AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒತ್ತಡದಿಂದ ಮುಕ್ತರಾಗುವುದು ಹೇಗೆ? ಈ ಬಗ್ಗೆ ಡಾ. ಸುಧೀರ್ ಕುಮಾರ್ ಏನ್‌ ಹೇಳ್ತಾರೆ?

ಬಹುತೇಕರನ್ನು ಕಾಡುವ ಸಮಸ್ಯೆಗಳಲ್ಲಿ ಒತ್ತಡ ಕೂಡ ಒಂದು. ಈ ಸಮಸ್ಯೆಯೂ ವ್ಯಕ್ತಿಗಿಂತ ವ್ಯಕ್ತಿಗೆ ಭಿನ್ನವಾಗಿದ್ರು ಕೂಡ ಇದು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನೀವು ಸದಾ ಸಂತೋಷವಾಗಿರಲು ಹಾಗೂ ಈ ಒತ್ತಡದಿಂದ ಮುಕ್ತರಾಗುವುದು ಹೇಗೆ? ಎಂಬ ಬಗ್ಗೆ ತಜ್ಞರು ಏನ್ ಹೇಳ್ತಾರೆ, ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಒತ್ತಡದಿಂದ ಮುಕ್ತರಾಗುವುದು ಹೇಗೆ? ಈ ಬಗ್ಗೆ ಡಾ. ಸುಧೀರ್ ಕುಮಾರ್ ಏನ್‌ ಹೇಳ್ತಾರೆ?
ಸಾಂದರ್ಭಿಕ ಚಿತ್ರImage Credit source: Pinterest
ಸಾಯಿನಂದಾ
|

Updated on: Aug 17, 2025 | 6:44 PM

Share

ಒತ್ತಡ (stress) ಯಾರಿಗೆ ಇಲ್ಲ ಹೇಳಿ, ಪ್ರತಿಯೊಬ್ಬರಿಗೂ ತಮ್ಮದೇ ಆದ ಮಾನಸಿಕ ಒತ್ತಡಗಳಿರುತ್ತವೆ. ಮಿತಿ ಮೀರಿದರೆ ಈ ಒತ್ತಡದಿಂದಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಕಾರಣ, ಧ್ಯಾನ, ಯೋಗ ಮತ್ತು ಇತರ ಹಲವು ಒತ್ತಡ ನಿರ್ವಹಣೆ ತಂತ್ರಗಳನ್ನು ಅಳವಡಿಸಿಕೊಂಡು ದಿನನಿತ್ಯದ ಕೆಲಸವನ್ನು ಸುಗಮವಾಗಿಸಿಕೊಳ್ಳುವುದು ಅಗತ್ಯ. ಆದರೆ ಈ ಒತ್ತಡ ನಿರ್ವಹಣೆಯ ಬಗ್ಗೆ ಹೈದರಾಬಾದ್‌ನ ಅಪೋಲೋ ಆಸ್ಪತ್ರೆಯ ನರರೋಗ ತಜ್ಞ ಡಾ. ಸುಧೀರ್ ಕುಮಾರ್ ಎಂಡಿ, ಡಿಎಂ (Dr. Sudheer Kumar MD DM) ಅವರು ಪೋಸ್ಟ್ ಹಂಚಿಕೊಂಡಿದ್ದು, ಈ ಸಮಸ್ಯೆಯಿಂದ ಹೊರಬರುವುದು ಹೇಗೆ ಎಂದು ವಿವರಿಸಿದ್ದಾರೆ. ಹಾಗಾದರೆ ಒತ್ತಡ ನಿರ್ವಹಣೆಯ ಬಗ್ಗೆ ವೈದ್ಯರು ಏನ್ ಹೇಳ್ತಾರೆ, ಈ ಕುರಿತಾದ ಮಾಹಿತಿ ಇಲ್ಲಿದೆ.

@Hyderbad doctor ಹೆಸರಿನ ಎಕ್ಸ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಒತ್ತಡದಿಂದ ಮುಕ್ತರಾಗುವುದು ಹೇಗೆ ಎಂದು ವಿವರಿಸಿದ್ದು ಹತ್ತು ಸಲಹೆಗಳನ್ನು ಡಾ. ಸುಧೀರ್ ಕುಮಾರ್ ನೀಡಿದ್ದಾರೆ. ಈ ಸಲಹೆಗಳು ಈ ಕೆಳಗಿವೆ.

ಇದನ್ನೂ ಓದಿ
Image
ಕೀಲುನೋವಿಗೆ ಆಯುರ್ವೇದ ತೈಲ; ಬಳಕೆ ವಿಧಾನ ಹೀಗೆ
Image
ಸಂಧಿವಾತದಿಂದ ಮುಕ್ತಿ ಸಿಗಬೇಕು ಅಂದ್ರೆ ಈ ಅಭ್ಯಾಸವನ್ನು ತಪ್ಪದೆ ಪಾಲಿಸಿ
Image
ನಿಮಗೆ ಥೈರಾಯ್ಡ್ ಇದೆಯೇ? ಹಾಗಿದ್ರೆ ಈ ಆಹಾರಗಳ ಸೇವನೆ ವಿಷಕ್ಕೆ ಸಮಾನ
Image
ಹಾಲು ಕುಡಿದ ನಂತರ ಈ ಆಹಾರಗಳನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ
  • ವ್ಯಾಯಾಮ, ನಡಿಗೆ ಅಥವಾ ಯೋಗದಂತಹ ಚಟುವಟಿಕೆಯಲ್ಲಿ ತೊಡಗಿಕೊಳ್ಳಿ: ಪ್ರತಿದಿನ 20 ರಿಂದ 30 ನಿಮಿಷಗಳ ಕಾಲ ಈ ಚಟುವಟಿಕೆಗಳು ಎಂಡಾರ್ಫಿನ್ ಗಳನ್ನು ಹೆಚ್ಚಿಸಿ, ಕಾರ್ಟಿಸೋಲ್ ಅನ್ನು ಕಡಿಮೆ ಮಾಡಿ ಮಾನಸಿಕ ಸ್ಥಿತಿಯನ್ನು ಸುಧಾರಿಸುತ್ತದೆ.

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

  • ಕೃತಜ್ಞತೆ ಸಲ್ಲಿಸುವ ಅಭ್ಯಾಸವಿರಲಿ: ನೀವು ಯಾರಿಗಾದರೂ ಕೃತಜ್ಞತೆ ಸಲ್ಲಿಸುವ ಅಭ್ಯಾಸ ಬೆಳೆಸಿಕೊಳ್ಳಿ. ದಿನದ ಎರಡು ಮೂರು ವಿಷಯಗಳನ್ನು ಬರೆದಿಡುವ ಅಭ್ಯಾಸವು ನಿಮ್ಮ ಮೆದುಳನ್ನು ಸಕಾರಾತ್ಮಕ ಭಾವನೆಯನ್ನು ಹೆಚ್ಚಿಸುತ್ತದೆ.
  • ಜನರೊಂದಿಗೆ ಬೆರೆಯಿರಿ: ಕುಟುಂಬ, ಸ್ನೇಹಿತರೊಂದಿಗೆ ಸಮಯ ಕಳೆಯುವುದು. ಸಣ್ಣ ಪುಟ್ಟ ಮಾತುಕಥೆಗಳು ಒತ್ತಡದ ಹಾರ್ಮೋನುಗಳನ್ನು ಕಡಿಮೆ ಮಾಡುತ್ತದೆ.
  • ದೀರ್ಘ ಉಸಿರಾಟ ತೆಗೆದುಕೊಳ್ಳಿ: ದಿನದ 5–10 ನಿಮಿಷಗಳ ಧ್ಯಾನ, ಪ್ರಾರ್ಥನೆ ಅಥವಾ ನಿಮ್ಮ ಉಸಿರಾಟದ ಮೇಲೆ ಕೇಂದ್ರೀಕರಿಸುವುದು ಬಹಳ ಮುಖ್ಯ. ಇದು ಮನಸ್ಸನ್ನು ಶಾಂತಗೊಳಿಸಿ, ಆತಂಕವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
  • ಚೆನ್ನಾಗಿ ನಿದ್ರಿಸಿ : ದಿನಕ್ಕೆ 7–9 ಗಂಟೆಗಳ ಗುಣಮಟ್ಟದ ನಿದ್ರೆಯೂ ಒತ್ತಡ, ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ.
  • ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಿ : ಸಾಕಷ್ಟು ಹಣ್ಣುಗಳು, ತರಕಾರಿಗಳು, ಪ್ರೋಟೀನ್ ಮತ್ತು ಒಮೆಗಾ-೩ ಸೇರಿದಂತೆ ಸಮತೋಲಿತ ಆಹಾರ ಸೇವಿಸಿ, ಇದರಿಂದ ಮನಸ್ಥಿತಿಯೂ ಸುಧಾರಿಸುತ್ತದೆ.
  •  ಅರ್ಥಪೂರ್ಣವಾದ ಕೆಲಸದಲ್ಲಿ ತೊಡಗಿಸಿಕೊಳ್ಳಿ: ವಿವಿಧ ಕೆಲಸ, ಹವ್ಯಾಸಗಳು, ಸೃಜನಶೀಲ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಸಂತೋಷವು ಹೆಚ್ಚಾಗಿ ಒತ್ತಡವೂ ಕಡಿಮೆಯಾಗಲು ಸಾಧ್ಯ.
  •  ಹೊರಾಂಗಣ ಅಥವಾ ಪ್ರಕೃತಿಯೊಂದಿಗೆ ಸಮಯ ಕಳೆಯಿರಿ: ಬೆಳಗಿನ ಸೂರ್ಯನ ಬೆಳಕು, ಹಚ್ಚ ಹಸಿರಿನ ವಾತಾವರಣವು ಆತಂಕವನ್ನು ಕಡಿಮೆ ಮಾಡುತ್ತದೆ, ಮಾನಸಿಕ ಸ್ಥಿತಿಯನ್ನು ಸುಧಾರಿಸುತ್ತದೆ.
  •  ಪರದೆಯ ಸಮಯವನ್ನು ಕಡಿಮೆಗೊಳಿಸಿ: ಮೊಬೈಲ್‌, ಸೋಶಿಯಲ್‌ ಮೀಡಿಯಾದ ಬಳಕೆಯನ್ನು ಕಡಿಮೆಗೊಳಿಸಿ. ಹೆಚ್ಚು ಮೊಬೈಲ್ ಬಳಕೆಯೂ ಆತಂಕ ಹಾಗೂ ಒತ್ತಡವನ್ನು ಹೆಚ್ಚಿಸುತ್ತದೆ. ಹೀಗಾಗಿ ಮಲಗುವ 1 ಗಂಟೆ ಮೊದಲು ಗಂಟೆಗೂ ಮುನ್ನ ಮೊಬೈಲ್ ಬಳಸುವುದನ್ನು ತಪ್ಪಿಸಿ.
  • ಹೆಚ್ಚು ನಗುತ್ತಾ ಇರಿ: ಹಾಸ್ಯ, ಸಂಗೀತ ಅಥವಾ ತಮಾಷೆಯ ಚಟುವಟಿಕೆಗಳು ಮನಸ್ಸನ್ನು ಹಗುರಗೊಳಿಸುತ್ತದೆ. ಹಾಗೂ ಹೃದಯದ ಆರೋಗ್ಯವನ್ನು ಸುಧಾರಿಸುತ್ತವೆ ಎಂದಿದ್ದಾರೆ.

ಇದನ್ನೂ ಓದಿ: ಆತಂಕ, ಒತ್ತಡಕ್ಕೆ ಈ ಎಲೆ ಪರಿಹಾರ

ನೀವು ತಪ್ಪಿಸಬೇಕಾದ ವಿಚಾರಗಳು ಇವು

  •  ಹೆಚ್ಚು ಕಾಫಿ ಕುಡಿಯುವುದು.
  •  “ಇಲ್ಲ” ಎಂದು ಹೇಳದೆ ಬೇರೆಯವರಿಗೆ ಅತಿಯಾಗಿ ಬದ್ಧರಾಗುವುದು ಬೇಡ. “ಇಲ್ಲ” ಎಂದು ಹೇಳಲು ಕಲಿಯಿರಿ.
  •  ನಿಮ್ಮನ್ನು ನಿರಂತರವಾಗಿ ಇತರರೊಂದಿಗೆ ಹೋಲಿಸಿಕೊಳ್ಳುವುದು. ಬೇರೆಯರಿಂದ ಸ್ಫೂರ್ತಿ ಪಡೆಯಿರಿ, ಆದರೆ ಹೋಲಿಕೆ ಕೀಳರಿಮೆಯನ್ನು ತಪ್ಪಿಸಬೇಕು.
  • ದ್ವೇಷ ಸಾಧಿಸುವುದು ಅಥವಾ ನಕಾರಾತ್ಮಕ ವಿಷಯಗಳ ಬಗ್ಗೆ ಯೋಚಿಸುವುದು. “ಕ್ಷಮಿಸಲು ಮತ್ತು ಮರೆಯಲು” ಕಲಿಯಿರಿ ಎಂದು ಹೇಳುತ್ತಾರೆ ವೈದ್ಯರು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ