Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗ್ಗೆ ಎದ್ದಕೂಡಲೆ ಸುಸ್ತಾಗುತ್ತದೆಯೇ?; ನಿಮ್ಮ ದಿನ ಚೆನ್ನಾಗಿರಲು 5 ಸಲಹೆಗಳು ಇಲ್ಲಿವೆ

ಪೋಷಕಾಂಶಗಳ ಕೊರತೆಯು ನಿಮ್ಮನ್ನು ದಿನವೂ ದಣಿದ ಭಾವನೆಗೆ ತಳ್ಳಬಹುದು. ದೇಹದಲ್ಲಿ ಐರನ್ ಮಟ್ಟ ಕಡಿಮೆಯಾದಾಗ, ನಿಮ್ಮ ಜೀವಕೋಶಗಳಿಗೆ ಅಗತ್ಯವಿರುವ ಆಮ್ಲಜನಕ ಸಿಗುವುದಿಲ್ಲ. ಇದು ನಿಮಗೆ ದಣಿದ ಭಾವನೆಯನ್ನು ಉಂಟುಮಾಡಬಹುದು.

ಬೆಳಗ್ಗೆ ಎದ್ದಕೂಡಲೆ ಸುಸ್ತಾಗುತ್ತದೆಯೇ?; ನಿಮ್ಮ ದಿನ ಚೆನ್ನಾಗಿರಲು 5 ಸಲಹೆಗಳು ಇಲ್ಲಿವೆ
ಬೆಳಗಿನ ಆಯಾಸImage Credit source: iStock
Follow us
ಸುಷ್ಮಾ ಚಕ್ರೆ
|

Updated on: Oct 20, 2023 | 11:13 AM

ಬೆಳಗ್ಗೆ ಎದ್ದಕೂಡಲೆ ಸುಸ್ತಾದಂತೆ ಭಾಸವಾಗುತ್ತದೆಯೇ? ಯಾವುದರಲ್ಲೂ ಆಸಕ್ತಿ ಇಲ್ಲದೆ ಹಾಸಿಗೆ ಮೇಲೆ ಹಾಗೇ ಮಲಗಿಕೊಂಡೇ ಇರಬೇಕು ಎನಿಸುತ್ತಿದೆಯೇ? ಬೆಳಗ್ಗೆ ನೀವು ಆ್ಯಕ್ಟಿವ್ ಆಗಿಲ್ಲದಿದ್ದರೆ ಇಡೀ ದಿನ ನಿಮ್ಮನ್ನು ಸೋಮಾರಿತನ ಆವರಿಸಿಕೊಂಡಿರುತ್ತದೆ. ಸಾಮಾನ್ಯವಾಗಿ ನಮಗೆಲ್ಲರಿಗೂ 8 ಗಂಟೆಗಳ ಕಾಲ ನಿದ್ರೆ ಅಗತ್ಯ. ಆದರೆ, ಆ ನಿದ್ರೆಯಿಂದ ಎದ್ದ ನಂತರವೂ ಸುಸ್ತಾಗಬಹುದು. ಒಂದುವೇಳೆ ದಿನವೂ ಈ ರೀತಿ ಬೆಳಗ್ಗೆ ಎದ್ದಕೂಡಲೆ ನಿಮಗೆ ಸುಸ್ತಾಗುತ್ತಿದ್ದರೆ ನಿಮ್ಮ ದೇಹ ನಿಮಗೆ ಯಾವುದೋ ತೊಂದರೆಯ ಸೂಚನೆ ನೀಡುತ್ತಿರಬಹುದು. ಅದನ್ನು ನಿರ್ಲಕ್ಷ್ಯ ಮಾಡಬೇಡಿ.

ಬೆಳಗಿನ ಆಯಾಸ ಪದೇಪದೆ ಪುನರಾವರ್ತಿತವಾಗುತ್ತಿದ್ದರೆ ಅದನ್ನು ನಿರ್ಲಕ್ಷಿಸಬಾರದು. ಆಯಾಸವು ಕೆಲವು ದಿನಗಳು ಮತ್ತು ವಾರಗಳವರೆಗೆ ಮುಂದುವರಿದರೆ ದೇಹದ ಕಾರ್ಯಚಟುವಟಿಕೆಯನ್ನು ಗಮನಿಸುವುದು, ಏನು ಸಮಸ್ಯೆಯಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಅಗತ್ಯವಿದ್ದರೆ ಪರೀಕ್ಷೆ ಮಾಡಿಸಿಕೊಳ್ಳುವುದು ಮುಖ್ಯ.

ದಿನವೂ ಎದ್ದಾಗ ಸುಸ್ತಾಗಲು ಕಾರಣವೇನು?:

ಪೋಷಕಾಂಶಗಳ ಕೊರತೆಯಾಗದಂತೆ ನೋಡಿಕೊಳ್ಳಿ:

ಪೋಷಕಾಂಶಗಳ ಕೊರತೆಯು ನಿಮ್ಮನ್ನು ದಿನವೂ ದಣಿದ ಭಾವನೆಗೆ ತಳ್ಳಬಹುದು. ದೇಹದಲ್ಲಿ ಐರನ್ ಮಟ್ಟ ಕಡಿಮೆಯಾದಾಗ, ನಿಮ್ಮ ಜೀವಕೋಶಗಳಿಗೆ ಅಗತ್ಯವಿರುವ ಆಮ್ಲಜನಕ ಸಿಗುವುದಿಲ್ಲ. ಇದು ನಿಮಗೆ ದಣಿದ ಭಾವನೆಯನ್ನು ಉಂಟುಮಾಡಬಹುದು. B12 ಆಮ್ಲಜನಕದ ವಿತರಣೆ ಮತ್ತು ಶಕ್ತಿ ಉತ್ಪಾದನೆಗೆ ಬಹಳ ಮುಖ್ಯವಾಗಿದೆ. ಅದು ಕಡಿಮೆಯಾದರೆ ತೀವ್ರ ಆಯಾಸವನ್ನು ಉಂಟಾಗಬಹುದು.

ಇದನ್ನೂ ಓದಿ: ರಾತ್ರಿ ಮಲಗುವಾಗ ನೀರು ಕುಡಿಯುತ್ತೀರಾ? ಇದರಿಂದ ಏನಾಗುತ್ತೆ?

ಶಾಂತವಾಗಿ ನಿದ್ರೆ ಮಾಡಿ:

ಮೆಲಟೋನಿನ್ ನಿಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಹಾರ್ಮೋನ್. ಇದು ವ್ಯಕ್ತಿಯ ಸಿರ್ಕಾಡಿಯನ್ ರಿದಮ್ ಅಥವಾ ಅವರ ನಿದ್ರೆ ಮತ್ತು ಎಚ್ಚರವಾಗಿರುವ ಅವಧಿಯನ್ನು ಮತ್ತು ಸಮಯವನ್ನು ನಿಯಂತ್ರಿಸಲು ಕಾರಣವಾಗಿದೆ.

ದೇಹಕ್ಕೆ ಶಕ್ತಿ ತುಂಬಲು 5 ಸಲಹೆಗಳು ಇಲ್ಲಿವೆ…

ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಿ:

ಇದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದ್ದರೂ ಇದನ್ನು ಮತ್ತೆ ಮತ್ತೆ ಒತ್ತಿಹೇಳಬೇಕು. ಈ ಬಗ್ಗೆ ಗೊತ್ತಿದ್ದರೂ ಬಹುತೇಕರು ಇದರ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಸರಿಯಾದ ಆರೋಗ್ಯಕರ ದಿನಚರಿಯನ್ನು ಹೊಂದುವುದು ಬೆಳಗಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಒತ್ತಡ ಕಂಟ್ರೋಲ್ ಮಾಡಿ:

ಆತಂಕ, ಖಿನ್ನತೆ, ಒತ್ತಡ ಅಥವಾ ಯಾವುದೇ ಇತರ ಮಾನಸಿಕ ಆರೋಗ್ಯ ಸಮಸ್ಯೆಯೊಂದಿಗೆ ವ್ಯವಹರಿಸುವುದು ನಿಮ್ಮ ಜೀವನದ ದೈನಂದಿನ ಕಾರ್ಯಗಳಿಗೆ ಅಡ್ಡಿ ಪಡಿಸಬಹುದು.

ಇದನ್ನೂ ಓದಿ: ದಿನಕ್ಕೆ 6 ಗಂಟೆಗಿಂತ ಕಡಿಮೆ ನಿದ್ರೆ ಮಾಡ್ತೀರಾ?; ಹೃದಯದ ಬಗ್ಗೆ ಇರಲಿ ಎಚ್ಚರ

ಸರಿಯಾಗಿ ನಿದ್ರೆ ಮಾಡಿ:

ನಿದ್ರಾಹೀನತೆ ಮತ್ತು ಉತ್ತಮ ಗುಣಮಟ್ಟದ ನಿದ್ರೆಯ ಕೊರತೆಯು ನಾವು ಎಚ್ಚರಗೊಂಡಾಗ ಆಯಾಸಗೊಳ್ಳಲು ಮತ್ತೊಂದು ಕಾರಣವಾಗಿದೆ. ತಡವಾಗಿ ಎಚ್ಚರಗೊಳ್ಳುವುದು ಮತ್ತು ಕೆಲಸದ ಮೇಲೆ ಒತ್ತಡ ಹೇರುವುದರಿಂದ ನಿದ್ರೆಯ ಸಮಯದಲ್ಲಿ ನಮ್ಮ ದೇಹ ಚೇತರಿಸಿಕೊಳ್ಳುವುದಕ್ಕೆ ಅಡ್ಡಿಪಡಿಸುತ್ತದೆ. ಇದರಿಂದ ಮೆದುಳು ಹೆಚ್ಚು ಸುಸ್ತಾಗುತ್ತದೆ.

ನೀರು ಕುಡಿಯಿರಿ:

ನಿರ್ಜಲೀಕರಣವು ದೇಹದ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತದೆ. ಇದು ಹೆಚ್ಚಿದ ನಿದ್ರಾಹೀನತೆ ಮತ್ತು ಆಯಾಸಕ್ಕೆ ಕಾರಣವಾಗುತ್ತದೆ.

ಮಾರ್ನಿಂಗ್ ಸ್ಟ್ರೆಚಸ್:

ಸ್ಟ್ರೆಚಿಂಗ್, ಧ್ಯಾನ ಅಥವಾ ಯೋಗ ಮಾಡುವುದರೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿ. ನಿಮ್ಮ ದಿನವನ್ನು ಉತ್ತಮವಾಗಿ ಆರಂಭಿಸಲು ಇದು ನಿಜವಾಗಿಯೂ ಸಹಾಯ ಮಾಡುತ್ತದೆ. ದೇಹವು ಅಂತಹ ದೈಹಿಕ ಚಟುವಟಿಕೆಯಲ್ಲಿ ತೊಡಗಿದಾಗ, ಅದು ಸಂತೋಷದ ಹಾರ್ಮೋನುಗಳನ್ನು ಸ್ರವಿಸುತ್ತದೆ. ಯೋಗಾಸನಗಳು ನಿಯಮಿತವಾಗಿ ನಿಮ್ಮ ಸಹಿಷ್ಣುತೆಯನ್ನು ಹೆಚ್ಚಿಸುತ್ತವೆ, ರಕ್ತ ಪರಿಚಲನೆ ಸುಧಾರಿಸುವ ಮೂಲಕ ಮತ್ತು ದೇಹದಾದ್ಯಂತ ನಿರ್ಬಂಧಿಸಲಾದ ಚಾನಲ್‌ಗಳನ್ನು ತೆರೆಯುವ ಮೂಲಕ ದಿನವಿಡೀ ನಿಮ್ಮನ್ನು ರೀಚಾರ್ಜ್ ಮಾಡಿ, ಚೈತನ್ಯವನ್ನು ನೀಡುತ್ತವೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೋರ್​ ವೆಲ್ ಇದ್ದರೂ ದುಬಾರಿ ಟ್ಯಾಂಕರ್ ನೀರು ಬಳಸುವ ಅನಿವಾರ್ಯತೆ
ಬೋರ್​ ವೆಲ್ ಇದ್ದರೂ ದುಬಾರಿ ಟ್ಯಾಂಕರ್ ನೀರು ಬಳಸುವ ಅನಿವಾರ್ಯತೆ
ಮುಂದಿನ ಸಿಎಂ ಬಗ್ಗೆ ಕೋಡಿಮಠ ಶ್ರೀ ಮಹತ್ವದ ಮಾತು
ಮುಂದಿನ ಸಿಎಂ ಬಗ್ಗೆ ಕೋಡಿಮಠ ಶ್ರೀ ಮಹತ್ವದ ಮಾತು
ನಿನ್ನ ಕೆಲಸ ಹಾಳು ಮಾಡಲು ಸಂಚು ನಡೆದಿದೆ; ರಿಷಬ್ ಶೆಟ್ಟಿ​ಗೆ ದೈವದ ಎಚ್ಚರಿಕೆ
ನಿನ್ನ ಕೆಲಸ ಹಾಳು ಮಾಡಲು ಸಂಚು ನಡೆದಿದೆ; ರಿಷಬ್ ಶೆಟ್ಟಿ​ಗೆ ದೈವದ ಎಚ್ಚರಿಕೆ
ಕುಟುಂಬ ರಾಜಕಾರಣದಿಂದ ಹೊರಬರುವ ವರೆಗೂ ಮತ್ತೆ ಬಿಜೆಪಿಗೆ ಬರಲ್ಲ: ಯತ್ನಾಳ್
ಕುಟುಂಬ ರಾಜಕಾರಣದಿಂದ ಹೊರಬರುವ ವರೆಗೂ ಮತ್ತೆ ಬಿಜೆಪಿಗೆ ಬರಲ್ಲ: ಯತ್ನಾಳ್
ಬ್ರಹ್ಮೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತಾರಿಗೆ ಮೊದಲಬಾರಿಗೆ ದಾಸೋಹ ವ್ಯವಸ್ಥೆ
ಬ್ರಹ್ಮೋತ್ಸವದಲ್ಲಿ ಪಾಲ್ಗೊಳ್ಳುವ ಭಕ್ತಾರಿಗೆ ಮೊದಲಬಾರಿಗೆ ದಾಸೋಹ ವ್ಯವಸ್ಥೆ
ರಚಿತಾ ರಾಮ್ ಹಾಡೋದನ್ನ ನೋಡಿದ್ದೀರಾ? ಇಲ್ಲಿದೆ ಅಪರೂಪದ ವಿಡಿಯೋ
ರಚಿತಾ ರಾಮ್ ಹಾಡೋದನ್ನ ನೋಡಿದ್ದೀರಾ? ಇಲ್ಲಿದೆ ಅಪರೂಪದ ವಿಡಿಯೋ
ಕೇಂದ್ರ ರೂಪಿಸುವ ಕಾನೂನನ್ನು ರಾಜ್ಯಗಳು ಜಾರಿಮಾಡಬೇಕು: ಪ್ರಲ್ಹಾದ್ ಜೋಶಿ
ಕೇಂದ್ರ ರೂಪಿಸುವ ಕಾನೂನನ್ನು ರಾಜ್ಯಗಳು ಜಾರಿಮಾಡಬೇಕು: ಪ್ರಲ್ಹಾದ್ ಜೋಶಿ
ಬ್ರೆಜಿಲ್​ನಲ್ಲಿ ಆಕಾಶದಿಂದ ನೇರವಾಗಿ ರಸ್ತೆಗೆ ಇಳಿದ ವಿಮಾನ
ಬ್ರೆಜಿಲ್​ನಲ್ಲಿ ಆಕಾಶದಿಂದ ನೇರವಾಗಿ ರಸ್ತೆಗೆ ಇಳಿದ ವಿಮಾನ
ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್, ವಿಡಿಯೋ ವೈರಲ್
ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್, ವಿಡಿಯೋ ವೈರಲ್
ಉತ್ತರಾಖಂಡ: ಹೊತ್ತಿ ಉರಿದ ರಾಸಾಯನಿಕ ಕಾರ್ಖಾನೆ, ಹಲವರು ಸಿಲುಕಿರುವ ಶಂಕೆ
ಉತ್ತರಾಖಂಡ: ಹೊತ್ತಿ ಉರಿದ ರಾಸಾಯನಿಕ ಕಾರ್ಖಾನೆ, ಹಲವರು ಸಿಲುಕಿರುವ ಶಂಕೆ