆಯಾಗುತ್ತದೆ. ಅಂತಹ ಪರಿಸ್ಥಿತಿಗಳಲ್ಲಿ ಮಾಂಸಾಹಾರವನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ವಿಳಂಬ ಜೀರ್ಣಕ್ರಿಯೆಯಿಂದಾಗಿ, ಆಹಾರವು ಕರುಳಿನಲ್ಲಿ ಕೊಳೆಯುತ್ತದೆ. ಇದು ಆಹಾರ ವಿಷವಾಗುವ ಅಪಾಯವನ್ನು ತಂದೊಡ್ಡುತ್ತದೆ.

ಮಳೆಗಾಲದಲ್ಲಿ ನಾನ್ ವೆಜ್ ತಿನ್ನುತ್ತಿದ್ದೀರಾ? ತಪ್ಪದೆ ಈ ವಿಷಯಗಳನ್ನು ತಿಳಿದುಕೊಳ್ಳಿ, ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ
ಮಳೆಗಾಲದಲ್ಲಿ ನಾನ್ ವೆಜ್ ತಿನ್ನುತ್ತಿದ್ದೀರಾ? ತಪ್ಪದೆ ಈ ವಿಷಯಗಳನ್ನು ತಿಳಿದುಕೊಳ್ಳಿ, ಇಲ್ಲವಾದರೆ ಅಪಾಯ ಕಟ್ಟಿಟ್ಟ ಬುತ್ತಿ
Follow us on

Health Tips: ಕೆಲ ಆರೋಗ್ಯ ಸಲಹೆಗಳು ಇಲ್ಲಿವೆ. ಮಳೆಗಾಲದಲ್ಲಿ ಜೀರ್ಣಾಂಗ ವ್ಯವಸ್ಥೆ ದುರ್ಬಲವಾಗುತ್ತದೆ. ಇದರಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ಸ್ವಲ್ಪ ಕಷ್ಟವಾಗುತ್ತದೆ. ಮಳೆಯಲ್ಲಿ ಹಗುರವಾದ, ಜೀರ್ಣವಾಗುವ ಆಹಾರವನ್ನು ಸೇವಿಸುವುದು ಉತ್ತಮ.

ಸದ್ಯ ಮುಂಗಾರು ಮಳೆಯ ಪ್ರಭಾವದಿಂದ ಧಾರಾಕಾರವಾಗಿ ಮಳೆಯಾಗುತ್ತಿದೆ. ಮಳೆಯ ನಂತರ ಹವಾಮಾನವು ಆಹ್ಲಾದಕರವಾಗಿರುತ್ತದೆ. ಹವಾಮಾನವನ್ನು ಆನಂದಿಸಲು ಬಯಸಿದರೆ.. ಜನ ತಮಗೆ ಇಷ್ಟಬಂದಂತೆ ಯೋಜಿಸುತ್ತಾರೆ ಮತ್ತು ತಂಪಾದ ವಾತಾವರಣ ಹಿತಕರವಾಗಿದ್ದು, ಆನಂದ ತರುವಂತಹುದು. ಕೆಲವರು ತಮಗಿಷ್ಟವಾದ ತಿಂಡಿ ತಿಂದುಂಡರೆ ಸಾಕು ಎಂದು ಸುಖಾಸುಮ್ಮನಾಗುತ್ತಾರೆ. ಇನ್ನು, ಕೆಲವರು ಮಳೆಯಲ್ಲೇ ಬೈಕ್ ನಲ್ಲಿ ಲಾಂಗ್ ಡ್ರೈವ್ ಹೋಗಲು ಬಯಸುತ್ತಾರೆ.

ಆದರೆ ಈ ವಾತಾವರಣದ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಈ ಋತುವಿನಲ್ಲಿ ರೋಗಗಳು ಮತ್ತು ಸೋಂಕುಗಳು ಹೆಚ್ಚು ಹರಡುತ್ತವೆ. ಮಳೆಗಾಲದಲ್ಲಿ ಆಹಾರ ಮತ್ತು ಪಾನೀಯಗಳ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಸ್ವಲ್ಪವೇ ನಿರ್ಲಕ್ಷ್ಯವೂ ಅನಾರೋಗ್ಯಕ್ಕೆ ಕಾರಣವಾಗಬಹುದು.

ಮತ್ತೊಂದು ಅಂಶವೆಂದರೆ ಮಳೆಯಲ್ಲಿ ಜೀರ್ಣಕ್ರಿಯೆ ದುರ್ಬಲಗೊಳ್ಳುತ್ತದೆ. ಹಾಗಾಗಿ ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸುವುದು ಉತ್ತಮ. ವಿಶೇಷವಾಗಿ ಮಳೆಗಾಲದಲ್ಲಿ ಮಾಂಸಾಹಾರಿ ಆಹಾರ ಸೇವಿಸುವುದನ್ನು ತಪ್ಪಿಸಿ. ಮಾಂಸವು ಜೀರ್ಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಅದೂ ಅಲ್ಲದೆ ಇಂತಹ ಆಹಾರವನ್ನು ಸೇವಿಸುವುದರಿಂದ ಬಹುಬೇಗ ಸೋಂಕಿಗೆ ಒಳಗಾಗಬಹುದು.

  1. ಮಳೆಯಲ್ಲಿ ನಾನ್ ವೆಜ್ ತಿನ್ನಬಾರದೇಕೆ?
    ಮಳೆಗಾಲದಲ್ಲಿ ನಾನ್ ವೆಜ್ ತಿನ್ನಬೇಡಿ. ಇದಕ್ಕೆ ಧಾರ್ಮಿಕ ಕಾರಣವೂ ಇದೆ. ಈ ಮಾಸದಲ್ಲಿ ಪೂಜೆ ಮತ್ತು ಉಪವಾಸಗಳು ಆಚರಣೆಯಲ್ಲಿ ಇರುತ್ತವೆ. ಅಂತಹ ಸಂದರ್ಭಗಳಲ್ಲಿ ಮಾಂಸ ಸೇವಿಸುವುದನ್ನು ತಪ್ಪಿಸಬೇಕು. ಈಗ ಇದರ ಹಿಂದಿನ ವೈಜ್ಞಾನಿಕ ವಿಧಾನದ ಬಗ್ಗೆ ತಿಳಿಯೋಣ. ಮಾಂಸಾಹಾರ ನಿಧಾನವಾಗಿ ಜೀರ್ಣಿಸಿಕೊಳ್ಳುವ, ಹೆಚ್ಚಿನ ಪ್ರೋಟೀನ್ ಆಹಾರ ಎಂದು ಪರಿಗಣಿಸಲಾಗುತ್ತದೆ. ಮಳೆಗಾಲದಲ್ಲಿ ದುರ್ಬಲವಾದ ಜೀರ್ಣಾಂಗ ವ್ಯವಸ್ಥೆಯಿಂದಾಗಿ, ಮಾಂಸಾಹಾರ ತಡವಾಗಿ ಜೀರ್ಣವಾಗುತ್ತದೆ ಮತ್ತು ಹೊಟ್ಟೆಯಲ್ಲಿ ಗ್ಯಾಸ್, ಶಾಖ, ಅಜೀರ್ಣ ಮತ್ತು ಇತರ ಸಮಸ್ಯೆಗಳನ್ನು ಉಂಟುಮಾಡುತ್ತದೆ.
  2. ಮಳೆಗಾಲದಲ್ಲಿ ನಾನ್ ವೆಜ್ ತಿನ್ನುವುದು ಏಕೆ ಅಪಾಯಕಾರಿ?
    ಶಿಲೀಂಧ್ರದ ಅಪಾಯ: ಮಳೆಗಾಲದಲ್ಲಿ ತೇವಾಂಶ ಹೆಚ್ಚಿರುತ್ತದೆ. ಇದು ಶಿಲೀಂಧ್ರಗಳ ಸೋಂಕು ಮತ್ತು ಶಿಲೀಂಧ್ರದ ಅಪಾಯವನ್ನು ತಂದೊಡ್ಡುತ್ತದೆ. ಆಹಾರ ಬೇಗನೆ ಹಾಳಾಗುತ್ತದೆ. ಅದರಲ್ಲೂ ನಾನ್ ವೆಜ್ ನಲ್ಲಿ ಸೋಂಕಿನ ಅಪಾಯವಿದೆ.
  3. ದುರ್ಬಲ ಜೀರ್ಣಕ್ರಿಯೆ: ಮಳೆಯಲ್ಲಿ ಜೀರ್ಣಕ್ರಿಯೆ ಕಡಿಮೆಯಾಗುತ್ತದೆ. ಅಂತಹ ಪರಿಸ್ಥಿತಿಗಳಲ್ಲಿ ಮಾಂಸಾಹಾರವನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ವಿಳಂಬ ಜೀರ್ಣಕ್ರಿಯೆಯಿಂದಾಗಿ, ಆಹಾರವು ಕರುಳಿನಲ್ಲಿ ಕೊಳೆಯುತ್ತದೆ. ಇದು ಆಹಾರ ವಿಷವಾಗುವ ಅಪಾಯವನ್ನು ತಂದೊಡ್ಡುತ್ತದೆ.
  4. ಮಳೆಯಲ್ಲಿ ರೋಗಾಣುಗಳು: ಮಳೆಯಲ್ಲಿ ರೋಗಾಣುಗಳು ವೃದ್ಧಿಸುತ್ತವೆ. ಜಾನುವಾರುಗಳು ಅನಾರೋಗ್ಯಕ್ಕೆ ಬೀಳುತ್ತವೆ. ಅಂದರೆ ಪ್ರಾಣಿಗಳು ಸಹ ಅನಾರೋಗ್ಯಕ್ಕೆ ಒಳಗಾಗುತ್ತವೆ. ಈ ಋತುವಿನಲ್ಲಿ ಪ್ರಾಣಿಗಳಲ್ಲಿ ಅನೇಕ ರೀತಿಯ ರೋಗಗಳು ಹರಡುತ್ತವೆ. ಅದರಿಂದಲೇ ನಾನ್ ವೆಜ್ ತಿನ್ನುವುದು ನಿಮಗೆ ಹಾನಿಯೂ ಆಗಬಹುದು.
  5. ಮೀನುಗಳು ಕಲುಷಿತಗೊಳ್ಳುಗುತ್ತವೆ: ಮಳೆ ನೀರಿನೊಂದಿಗೆ ಚರಂಡಿ ನೀರು ಹರಿಯುತ್ತದೆ. ಮುಂದೆ ಅದು ಕೆರೆ ಕುಂಟೆ ನದಿಗಳಿಗೆ ನದಿಗಳತ್ತ ಹರಿಯುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮೀನುಗಳು ಕಲುಷಿತ ನೀರು ಮತ್ತು ಆಹಾರವನ್ನು ಸೇವಿಸುತ್ತವೆ. ಹಾಗಾಗಿ ಈ ಋತುವಿನಲ್ಲಿ ಮೀನು ತಿನ್ನುವುದನ್ನು ಸಹ ತಪ್ಪಿಸಬೇಕು. ಇದು ನಿಮ್ಮನ್ನು ಅಸ್ವಸ್ಥಗೊಳಿಸುತ್ತದೆ, ಎಚ್ಚರಾ. ( To read in Telugu click here )