Orange Juice: ಒಂದು ಗ್ಲಾಸ್ ಕಿತ್ತಳೆ ಜ್ಯೂಸ್ ಉರಿಯೂತ ಸಮಸ್ಯೆ ವಿರುದ್ಧ ಹೋರಾಡಲು ಸಹಾಯಕ

Health Care: ತ್ತಳೆ ರಸವು ದೀರ್ಘಕಾಲದ ಉರಿಯೂತ ಸಮಸ್ಯೆಗೆ ಪರಿಹಾರ ಜತೆಗೆ ಹೃದಯ ಸಂಬಂಧಿತ ಖಾಯಿಲೆ ಮತ್ತು ಮಧುಮೇಹ ಸೇರಿದಂತೆ ಹಲವು ಸಮಸ್ಯೆಗೆ ಪರಿಹಾರ ನೀಡುತ್ತದೆ

Orange Juice: ಒಂದು ಗ್ಲಾಸ್ ಕಿತ್ತಳೆ ಜ್ಯೂಸ್ ಉರಿಯೂತ ಸಮಸ್ಯೆ ವಿರುದ್ಧ ಹೋರಾಡಲು ಸಹಾಯಕ
ಪ್ಯಾಕ್ ಮಾಡಲಾದ ಜ್ಯೂಸ್‌ಗಳನ್ನು ಸೇವಿಸಬೇಡಿ. ಏಕೆಂದರೆ ಹಣ್ಣುಗಳ ಬದಲಿಗೆ, ಸಕ್ಕರೆ ಮತ್ತು ಹಣ್ಣಿನ ರುಚಿಗಳನ್ನು ಹೆಚ್ಚಿಸಲು ಕೆಲವು ವಸ್ತುಗಳನ್ನು ಸೇರಿಸಲಾಗುತ್ತದೆ. ಇದು ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಹೀಗಾಗಿ ತಾಜಾ ಹಣ್ಣುಗಳಿಂದ ಮನೆಯಲ್ಲೇ ತಯಾರಿಸಿದ ಜ್ಯೂಸ್ ಸೇವಿಸಿ.
Follow us
TV9 Web
| Updated By: ಆಯೇಷಾ ಬಾನು

Updated on: Oct 21, 2021 | 9:31 AM

ಒಂದು ಗ್ಲಾಸ್ ಆರೆಂಜ್ ಜ್ಯೂಸ್ ಆ ದಿನ ಪೂರ್ತಿ ಚಟುವಟಿಕೆಯಿಂದ ಕೂಡಿರಲು ಬೇಕಾದ ಶಕ್ತಿಯನ್ನು ನಿಮ್ಮಲ್ಲಿ ತುಂಬುತ್ತದೆ. ಈಗ ತಾನೇ ಹಿಂಡಿ ತೆಗೆದ ಕಿತ್ತಳೆ ರಸದಲ್ಲಿ ವಿಟಮಿನ್ ಸಿ ಮತ್ತು ಪೊಟ್ಯಾಶಿಯಂ ಸಮೃದ್ಧವಾಗಿರುತ್ತದೆ. ಪ್ರತಿಶತ 100ರಷ್ಟು ಅಂದರೆ ಒಂದು ಗ್ಲಾಸ್​ನಷ್ಟು ಕಿತ್ತಳೆ ರಸದಲ್ಲಿ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ನಿಯಂತ್ರಿಸುವ ಶಕ್ತಿಯನ್ನು ಹೊಂದಿರುತ್ತದೆ ಎಂಬುದನ್ನು ಅಧ್ಯಯನ ತಿಳಿಸಿದೆ.

ಒಂದು ಗ್ಲಾಸ್ ಕಿತ್ತಳೆ ರಸವನ್ನು ಕುಡಿಯುವುದು ಆರೋಗ್ಯಕರ ಮತ್ತು ವಯಸ್ಕರಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತದೆ. ಕಿತ್ತಳೆ ರಸವು ದೀರ್ಘಕಾಲದ ಉರಿಯೂತ ಸಮಸ್ಯೆಗೆ ಪರಿಹಾರ ಜತೆಗೆ ಹೃದಯ ಸಂಬಂಧಿತ ಖಾಯಿಲೆ ಮತ್ತು ಮಧುಮೇಹ ಸೇರಿದಂತೆ ಹಲವು ಸಮಸ್ಯೆಗೆ ಪರಿಹಾರ ನೀಡುತ್ತದೆ ಈ ಕುರಿತಂತೆ ಅಡ್ವಾನ್ಸ್ ಇನ್ ನ್ಯೂಟ್ರಿಷಿಯನ್ ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ.

ಕಿತ್ತಳೆ ರಸವು ವಿಟಮಿನ್ ಸಿ ಯಂತಹ ಪೋಷಕಾಂಶಗಳನ್ನು ಹೊಂದಿದೆ. ಜತೆಗೆ ದೇಹದಲ್ಲಿ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಫ್ಲೋರಿಡಾ ಸಿಟ್ರಸ್ ನ ಆಹಾರ ತಜ್ಞರಾದ ಗೇಲ್ ರಾಂಪರ್ಸೌಡ್ ಹೇಳಿದ್ದಾರೆ.

ಕಿತ್ತಳೆರಸದಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಇದರಿಂದ ಇನ್ನೂ ಹೆಚ್ಚಿನ ಡೇಟಾವನ್ನು ಸಂಗ್ರಹಿಸಲು ಹೆಚ್ಚಿನ ಅಧ್ಯಯನಗಳು ಬೇಕು ಎಂದು ತಜ್ಞರಾದ ಗೇಲ್ ಹೇಳಿದ್ದಾರೆ. ಈ ಕುರಿತಂತೆ ಇಂಡಿಯಾ ಡಾಟ್ ಕಾಮ್​ನಲ್ಲಿ ಉಲ್ಲೇಖಿಸಲಾಗಿದೆ.

ಅಧ್ಯಯನ ಪ್ರಕಾರ ಒಂದು ಗ್ಲಾಸ್ ಕಿತ್ತಳೆ ರಸವು ಉರಿಯೂತದ ಸಮಸ್ಯೆಯನ್ನು ಪರಿಹರಿಸುತ್ತದೆ. ಜತೆಗೆ ಇದರಿಂದ ಆರೋಗ್ಯಕ್ಕೆ ಯಾವುದೇ ಅಡ್ಡ ಪಡಿಣಾಮಗಳಿಲ್ಲ. ಅಧ್ಯಯನದಲ್ಲಿ ಮೂರು ರೀತಿಯ ವಿಶ್ಲೇಷಣಾ ವಿಭಾಗಗಳನ್ನು ಮಾಡಲಾಗಿದ್ದು, ಆರೋಗ್ಯವಂತ ವಯಸ್ಕರು ಮತ್ತು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿದ್ದ ವಯಸ್ಕರು ಜತೆಗೆ ದೇಹದಲ್ಲಿ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡಕ್ಕೆ ಸಿಲುಕಿರುವ ವಯಸ್ಕರೊಂದಿಗೆ ಅಧ್ಯಯನ ನಡೆಸಲಾಗಿದೆ.

ಇದನ್ನೂ ಓದಿ:

Health Tips: ತಲೆ ಕೂದಲು ನಿಮ್ಮ ಆರೋಗ್ಯದ ಬಗ್ಗೆ ಬಹಳಷ್ಟು ಹೇಳುತ್ತದೆ; ನಿರ್ಲಕ್ಷ್ಯ ವಹಿಸದಿರುವುದು ಒಳಿತು

Health Tips: ಸಾತ್ವಿಕ ಆಹಾರ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು

ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಮಾಜಿ ಲವರ್​ನಿಂದ ಯುವತಿಗೆ ಕಿರುಕುಳ: ಬೈಕ್ ಕದ್ದು, ಜಖಂಗೊಳಿಸಿದ ಯುವಕ
ಮಾಜಿ ಲವರ್​ನಿಂದ ಯುವತಿಗೆ ಕಿರುಕುಳ: ಬೈಕ್ ಕದ್ದು, ಜಖಂಗೊಳಿಸಿದ ಯುವಕ
ಕರ್ನಾಟಕ ಬಿಜೆಪಿಯಲ್ಲಿ ಬದಲಾವಣೆ ಬಿರುಗಾಳಿ: ಯತ್ನಾಳ್ ಸ್ಫೋಟಕ ಹೇಳಿಕೆ
ಕರ್ನಾಟಕ ಬಿಜೆಪಿಯಲ್ಲಿ ಬದಲಾವಣೆ ಬಿರುಗಾಳಿ: ಯತ್ನಾಳ್ ಸ್ಫೋಟಕ ಹೇಳಿಕೆ
ತ್ರಿವಿಕ್ರಮ್ ಡೇಂಜರ್​ ಎಂದ ಭವ್ಯಾ ಗೌಡ; ರಾಧೆಗೆ ಈಗ ಬೇಡವಾದ ಕೃಷ್ಣ
ತ್ರಿವಿಕ್ರಮ್ ಡೇಂಜರ್​ ಎಂದ ಭವ್ಯಾ ಗೌಡ; ರಾಧೆಗೆ ಈಗ ಬೇಡವಾದ ಕೃಷ್ಣ
ಗ್ಯಾರಂಟಿಗಳಿಗೆ ನನ್ನ ವಿರೋಧವಿಲ್ಲ, ನಿಲ್ಲಿಸಬೇಡಿ, ಮುಂದುವರೆಸಿ: HDK
ಗ್ಯಾರಂಟಿಗಳಿಗೆ ನನ್ನ ವಿರೋಧವಿಲ್ಲ, ನಿಲ್ಲಿಸಬೇಡಿ, ಮುಂದುವರೆಸಿ: HDK