Eye Care: ಮಂದ ಬೆಳಕಿನಲ್ಲಿ ಓದುವುದರಿಂದ ದೃಷ್ಟಿ ದೋಷ ಉಂಟಾಗುವುದೇ?

ಕಣ್ಣುಗಳು ನಮ್ಮ ದೇಹದ ಪ್ರಮುಖ ಮತ್ತು ಸುಂದರವಾದ ಅಂಗ. ನಮ್ಮ ಸುತ್ತಲಿನ ಎಲ್ಲಾ ಸುಂದರವಾದ ವಸ್ತುಗಳನ್ನು ನೋಡಲು ಕಣ್ಣುಗಳು ನಮಗೆ ಸಹಾಯ ಮಾಡುವುದರಿಂದ ನಾವು ಕಣ್ಣನ್ನು ಹೆಚ್ಚಾಗಿ ಅವಲಂಬಿಸಿರುತ್ತೇವೆ.

Eye Care: ಮಂದ ಬೆಳಕಿನಲ್ಲಿ ಓದುವುದರಿಂದ ದೃಷ್ಟಿ ದೋಷ ಉಂಟಾಗುವುದೇ?
Eye Care
Follow us
TV9 Web
| Updated By: ನಯನಾ ರಾಜೀವ್

Updated on: Jul 09, 2022 | 1:11 PM

ಕಣ್ಣುಗಳು ನಮ್ಮ ದೇಹದ ಪ್ರಮುಖ ಮತ್ತು ಸುಂದರವಾದ ಅಂಗ. ನಮ್ಮ ಸುತ್ತಲಿನ ಎಲ್ಲಾ ಸುಂದರವಾದ ವಸ್ತುಗಳನ್ನು ನೋಡಲು ಕಣ್ಣುಗಳು ನಮಗೆ ಸಹಾಯ ಮಾಡುವುದರಿಂದ ನಾವು ಕಣ್ಣನ್ನು ಹೆಚ್ಚಾಗಿ ಅವಲಂಬಿಸಿರುತ್ತೇವೆ. ಹಾಗೆಯೇ ಮಂದ ಅಥವಾ ಮಬ್ಬಾದ ಬೆಳಕಿನಲ್ಲಿ ಓದುವುದರಿಂದ ದೃಷ್ಟಿ ಮಂಜಾಗಲಿದೆ ಎನ್ನುವ ಮಾತುಗಳಿವೆ ಆದರೆ ಸತ್ಯ ಏನೆಂಬುದರ ಬಗ್ಗೆ ನಿಮಗೆ ಮಾಹಿತಿ ನೀಡುತ್ತೇವೆ. ಕಣ್ಣಿಗೆ ಸಂಬಂಧಿಸಿದ ಸತ್ಯ, ಸುಳ್ಳುಗಳ ಅನಾವರಣ.

ಡಿಮ್​ ಲೈಟ್​ ಅಲ್ಲಿ ಓದುವುದು ಕಣ್ಣಿಗೆ ಹಾನಿ ಮಾಡಲಿದೆ ಮಂದ ಬೆಳಕಿನಲ್ಲಿ ಓದುವಾಗ ಕಣ್ಣುಗಳು ಆಯಾಸಗೊಳ್ಳುತ್ತವೆ ಮತ್ತು ಪ್ರಕಾಶಮಾನವಾದ ಬೆಳಕು ಸಹಾಯಕವಾಗಿರುತ್ತದೆ, ಹಾಗೆಂದ ಮಾತ್ರಕ್ಕೆ ಮಂದ ಬೆಳಕು ಹಾನಿಕಾರಕವಲ್ಲ.

ಇಡೀ ದಿನ ಕಂಪ್ಯೂಟರ್​ನ ಪರದೆಯನ್ನು ನೋಡುವುದರಿಂದ ಕಣ್ಣುಗಳನ್ನು ಹಾಳಾಗುತ್ತವೆ. ಕಂಪ್ಯೂಟರ್‌ನಲ್ಲಿ ಕೆಲಸದ ಸಮಯವು ನಿಮ್ಮ ಕಣ್ಣುಗಳಿಗೆ ಯಾವುದೇ ಶಾಶ್ವತ ಹಾನಿಯನ್ನುಂಟು ಮಾಡುವುದಿಲ್ಲ ಎಂದು ವೈಜ್ಞಾನಿಕವಾಗಿ ಸಾಬೀತಾಗಿರುವ ಕಾರಣ ಚಿಂತಿಸಬೇಕಾಗಿಲ್ಲ. ಎಲೆಕ್ಟ್ರಾನಿಕ್ ಸಾಧನಗಳಿಂದ ಹೊರಸೂಸುವ ನೀಲಿ ಬೆಳಕು ಶಾಶ್ವತ ಹಾನಿ ಮಾಡುವಷ್ಟು ಪ್ರಬಲವಾಗಿಲ್ಲ. ಇದು ಕೇವಲ ಕಣ್ಣುಗಳಿಗೆ ಆಯಾಸ ಉಂಟು ಮಾಡಬಹುದು.

ನಿಮ್ಮ ದೃಷ್ಟಿ ಅಸ್ಪಷ್ಟವಾಗಿದ್ದರೆ, ನಿಮಗೆ ಓದುವ ಕನ್ನಡಕ ಬೇಕು ಎಂದರ್ಥ ಇಲ್ಲವೇ ಇಲ್ಲ. ಮಸುಕಾದ ದೃಷ್ಟಿ ಇತರ ಕಾರಣಗಳಿಂದಲೂ ಆಗಿರಬಹುದು, ಅಂದರೆ ಹೆಚ್ಚಿದ ರಕ್ತದಲ್ಲಿನ ಸಕ್ಕರೆ ಮಟ್ಟ, ಮಧುಮೇಹ, ಕಣ್ಣಿನ ಪೊರೆ, ಅಥವಾ ಸೋಂಕು ಆಗಿರಬಹುದು.

ನೇರವಾಗಿ ಸೂರ್ಯನನ್ನು ನೋಡಿದರೆ ಏನೂ ಆಗುವುದಿಲ್ಲ ಸೂರ್ಯನನ್ನು ನೇರವಾಗಿ ನೋಡಬೇಡಿ. ನೇರಳಾತೀತ ಕಿರಣಗಳು ಕಾರ್ನಿಯಾ, ಲೆನ್ಸ್ ಮತ್ತು ರೆಟಿನಾವನ್ನು ಒಮ್ಮೆಗೇ ಹಾನಿಗೊಳಿಸಬಹುದು.

ದಿನವಿಡೀ ಕನ್ನಡಕವನ್ನು ಧರಿಸುವುದರಿಂದ ನೀವು ಅವುಗಳ ಮೇಲೆ ಅವಲಂಬಿತರಾಗಬಹುದು ನೀವು ಸ್ಪಷ್ಟವಾಗಿ ನೋಡಲು ಕನ್ನಡಕವನ್ನು ಹೆಚ್ಚಾಗಿ ಧರಿಸುತ್ತೀರಿ, ಆದರೆ ಅವು ದೃಷ್ಟಿಯನ್ನು ಬದಲಾಯಿಸುವುದಿಲ್ಲ ಮತ್ತು ನೀವು ಖಂಡಿತವಾಗಿಯೂ ಅವುಗಳ ಮೇಲೆ ಅವಲಂಬಿತರಾಗುವುದಿಲ್ಲ. ಕನ್ನಡಕದಿಂದ ನೀವು ಹೆಚ್ಚು ಸ್ಪಷ್ಟವಾಗಿ ನೋಡಬಹುದು ಅಷ್ಟೇ.

ಮಧುಮೇಹ ಯಾವಾಗಲೂ ನಿಮ್ಮ ಕಣ್ಣುಗಳಿಗೆ ಹಾನಿ ಮಾಡುವುದಿಲ್ಲ ಮಧುಮೇಹವನ್ನು ಆರಂಭದಲ್ಲೇ ಪತ್ತೆ ಹಚ್ಚಿದರೆ ಉಳಿದೆಲ್ಲಾ ಆಪಾಯವನ್ನು ಕಡಿಮೆ ಮಾಡಬಹುದು.

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ