ಕೊವಿಡ್ ಸಾಂಕ್ರಾಮಿಕ ಕಾಯಿಲೆಯಿಂದ ಹೊರಬಂದ ಮೇಲೂ ಕೊವಿಡ್ ಲಕ್ಷಣಗಳು ನಿಮ್ಮನ್ನು ಕಾಡುತ್ತಿರಬಹುದು. ದೀರ್ಘಕಾಲಿಕ ಕೊವಿಡ್ ಲಕ್ಷಣಗಳು ನಿಮ್ಮನ್ನು ಹೆಚ್ಚು ಚಿಂತೆಗೀಡು ಮಾಡುತ್ತಿರಬಹುದು. ಇದರಿಂದ ಮಾನವರಲ್ಲಿ ರಕ್ತದೊತ್ತಡದಂತಹ ಸಮಸ್ಯೆಗಳು ಕಾಡತೊಡಗಬಹುದು. ಹೀಗಿರುವಾಗ ಮನಸ್ಸಿನ ಸ್ಥಿತಿಯ ಬದಲಾವಣೆ ಅವಶ್ಯಕವಾಗಿರುತ್ತದೆ. ಈ ಕುರಿತಂತೆ ವೈದ್ಯರು ಕೆಲವೊಂದಿಷ್ಟು ಟಿಪ್ಸ್ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಪೌಷ್ಠಿಕ ಹಾಗೂ ಫಿಟ್ನೆಸ್ ತಜ್ಞ ಮುನ್ಮುನ್ ಗನೆರಿವಾಲ್ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಂತೆ ಮಾಹಿತಿ ಹಂಚಿಕೊಂಡಿದ್ದಾರೆ. ದೀರ್ಘಕಾಲಿಕ ಕೊವಿಡ್ನಿಂದ ಹೊರಬರಲು ಹಾಗೂ ಮಾನಸಿಕ ಸ್ಥಿತಿಯನ್ನು ಬದಲಾಯಿಸಿಕೊಳ್ಳಲು ಏನು ಮಾಡಬೇಕು ಎಂಬುದರ ಕುರಿತಾಗಿ ಕೆಲವೊಂದಿಷ್ಟು ಸಲಹೆಗಳನ್ನು ಹಂಚಿಕೊಂಡಿದ್ದಾರೆ. ದೀರ್ಘಕಾಲಿಕ ಕೊವಿಡ್ನಿಂದ ಯಾರ್ಯಾರು ಕಡಿಮೆ ನಿದ್ರೆ, ಮನಸ್ಥಿತಿಯಲ್ಲಿ ಒತ್ತಡ, ಡಿಪ್ರೆಶನ್ಗೆ ಒಳಗಾಗುತ್ತಿದ್ದೀರಿ. ನೀವು ಚಿಂತೆಗೀಡಾಗುವ ಅವಶ್ಯಕತೆ ಇಲ್ಲ. ಇದು ಸಾಮಾನ್ಯವಾದುದು. ಮುಖ್ಯವಾಗಿ ನೀವು ನೆನಪಿಟ್ಟುಕೊಳ್ಳುವ ಅಂಶವೆಂದರೆ, ಯಾವುದೇ ರೋಗ ಲಕ್ಷಣದಿಂದ ಹೊರಬರಲು ಅಥವಾ ಸುಧಾರಿಸಿಕೊಳ್ಳಲು ಸಮಯ ಹಿಡಿಯುತ್ತದೆ ಎಂದು ಧೈರ್ಯ ಹೇಳಿದ್ದಾರೆ.
ದೀರ್ಘಕಾಲಿಕ ಕೊವಿಡ್ನಿಂದ ಚೇತರಿಸಿಕೊಳ್ಳಲು ಒಂದುಷ್ಟು ಸಲಹೆಗಳು
* ಸಮಯಕ್ಕೆ ಸರಿಯಾಗಿ ಆಹಾರ
* ನಿಮ್ಮ ಆಹಾರ ಕ್ರಮ ಸಮತೋಲನದಲ್ಲಿರಬೇಕು. ಜತೆಗೆ ಪೌಷ್ಟಿಕ ಆಹಾರವನ್ನು ಸೇವಿಸಬೇಕು
* ಪ್ರತಿನಿತ್ಯವೂ ವ್ಯಾಯಾಮ ಮಾಡಿ
* ಶುದ್ಧ ಗಾಳಿಯನ್ನು ಪಡೆಯಿರಿ. ಹೆಚ್ಚು ವಾತಾವಣದಲ್ಲಿ ಪ್ರಕೃತಿಯ ನಡುವೆ ಸಮಯ ಕಳೆಯುವ ಮೂಲಕ ಶುದ್ಧ ಗಾಳಿಯನ್ನು ಸೇವಿಸಬಹುದು
* ದೇಹಕ್ಕೆ ವಿಶ್ರಾಂತಿ ಮತ್ತು ನಿದ್ರೆಗೆ ಸಮಯ ಕೊಡಿ
* ಪ್ರತಿನಿತ್ಯವೂ ಧ್ಯಾನ ಅಭ್ಯಾಸ ರೂಢಿಯಲ್ಲಿರಲಿ
* ಮನಸ್ಸಿಗೆ ಕಿರಿ-ಕಿರಿ ಉಂಟುಮಾಡುವ ಗೊಂದಲದ ಸುದ್ದಿಗಳಿಂದ ದೂರವಿರಿ
* ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ
ಇದನ್ನೂ ಓದಿ:
Health Tips: ಕಿಡ್ನಿ ಸ್ಟೋನ್ ಸಮಸ್ಯೆಯ ಲಕ್ಷಣಗಳೇನು? ಪರಿಹಾರಗಳಿವೆಯಾ?