Endometriosis: ಗರ್ಭ ಧರಿಸಲು ತೊಂದರೆ ಮಾಡುವ ಎಂಡೊಮೆಟ್ರಿಯೊಸಿಸ್ ರೋಗದ ಲಕ್ಷಣವೇನು?

ಎಂಡೊಮೆಟ್ರಿಯೊಸಿಸ್ ಎಂಬುದು ಒಂದು ಕಾಯಿಲೆಯಾಗಿದ್ದು, ಇದರಲ್ಲಿ ಗರ್ಭಾಶಯದ ಒಳಪದರವನ್ನು ಹೋಲುವ ಅಂಗಾಂಶವು ಗರ್ಭಾಶಯದ ಹೊರಗೆ ಬೆಳೆಯುತ್ತದೆ. ಇದು ಸೊಂಟದಲ್ಲಿ ತೀವ್ರವಾದ ನೋವನ್ನು ಉಂಟುಮಾಡುತ್ತದೆ. ಇದರಿಂದ ಮಹಿಳೆಯರು ಗರ್ಭ ಧರಿಸಲು ಕಷ್ಟವಾಗುತ್ತದೆ. ಎಂಡೊಮೆಟ್ರಿಯೊಸಿಸ್ ವ್ಯಕ್ತಿಯ ಮೊದಲ ಮುಟ್ಟಿನ ಅವಧಿಯಲ್ಲಿ ಪ್ರಾರಂಭವಾಗಿ ಋತುಬಂಧದವರೆಗೂ ಇರಬಹುದು. ಈ ಎಂಡೊಮೆಟ್ರಿಯೊಸಿಸ್ ಮಹಿಳೆಯರ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ? ಎಂಬುದರ ಮಾಹಿತಿ ಇಲ್ಲಿದೆ.

Endometriosis: ಗರ್ಭ ಧರಿಸಲು ತೊಂದರೆ ಮಾಡುವ ಎಂಡೊಮೆಟ್ರಿಯೊಸಿಸ್ ರೋಗದ ಲಕ್ಷಣವೇನು?
ಸಾಂದರ್ಭಿಕ ಚಿತ್ರ Image Credit source: iStock
Follow us
ಸುಷ್ಮಾ ಚಕ್ರೆ
|

Updated on: Mar 09, 2024 | 1:00 PM

ಗರ್ಭಾಶಯದಲ್ಲಿನ ಸೋಂಕಿನಿಂದ ಎಂಡೊಮೆಟ್ರಿಯೊಸಿಸ್ (Endometriosis) ಉಂಟಾಗುತ್ತದೆ. ಇದು ಕ್ಲಮೈಡಿಯಾ, ಗೊನೊರಿಯಾ, ಕ್ಷಯ, ಅಥವಾ ಸಾಮಾನ್ಯ ಯೋನಿ ಬ್ಯಾಕ್ಟೀರಿಯಾದಿಂದಲೂ ಉಂಟಾಗಬಹುದು. ಗರ್ಭಪಾತ ಅಥವಾ ಹೆರಿಗೆಯ ನಂತರ ಇದು ಸಂಭವಿಸುವ ಸಾಧ್ಯತೆ ಹೆಚ್ಚು. ಅದರಲ್ಲೂ ಸಿಸೇರಿಯನ್ ಹೆರಿಗೆಯಾದರೆ ಈ ಎಂಡೊಮೆಟ್ರಿಯೊಸಿಸ್ ಉಂಟಾಗುವ ಸಾಧ್ಯತೆ ಹೆಚ್ಚು ಸಾಮಾನ್ಯವಾಗಿದೆ. ಎಂಡೊಮೆಟ್ರಿಯೊಸಿಸ್ ರೋಗವನ್ನು ಅಂಡಾಶಯದ ಸೈಲೆಂಟ್ ಕಿಲ್ಲರ್ ಎಂದು ಪರಿಗಣಿಸಲಾಗುತ್ತದೆ.

ದ ಅಪರೂಪದ ಎಂಡೊಮೆಟ್ರಿಯೊಸಿಸ್ ಕಾಯಿಲೆಯ ಬಗ್ಗೆ ಮಹಿಳೆಯರು ತಿಳಿದಿರಬೇಕು ಎಂದು ತಜ್ಞರು ಅಂತರರಾಷ್ಟ್ರೀಯ ಮಹಿಳಾ ದಿನದಂದು ಎಚ್ಚರಿಸಿದ್ದಾರೆ, ಏಕೆಂದರೆ ಮಾರ್ಚ್ ಅನ್ನು ಎಂಡೊಮೆಟ್ರಿಯೊಸಿಸ್ ಜಾಗೃತಿ ತಿಂಗಳೆಂದು ಪರಿಗಣಿಸಲಾಗುತ್ತದೆ. ಇದೊಂದು ಅಪರೂಪದ ಕಾಯಿಲೆಯಾಗಿದ್ದು, ಇತ್ತೀಚೆಗೆ ಮುಂಚಿತವಾಗಿ ಈ ರೋಗವನ್ನು ಪತ್ತೆಹಚ್ಚಲಾಗುತ್ತಿದೆ. ಆತಂಕಾರಿ ಸಂಗತಿಯೆಂದರೆ, ಇತ್ತೀಚೆಗೆ ಕರ್ನಾಟಕದಲ್ಲಿ ಎಂಡೊಮೆಟ್ರಿಯೊಸಿಸ್ ಹರಡುವಿಕೆ ಹೆಚ್ಚುತ್ತಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ:Pregnant Health: ಗರ್ಭಿಣಿಯರು ಕಲ್ಲಂಗಡಿ ಹಣ್ಣು ತಿನ್ನುವುದನ್ನು ಮಿಸ್ ಮಾಡಬೇಡಿ

ಎಂಡೊಮೆಟ್ರಿಯೊಸಿಸ್ ಉರಿಯೂತದ ಸ್ಥಿತಿಯಾಗಿದ್ದು, ಗರ್ಭಾಶಯದ ಹೊರಗೆ ಎಂಡೊಮೆಟ್ರಿಯಲ್ ಅಂಗಾಂಶ (ಗರ್ಭಾಶಯದ ಒಳಪದರವನ್ನು ಹೋಲುವ ಅಂಗಾಂಶ) ಬೆಳೆಯುತ್ತದೆ. ಎಂಡೊಮೆಟ್ರಿಯೊಸಿಸ್ ಗರ್ಭಾಶಯ, ಮೂತ್ರಕೋಶ ಅಥವಾ ಕರುಳಿನಂತಹ ಅಂಗಗಳನ್ನು ಕೆಲವು ಹಂತಗಳಲ್ಲಿ ಒಟ್ಟಿಗೆ ಅಂಟಿಕೊಳ್ಳುವಂತೆ ಮಾಡುತ್ತದೆ.

ಈ ಬಗ್ಗೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ಫರ್ಟಿಲಿಟಿ ಮತ್ತು ಲ್ಯಾಪರೊಸ್ಕೋಪಿಕ್ ಸರ್ಜನ್, ಪ್ರಸೂತಿ ಮತ್ತು ಸ್ತ್ರೀರೋಗತಜ್ಞರಾದ ಡಾ. ಬಿ.ಆರ್. ಉಷಾ ಮಾಹಿತಿ ನೀಡಿದ್ದು, ಸುಮಾರು ಶೇ. 70ರಷ್ಟು ಮಹಿಳೆಯರು ಮುಟ್ಟಿನ ನೋವು ಮತ್ತು ಡಿಸ್ಪೇರಿಯಾದ ಸಮಸ್ಯೆಗಳಿಂದ ಹೊರರೋಗಿ ವಿಭಾಗಕ್ಕೆ ಭೇಟಿ ನೀಡುತ್ತಾರೆ. ಈ ಸಮಸ್ಯೆ ಲಕ್ಷಣರಹಿತವಾಗಿರುತ್ತದೆ ಎಂದು ವಿವರಿಸಿದ್ದಾರೆ.

ನಾನು ತಿಂಗಳಿಗೆ ಕನಿಷ್ಠ 25 ಎಂಡೊಮೆಟ್ರಿಯೊಸಿಸ್ ಪ್ರಕರಣಗಳನ್ನು ನೋಡುತ್ತೇನೆ. ಇದು ಲೈಂಗಿಕ ಅಪಸಾಮಾನ್ಯ ಕ್ರಿಯೆ, ಪರಸ್ಪರ ಸಂಘರ್ಷಗಳು ಮತ್ತು ನಂತರ ಬಂಜೆತನಕ್ಕೆ ಕಾರಣವಾಗುವ ನೋವಿನ ಸಂಭೋಗವನ್ನು ಉಂಟುಮಾಡುತ್ತದೆ. ಎಂಡೊಮೆಟ್ರಿಯೊಸಿಸ್ ಅಂಡಾಶಯಗಳ ಸೈಲೆಂಟ್ ಕಿಲ್ಲರ್ ಆಗಿದ್ದು, ಇದು ಗರ್ಭ ಧರಿಸುವ ಸಾಧ್ಯತೆಯ ಬಗ್ಗೆ ಪರಿಣಾಮ ಬೀರುತ್ತದೆ ಎಂದು ಡಾ. ಉಷಾ ತಿಳಿಸಿದ್ದಾರೆ.

ಇದನ್ನೂ ಓದಿ: Pregnancy: ದಪ್ಪ ಇರುವ ಮಹಿಳೆಯರು ಗರ್ಭಿಣಿಯಾಗಲು ಸಾಧ್ಯವಿಲ್ಲವೇ?

ಇದು ಸಾಮಾನ್ಯವಾಗಿ ತೀವ್ರವಾದ ಡಿಸ್ಮೆನೊರಿಯಾದಂತೆ ಕಂಡುಬರುತ್ತದೆ. ಪಿರಿಯಡ್ಸ್ ಸಮಯದಲ್ಲಿ ತೀವ್ರವಾದ ನೋವು ಉಂಟಾಗುವುದು ಈ ರೋಗದ ಮುಖ್ಯ ಲಕ್ಷಣವಾಗಿದೆ. ಆದರೆ, ಬಹುತೇಕ ಮಹಿಳೆಯರು ಮುಟ್ಟಿನ ಸಮಯದಲ್ಲಿ ನೋವು ಉಂಟಾಗುವುದು ಸಾಮಾನ್ಯ ಎಂದು ಇದನ್ನು ನಿರ್ಲಕ್ಷ್ಯ ಮಾಡುತ್ತಾರೆ. ಇದರಿಂದ ಮಹಿಳೆಯರು ಶಾರೀರಿಕ ಸಂಕಟವನ್ನು ಮಾತ್ರವಲ್ಲದೆ ಮಾನಸಿಕ ಯಾತನೆಯನ್ನೂ ಸಹಿಸಿಕೊಳ್ಳುತ್ತಾರೆ.

ಎಂಡೊಮೆಟ್ರಿಯೊಸಿಸ್ ವಿಶ್ವದಾದ್ಯಂತ ಮಹಿಳೆಯರಿಗೆ ಗಮನಾರ್ಹವಾದ ಆರೋಗ್ಯ ಸಮಸ್ಯೆಯನ್ನು ಉಂಟುಮಾಡುತ್ತಿದೆ. ಅವರ ದೈನಂದಿನ ಜೀವನ ಮತ್ತು ಸಂತಾನೋತ್ಪತ್ತಿಯ ಆರೋಗ್ಯದ ಮೇಲೆ ಇದು ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಜಾಗತಿಕವಾಗಿ 10 ಮಹಿಳೆಯರಲ್ಲಿ ಒಬ್ಬರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಭಾರತವೊಂದರಲ್ಲೇ 25 ಮಿಲಿಯನ್ ಮಹಿಳೆಯರು ಎಂಡೊಮೆಟ್ರಿಯೊಸಿಸ್‌ನಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ