ಅಕಾಲಿಕ ಕೂದಲು ಬಿಳಿಯಾಗುವುದು ಅನೇಕರು ಎದುರಿಸುವ ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಒತ್ತಡ, ಅನಾರೋಗ್ಯಕರ ಜೀವನಶೈಲಿ, ಕಳಪೆಮಟ್ಟದ ಆಹಾರ ಪದ್ಧತಿಗಳು ಇವೆಲ್ಲವೂ ಇದಕ್ಕೆ ಕಾರಣಗಳಾಗಿವೆ. ಕೆಲವು ಪೌಷ್ಟಿಕಾಂಶದ ಕೊರತೆಗಳು ಕೂದಲು ಬಿಳಿ ಬಣ್ಣಕ್ಕೆ ತಿರುಗಲು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಆದ್ದರಿಂದ ನಿರ್ದಿಷ್ಟ ವಿಟಮಿನ್ ಗಳಲ್ಲಿ ಹೆಚ್ಚಿದ ಆಹಾರಗಳು ನಿಮ್ಮ ಕೂದಗಳು ಅದರ ನೈಸರ್ಗಿಕ ಬಣ್ಣವನ್ನು ದೀರ್ಘಕಾಲದವರೆಗೆ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ.
ಕೂದಲು ಕಿರುಚೀಲಗಳು ಕಡಿಮೆ ಮೆಲನಿನ್ ವರ್ಣದ್ರವ್ಯವನ್ನು ಕಡಿಮೆ ಉತ್ಪಾದಿಸಿದಾಗ ಬಿಳಿ ಕೂದಲು ಉಂಟಾಗುತ್ತದೆ. ಇದರ ಹಿಂದೆ ಹಲವು ಕಾರಣಗಳಿರಬಹುದು- ವಯಸ್ಸು, ಒತ್ತಡ, ಮಾಲಿನ್ಯ, ಅನಾರೋಗ್ಯಕರ ಜೀವನಶೈಲಿ, ಕಳಪೆ ಆಹಾರ ಪದ್ಧತಿ ಸೇರಿವೆ. ಇಂದು ನಮ್ಮ ವೇಗದ ಮತ್ತು ಬಿಡುವಿಲ್ಲದ ಕೆಲಸದ ವೇಳಪಟ್ಟಿಯ ನಡುವೆ, ಸರಿಯಾದ ಊಟವನ್ನು ಸವಿಯಲು ನಮಗೆ ಸಮಯ ಸಿಗುವುದಿಲ್ಲ. ಇದರಿಂದ ನಮ್ಮ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳು ಲಭಿಸುವುದಿಲ್ಲ. ಈ ಪೋಷಕಾಂಶಗಳ ಕೊರತೆ ಕೂದಲು ಬಿಳಿಯಾಗಲು ಕಾರಣವಾಗಿದೆ.
ಪರಿಷ್ಕೃತ ಸಕ್ಕರೆ ನಮ್ಮ ಆರೊಗ್ಯದ ಮೇಲೆ ಒಂದಕ್ಕಿಂತ ಹೆಚ್ಚು ರೀತಿಯಲ್ಲಿ ಪರಿಣಾಮ ಬೀರಬಹುದು ಎಂದು ತಜ್ಞರು ಹೇಳುತ್ತಾರೆ. ನಮ್ಮ ಆಹಾರದಲ್ಲಿ ಹೆಚ್ಚುವರಿ ಕ್ಯಾಲೋರಿಗಳನ್ನು ಸೇವಿಸುವುದರ ಜೊತೆಗೆ, ಇದು ದೇಹದಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ. ಹಾಗಾಗಿ ಇದು ಅಕಾಲಿಕ ಕುದಲು ಬಿಳಿಯಾಗಲು ಕಾರಣವಾಗುತ್ತದೆ.
ಎಣ್ಣೆಯಲ್ಲಿ ಕರಿದ ಆಹಾರಗಳು ಟ್ರಾನ್ಸ್-ಫ್ಯಾಟ್ ಗಳಿಂದ ತುಂಬಿರುತ್ತವೆ. ಇದು ಮತ್ತಷ್ಟು ಉರಿಯೂತಕ್ಕೆ ಕಾರಣವಾಗುತ್ತದೆ. ಮತ್ತು ಇದು ಕೂದಲು ಕಿರುಚೀಲಗಳನ್ನು ಹಾನಿಗೊಳಿಸುತ್ತದೆ. ಆದ್ದರಿಂದ ನಮ್ಮ ದೇಹದಲ್ಲಿ ಪೋಷಕಾಂಶವನ್ನು ಉಳಿಸಿಕೊಳ್ಳಲು ಆರೋಗ್ಯಕರ ಆಹಾರದ ಆಯ್ಕೆಯನ್ನು ಮಾಡಬೇಕಾಗುತ್ತದೆ.
ಅತಿಯಾದ ಕೆಫೀನ್ ಸೇವನೆಯು ದೇಹದಲ್ಲಿ ನಿರ್ಜಲೀಕರಣಕ್ಕೆ ಕಾರಣವಾಗಬಹುದು ಎಂದು ಹಲವಾರು ಅಧ್ಯಯನಗಳು ಹೇಳಿವೆ. ಅತಿಯಾದ ಕಾಫಿ ಸೇವನೆ ನಿಮ್ಮ ಕೂದಲನ್ನು ಮತ್ತಷ್ಟು ಶುಷ್ಕವಾಗಿ ಮತ್ತು ಮಂದವಾಗಿ ಕಾಣುವಂತೆ ಮಾಡುತ್ತದೆ. ಮತ್ತು ಕೂದಲ ಹೊಳಪನ್ನು ತೆಗೆದುಹಾಕುತ್ತದೆ.
ಸಂಸ್ಕರಿಸಿದ ಅಥವಾ ಜಂಕ್ ಪುಢ್ ಅನೆಕ ಅನಾನುಕೂಲತೆಯನ್ನು ಉಂಟುಮಾಡುತ್ತವೆ. ಜಂಕ್ ಫುಡ್ ಗಳಲ್ಲಿರುವ ಹೆಚ್ಚುವರಿ ಸಕ್ಕರೆ ಮತ್ತು ಟ್ರಾನ್ಸ್ ಕೊಬ್ಬುಗಳು ಕೂದಲಿನ ಕಿರುಚೀಲಗಳನ್ನು ಹಾನಿಗೊಳಿಸಬಹುದು ಮತ್ತು ಮೆಲನಿನ್ ವರ್ಣದ್ರವ್ಯದ ಉತ್ಪಾದನೆಯನ್ನು ತಡೆಯಬಹುದು.
ಹೆಚ್ಚುವರಿ ಆಲ್ಕೋಹಾಲ್ ದೇಹದಿಂದ ಅಗತ್ಯವಾದ ಪೋಷಕಾಂಶಗಳನ್ನು ತೆಗೆದುಹಾಕುತ್ತವೆ. ಮತ್ತು ಇದು ಕೂದಲಿಗೂ ಕೂಡಾ ಹಾನಿಯನ್ನು ಉಂಟು ಮಾಡುತ್ತದೆ. ಆದ್ದರಿಂದ, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ತಜ್ಞರು ಯಾವಾಗಲೂ ಸೀಮಿತ ಪ್ರಮಾಣದಲ್ಲಿ ಆಲ್ಕೋಹಾಲ್ ಸೇವಿಸಬೇಕೆಂದು ಹೇಳುತ್ತಾರೆ.
ಇದನ್ನೂ ಓದಿ: ಬೇವಿನ ಮರದ ಪ್ರತಿಯೊಂದು ಭಾಗವೂ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ: ಇಲ್ಲಿದೆ ಅಷ್ಟೂ ವಿವರ
ಮೊಟ್ಟೆಗಳು ಅಗತ್ಯವಾದ ಪೋಷಕಾಂಶಗಳಿಂದ ತುಂಬಿರುತ್ತವೆ. ಮತ್ತು ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತವೆ. ಇವುಗಳು ವಿಟಮಿನ್ ಬಿ ಯಿಂದ ಸಮೃದ್ಧವಾಗಿದ್ದು, ಇದು ಕೂದಲ ಆರೋಗ್ಯವನ್ನು ವೃದ್ಧಿಸಲು ಸಹಕಾರಿಯಾಗಿದೆ.
ಹಾಲು, ಮೊಸರು ಮತ್ತು ಇತರ ಡೈರಿ ಉತ್ಪನ್ನಗಳು ಪ್ರೋಬಯಾಟಿಕ್, ಖನಿಜಗಳು, ಉತ್ಕರ್ಷಣ ನಿರೋಧಕಗಳು ವಿಟಮಿನ್ ಬಿ ಅಂಶಗಳಿಂದ ತುಂಬಿವೆ. ಈ ಪೋಷಕಾಂಶಗಳು ಮೆಲನಿನ್ ಉತ್ಪಾದನೆಗೆ ಸಹಾಯ ಮಾಡುತ್ತದೆ ಮತ್ತು ಒಟ್ಟಾರೆ ಕೂದಲಿನ ಆರೋಗ್ಯವನ್ನು ಉತ್ತೇಜಿಸುತ್ತದೆ.
ಇವುಗಳು ಒಮೆಗಾ- ಮೀನು 3 ಕೊಬ್ಬಿನಾಮ್ಲಗಳ ಅತ್ಯುತ್ತಮ ಮೂಲವಾಗಿದೆ. ಇದು ನಮ್ಮ ಕೂದಲ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದು ಕೂದಲಿಗೆ ಹೊಲಪನ್ನು ನೀಡುವುದರ ಜೊತೆಗೆ ಪ್ರೋಟಿನ್ ನ್ನು ಒದಗಿಸಿಕೊಡುತ್ತದೆ.
ಬೀಜಗಳು: ನಟ್ಸ್ ಮತ್ತು ಇತರ ಬೀಜಗಳು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಈ ಪೋಷಕಾಂಶಗಳು ಕೂದಲಿನ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತವೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: