AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾನ್ಸೂನ್ ಟಿಪ್ಸ್: ಮುಂಗಾರು ಮಳೆಯಲ್ಲಿ ನಿಮ್ಮ ಪಾದಗಳನ್ನು ರಕ್ಷಿಸಲು ಇಲ್ಲಿವೆ 5 ಅದ್ಭುತ ಸಲಹೆಗಳು

ಮಾನ್ಸೂನ್ ವೇಳೆ ದೈನಂದಿನ ಕ್ರಮದಲ್ಲಿ ಪಾದದ ಆರೈಕೆ: ಮುಂಗಾರು ಸಮಯದಲ್ಲಿ ನಿಮ್ಮ ಚರ್ಮ ಮತ್ತು ಕೂದಲಿನ ಜೊತೆಗೆ ಪಾದಗಳಿಗೂ ವಿಶೇಷ ಕಾಳಜಿಯ ಅಗತ್ಯವಿರುತ್ತದೆ. ಪಾದಗಳು ಆಗಾಗ್ಗೆ ಮಳೆಯಲ್ಲಿ ಒದ್ದೆಯಾಗುತ್ತವೆ. ಈ ವೇಳೆ, ಶಿಲೀಂಧ್ರಗಳ ಸೋಂಕಿನಿಂದಾಗಿ ರಿಂಗ್ ವರ್ಮ್, ಪಾದಗಳಲ್ಲಿ ತುರಿಕೆ ಸಮಸ್ಯೆಗಳು ಎದುರಾಗುತ್ತವೆ.

ಮಾನ್ಸೂನ್ ಟಿಪ್ಸ್: ಮುಂಗಾರು ಮಳೆಯಲ್ಲಿ ನಿಮ್ಮ ಪಾದಗಳನ್ನು ರಕ್ಷಿಸಲು ಇಲ್ಲಿವೆ 5 ಅದ್ಭುತ ಸಲಹೆಗಳು
ಮುಂಗಾರು ಮಳೆಯಲ್ಲಿ ನಿಮ್ಮ ಪಾದಗಳನ್ನು ರಕ್ಷಿಸಲು ಇಲ್ಲಿವೆ 5 ಅದ್ಭುತ ಸಲಹೆಗಳು
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jul 09, 2022 | 6:06 AM

ಮಾನ್ಸೂನ್ ವೇಳೆ ದೈನಂದಿನ ಕ್ರಮದಲ್ಲಿ ಪಾದದ ಆರೈಕೆ: ಮುಂಗಾರು ಸಮಯದಲ್ಲಿ ನಿಮ್ಮ ಚರ್ಮ ಮತ್ತು ಕೂದಲಿನ ಜೊತೆಗೆ ಪಾದಗಳಿಗೂ ವಿಶೇಷ ಕಾಳಜಿಯ ಅಗತ್ಯವಿರುತ್ತದೆ. ಪಾದಗಳು ಆಗಾಗ್ಗೆ ಮಳೆಯಲ್ಲಿ ಒದ್ದೆಯಾಗುತ್ತವೆ. ಈ ವೇಳೆ, ಶಿಲೀಂಧ್ರಗಳ ಸೋಂಕಿನಿಂದಾಗಿ ರಿಂಗ್ ವರ್ಮ್, ಪಾದಗಳಲ್ಲಿ ತುರಿಕೆ ಸಮಸ್ಯೆಗಳು ಎದುರಾಗುತ್ತವೆ.

ಪಾದದ ಆರೈಕೆ ಸಲಹೆಗಳು: ಮಳೆಗಾಲ ಪ್ರಾರಂಭವಾದಾಗ, ಅನೇಕ ರೀತಿಯ ರೋಗಗಳು ಸುತ್ತಿಕೊಂಡು ಬರುತ್ತವೆ. ಆದರೆ ನೀವು ಅಂತಹ ಸಮಸ್ಯೆಗಳನ್ನು ತಪ್ಪಿಸಬೇಕೆಂದರೆ ಕೆಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಮಳೆಗಾಲದಲ್ಲಿ ನಿಮ್ಮ ತ್ವಚೆ ಮತ್ತು ಕೂದಲಿನ ಜೊತೆಗೆ ಪಾದಗಳಿಗೂ ವಿಶೇಷ ಕಾಳಜಿಯ ಅಗತ್ಯವಿದೆ. ಪಾದಗಳು ಆಗಾಗ್ಗೆ ಮಳೆಯಲ್ಲಿ ಒದ್ದೆಯಾಗುತ್ತವೆ. ಇದರಿಂದ ಫಂಗಲ್ ಇನ್ ಫೆಕ್ಷನ್, ರಿಂಗ್ ವರ್ಮ್, ತುರಿಕೆ ಸಮಸ್ಯೆ ಪಾದಗಳಲ್ಲಿ ಶುರುವಾಗುತ್ತದೆ. ಒದ್ದೆಯಾದ ಪಾದಗಳು ಕೆಲವೊಮ್ಮೆ ಕೆಟ್ಟ ವಾಸನೆಯನ್ನು ಹೊಂದಿರುತ್ತವೆ, ಅಲರ್ಜಿಯ ಕಾರಣದಿಂದಾಗಿ ಚರ್ಮವು ಕೆಂಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಮುಖದ ಜೊತೆಗೆ, ನಿಮ್ಮ ಪಾದಗಳ ಆರೈಕೆಯನ್ನೂ ಸಹ ನೋಡಿಕೊಳ್ಳಿ. ಪಾದಗಳನ್ನು ಸುಂದರವಾಗಿ ಮತ್ತು ಸ್ವಚ್ಛವಾಗಿಡಲು, ನೀವು ಈ ಆರೈಕೆ ಸಲಹೆಗಳನ್ನು ಅನುಸರಿಸಬೇಕು.

  1. 1. ಪಾದಗಳನ್ನು ಸ್ವಚ್ಛವಾಗಿಡಿ.. ಮಳೆಯಲ್ಲಿ ನಿಮ್ಮ ಪಾದಗಳನ್ನು ಚೆನ್ನಾಗಿ ತೊಳೆದುಕೊಂಡು, ಒಣಗಿಸುವುದು ಬಹಳ ಮುಖ್ಯ. ಶಿಲೀಂಧ್ರಗಳ ಸೋಂಕು ತಾಕಬಾರದು ಅಂದರೆ ಪಾದಗಳನ್ನು ಯಾವಾಗಲೂ ಸ್ವಚ್ಛವಾಗಿಡಬೇಕು ಮತ್ತು ಒಣಗಿಸಬೇಕು. ಧೂಳು ಅನೇಕ ರೀತಿಯ ಪಾದದ ಸೋಂಕುಗಳಿಗೆ ಕಾರಣವಾಗಬಹುದು. ಕಛೇರಿಯಿಂದ ಬರುವಾಗ ಪಾದಗಳು ಒದ್ದೆಯಾಗಿದ್ದರೆ, ಬೂಟುಗಳು ಮತ್ತು ಸಾಕ್ಸ್‌ಗಳನ್ನು ತೆಗೆದ ತಕ್ಷಣ ಸೌಮ್ಯವಾದ ಸಾಬೂನು ಮತ್ತು ಬೆಚ್ಚಗಿನ ನೀರಿನಿಂದ ಪಾದಗಳನ್ನು ತೊಳೆಯಿರಿ. ಮಳೆಯಲ್ಲಿ ಬರಿಗಾಲಿನಲ್ಲಿ ನಡೆಯುವುದನ್ನು ತಪ್ಪಿಸಿ.
  2. 2. ಪಾದಗಳನ್ನು ಎಕ್ಸ್​ ಫೋಲಿಯೇಟ್ ಮಾಡಿ (exfoliate).. ಪಾದಗಳನ್ನು ಎಕ್ಸ್‌ಫೋಲಿಯೇಟ್ ಮಾಡುವುದು ಎಂದರೆ ಸತ್ತ ಚರ್ಮವನ್ನು ತೆಗೆದುಹಾಕಲು ನಿಮ್ಮ ಪಾದಗಳನ್ನು ಉಜ್ಜುವುದು. ಪಾದಗಳನ್ನು ಸ್ಕ್ರಬ್ ಮಾಡುವುದರಿಂದ ತುಂಬಾ ಹಿತವಾಗುತ್ತದೆ. ನೀವು ಪಾದ ರಕ್ಷಣೆ ಬಯಸಿದಲ್ಲಿ ಪಾದಗಳನ್ನು ಸ್ವಲ್ಪ ಸಮಯದವರೆಗೆ ಬೆಚ್ಚಗಿನ ನೀರಿನಲ್ಲಿ ನೆನೆಸಿ ನಂತರ ಸ್ಕ್ರಬ್ ಮಾಡಿ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ. ನೋವು ಮತ್ತು ಊತದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
  3. 3. ತೇವಗೊಳಿಸಿ (moisturize): ಪಾದಗಳನ್ನು ಒಣಗಿಸಿದ ನಂತರ, ಪಾದಗಳನ್ನು ಉತ್ತಮವಾದ ಪಾದದ ಕ್ರೀಮ್​ ನಿಂದ ಮಸಾಜ್ ಮಾಡುವುದರಿಂದ ಚರ್ಮವು ಮೃದುವಾಗುತ್ತದೆ. ಇದು ಬಿರುಕುಗಳು, ಅಲರ್ಜಿಗಳು, ಸತ್ತ ಜೀವಕೋಶಗಳನ್ನು ದೂರವಿರಿಸಲು ಸಹಾಯ ಮಾಡುತ್ತದೆ. ದಿನಕ್ಕೆ ಎರಡು ಬಾರಿಯಾದರೂ ಮಾಯಿಶ್ಚರೈಸರ್ ಬಳಸಿ. ನಿಮಗೆ ಸರಿಹೊಂದಿದರೆ ನೀವು ಯಾವುದೇ ಬ್ಯಾಕ್ಟೀರಿಯಾ ವಿರೋಧಿ ಟಾಲ್ಕಮ್ ಪೌಡರ್ ಅನ್ನು ಸಹ ಬಳಸಬಹುದು.
  4. 4. ಪಾದದ ಉಗುರುಗಳನ್ನು ಟ್ರಿಮ್ ಮಾಡಿ ಕಾಲ್ಬೆರಳ ಉಗುರುಗಳನ್ನು ನಿಯಮಿತವಾಗಿ ಟ್ರಿಮ್ ಮಾಡಬೇಕು. ಏಕೆಂದರೆ ಈ ಮಳೆಗಾಲದಲ್ಲಿ ಕಾಲ್ಬೆರಳ ಉಗುರುಗಳ ನಡುವೆ ಮರಳು, ಬುರುದೆ ಶೇಖರಣೆಯಾಗುತ್ತದೆ. ಇದು ಶಿಲೀಂಧ್ರಗಳ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ಅದೇ ಸಮಯದಲ್ಲಿ ಮಳೆಯಲ್ಲಿ ಬ್ಯೂಟಿ ಸಲೂನ್‌ಗೆ ತೆರಳಿ ಪಾದೋಪಚಾರ ಮಾಡಿಕೊಳ್ಳಿ. ಇದು ಪಾದಗಳಲ್ಲಿ ಅನೇಕ ರೀತಿಯ ಸೋಂಕುಗಳ ಅಪಾಯವನ್ನು ತಗ್ಗಿಸುತ್ತದೆ. ಜೊತೆಗೆ, ನೈಸರ್ಗಿಕ ಪದಾರ್ಥಗಳೊಂದಿಗೆ ಮನೆಯಲ್ಲಿ ಪಾದೋಪಚಾರವನ್ನು ಪಡೆಯಿರಿ.
  5. 5. ಸರಿಯಾದ ಪಾದರಕ್ಷೆಗಳ ಬಳಕೆ ಮಳೆಯಲ್ಲಿ ನೀವು ಸರಿಯಾದ ಪಾದರಕ್ಷೆಗಳನ್ನು ಬಳಸಬೇಕು. ಒದ್ದೆಯಾದಾಗ ಅವುಗಳಿಂದ ಪಾದಗಳಿಗೆ ಹಾನಿಯಾಗುತ್ತದೆ. ಮಳೆಗಾಲದಲ್ಲಿ ಕೊಳಕು ಬೂಟುಗಳನ್ನು ಧರಿಸುವುದನ್ನು ತಪ್ಪಿಸಿ. ಒದ್ದೆಯಾದಾಗ ಅವುಗಳನ್ನು ಧರಿಸಲು ಅಹಿತಕರವಾಗಿರುತ್ತದೆ. ಇದು ಪಾದಗಳನ್ನು ತೇವಗೊಳಿಸುವುದಲ್ಲದೆ ಫಂಗಲ್ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ. ನೀವು ರಬ್ಬರ್ ಶೂಗಳು, ಚಪ್ಪಲಿಗಳು, ಫ್ಲಿಪ್ ಫ್ಲಾಪ್​ ಗಳು, ಸ್ಯಾಂಡಲ್ಗಳನ್ನು ಧರಿಸಬಹುದು. (To read in Telugu click the link here)

ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ