AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dalchini: ಜನ ಕೊಬ್ಬು ಕರಗಿಸಲು ಮಾರುಕಟ್ಟೆಯಲ್ಲಿ ಸಿಗುವ ಔಷಧಗಳಿಗೆ ಜೋತುಬೀಳುತ್ತಿದ್ದಾರೆ! ಹಣ ಪೋಲು ಮಾಡ್ತಿದ್ದಾರೆ! ವಾಸ್ತವ ಏನು?

Cinnamon: ನೀವು ಕಷ್ಟಪಟ್ಟು ದುಡಿದ ಹಣವನ್ನು ವ್ಯರ್ಥ ಮಾಡಬೇಕಾಗಿಲ್ಲ. ನಿಮ್ಮ ಅಡುಗೆ ಮನೆಯಿಂದಲೇ ಮಾಂತ್ರಿಕ ಮಸಾಲೆಯಿಂದ ಕೊಬ್ಬು ಕರಗಿಸುವುದನ್ನು ನೀವು ಸಾಧಿಸಬಹುದು. ದಾಲ್ಚಿನಿ ಅಂದರೆ ಗೊತ್ತಲ್ಲಾ!? ಅದು ಸಾವಿರಾರು ವರ್ಷಗಳ ಹಿಂದಿನದು. ದಾಲ್ಚಿನ್ನಿ ಔಷಧೀಯ ಗುಣಗಳನ್ನು ಹೊಂದಿದೆ ಮತ್ತು ಇದನ್ನು ಆಯುರ್ವೇದದಲ್ಲಿ ಪ್ರಧಾನವಾಗಿ ಬಳಸಲಾಗುತ್ತದೆ.

Dalchini: ಜನ ಕೊಬ್ಬು ಕರಗಿಸಲು ಮಾರುಕಟ್ಟೆಯಲ್ಲಿ ಸಿಗುವ ಔಷಧಗಳಿಗೆ ಜೋತುಬೀಳುತ್ತಿದ್ದಾರೆ! ಹಣ ಪೋಲು ಮಾಡ್ತಿದ್ದಾರೆ! ವಾಸ್ತವ ಏನು?
ಜನ ಕೊಬ್ಬು ಕರಗಿಸಲು ಮಾರುಕಟ್ಟೆಯಲ್ಲಿ ಸಿಗುವ ಔಷಧಗಳಿಗೆ ಜೋತುಬೀಳುತ್ತಿದ್ದಾರೆ! ಹಣ ಪೋಲು ಮಾಡ್ತಿದ್ದಾರೆ! ವಾಸ್ತವ ಏನು?
TV9 Web
| Edited By: |

Updated on: Oct 25, 2022 | 6:06 AM

Share

ಜನರು ತಮ್ಮ ದೇಹದ ಕೊಬ್ಬು/ಬೊಜ್ಜು ಕರಗಿಸಲು, ಮೆಡಿಕಲಿ ಫಿಟ್​ ಆಗಿರಲು (weight loss) ಮಾರುಕಟ್ಟೆಯಲ್ಲಿ ಸಿಗುವ ಔಷಧಗಳಿಗೆ ಜೋತುಬೀಳುತ್ತಿದ್ದಾರೆ! ಆ ಪೂರಕ ಔಷಧಗಳಲ್ಲಿ ಹೆಚ್ಚಿನವು ಸಂಸ್ಕರಿಸಿದ ಅಥವಾ ಕೃತಕ ಸರಕುಗಳಾಗಿವೆ. ಅದು ನಿಮ್ಮ ಆರೋಗ್ಯಕ್ಕೆ ಮಾರಕ/ ಹಾನಿಕಾರಕವಾಗಿದೆ ಎಂಬುದನ್ನು ತಿಳಿಯಿರಿ. ಜೊತೆಗೆ ಇವುಗಳ ಗೊಡವೆ ಇಲ್ಲದೆಯೇ ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು ಬಳಸಿ ಅದೇ ಕೊಬ್ಬನ್ನು ಸಲೀಸಾಗಿ ಕರಗಿಸಬಹುದು. ಅದು ಯಾವುದು? ಬಳಕೆ ಹೇಗೆ?

ನೀವು ಕಷ್ಟಪಟ್ಟು ದುಡಿದ ಹಣವನ್ನು ವ್ಯರ್ಥ ಮಾಡಬೇಕಾಗಿಲ್ಲ. ನಿಮ್ಮ ಅಡುಗೆ ಮನೆಯಿಂದಲೇ ಮಾಂತ್ರಿಕ ಮಸಾಲೆಯಿಂದ ಕೊಬ್ಬು ಕರಗಿಸುವುದನ್ನು ನೀವು ಸಾಧಿಸಬಹುದು. ದಾಲ್ಚಿನಿ (cinnamon – dalchini) ಅಂದರೆ ಗೊತ್ತಲ್ಲಾ!? ಅದು ಸಾವಿರಾರು ವರ್ಷಗಳ ಹಿಂದಿನದು. ದಾಲ್ಚಿನ್ನಿ ಔಷಧೀಯ ಗುಣಗಳನ್ನು ಹೊಂದಿದೆ ಮತ್ತು ಇದನ್ನು ಆಯುರ್ವೇದದಲ್ಲಿ (Ayurveda) ಗಮನಾರ್ಹವಾಗಿ ಬಳಸಲಾಗುತ್ತದೆ.

ಆದರೆ, ಕೊಬ್ಬನ್ನು ಕಳೆದುಕೊಳ್ಳಲು ದಾಲ್ಚಿನ್ನಿ ಹೇಗೆ ಸಹಾಯ ಮಾಡುತ್ತದೆ?

ದಾಲ್ಚಿನ್ನಿ ನಿಮ್ಮ ದೇಹದಲ್ಲಿನ ಹಾರ್ಮೋನ್ ಇನ್ಸುಲಿನ್ ಮಟ್ಟವನ್ನು ಸುಧಾರಿಸುವ ಮೂಲಕ ನಿಮ್ಮ ದೇಹದ ಚಯಾಪಚಯವನ್ನು ಸುಧಾರಿಸಲು ಮತ್ತು ನಿಯಂತ್ರಿಸಲು ಸಹಾಯ ಮಾಡುತ್ತದೆ. ತೂಕ ನಷ್ಟದ ಹೊರತಾಗಿ, ದಾಲ್ಚಿನ್ನಿ ವಿವಿಧ ರೀತಿಯಲ್ಲಿ ನಿಮಗೆ ಸಹಾಯ ಮಾಡುತ್ತದೆ. ಅವುಗಳಲ್ಲಿ ಕೆಲವು ಹೀವೆ:

1. ಆ್ಯಂಟಿ ಆಕ್ಸಿಡೆಂಟ್‌ಗಳು ಅಧಿಕ

2. ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ

3. ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ

4. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ

5. ಬ್ಯಾಕ್ಟೀರಿಯಾ ಮತ್ತು ಫಂಗಲ್ ಸೋಂಕಿನ ವಿರುದ್ಧ ಹೋರಾಡಲು ನಿಮಗೆ ಸಹಾಯ ಮಾಡುತ್ತದೆ

ಕೊನೆಯ ಮಾತು: ಭಾರತೀಯ ಮಸಾಲೆಗಳ ಶಕ್ತಿ ಸಾಮರ್ಥ್ಯವನ್ನು ನಿರ್ಲಕ್ಷಿಸಬೇಡಿ. ನಾವು ಪಶ್ಚಿಮದ ರಾಷ್ಟ್ರಗಳತ್ತ ನೋಡಿದಾಗ, ಅವರು ಸಾಂಪ್ರದಾಯಿಕ ಭಾರತೀಯ ಮಸಾಲೆಗಳನ್ನೇ ಔಷಧಿಗಳಾಗಿ ಸೇವಿಸುತ್ತಿದ್ದಾರೆ ಎಂಬುದು ಸರ್ವವಿಧಿತ. ಅದರಲ್ಲೂ ದಾಲ್ಚಿನ್ನಿ ಮಹಿಮೆ ಅಪಾರ. ದೆಹದಲ್ಲಿ ಶೇಖರಣೆಯಾಗಿರುವ ಹೆಚ್ಚುವರಿ ಕಿಲೋಗಳನ್ನು ಕರಗಿಸಲು ನಿಮಗೆ ಸಹಾಯ ಮಾಡುವ ಪ್ರಬಲವಾದ ಔಷಧೀಯ ಮಸಾಲೆ ಈ ದಾಲ್ಚಿನ್ನಿ.

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು