AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Alcohol: ಗಂಡು, ಹೆಣ್ಣಿನ ಮೆದುಳಿನ ಮೇಲೆ ವಿಭಿನ್ನ ಪರಿಣಾಮ ಬೀರುತ್ತೆ ಆಲ್ಕೋಹಾಲ್

ಮದ್ಯಪಾನವು ಗಂಡು ಹಾಗೂ ಹೆಣ್ಣಿನ ಮೆದುಳಿನ ಮೇಲೆ ವಿಭಿನ್ನ ಪರಿಣಾಮವನ್ನು ಬೀರಲಿದೆ ಎಂಬುದು ಇತ್ತೀಚೆಗೆ ಇಲಿಗಳ ಮೇಲೆ ನಡೆಸಿರುವ ಸಂಶೋಧನೆಯಿಂದ ತಿಳಿದುಬಂದಿದೆ.

Alcohol: ಗಂಡು, ಹೆಣ್ಣಿನ ಮೆದುಳಿನ ಮೇಲೆ ವಿಭಿನ್ನ ಪರಿಣಾಮ ಬೀರುತ್ತೆ ಆಲ್ಕೋಹಾಲ್
Alcohol
TV9 Web
| Edited By: |

Updated on:Jul 08, 2022 | 12:55 PM

Share

ಮದ್ಯಪಾನವು ಗಂಡು ಹಾಗೂ ಹೆಣ್ಣಿನ ಮೆದುಳಿನ ಮೇಲೆ ವಿಭಿನ್ನ ಪರಿಣಾಮವನ್ನು ಬೀರಲಿದೆ ಎಂಬುದು ಇತ್ತೀಚೆಗೆ ಇಲಿಗಳ ಮೇಲೆ ನಡೆಸಿರುವ ಸಂಶೋಧನೆಯಿಂದ ತಿಳಿದುಬಂದಿದೆ.  ಆಲ್ಕೋಹಾಲ್ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಳಸುತ್ತಾರೆ  ಹಾಗೂ ಇದು ಪರಿಣಾಮಕಾರಿ ಮಾದಕವಸ್ತುಗಳಲ್ಲಿ ಒಂದಾಗಿದೆ. ಕೆಲವರಿಗೆ ಮದ್ಯಪಾನ ಚಟವಾಗಿದ್ದರೆ ಇನ್ನೂ ಕೆಲವರು ಒತ್ತಡ, ಖಿನ್ನತೆಯಿಂದಾಗಿ ಮದ್ಯಪಾನ ಮಾಡುತ್ತಾರೆ.

ಮದ್ಯಪಾನ ಮಾಡಿದ ತಕ್ಷಣ ಅದು ಮೆದುಳಿನ ಮೇಲೆ ಪರಿಣಾಮವನ್ನು ಬೀರಲು ಶುರು ಮಾಡುತ್ತದೆ. ಹೊಸ ಸಂಶೋಧನೆಯೊಂದರಲ್ಲಿ ಮದ್ಯವು ಗಂಡು ಮತ್ತು ಹೆಣ್ಣಿನ ಮೆದುಳುಗಳ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ ಎಂದು ತೋರಿಸಿದೆ.

ಶೈಕ್ಷಣಿಕ ಜರ್ನಲ್ eNeuro ನಲ್ಲಿ  ಪ್ರಕಟವಾದ ವರದಿ ಪ್ರಕಾರ, ಮದ್ಯವು ಪುರುಷರು ಮತ್ತು ಮಹಿಳೆಯರ ಮೆದುಳಿನ ಮೇಲೆ ಬೇರೆ ಬೇರೆ ರೀತಿಯ ಪರಿಣಾಮ ಬೀರುತ್ತದೆ ಎಂದು ಹೇಳುತ್ತದೆ.

ಆಧಾರವೆಂಬಂತೆ ವಿಜ್ಞಾನಿಗಳು ಮದ್ಯಪಾನದ ಪರಿಣಾಮಗಳು ಕುರಿತು ಇಲಿಗಳ ಮೆದುಳಿನ ಅಮಿಗ್ಡಾಲಾ ಚಟುವಟಿಕೆಯಲ್ಲಿ ಬದಲಾವಣೆಗಳನ್ನು ಗಮನಿಸಿದ್ದಾರೆ.

ಆದರೆ ಈ ಬದಲಾವಣೆ ಮತ್ತು ಪರಿಣಾಮವು ಗಂಡು ಮತ್ತು ಹೆಣ್ಣು ಇಲಿಗಳಲ್ಲಿ ವಿಭಿನ್ನವಾಗಿ ಕಂಡುಬಂದಿದೆ. ಅಮೆರಿಕದಲ್ಲಿ ಶೇ.85 ರಷ್ಟು ಆಲ್ಕೋಹಾಲ್ ಸೇವನೆ ಮಾಡುವವರಲ್ಲಿ ಶೇ.5ರಷ್ಟು ಮಂದಿಯಲ್ಲಿ ಮಾನಸಿಕ ಸಮಸ್ಯೆಗಳು ಕಾಡುತ್ತಿವೆ.

ಮದ್ಯಪಾನ ಮಾಡಿದ ಪುರುಷರಲ್ಲಿ ಮಾನಸಿಕ ಸ್ಥಿತಿ ಬದಲಾಗುವುದು ಕಂಡುಬಂದಿದೆ. ಆದರೆ ಆಲ್ಕೋಹಾಲ್ ಕುಡಿದ ಮಹಿಳೆಯರಲ್ಲಿ ಸ್ಥಿತಿಯು ಬದಲಾಗದೇ ಇರುವುದು ಕಂಡುಬಂದಿದೆ.

ಸಾಕಷ್ಟು ಅಧ್ಯಯನಗಳಲ್ಲಿ ಮದ್ಯಪಾನದಿಂದಾಗುವ ಪ್ರಯೋಜನಗಳು ಹಾಗೂ ಅದರಿಂದ ವ್ಯಕ್ತಿ ಅನುಭವಿಸುವ ಖಿನ್ನತೆಯ ಬಗ್ಗೆ ವಿವರಣೆ ನೀಡಲಾಗಿದೆ.

Published On - 12:54 pm, Fri, 8 July 22

Follow Us
Web contact
Web contact

TV9 Kannada

Read More
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​