
ನಾವು ಯಾವ ರೀತಿಯ ಆಹಾರ (Food) ಸೇವನೆ ಮಾಡುತ್ತೇವೆ ಎಂಬುದು ನಮ್ಮ ದೇಹದ ಮೇಲೆ ಮಾತ್ರವಲ್ಲದೆ ನಮ್ಮ ಮಾನಸಿಕ ಆರೋಗ್ಯದ (Health) ಮೇಲೂ ನೇರ ಪರಿಣಾಮ ಬೀರುತ್ತದೆ. ಇಂದಿನ ವೇಗದ ಜೀವನದಲ್ಲಿ, ಜನರು ಹೆಚ್ಚಾಗಿ ಫಾಸ್ಟ್ ಫುಡ್ (Fast food), ಜಂಕ್ ಫುಡ್ (Junk food) ಜೊತೆಗೆ ಸಂಗ್ರಹಿಸಿಟ್ಟ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವನೆ ಮಾಡುತ್ತಾರೆ. ಈ ರೀತಿಯ ಆಹಾರಗಳ ಸೇವನೆ ಮೆದುಳಿನ ಶಕ್ತಿಯನ್ನು ನಿಧಾನಗೊಳಿಸುತ್ತವೆ. ಜೊತೆಗೆ ನಿಮ್ಮ ಜ್ಞಾಪಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಹಾಗಾಗಿ ನೀವು ಮಾನಸಿಕವಾಗಿ ಸಕ್ರಿಯರಾಗಿರಬೇಕು ಎಂದರೆ ದೇಹಕ್ಕೆ ಅಪಾಯಕಾರಿಯಾಗಿರುವ ಆಹಾರ ಮತ್ತು ಪಾನೀಯಗಳಿಂದ ದೂರವಿರುವುದು ಬಹಳ ಮುಖ್ಯವಾಗುತ್ತದೆ. ಹಾಗಾದರೆ ಯಾವ ರೀತಿಯ ಆಹಾರ ಸೇವನೆ ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.
ಮೆದುಳು ಚೆನ್ನಾಗಿ ಕೆಲಸ ಮಾಡುವುದರ ಜೊತೆಗೆ ಯಾವಾಗಲೂ ಆರೋಗ್ಯವಾಗಿರಲು ಒಳ್ಳೆಯ ಆಹಾರಗಳ ಸೇವನೆ ಮಾಡುವುದು ಬಹಳ ಮುಖ್ಯ. ಏಕೆಂದರೆ ಈಗ ನಾವು ಸೇವನೆ ಮಾಡುವ ಕೆಲವು ಆಹಾರಗಳು ನಮ್ಮ ನರಕೋಶಗಳನ್ನು ಹಾನಿಗೊಳಿಸುತ್ತವೆ ಜೊತೆಗೆ ಖಿನ್ನತೆ ಮತ್ತು ಬುದ್ಧಿಮಾಂದ್ಯತೆಯಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತದೆ. ಇದು ಸಂಶೋಧನೆಗಳಿಂದಲೂ ಬಹಿರಂಗವಾಗಿದೆ. ಸರಳವಾಗಿ ಹೇಳುವುದಾದರೆ ಇದೊಂದು ರೀತಿ ನಿಧಾನ ವಿಷವಿದ್ದಂತೆ ಹಂತ ಹಂತವಾಗಿ ಮೆದುಳಿಗೆ ಹಾನಿ ಮಾಡುತ್ತದೆ. ಹಾಗಾದರೆ ಯಾವ ಆಹಾರಗಳನ್ನು ಸೇವನೆ ಮಾಡಬಾರದು? ಈ ಬಗ್ಗೆ ತಜ್ಞರು ಹೇಳುವುದೇನು ತಿಳಿದುಕೊಳ್ಳಿ.
ಸಿಹಿ ತಿಂಡಿ ಅಥವಾ ಸಕ್ಕರೆ ಸೇರಿಸಿದ ಆಹಾರಗಳ ಅತಿಯಾದ ಸೇವನೆಯು ಮೆದುಳಿನಲ್ಲಿ ಉರಿಯೂತವನ್ನು ಹೆಚ್ಚಿಸುತ್ತದೆ. ಇದು ನಮ್ಮ ಸ್ಮರಣ ಶಕ್ತಿಯ ಮೇಲೆ ಕೆಟ್ಟ ಪರಿಣಾಮ ಬೀರುವುದರ ಜೊತೆಗೆ ಮೆದುಳಿನ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.
ಬರ್ಗರ್ ಮತ್ತು ಫ್ರೆಂಚ್ ಫ್ರೈಸ್ ನಂತಹ ಕರಿದ ಆಹಾರಗಳಲ್ಲಿ ಇರುವ ಟ್ರಾನ್ಸ್ ಕೊಬ್ಬುಗಳು ಮೆದುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಬಿಳಿ ಬ್ರೆಡ್, ಬಿಸ್ಕತ್ತು, ಪಿಜ್ಜಾ, ಪಾಸ್ತಾ, ಮಾಂಸಗಳು. ಸಾಸೇಜ್, ಸಲಾಮಿಸ್ ಮುಂತಾದ ಸಂಸ್ಕರಿಸಿದ ಆಹಾರಗಳಲ್ಲಿಯೂ ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕ ಇರುವುದರಿಂದ ಇದು ಮೆದುಳಿನ ಆರೋಗ್ಯವನ್ನು ಹಾಳು ಮಾಡುತ್ತದೆ. ಇದನ್ನು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಉಪಯೋಗ ಮಾಡುತ್ತಾರೆ ಹಾಗಾಗಿ ಈ ಆಹಾರಗಳ ಸೇವನೆ ಬಗ್ಗೆ ಜಾಗರೂಕರಾಗಿರಬೇಕು ಜೊತೆಗೆ ಇವುಗಳ ಸೇವನೆಯನ್ನು ಕೂಡ ಕಡಿಮೆ ಮಾಡಬೇಕು.
ಇದನ್ನೂ ಓದಿ: ಕಾಂತಿಯುತ ಮೈ ಬಣ್ಣ ನಿಮ್ಮದಾಗಬೇಕಾ? ಈ ಆಯುರ್ವೇದದ ಲೇಪನ ಬಳಸಿ
ತಂಪು ಪಾನೀಯಗಳು ಅಥವಾ ಪ್ಯಾಕೇಜ್ ಮಾಡಿದ ಹಣ್ಣಿನ ರಸಗಳು ಹೆಚ್ಚಿನ ಫ್ರಕ್ಟೋಸ್ ಕಾರ್ನ್ ಸಿರಪ್ ಅನ್ನು ಹೊಂದಿರುತ್ತವೆ. ಇದು ಮೆದುಳಿನಲ್ಲಿ ಡೋಪಮೈನ್ ಮಟ್ಟವನ್ನು ಅಸಮತೋಲನಗೊಳಿಸುತ್ತದೆ. ಇದರಿಂದ ಒತ್ತಡ ಮತ್ತು ಆಯಾಸ ಹೆಚ್ಚಾಗುತ್ತದೆ.
ನಿಮ್ಮ ಮೆದುಳು ಮತ್ತು ಮನಸ್ಸು ಯಾವಾಗಲೂ ಆರೋಗ್ಯಕರವಾಗಿರಬೇಕು ಎಂಬ ಆಸೆ ಇದ್ದರೆ ನೀವು ವಿಷಕಾರಿ ಆಹಾರಗಳಿಂದ ದೂರವಿರುವುದು ಒಳ್ಳೆಯದು. ಏಕೆಂದರೆ ಮೆದುಳು ಆರೋಗ್ಯವಾಗಿ ಇರಬೇಕು ಎಂದರೆ ನಾವು ಸೇವನೆ ಮಾಡುವ ಆಹಾರ ಹೇಗಿರುತ್ತದೆ ಎಂಬುದು ಬಹಳ ಮುಖ್ಯವಾಗಿರುತ್ತದೆ. ಹಾಗಾಗಿ ಬಹಳ ಜಾಗರೂಕರಾಗಿರಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ