Eye care in summer: ಪ್ರಕ್ಷುಬ್ಧ ಹವಾಮಾನದಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಲು ಇಲ್ಲಿವೆ 10 ಅಗತ್ಯ ಸಲಹೆಗಳು!

ಬೇಸಿಗೆಯಲ್ಲಿ ಹಲವಾರು ಸಂಭಾವ್ಯ ಸವಾಲುಗಳಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಲು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Eye care in summer: ಪ್ರಕ್ಷುಬ್ಧ ಹವಾಮಾನದಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಲು ಇಲ್ಲಿವೆ 10 ಅಗತ್ಯ ಸಲಹೆಗಳು!
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: May 26, 2023 | 6:02 PM

ಭಾರತದಲ್ಲಿ ಶಾಖದ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಿದ್ದು ತಾಪಮಾನದೊಂದಿಗೆ ಹೆಣಗಾಡುತ್ತಿರುವಾಗ, ದೇಹದ ಆರೈಕೆ ಮುಖ್ಯವಾಗುತ್ತದೆ. ಜೊತೆಗೆ ಬೇಸಿಗೆಯ ಶಾಖವು ಅಸುರಕ್ಷಿತವಾಗಿದ್ದರೆ ನಿಮ್ಮ ದೃಷ್ಟಿಗೆ ಅಡ್ಡಿಯಾಗಬಹುದು. ದಿನದ ಗರಿಷ್ಠ ಸಮಯದಲ್ಲಿ, ವಿಶೇಷವಾಗಿ, ನಿಮ್ಮ ಕಣ್ಣುಗಳು ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಂಡಾಗ, ಹಲವಾರು ರೀತಿಯ ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗಬಹುದು. ಜಾಗತಿಕವಾಗಿ ಕಣ್ಣಿನ ಕಾಯಿಲೆಗಳ ಪ್ರಸ್ತುತ ಹೊರೆ ಅಗಾಧವಾಗಿದೆ. ಸರಿಸುಮಾರು 2.2 ಬಿಲಿಯನ್ ವ್ಯಕ್ತಿಗಳು ಹತ್ತಿರದ ಅಥವಾ ದೂರದ ದೃಷ್ಟಿ ದೌರ್ಬಲ್ಯವನ್ನು ಹೊಂದಿದ್ದಾರೆ. ಅವರಲ್ಲಿ, ರಕ್ಷಣಾತ್ಮಕ ಸಾಧನಗಳನ್ನು ಬಳಸುವುದು, ಬಿಸಿಲಿನಲ್ಲಿ ಹೊರಗಡೆ ಹೋಗುವುದನ್ನು ಆದಷ್ಟು ತಡೆಯುವುದರಿಂದ ಸುಮಾರು ಅರ್ಧದಷ್ಟು ಪ್ರಕರಣಗಳನ್ನು ತಡೆಗಟ್ಟಬಹುದಿತ್ತು ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಬೇಸಿಗೆಯಲ್ಲಿ ನಿಮ್ಮ ಚರ್ಮವನ್ನು ಯುವಿ ಕಿರಣಗಳಿಂದ ರಕ್ಷಿಸುವ ಅಗತ್ಯವಿದೆ. ಜೊತೆಗೆ ನಿಮ್ಮ ಕಣ್ಣುಗಳನ್ನು ರಕ್ಷಿಸಲು ಮತ್ತು ಅವುಗಳನ್ನು ಆರೋಗ್ಯಕರವಾಗಿಡಲು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಸಹ ಅಷ್ಟೇ ಮುಖ್ಯ. ಕಣ್ಣಿನ ಡ್ರಾಪ್ಸ್ ಬಳಸುವುದರಿಂದ ಹಿಡಿದು ಯುವಿ-ಸಂರಕ್ಷಿತ ಸನ್ ಗ್ಲಾಸ್ ಉಪಯೋಗಿಸಿ ನಿಮ್ಮ ಕಣ್ಣುಗಳನ್ನು ಕವರ್ ಮಾಡಿಕೊಂಡಿರಬೇಕು. ಈ ಸರಳ ಮತ್ತು ಪರಿಣಾಮಕಾರಿ ಸಲಹೆಗಳು ಬೇಸಿಗೆಯುದ್ದಕ್ಕೂ ನಿಮ್ಮ ಕಣ್ಣುಗಳನ್ನು ಆರೋಗ್ಯಕರವಾಗಿ ಮತ್ತು ದೃಷ್ಟಿ ಹೀನತೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಡಾ. ರಿಷಿ ರಾಜ್ ಬೋರಾ, ದೇಶೀಯ ನಿರ್ದೇಶಕ – ಭಾರತ, ಆರ್ಬಿಸ್ ಅವರು ಬೇಸಿಗೆಯಲ್ಲಿ ನಿಮ್ಮ ಕಣ್ಣುಗಳನ್ನು ಆರೋಗ್ಯಕರವಾಗಿಡಲು ಕೆಲವು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುತ್ತಾರೆ:

ಇದನ್ನೂ ಓದಿ:Eye Care in Summer: ಈ ಬೇಸಿಗೆಯಲ್ಲಿ ನಿಂಬೆ ಪಾನೀಯ ಕುಡಿದು ಉತ್ತಮ ದೃಷ್ಟಿಯನ್ನು ಪಡೆಯಿರಿ

ಪ್ರಕ್ಷುಬ್ಧ ಅಥವಾ ಕಠಿಣ ಹವಾಮಾನದಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸಲು 10 ಅಗತ್ಯ ಸಲಹೆಗಳು:

-ಕಣ್ಣುಗಳು ಹೈಡ್ರೇಟ್ ಆಗಿರಬೇಕು: ಹೌದು, ಕಣ್ಣುಗಳಿಗೆ ಜಲಸಂಚಯನವು ಪ್ರಮುಖವಾಗಿದೆ. ಬೇಸಿಗೆಯಲ್ಲಿ, ಕಣ್ಣುಗಳು ಒಣಗುವುದು ಸಾಮಾನ್ಯ ವಿದ್ಯಮಾನವಾಗಿದೆ. ಹೆಚ್ಚುತ್ತಿರುವ ಶಾಖದಿಂದ ಸುತ್ತುವ ಬಲವಾದ ಗಾಳಿಯು ಸಹ ಕಣ್ಣುಗಳಲ್ಲಿ ಗಂಭೀರ ನಿರ್ಜಲೀಕರಣ ಮತ್ತು ಕಿರಿಕಿರಿಗೆ ಕಾರಣವಾಗಬಹುದು. ಇದರಿಂದಾಗಿ ಕಣ್ಣುಗಳು ಒಣಗುತ್ತವೆ. ಆದ್ದರಿಂದ, ಕಣ್ಣಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರಲು, ನಿಮ್ಮ ದೇಹಕ್ಕೆ ಸಹಾಯ ಮಾಡಲು ಸಾಕಷ್ಟು ಪ್ರಮಾಣದ ದ್ರವ ಅಗತ್ಯವಾಗಿರುತ್ತದೆ. ಆಲ್ಕೋಹಾಲ್ ಮತ್ತು ಕೆಫೀನ್ ಸೇವನೆಯು ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ, ಆದ್ದರಿಂದ ಅವುಗಳನ್ನು ಕುಡಿಯುವ ಪ್ರಮಾಣ ಕಡಿಮೆ ಮಾಡುವುದು ಒಳ್ಳೆಯದು.

-ಫೋಟೋಕೆರಾಟಿಟಿಸ್ ನಂತಹ ಪರಿಸ್ಥಿತಿಗಳನ್ನು ತಪ್ಪಿಸಲು ಸರಿಯಾದ ಶೇಡ್ಗಳನ್ನು ಆರಿಸಿ: ಹಾನಿಕಾರಕ ನೇರಳಾತೀತ ವಿಕಿರಣ (ಯುವಿಆರ್) ಫೋಟೋಕೆರಾಟಿಟಿಸ್ ಅಥವಾ ಫೋಟೋ ಕಂಜಂಕ್ಟಿವಿಟಿಸ್ ಗೆ ಕಾರಣವಾಗಬಹುದು, ಈ ಸ್ಥಿತಿಯನ್ನು ಹಿಮ ಕುರುಡುತನ ಎಂದೂ ಕರೆಯಲಾಗುತ್ತದೆ. ಯುವಿಆರ್ ಗೆ ನಿರಂತರವಾಗಿ ಒಡ್ಡಿಕೊಳ್ಳುವುದು, ವಿಶೇಷವಾಗಿ ಕಡಿಮೆ ತರಂಗಾಂತರವನ್ನು ಹೊಂದಿರುವ ಯುವಿಬಿ ಕಿರಣಗಳಿಗೆ ಒಡ್ಡಿಕೊಳ್ಳುವುದು ಕಣ್ಣಿನ ಪೊರೆ ಬೆಳವಣಿಗೆ, ಟೆರಿಜಿಯಮ್ ಇತ್ಯಾದಿಗಳಿಗೆ ಕಾರಣವಾಗಬಹುದು. ಆದ್ದರಿಂದ, ಕಣ್ಣುಗಳ ರಕ್ಷಣೆಗೆ ಸರಿಯಾದ ಶೇಡ್ಗಳನ್ನು ಆಯ್ಕೆ ಮಾಡುವುದು ಕಡ್ಡಾಯವಾಗಿದೆ.

-ಈಜುವಾಗ ನಿಮ್ಮ ಕಣ್ಣುಗಳನ್ನು ರಕ್ಷಿಸಿ: ಈಜು ಕೊಳಗಳಲ್ಲಿ ಹೆಚ್ಚಾಗಿ ಕಂಡುಬರುವ ಕ್ಲೋರಿನ್ ನಿಮ್ಮ ಕಣ್ಣುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದಕ್ಕಾಗಿಯೇ ಕ್ಲೋರಿನ್ ಒಡ್ಡುವಿಕೆಯಿಂದ ನಿಮ್ಮ ಕಣ್ಣುಗಳನ್ನು ಊತ, ಸುಡುವಿಕೆ ಮತ್ತು ತುರಿಕೆಯಿಂದ ರಕ್ಷಿಸಲು, ಈಜುವಾಗ ಅದಕ್ಕಾಗಿಯೇ ರೂಪಿಸಲಾದ ಕನ್ನಡಕಗಳನ್ನು ಧರಿಸುವುದು ಸೂಕ್ತ.

-ಕಣ್ಣಿನ ಹನಿಗಳಿಂದ ಕಣ್ಣುಗಳನ್ನು ಹೈಡ್ರೇಟ್ ಆಗಿರಿಸಿ: ನಿಮ್ಮ ಚರ್ಮಕ್ಕೆ ಮಾತ್ರವಲ್ಲ, ನಿಮ್ಮ ಕಣ್ಣುಗಳಿಗೂ ಕೃತಕ ಕಣ್ಣೀರಿನ ಹನಿಗಳ ಮೂಲಕ ಉದಾರ ಪ್ರಮಾಣದ ಮಾಯಿಶ್ಚರೈಜೇಶನ್ ಅಗತ್ಯವಿದೆ. ಎಲೆಕ್ಟ್ರಾನಿಕ್ ಸಾಧನಗಳಿಂದ ಉತ್ಪತ್ತಿಯಾಗುವ ನೀಲಿ ಕಿರಣಗಳಿಗೆ ದೀರ್ಘಕಾಲ ಒಡ್ಡಿಕೊಳ್ಳುವುದರೊಂದಿಗೆ, ಕೃತಕ ಕಣ್ಣೀರಿನ ಹನಿಗಳು ಕಣ್ಣಿನ ಆರೈಕೆಗೆ ಅನಿವಾರ್ಯವಾಗಿದೆ. ಹೆಚ್ಚುತ್ತಿರುವ ಮಾಲಿನ್ಯ ಮಟ್ಟದಿಂದಾಗಿ, ಬೇಸಿಗೆಯಲ್ಲಿ ನಿರ್ಜಲೀಕರಣವನ್ನು ಅನುಭವಿಸಬೇಕಾಗುತ್ತದೆ. ಈ ಗಂಭೀರ ನಿರ್ಜಲೀಕರಣವು ದೇಹಕ್ಕೆ ಕಣ್ಣೀರನ್ನು ಉತ್ಪಾದಿಸಲು ಕಷ್ಟಕರವಾಗಿಸುತ್ತದೆ. ಇದು ಒಣ ಕಣ್ಣಿನ ರೋಗಲಕ್ಷಣಗಳು ಮತ್ತು ಇತರ ದೃಷ್ಟಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕೃತಕ ಕಣ್ಣೀರಿನ ಜೊತೆಗೆ, ಸಾಕಷ್ಟು ನೀರು ಕುಡಿಯುವುದು ಕಡ್ಡಾಯವಾಗಿದೆ, ಇದು ನಿರ್ಜಲೀಕರಣದ ನಕಾರಾತ್ಮಕ ಪರಿಣಾಮಗಳನ್ನು ಹಿಮ್ಮೆಟ್ಟಿಸುತ್ತದೆ.

-ಕಣ್ಣುಗಳನ್ನು ಉಜ್ಜಬೇಡಿ: ಕಣ್ಣಿನ ಆರೋಗ್ಯಕ್ಕೆ ಕೈ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ನಮ್ಮ ಕಣ್ಣುಗಳನ್ನು ಕೈಗಳಿಂದ ಉಜ್ಜುವುದು ಸಾಮಾನ್ಯ ಅಭ್ಯಾಸವಾಗಿದೆ. ಆದರೆ ಇದು ತಪ್ಪು. ಹೀಗೆ ಮಾಡುವುದರಿಂದ ಕಣ್ಣಿನ ಸೋಂಕಿಗೆ ಕಾರಣವಾಗಬಹುದು. ಕಣ್ಣನ್ನು ಮುಟ್ಟಬೇಕಾದಲ್ಲಿ, ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆಯುವ ಮೂಲಕ, ಕಂಜಂಕ್ಟಿವಿಟಿಸ್ ಸೇರಿದಂತೆ ಹೆಚ್ಚಿನ ಸಾಂಕ್ರಾಮಿಕ ರೋಗಗಳಿಂದ ಮುಕ್ತಿ ಪಡೆದುಕೊಳ್ಳಿ. ಇವು ಕಣ್ಣುಗಳನ್ನು ರಕ್ಷಿಸಬಹುದು. ವಿಶೇಷವಾಗಿ, ಲಸಿಕ್, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಅಥವಾ ಗ್ಲಾಕೋಮಾ ಶಂಟ್ ಶಸ್ತ್ರಚಿಕಿತ್ಸೆಯಂತಹ ಕಣ್ಣಿನ ಶಸ್ತ್ರಚಿಕಿತ್ಸೆಯ ಸಂದರ್ಭಗಳಲ್ಲಿ, ಕಣ್ಣುಗಳು ಸೋಂಕಿಗೆ ಒಳಗಾಗುತ್ತವೆ. ನಿಮ್ಮ ಕಣ್ಣುಗಳಿಗೆ ಚಿಕಿತ್ಸೆ ನೀಡುವ ಮೊದಲು ನಿಮ್ಮ ಕೈಗಳನ್ನು ತೊಳೆಯುವುದು ಉತ್ತಮ. ಜೊತೆಗೆ ಅವುಗಳನ್ನು ಸಂಪೂರ್ಣವಾಗಿ ಉಜ್ಜುವುದನ್ನು ತಪ್ಪಿಸಿ.

-ಚೆನ್ನಾಗಿ ನಿದ್ರಿಸಿ: ರಾತ್ರಿಯ ಸಮಯದಲ್ಲಿ ಉತ್ತಮ ನಿದ್ರೆ ಪಡೆಯುವುದು ಕಡ್ಡಾಯವಾಗಿದೆ. ಇದು ನಿಮ್ಮ ಕಣ್ಣುಗಳಿಗೆ ಸಾಕಷ್ಟು ವಿಶ್ರಾಂತಿ ನೀಡುತ್ತದೆ. ಕಣ್ಣುಗಳು ದಿನವಿಡೀ ವ್ಯಾಪಕವಾದ ಕಾರ್ಯಗಳನ್ನು ನಿರ್ವಹಿಸಿರುವುದರಿಂದ ಅವುಗಳಿಗೆ ವಿಶ್ರಾಂತಿಯ ಅಗತ್ಯವಿದೆ. ಸರಿಯಾದ ಸಮಯಕ್ಕೆ ನಿದ್ರೆ ಮಾಡಲು ವೇಳಾಪಟ್ಟಿ ಮಾಡಿಕೊಂಡು ಕಣ್ಣುಗಳನ್ನು ಮರುಪೂರಣ ಮಾಡಲು ಹೆಚ್ಚು ಶಿಫಾರಸು ಮಾಡಲಾಗಿದೆ.

-ಸನ್ ಸ್ಕ್ರೀನ್ ಅನ್ನು ಎಚ್ಚರಿಕೆಯಿಂದ ಅನ್ವಯಿಸಿ: ಸನ್ ಸ್ಕ್ರೀನ್ ಹಚ್ಚುವಾಗ, ಅದು ನಿಮ್ಮ ಕಣ್ಣುಗಳಿಗೆ ಹೋಗಬಾರದು. ನೀವು ಮುಖದ ಬೇರೆ ಭಾಗಕ್ಕೆ ಹಚ್ಚುವಾಗಲೂ ಕೂಡ ಎಚ್ಚರಿಕೆಯಿಂದ ಸವರಿಕೊಳ್ಳಬೇಕು. ಏಕೆಂದರೆ ಅದು ಗಂಭೀರ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ಹಾಗಾಗಿ ಎಚ್ಚರಿಕೆಯಿಂದಿರಿ.

-ನಿಮ್ಮ ಆಹಾರದಲ್ಲಿ ಹೆಚ್ಚು ಹಸಿರು ತರಕಾರಿಗಳನ್ನು ಸೇರಿಸಿ: ನೀವು ಆರೋಗ್ಯಕರ ಮತ್ತು ಸದೃಢವಾಗಿರಲು ಬೇಸಿಗೆಯ ಆಹಾರದಲ್ಲಿ ಎಲೆಕೋಸು, ಹೂಕೋಸು, ಪಾಲಕ್ ಮುಂತಾದ ಹಸಿರು ತರಕಾರಿಗಳನ್ನು ತಿನ್ನಿ. ಇವು ನಿಮ್ಮ ಕಣ್ಣುಗಳಿಗೂ ತುಂಬಾ ಒಳ್ಳೆಯದು.

-ಮಧ್ಯಾಹ್ನದ ವಿಹಾರವನ್ನು ತಪ್ಪಿಸಿ: ನಿಮ್ಮ ಮನೆಯಿಂದ ಹೊರ ಬರಲು ಮಧ್ಯಾಹ್ನದ ಅವಧಿ ಅತ್ಯಂತ ಹಾನಿಕಾರಕ ಸಮಯವಾಗಿದೆ. ಹಾಗಾಗಿ ತುರ್ತು ಪರಿಸ್ಥಿತಿಯಲ್ಲದಿದ್ದರೆ, ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಡೆಗಟ್ಟಲು ನೀವು ಮಧ್ಯಾಹ್ನದ ವಿಹಾರವನ್ನು ತಪ್ಪಿಸಬೇಕು.

-ಉತ್ತಮ ಗುಣಮಟ್ಟದ ಸನ್ ಗ್ಲಾಸ್ ತೆಗೆದುಕೊಳ್ಳಿ: ಶೇಕಡಾ 100 ರಷ್ಟು ಯುವಿ ರಕ್ಷಣೆ ಇರುವ ಸನ್ ಗ್ಲಾಸ್ ಧರಿಸಿ. ರ್ಯಾಪ್ ರೌಂಡ್ ಫ್ರೇಮ್ ಗಳು ಅತ್ಯುತ್ತಮವಾಗಿವೆ ಏಕೆಂದರೆ ಅವು ಬದಿ(ಸೈಡ್)ಗಳಿಂದಲೂ ರಕ್ಷಣೆ ನೀಡುತ್ತವೆ.

ಈ ಸರಳ ಮತ್ತು ಪರಿಣಾಮಕಾರಿ ಸಲಹೆಗಳನ್ನು ಅನುಸರಿಸುವ ಮೂಲಕ, ನೀವು ಬೇಸಿಗೆಯಲ್ಲಿ ನಿಮ್ಮ ಕಣ್ಣುಗಳನ್ನು ಆರೋಗ್ಯಕರ ವಾಗಿಡಬಹುದು ಮತ್ತು ಸೂರ್ಯನ ಕಿರಣಗಳ ದೀರ್ಘಕಾಲದ ಪರಿಣಾಮಗಳಿಂದ ಕಣ್ಣುಗಳನ್ನು ರಕ್ಷಿಸಬಹುದು. ತಜ್ಞರು ಶಿಫಾರಸು ಮಾಡಿದ ಈ ಕಣ್ಣಿನ ಆರೈಕೆ ಸಲಹೆಗಳೊಂದಿಗೆ, ನಿಮ್ಮ ಕಣ್ಣುಗಳನ್ನು ಸುರಕ್ಷಿತವಾಗಿರಿಸುಕೊಂಡು ನಿಮ್ಮ ಬೇಸಿಗೆ ಚಟುವಟಿಕೆಗಳನ್ನು ನೀವು ಆನಂದಿಸಬಹುದು. ಜೊತೆಗೆ ನಿಯಮಿತವಾಗಿ ಕಣ್ಣಿನ ತಪಾಸಣೆಗೆ ಹೋಗಲು ಮರೆಯದಿರಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ