ಕೊರೊನಾವೈರಸ್ ಎರಡನೇ ಅಲೆಯು ಭಾರತದಲ್ಲಿ ಹೆಚ್ಚಿನ ಹಾನಿಯನ್ನುಂಟು ಮಾಡಿದೆ. ಎರಡನೇ ಅಲೆಯಲ್ಲಿ ರೂಪಾಂತರಿ ವೈರಸ್ ಮೊದಲನೆಯದಕ್ಕಿಂತ ಹೆಚ್ಚು ವಿನಾಶಕಾರಿಯಾಗಿದ್ದು ಇದು ಹೆಚ್ಚು ಸಾಂಕ್ರಾಮಿಕ ಮತ್ತು ಮಾರಕವೆಂದು ಸಾಬೀತಾಗಿದೆ. ಪ್ರಕರಣಗಳ ಉಲ್ಬಣದ ನಡುವೆ ದೇಶದಲ್ಲಿನ ಆರೋಗ್ಯ ವ್ಯವಸ್ಥೆಯು ಕುಸಿಯುತ್ತಿದೆ. ಈಗ, ಭಾರತದ ಆರೋಗ್ಯ ವ್ಯವಸ್ಥೆಗೆ ಮತ್ತೊಂದು ಸವಾಲು ಎದುರಾಗಿದೆ. ಅದೇ ಕಪ್ಪು ಶಿಲೀಂಧ್ರ(Black Fungus). ಇದನ್ನು ಮ್ಯೂಕಾರ್ಮೈಕೋಸಿಸ್ ಎಂದೂ ಕರೆಯಲಾಗುತ್ತದೆ. ಈ ಅಪರೂಪದ ಶಿಲೀಂಧ್ರ ಸೋಂಕಿನ ಪ್ರಕರಣಗಳ ತ್ವರಿತ ಏರಿಕೆ ಆತಂಕಕಾರಿಯಾಗಿದೆ. ಅನೇಕ ರಾಜ್ಯಗಳು ಕಪ್ಪು ಶಿಲೀಂಧ್ರವನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಿವೆ. ಶಿಲೀಂಧ್ರಗಳ ಸೋಂಕು ಮೆದುಳು, ಶ್ವಾಸಕೋಶ ಮತ್ತು ಸೈನಸ್‌ಗಳಿಗೆ ಅಪಾಯವನ್ನುಂಟು ಮಾಡುತ್ತದೆ.
ಇಲ್ಲಿಯವರೆಗೆ ಕೊವಿಡ್ ರೋಗಿಗಳಲ್ಲಿ ಕಪ್ಪು ಶಿಲೀಂಧ್ರವು ವರದಿಯಾಗಿದೆ. ಆದರೆ ತಜ್ಞರು ಈ ಶಿಲೀಂಧ್ರ ಸೋಂಕು ಕೊವಿಡ್ ರೋಗವಿಲ್ಲದ ಜನರಿಗೆ ಸಂಭವಿಸಬಹುದು ಎಂದು ಎಚ್ಚರಿಸಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ ಅಧಿಕ ರಕ್ತದ ಸಕ್ಕರೆ ಇರುವ ಜನರು ಜಾಗರೂಕರಾಗಿರಬೇಕು.
ವೈದ್ಯಕೀಯ ವಿದ್ಯಾರ್ಥಿಗಳಿಗೆ ಕಪ್ಪು ಶಿಲೀಂಧ್ರದ ಬಗ್ಗೆ ಏನು ಕಲಿಸಲಾಗುತ್ತದೆ ಎಂದರೆ ಮಧುಮೇಹ ಜನರಿಗೆ ಈ ಸೋಂಕು ತಗಲುತ್ತದೆ. ಅಂದರೆ ಅನಿಯಂತ್ರಿತ ಮಧುಮೇಹ ಹೊಂದಿರುವವರು. ಅನಿಯಂತ್ರಿತ ಮಧುಮೇಹ ಮತ್ತು ಇತರ ಕೆಲವು ಗಮನಾರ್ಹ ಕಾಯಿಲೆಗಳ ಸಂಯೋಜನೆಯು ಕಪ್ಪು ಶಿಲೀಂಧ್ರಕ್ಕೆ ಕಾರಣವಾಗಬಹುದು ಎಂದು ನೀತಿ ಆಯೋಗ (ಆರೋಗ್ಯ) ಸದಸ್ಯ ವಿ.ಕೆ. ಪೌಲ್ ಹೇಳಿದ್ದಾರೆ.
ರಕ್ತದಲ್ಲಿನ ಸಕ್ಕರೆ ಮಟ್ಟವು 700-800 ತಲುಪಿದಾಗ ಒಬ್ಬ ವ್ಯಕ್ತಿಯು ಕಪ್ಪು ಶಿಲೀಂಧ್ರಕ್ಕೆ ಗುರಿಯಾಗುತ್ತಾನೆ ಎಂದು ಡಾ. ಪೌಲ್ ವಿವರಿಸಿದರು- ಇದನ್ನು ವೈದ್ಯಕೀಯ ಭಾಷೆಯಲ್ಲಿ ಡಯಾಬಿಟಿಕ್ ಕೀಟೋಆಸಿಡೋಸಿಸ್(diabetic ketoacidosis) ಎಂದು ಕರೆಯಲಾಗುತ್ತದೆ.
ನ್ಯುಮೋನಿಯಾದಂತಹ ಯಾವುದೇ ಕಾಯಿಲೆಗಳು ಪರಿಸ್ಥಿತಿಯನ್ನು ಉಲ್ಬಣಗೊಳಿಸುತ್ತವೆ. ಈಗ, ಕೊವಿಡ್ ಇದೆ, ಅದು ಸ್ವತಃ ಅದರ ಪರಿಣಾಮಗಳನ್ನು ಹೊಂದಿದೆ. ನಂತರ ಸ್ಟೀರಾಯ್ಡ್ ಬಳಕೆ ಬರುತ್ತದೆ. ಇವೆಲ್ಲವೂ ಪರಿಸ್ಥಿತಿಯನ್ನು ಇನ್ನಷ್ಟು ಬಿಗಾಡಾಯಿಸಿದೆ. ಆದರೆ ಕೊವಿಡ್ ಇಲ್ಲದ ಜನರಲ್ಲಿ ಇತರ ಪರಿಸ್ಥಿತಿಗಳು ಇದ್ದಲ್ಲಿ ಮ್ಯೂಕೋರ್ಮೈಕೋಸಿಸ್ಗೊಳಗಾಗಬಹುದು.
ಉತ್ತಮ ಆರೋಗ್ಯದಲ್ಲಿರುವ ಜನರು ಈ ಅಪರೂಪದ ಶಿಲೀಂಧ್ರ ಸೋಂಕು ತಗುಲುತ್ತದೆ ಎಂದು ಚಿಂತೆಗೊಳಗಾಗಬೇಕಿಲ್ಲ ಎಂದು ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ಡಾ. ನಿಖಿಲ್ ಟಂಡನ್ ಹೇಳಿದ್ದಾರೆ.
ಇತ್ತೀಚೆಗೆ ಪ್ರಕರಣಗಳ ಏರಿಕೆಗೆ ಹಿಂದಿನ ಕಾರಣವೆಂದರೆ, ಎರಡನೇ ಅಲೆಯಲ್ಲಿನ ಕೊವಿಡ್ ರೂಪಾಂತರವು ಮೊದಲ ಅಲೆಗಿಂತಲೂ ರೋಗ ನಿರೋಧಕದ ಮೇಲೆ ಆಕ್ರಮಣ ಮಾಡಿದೆ.ಅಲ್ಲದೆ, ಸ್ಟೀರಾಯ್ಡ್‌ಗಳ ವಿಪರೀತ ಬಳಕೆಯು ಕಂಡುಬಂದಿದೆ, ಇದು ಶಿಲೀಂಧ್ರಗಳ ಸೋಂಕಿನ ಹೆಚ್ಚಳಕ್ಕೆ ಒಂದು ಕಾರಣವಾಗಬಹುದು. ಆದರೆ ಸರಿಯಾದ ತನಿಖೆಯಿಲ್ಲದೆ ಏನನ್ನೂ ಖಚಿತವಾಗಿ ಹೇಳಲಾಗುವುದಿಲ್ಲ ಎಂದು ಟಂಡನ್ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಇದನ್ನೂ ಓದಿ: Yellow Fungus: ಬ್ಲ್ಯಾಕ್, ವೈಟ್ ಫಂಗಸ್ ಬಳಿಕ ಯೆಲ್ಲೋ ಫಂಗಸ್ ಪತ್ತೆ; ರೋಗ ಲಕ್ಷಣ ಹಾಗೂ ಇತರ ಮಾಹಿತಿ ಇಲ್ಲಿದೆ
Black Fungus ಬ್ಲಾಕ್ ಫಂಗಸ್ಗೆ ಹೋಮಿಯೋಪತಿ ಚಿಕಿತ್ಸೆ ಸೂಚಿಸಿದ ಆಯುಷ್ ಇಲಾಖೆ