Estrogen level: ನೈಸರ್ಗಿಕವಾಗಿ ಈಸ್ಟ್ರೊಜೆನ್ ಮಟ್ಟವನ್ನು ಹೆಚ್ಚಿಸಲು ಈ ಸೂಪರ್ ಫುಡ್ ಮುಖ್ಯ
ನೀವು ಕಡಿಮೆ ಈಸ್ಟ್ರೊಜೆನ್ ಮಟ್ಟವನ್ನು ಹೊಂದಿದ್ದೀರಾ? ನಿಮ್ಮ ದೇಹದಲ್ಲಿ ಹಾರ್ಮೋನ್ ಮಟ್ಟವನ್ನು ಸಮರ್ಥವಾಗಿ ಹೆಚ್ಚಿಸಲು ನಿಮ್ಮ ಆಹಾರದಲ್ಲಿ ನೀವು ಸೇರಿಸಬಹುದಾದ ಹಲವಾರು ಆಹಾರಗಳು ಇಲ್ಲಿವೆ.

ಈಸ್ಟ್ರೊಜೆನ್ (Estrogen) ಒಂದು ಪ್ರಮುಖ ಹಾರ್ಮೋನ್ ಆಗಿದ್ದು, ಅದು ಹೆಣ್ಣು ಮತ್ತು ಗಂಡು ಸಂತಾನೋತ್ಪತ್ತಿ ವ್ಯವಸ್ಥೆಯ ಬೆಳವಣಿಗೆ ಮತ್ತು ಕಾರ್ಯದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇದು ಮುಖ್ಯವಾಗಿ ಮಹಿಳೆಯರು ಮತ್ತು ಪುರುಷರಲ್ಲಿ ಸಂತಾನೋತ್ಪತ್ತಿ ಮತ್ತು ಲೈಂಗಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಅಲ್ಲದೆ ಇದು ಮಹಿಳೆಯರಲ್ಲಿ ಋತುಚಕ್ರ, ಲೈಂಗಿಕತೆ ಮತ್ತು ಸಂತಾನೋತ್ಪತ್ತಿ ಚಕ್ರಗಳನ್ನು ನಿಯಂತ್ರಿಸುತ್ತದೆ. ನೀವು ಅನಿಯಮಿತ ಮುಟ್ಟು, ಹಠಾತ್ ತೂಕ ಹೆಚ್ಚಾಗುವುದನ್ನು ಎದುರಿಸುತ್ತಿದ್ದರೆ, ಇದು ದೇಹದಲ್ಲಿನ ಈಸ್ಟ್ರೊಜೆನ್ ಮಟ್ಟದಲ್ಲಿನ ಕುಸಿತದ ಕಾರಣದಿಂದಾಗಿರಬಹುದು. ಹಾಗಾಗಿ ದೇಹದಲ್ಲಿ ಹಾರ್ಮೋನ್ ಸಮತೋಲನವನ್ನು ಕಾಪಾಡಿಕೊಳ್ಳುವುದು ಬಹಳ ಅವಶ್ಯಕವಾಗಿದೆ ಏಕೆಂದರೆ ಇದು ದೇಹದ ಅಂಗಗಳ ಸಂಪೂರ್ಣ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ.
ನಮಗೆ ಈಸ್ಟ್ರೊಜೆನ್ ಏಕೆ ಬೇಕು?
ಈಸ್ಟ್ರೊಜೆನ್ ದೇಹದಲ್ಲಿ ನೈಸರ್ಗಿಕವಾಗಿ ಉತ್ಪತ್ತಿಯಾಗುವ ಹಾರ್ಮೋನು ಆಗಿದೆ. ಮತ್ತು ಮಹಿಳೆಯರಲ್ಲಿ ಸಂತಾನೋತ್ಪತ್ತಿ ಬೆಳವಣಿಗೆಗೆ ಇದು ಪ್ರಾಥಮಿಕ ಹಾರ್ಮೋನು ಆಗಿದೆ. ಅಲ್ಲದೆ ಇದು ಹಾನಿಗೊಳಗಾದ ಮೆದುಳನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಮೂಳೆ ಸಾಂದ್ರತೆಯನ್ನು ಹೆಚ್ಚಿಸುತ್ತದೆ. ಮನಸ್ಥಿತಿಯನ್ನು ಸಮತೋಲನದಲ್ಲಿಡುತ್ತದೆ. ಮತ್ತು ಕೊಲೆಸ್ಟ್ರಾಲ್ ನ್ನು ನಿಯಂತ್ರಿಸಿ ಆರೋಗ್ಯಕರ ಹೃದಯವನ್ನು ಉತ್ತೇಜಿಸುತ್ತದೆ.
ಇದನ್ನೂ ಓದಿ:Health Tips: ಮೂಳೆ ಮುರಿತ ವೇಗವಾಗಿ ಗುಣಪಡಿಸಲು ಏನು ಮಾಡಬೇಕು? ಇಲ್ಲಿದೆ ಸಲಹೆ
ನೈಸರ್ಗಿಕವಾಗಿ ಈಸ್ಟ್ರೊಜೆನ್ ಮಟ್ಟವನ್ನು ಹೆಚ್ಚಿಸುವ 5 ಆಹಾರಗಳು ಇಲ್ಲಿವೆ:
ಅಗಸೆಬೀಜಗಳು: ದೇಹದಲ್ಲಿನ ಈಸ್ಟ್ರೊಜೆನ್ ಮಟ್ಟವನ್ನು ಹೆಚ್ಚಿಸಲು ಅಗಸೆ ಬೀಜಗಳು ಅತ್ಯುತ್ತಮ ಮತ್ತು ನೈಸರ್ಗಿಕ ಮೂಲಗಳಲ್ಲಿ ಒಂದಾಗಿದೆ. ಈ ಬೀಜಗಳು ಲಿಗ್ನಾನ್ ಅಂಶಗಳಿಂದ ಸಮೃದ್ಧವಾಗಿದೆ. ಇದು ಈಸ್ಟ್ರೊಜೆನ್ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುವ ಒಂದು ರೀತಿಯ ಫೈಟೊಸ್ಟ್ರೊಜೆನ್ ಆಗಿದೆ. ಋತುಬಂಧಕ್ಕೊಳಗಾದ ಮಹಿಳೆಯರು ಅಗಸೆಬೀಜಗಲನ್ನು ಪ್ರತಿನಿತ್ಯ ಸೇವಿಸುವುದರಿಂದ ಸ್ತನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಹಲವಾರು ಅಧ್ಯಯನಗಳು ತೊರಿಸಿವೆ.
ಸೋಯಾ: ಸೋಯಾ ಉತ್ಪನ್ನಗಳು ಐಸೊಫ್ಲಾವೊನ್ಸ್ ಎಂಬ ಸಂಯುಕ್ತಗಳನದ್ನು ಒಳಗೊಂಡಿರುತ್ತವೆ. ಇದು ಈಸ್ಟ್ರೊಜೆನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುವ ಒಂದು ರೀತಿಯ ಫೈಟೊಈಸ್ಟ್ರೊಜೆನ್ ಆಗಿದೆ. ಸೋಯಾ ಜೀವಸತ್ವಗಳು ಮತ್ತು ಖನಿಜಗಳ ಉತ್ತಮ ಮೂಲವಾಗಿದೆ. ಇದು ಪ್ರಾಸ್ಟೇಟ್ ಮತ್ತು ಸ್ತನ ಕ್ಯಾನ್ಸರ್ ಅಪಾಯವನ್ನು ತಡೆಯುತ್ತದೆ. ಸೋಯಾವನ್ನು ತೋಫು ರೂಪದಲ್ಲಿ ಉತ್ತಮವಾಗಿ ಸೇವಿಸಲಾಗುತ್ತದೆ.
ಒಣ ಹಣ್ಣುಗಳು: ಒಂದು ಮುಷ್ಟಿಯಷ್ಟು ಪೋಷಕಾಂಶಗಳಿಂದ ಕೂಡಿದ ಒಣಹಣ್ಣುಗಳನ್ನು ತಿನ್ನುವುದರಿಂದ ನಿಮಗೆ ಹಲವಾರು ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ. ಇವುಗಳು ಫೈಟೊಈಸ್ಟ್ರೊಜೆನ್ಗಳ ಪ್ರಬಲ ಮೂಲವಾಗಿದ್ದು, ಇದು ಹಾರ್ಮೋನುಗಳನ್ನು ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಖರ್ಜೂರ, ಒಣದ್ರಾಕ್ಷಿ ಮತ್ತು ಒಣ ಏಪ್ರಿಕಾಟ್ ಗಳು ಫೈಟೊಈಸ್ಟ್ರೊಜೆನ್ ಗಳಲ್ಲಿ ಹೇರಳವಾಗಿದೆ.
ಎಳ್ಳು ಬೀಜಗಳು: ಅಗಸೆ ಬೀಜಗಳಂತೆ, ಎಳ್ಳು ಬೀಜಗಳು ಸಹ ಈಸ್ಟ್ರೊಜೆನ್ ಮಟ್ಟವನ್ನು ಉತ್ತೇಜಿಸುವ ಆಹಾರಗಳ ವರ್ಗಕ್ಕೆ ಸೇರಿವೆ. ಎಳ್ಳು ಬೀಜದ ಪುಡಿಯನ್ನು ಪ್ರತಿದಿನ ಸೇವಿಸುವುದರಿಂದ ಈಸ್ಟ್ರೊಜೆನ್ ಮಟ್ಟವನ್ನು ಹೆಚ್ಚಿಸಬಹುದು ಮತ್ತು ರಕ್ತದ ಕೊಲೆಸ್ಟ್ರಾಲ್ ನ್ನು ನಿಯಂತ್ರಿಸಬಹುದು. ಎಳ್ಳಿನ ಪುಡಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಋತುಬಂಧಕ್ಕೊಳಗಾದ ಮಹಿಳೆಯರಲ್ಲಿ ಈಸ್ಟ್ರೊಜೆನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಲಿಪಿಡ್ ಪ್ರೊಫೈಲ್ ಗಳನ್ನು ಸಹ ನಿರ್ವಹಿಸುತ್ತದೆ.
ಮಹಿಳೆಯರಲ್ಲಿ ಈಸ್ಟ್ರೊಜೆನ್ ಮಟ್ಟವನ್ನು ಹೆಚ್ಚಿಸುವಲ್ಲಿ ಬೆಳ್ಳುಳ್ಳಿಯು ಸಹಕಾರಿಯಾಗಿದೆ. ಜೊತೆಗೆ ಇದು ಹಲವಾರು ಸಂಭಾವ್ಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಅಲ್ಲದೆ ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾ ಮತ್ತು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುವುದರಿಂದ ಹೃದಯದ ಸ್ಥಿತಿಯನ್ನು ಆರೋಗ್ಯವಾಗಿಡುತ್ತದೆ.
ಬೀಜಗಳು: ಕಡಲೆಕಾಯಿ, ವಾಲ್ ನಟ್, ಗೋಡಂಬಿ, ಬಾದಾಮಿ ಮತ್ತು ಪಿಸ್ತಾಗಳಂತಹ ಬೀಜಗಳು ದೇಹದಲ್ಲಿ ಈಸ್ಟ್ರೊಜೆನ್ ಮಟ್ಟವನ್ನು ಹೆಚ್ಚಿಸುವ ಅತ್ಯಂತ ಪರಿಣಾಮಕಾರಿ ಆಹಾರಗಳಲ್ಲಿ ಒಂದಾಗಿದೆ. ಅವು ಹಲವಾರು ಜೀವಸತ್ವಗಳು ಮತ್ತು ಖನಿಜಗಳ ಸಮೃದ್ಧ ಮೂಲವಾಗಿದೆ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ