ಯೂರಿಕ್ ಆಮ್ಲ ಹೆಚ್ಚಾಗದಂತೆ ತಡೆಯಲು ಈ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ

ಯೂರಿಕ್ ಆಮ್ಲವು ಮೂತ್ರಪಿಂಡದ ಕಲ್ಲುಗಳ ರಚನೆ ಮತ್ತು ಮೂತ್ರಪಿಂಡದ ಕಾಯಿಲೆಗಳಿಗೆ ಕಾರಣವಾಗಬಹುದು. ಅದಲ್ಲದೆ ಯೂರಿಕ್ ಆಮ್ಲದ ಹೆಚ್ಚಳದಿಂದ ಹೃದ್ರೋಗಗಳನ್ನು ಉಂಟು ಮಾಡುತ್ತದೆ, ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ಯೂರಿಕ್ ಆಮ್ಲವನ್ನು ನಿಯಂತ್ರಣದಲ್ಲಿಡುವುದು ಬಹಳ ಮುಖ್ಯ. ಇಲ್ಲವಾದಲ್ಲಿ ಇದು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಯೂರಿಕ್ ಆಸಿಡ್ ಸಮಸ್ಯೆ ಇರುವವರು ಕೆಲವು ರೀತಿಯ ಆಹಾರಗಳಿಂದ ದೂರವಿರುವುದು ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಹಾಗಾದರೆ ಯಾವ ರೀತಿಯ ಆಹಾರಗಳ ಸೇವನೆ ಮಾಡುವುದು ಒಳ್ಳೆಯದಲ್ಲ ತಿಳಿದುಕೊಳ್ಳಿ.

ಯೂರಿಕ್ ಆಮ್ಲ ಹೆಚ್ಚಾಗದಂತೆ ತಡೆಯಲು ಈ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ
ಸಾಂದರ್ಭಿಕ ಚಿತ್ರ
Edited By:

Updated on: Feb 20, 2025 | 12:35 PM

ಮನುಷ್ಯನ ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಾದರೆ, ಕೀಲು ನೋವುಗಳು ಉಂಟಾಗಬಹುದು. ವಿಶೇಷವಾಗಿ ಕೀಲುಗಳಲ್ಲಿ, ಯೂರಿಕ್ ಆಮ್ಲದ ಹರಳುಗಳು ಅಥವಾ ಕ್ರಿಸ್ಟಲ್ ರೂಪಗೊಂಡು ತೀವ್ರ ನೋವನ್ನು ಉಂಟುಮಾಡುತ್ತವೆ. ಇದನ್ನು ಸಂಧಿವಾತ ಎಂದೂ ಕರೆಯುತ್ತಾರೆ. ಜೊತೆಗೆ ಈ ಯೂರಿಕ್ ಆಮ್ಲವು ಮೂತ್ರಪಿಂಡದ ಕಲ್ಲುಗಳ ರಚನೆ ಮತ್ತು ಮೂತ್ರಪಿಂಡದ ಕಾಯಿಲೆಗಳಿಗೆ ಕಾರಣವಾಗಬಹುದು. ಅದಲ್ಲದೆ ಯೂರಿಕ್ ಆಮ್ಲದ ಹೆಚ್ಚಳದಿಂದ ಹೃದ್ರೋಗಗಳನ್ನು ಉಂಟು ಮಾಡುತ್ತದೆ, ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ಯೂರಿಕ್ ಆಮ್ಲವನ್ನು ನಿಯಂತ್ರಣದಲ್ಲಿಡುವುದು ಬಹಳ ಮುಖ್ಯ. ಇಲ್ಲವಾದಲ್ಲಿ ಇದು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಯೂರಿಕ್ ಆಸಿಡ್ ಸಮಸ್ಯೆ ಇರುವವರು ಕೆಲವು ರೀತಿಯ ಆಹಾರಗಳಿಂದ ದೂರವಿರುವುದು ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಹಾಗಾದರೆ ಯಾವ ರೀತಿಯ ಆಹಾರಗಳ ಸೇವನೆ ಮಾಡುವುದು ಒಳ್ಳೆಯದಲ್ಲ ತಿಳಿದುಕೊಳ್ಳಿ.

  • ಸಮುದ್ರಾಹಾರ: ಸಾರ್ಡಿನ್, ಸೀಗಡಿ ಮತ್ತು ಏಡಿಗಳಂತಹ ಸಮುದ್ರಾಹಾರಗಳು ಪ್ಯೂರಿನ್ಗಳಿಂದ ಸಮೃದ್ಧವಾಗಿವೆ. ಅವು ಯೂರಿಕ್ ಆಮ್ಲವನ್ನು ಹೆಚ್ಚಿಸುತ್ತವೆ. ಆದ್ದರಿಂದ ಇವುಗಳನ್ನು ತಿನ್ನದಿರುವುದು ಒಳ್ಳೆಯದು.
  • ತಂಪು ಪಾನೀಯಗಳು: ಸಾಮಾನ್ಯವಾಗಿ ತಂಪು ಪಾನೀಯಗಳಲ್ಲಿ ಪ್ಯೂರಿನ್ ಗಳು ಕಡಿಮೆ ಇರುತ್ತವೆ. ಅವುಗಳಲ್ಲಿ ಫ್ರಕ್ಟೋಸ್ ಎಂಬ ಸಕ್ಕರೆ ಅಧಿಕವಾಗಿರುತ್ತದೆ. ಇದು ದೇಹದಲ್ಲಿ ಯೂರಿಕ್ ಆಮ್ಲವನ್ನು ಹೆಚ್ಚಿಸುತ್ತದೆ.
  • ಬೇಳೆ ಕಾಳುಗಳು: ದ್ವಿದಳ ಧಾನ್ಯಗಳು ಪ್ರೋಟೀನ್ ಹೊಂದಿರುವ ಆರೋಗ್ಯಕರ ಆಹಾರವಾಗಿದ್ದರೂ. ಪ್ರೋಟೀನ್ ಯೂರಿಕ್ ಆಮ್ಲವನ್ನು ಹೆಚ್ಚಿಸುತ್ತದೆ ಆದ್ದರಿಂದ ಬೇಳೆ ಕಾಳುಗಳನ್ನು ಸಹ ಕಡಿಮೆ ತಿನ್ನಬೇಕು.
  • ಮದ್ಯಪಾನ: ನಿಮಗೆ ಯೂರಿಕ್ ಆಸಿಡ್ ಸಮಸ್ಯೆ ಇದ್ದರೆ ಮದ್ಯಪಾನ ಮಾಡಬೇಡಿ. ಯೂರಿಕ್ ಆಮ್ಲದ ಮಟ್ಟವನ್ನು ಹೆಚ್ಚಿಸುವಲ್ಲಿ ಆಲ್ಕೋಹಾಲ್ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ ಆಲ್ಕೋಹಾಲ್ ಮೂತ್ರಪಿಂಡಗಳು ಯೂರಿಕ್ ಆಮ್ಲವನ್ನು ಫಿಲ್ಟರ್ ಮಾಡುವುದನ್ನು ತಡೆಯುತ್ತದೆ.
  • ತರಕಾರಿಗಳು: ಪಾಲಕ್, ಎಲೆಕೋಸು ಮತ್ತು ಅಣಬೆಗಳಂತಹ ತರಕಾರಿಗಳಲ್ಲಿ ಪ್ರೋಟೀನ್ ಸಮೃದ್ಧವಾಗಿದೆ. ಯೂರಿಕ್ ಆಮ್ಲ ಹೆಚ್ಚಿರುವವರು ಈ ತರಕಾರಿಗಳನ್ನು ಕಡಿಮೆ ತಿನ್ನಬೇಕು.
  • ಮಾಂಸ: ಮಾಂಸಾಹಾರದಲ್ಲಿ ಯೂರಿಕ್ ಆಮ್ಲವನ್ನು ಹೆಚ್ಚಿಸುವ ಪ್ಯೂರಿನ್ ಗಳು ಸಮೃದ್ಧವಾಗಿವೆ. ಅದಕ್ಕಾಗಿಯೇ ಯೂರಿಕ್ ಆಸಿಡ್ ಸಮಸ್ಯೆ ಇರುವವರು ಮಾಂಸಾಹಾರದಿಂದ ದೂರವಿರುವುದು ಉತ್ತಮ.
  • ಯೂರಿಕ್ ಆಸಿಡ್ ಸಮಸ್ಯೆ ಇರುವವರು ಮೇಲೆ ತಿಳಿಸಿದ ಆಹಾರಗಳಿಂದ ದೂರವಿರಬೇಕು. ಅಲ್ಲದೆ, ವೈದ್ಯರ ಸಲಹೆಯ ಪ್ರಕಾರ ಔಷಧಿಗಳನ್ನು ಬಳಸಬೇಕು. ಇದೆಲ್ಲದರ ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವುದು ಸಹ ಬಹಳ ಮುಖ್ಯ. ಪ್ರತಿನಿತ್ಯ ಸಾಕಷ್ಟು ನೀರು ಕುಡಿಯುವುದು ಮತ್ತು ವ್ಯಾಯಾಮ ಮಾಡುವುದು ಯೂರಿಕ್ ಆಮ್ಲವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

(ಸೂಚನೆ: ಇಲ್ಲಿರುವ ವಿಷಯಗಳು ಮಾಹಿತಿಗಾಗಿ ಮಾತ್ರ. ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿದ್ದ ಸಂದರ್ಭದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ)

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ