ಮಕ್ಕಳ ಕಣ್ಣಿನ ಆರೋಗ್ಯಕ್ಕೆ ಇಲ್ಲಿದೆ 5 ಸುಲಭ ಯೋಗಾಸನ

|

Updated on: Sep 03, 2023 | 11:45 AM

ಕಣ್ಣುಗಳಿಗೆ ವ್ಯಾಯಾಮ ನೀಡುವುದರಿಂದ ಕಣ್ಣಿನ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಮಕ್ಕಳ ದೃಷ್ಟಿಯನ್ನು ಸುಧಾರಿಸಲು ಮತ್ತು ಆರೋಗ್ಯಕರ ದೃಷ್ಟಿಯನ್ನು ಕಾಪಾಡಿಕೊಳ್ಳಲು ವಿಶೇಷವಾಗಿ ವಿನ್ಯಾಸಗೊಳಿಸಲಾದ 5 ಯೋಗ ಆಸನಗಳ ಮಾಹಿತಿ ಇಲ್ಲಿದೆ.

ಮಕ್ಕಳ ಕಣ್ಣಿನ ಆರೋಗ್ಯಕ್ಕೆ ಇಲ್ಲಿದೆ 5 ಸುಲಭ ಯೋಗಾಸನ
ಸಾಂದರ್ಭಿಕ ಚಿತ್ರ (ಫೋಟೋ ಕೃಪೆ: only my health)
Follow us on

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್, ಟಿವಿ ಮತ್ತು ಕಂಪ್ಯೂಟರ್ ಸ್ಕ್ರೀನ್​ ನಮ್ಮ ಕಣ್ಣುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ. ಮಕ್ಕಳು ಇವುಗಳತ್ತ ಹೆಚ್ಚು ಆಕರ್ಷಿತರಾಗುತ್ತಿರುವುದರಿಂದ ಮಕ್ಕಳ ಕಣ್ಣಿನ ಆರೋಗ್ಯವು ಎಂದಿಗಿಂತಲೂ ಈಗ ಹೆಚ್ಚು ಮುಖ್ಯವಾಗಿದೆ. ಮೊಬೈಲ್, ಕಂಪ್ಯೂಟರ್ ಸ್ಕ್ರೀನ್ ಅನ್ನು ನಿರಂತರವಾಗಿ ನೋಡುವುದರಿಂದ ಅವರ ಕಣ್ಣುಗಳು ಆಯಾಸಗೊಳ್ಳಬಹುದು. ಇದು ಅವರ ದೃಷ್ಟಿಯ ಮೇಲೆ ಪರಿಣಾಮ ಬೀರಬಹುದು. ಈ ಸಮಸ್ಯೆಯಿಂದ ಕೊಂಚ ಮಟ್ಟಿಗಾದರೂ ಪಾರಾಗಲು ಕೆಲವು ಸಲಹೆ ಇಲ್ಲಿದೆ.

ಮಕ್ಕಳ ದೃಷ್ಟಿಯನ್ನು ಸುಧಾರಿಸಲು ಮತ್ತು ಆರೋಗ್ಯಕರ ದೃಷ್ಟಿಯನ್ನು ಕಾಪಾಡಿಕೊಳ್ಳಲು ವಿಶೇಷವಾಗಿ ವಿನ್ಯಾಸಗೊಳಿಸಲಾದ 5 ಯೋಗ ಆಸನಗಳ ಮಾಹಿತಿ ಇಲ್ಲಿದೆ.

ಕಣ್ಣುಗಳಿಗೆ ವ್ಯಾಯಾಮ ನೀಡುವುದರಿಂದ ಕಣ್ಣಿನ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದ ಆಪ್ಟಿಕ್ ನರಗಳು ಚೆನ್ನಾಗಿ ಕೆಲಸ ಮಾಡುತ್ತದೆ. ನಿಮ್ಮ ಕಣ್ಣುಗಳನ್ನು ಪಟಪಟನೆ ಮಿಟುಕಿಸುವಂತಹ ಸರಳವಾದ ಚಟುವಟಿಕೆಯು ನಿಮ್ಮ ಕಣ್ಣುಗಳ ಆರೋಗ್ಯ ಮತ್ತು ಶಕ್ತಿಯನ್ನು ಸುಧಾರಿಸುತ್ತದೆ. ಈ ವ್ಯಾಯಾಮಗಳನ್ನು ಪ್ರಾರಂಭಿಸುವ ಮೊದಲು ನಿಮ್ಮ ಕಣ್ಣುಗಳನ್ನು ತಣ್ಣೀರಿನಿಂದ ತೊಳೆದುಕೊಳ್ಳಿ. ವ್ಯಾಯಾಮದ ಉದ್ದಕ್ಕೂ, ನಿಮ್ಮ ತಲೆ ಮತ್ತು ಬೆನ್ನುಮೂಳೆಯನ್ನು ನೇರವಾಗಿ ಇರಿಸಿ.

ಇದನ್ನೂ ಓದಿ: Weight Loss: ತೂಕ ನಷ್ಟಕ್ಕೆ ಮನೆಯಲ್ಲಿಯೇ ಈ ಸಿಂಪಲ್​​ ವ್ಯಾಯಾಮ ಪ್ರಯತ್ನಿಸಿ

ದೃಷ್ಟಿ ಸುಧಾರಿಸಲು ಮಕ್ಕಳಿಗೆ 5 ಸುಲಭ ಯೋಗ ಆಸನಗಳು ಇಲ್ಲಿವೆ…

1. ಪಾಮಿಂಗ್ ಟೆಕ್ನಿಕ್:
ಕೈಗಳು ಬಿಸಿಯಾಗುವವರೆಗೆ ಅಂಗೈಗಳನ್ನು ಒಟ್ಟಿಗೆ ಉಜ್ಜುತ್ತಿರಿ. ಬಳಿಕ, ನಿಮ್ಮ ಅಂಗೈಗಳನ್ನು ಜೋಡಿಸಿಕೊಂಡು ಮುಚ್ಚಿದ ಕಣ್ಣುಗಳ ಮೇಲೆ ನಿಧಾನವಾಗಿ ಇರಿಸಿ. ಈ ತಂತ್ರವು ಕಣ್ಣಿನ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ಕಣ್ಣಿನ ಆಯಾಸವನ್ನು ನಿವಾರಿಸುತ್ತದೆ.

2. ಕಣ್ಣು ಮಿಟುಕಿಸುವ ವ್ಯಾಯಾಮ:
ನಿಮ್ಮ ಕಣ್ಣುಗಳನ್ನು ತೆರೆದು ಆರಾಮವಾಗಿ ಕುಳಿತುಕೊಳ್ಳಿ. 10-15 ಸೆಕೆಂಡುಗಳ ಕಾಲ ವೇಗವಾಗಿ ಮಿಟುಕಿಸಿ, ನಂತರ ಕೆಲವು ಸೆಕೆಂಡುಗಳ ಕಾಲ ನಿಮ್ಮ ಕಣ್ಣುಗಳನ್ನು ಮುಚ್ಚಿ. ಈ ವ್ಯಾಯಾಮವು ಕಣ್ಣುಗಳ ಶುಷ್ಕತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಕಣ್ಣುಗಳು ಮಂಜಾಗುತ್ತಿದೆಯೇ?; ದೃಷ್ಟಿ ಸಮಸ್ಯೆ ಬಗೆಹರಿಸಲು ಹೀಗೆ ಮಾಡಿ

3. ಕಣ್ಣಿನ ತಿರುಗಿಸುವಿಕೆ:
ನಿಮ್ಮ ಬೆನ್ನನ್ನು ನೇರವಾಗಿ ಇರಿಸಿ ಕುಳಿತುಕೊಳ್ಳಿ. 10-15 ಸೆಕೆಂಡುಗಳ ಕಾಲ ಪ್ರದಕ್ಷಿಣಾಕಾರವಾಗಿ ನಿಮ್ಮ ಕಣ್ಣುಗಳನ್ನು ನಿಧಾನವಾಗಿ ತಿರುಗಿಸಿ, ನಂತರ ಅಪ್ರದಕ್ಷಿಣಾಕಾರವಾಗಿ ತಿರುಗಿಸಿ. ಈ ಆಸನವು ಕಣ್ಣಿನ ಸ್ನಾಯುಗಳ ಗಮನ ಮತ್ತು ನಮ್ಯತೆಯನ್ನು ಸುಧಾರಿಸುತ್ತದೆ.

4. ಮೂಗು ಟ್ಯಾಪಿಂಗ್:
ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ನಿಮ್ಮ ತೋರು ಬೆರಳುಗಳಿಂದ ನಿಮ್ಮ ಮೂಗಿನ ಬದಿಗಳನ್ನು ನಿಧಾನವಾಗಿ ಟ್ಯಾಪ್ ಮಾಡಿ. ಇದು ಕಣ್ಣುಗಳಿಗೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ದೃಷ್ಟಿಯನ್ನು ಸುಧಾರಿಸುತ್ತದೆ.

5. ಬಟರ್​ಫ್ಲೈ ಬ್ಲಿಂಕ್:
ಅಡ್ಡ ಕಾಲಿನ ಮೇಲೆ ಕುಳಿತುಕೊಳ್ಳಿ ಮತ್ತು ನಿಮ್ಮ ತೋರು ಬೆರಳುಗಳನ್ನು ನಿಮ್ಮ ಹೊರ ಕಣ್ಣಿನ ಮೂಲೆಗಳಲ್ಲಿ ಇರಿಸಿ. ಬಳಿಕ ನಿಮ್ಮ ಕಣ್ಣುಗಳನ್ನು ವೇಗವಾಗಿ ಮಿಟುಕಿಸಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ