ಮೊಡವೆ ಬಗ್ಗೆ ನಿರ್ಲಕ್ಷ ಮಾಡಬೇಡಿ, ಇದು ಕ್ಯಾನ್ಸರ್ ಲಕ್ಷಣವಾಗಿರಬಹುದು?

ಮೊಡವೆ ಎಂದು ನಿರ್ಲಕ್ಷ ಮಾಡದೆ ತುಂಬಾ ದಿನಗಳವರೆಗೆ ಮುಖದಲ್ಲಿ ಕಂಡು ಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ. ಕೆಲವೊಮ್ಮೆ ಇದು ಚರ್ಮದ ಕ್ಯಾನ್ಸರ್ ಆಗಬಹುದು! ಈ ರೀತಿಯ ನೈಜ ಪ್ರಕರಣ ಬೆಳಕಿಗೆ ಬಂದಿದ್ದು ಅವರು ತಾವು ಅನುಭವಿಸಿದ ನೋವಿನ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಮೊಡವೆ ಬಗ್ಗೆ ನಿರ್ಲಕ್ಷ ಮಾಡಬೇಡಿ, ಇದು ಕ್ಯಾನ್ಸರ್ ಲಕ್ಷಣವಾಗಿರಬಹುದು?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: May 10, 2023 | 9:59 AM

ಕೆಲವರಿಗೆ ಮೊಡವೆ ಒಡೆಯುವ ಅಭ್ಯಾಸವಿರುತ್ತದೆ. ಒಂದು ಚಿಕ್ಕ ಗುಳ್ಳೆ ಮುಖದ ಮೇಲೆ ಕಾಣಿಸಿಕೊಂಡರೆ ತಕ್ಷಣ ಅದನ್ನು ಗಟ್ಟಿಯಾಗಿ ಹಿಸುಕಿ ರಕ್ತ ಬರುವಷ್ಟು ಅದನ್ನು ನೋವು ಮಾಡಿ ಮೊಡವೆಯಿಂದ ಮುಕ್ತಿ ದೊರೆಯಿತು ಎನ್ನುವಂತೆ ಖುಷಿ ಪಡುತ್ತಾರೆ. ಕೆಲವರಿಗೆ ಇದು ಸಾಮಾನ್ಯ. ಆದರೆ ಇದರಿಂದ ಎಷ್ಟು ಅಪಾಯವಿದೆ ಎಂಬುದರ ಬಗ್ಗೆ ನಿಮಗೆ ತಿಳಿದಿದೆಯಾ? 52 ವರ್ಷದ ಮಿಚೆಲ್ ಡೇವಿಸ್ ಎನ್ನುವವರು ಇದರಿಂದ ಯಾವ ರೀತಿಯ ಸಮಸ್ಯೆಯಾಗುತ್ತದೆ ಎಂಬುದನ್ನು ಹಂಚಿಕೊಂಡಿದ್ದು ಇದು ಎಲ್ಲರಿಗೂ ಪಾಠವಾಗಲಿದೆ. ಅವರು ತನ್ನ ಮೂಗಿನ ಮೇಲೆ ನಿರುಪದ್ರವಿ ಎಂದು ತೋರುವ ಮೊಡವೆ ನಿಜವಾಗಿಯೂ ಚರ್ಮದ ಕ್ಯಾನ್ಸರ್ ಎಂದು ತಿಳಿದ ಬಳಿಕ ಆಘಾತಕ್ಕೊಳಗಾಗಿದ್ದರು. ನ್ಯೂಜಿಲೆಂಡ್ನ ಒರೆವಾದ ಖಾತೆ ವ್ಯವಸ್ಥಾಪಕರಾದ ಮಿಚೆಲ್ ಡೇವಿಸ್ ತಮ್ಮ ಮುಖದಲ್ಲಾದ ಕೆಂಪು ಮೊಡವೆಯನ್ನು ಮೊದಲು ಗಮನಿಸಿದರು ಮಾಮೂಲಿ ಗುಳ್ಳೆ ಎಂದು ದಿನವೂ ಕನ್ಸೀಲರ್ನಿಂದ ಮುಚ್ಚುತ್ತಿದ್ದಳು. ಆಕೆ ಹೇಳಿದ ಪ್ರಕಾರ “ಇದು ನಿಜವಾಗಿಯೂ ಕಷ್ಟಕರವಾಗಿತ್ತು. ಚರ್ಮದ ಕೆಳಗೆ ಜ್ವಾಲಾಮುಖಿಯಂತೆ ನನನಗೆ ಭಾಸವಾಗುತ್ತಿತ್ತು. ನಾನು ನನ್ನ ಗೆಳತಿಯೊಂದಿಗೆ ಹೊರಗಡೆ ಹೋದಾಗ ಆಕೆ ಅದನ್ನು ಗಮನಿಸಿ ಅದು ನೇರಳೆ ಬಣ್ಣಕ್ಕೆ ತಿರುಗಿದೆ ಎಂದಳು ನಾನು ಆಗಲೂ ಅವಳಿಗೆ ಇದು ಕೇವಲ ಮೊಡವೆ ಎಂದು ಹೇಳಿದ್ದೆ” ಎಂದು ವರದಿಯಲ್ಲಿ ತಿಳಿಸಿದ್ದಾರೆ.

ಏಪ್ರಿಲ್ 2022ರಿಂದ ಜನವರಿ 2023ರ ವೇಳೆಗೆ ಈ ಮೊಡವೆ ಇದ್ದ ಭಾಗವು ಅತಿಯಾಗಿ ನೋವುಂಟು ಮಾಡುತ್ತಿತ್ತು ಎಂದು ಅವ್ರು ಹೇಳಿದ್ದಾರೆ. ಆಗಲು ಡೇವಿಸ್ ಆ ಜಾಗವನ್ನು ಹಿಸುಕಲು ಪ್ರಯತ್ನಿಸಿದ್ದರಂತೆ. ನಂತರ ರಕ್ತಸ್ರಾವವಾದ ಮೇಲೆ ಅದು ಸಾಮಾನ್ಯವಲ್ಲ ಎಂಬುದು ಅವರ ಅರಿವಿಗೆ ಬಂದು, ವೈದ್ಯರ ಸಲಹೆ ಪಡೆದಿದ್ದಾರೆ. ಇದು ಕ್ಯಾನ್ಸರ್ ಎಂದು ವೈದ್ಯರು ಹೇಳಿದ್ದಾರೆ. ಬಯಾಪ್ಸಿಯು ಅವಳಿಗೆ ಬೇಸಲ್ ಸೆಲ್ ಕಾರ್ಸಿನೋಮಾ ಇದೆ ಎಂದು ದೃಢಪಡಿಸಿತು. ಇದು ಮೆಲನೋಮಾ ಅಲ್ಲದ ಚರ್ಮದ ಕ್ಯಾನ್ಸರ್ನ ಸಾಮಾನ್ಯ ರೂಪವಾಗಿದೆ. ಬೇಸಲ್ ಸೆಲ್ ಕಾರ್ಸಿನೋಮದ ಬಗ್ಗೆ ಅವರು ಎಂದೂ ಕೇಳಿರಲಿಲ್ಲ ಎಂದಿದ್ದಾರೆ. ಕ್ಯಾನ್ಸರ್ ಅನ್ನು ತಡೆಯಲು ಮಿಚೆಲ್ ಈ ವರ್ಷದ ಏಪ್ರಿಲ್ ನಲ್ಲಿ ಮೂಗಿನ ಫ್ಲಾಪ್ ಪುನರ್ನಿರ್ಮಾಣಕ್ಕೆ ಒಳಗಾಗಿದ್ದರು ಎಂದು ವರದಿಗಳು ತಿಳಿಸಿವೆ.

ನನ್ನ ಮೂಗನ್ನು ಕತ್ತರಿಸಲಾಯಿತು. ನಂತರ ಅವರು ಈ ನಿರುಪದ್ರವಿ ಎಂದು ತೋರುವ ಈ ರೋಗಲಕ್ಷಣದ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ. ಈ ಬಗ್ಗೆ ತಡವಾಗಿ ತಿಳಿಯುವ ಬದಲು ಮೊದಲೇ ಅದರ ಬಗ್ಗೆ ಎಚ್ಚರಿಕೆ ವಹಿಸಿದರೆ ಒಳ್ಳೆಯದು. ನಾನು ಈ ಮೊಡವೆಯನ್ನು ನಿರ್ಲಕ್ಷಿಸುವುದರಿಂದ ಇದು ದೊಡ್ಡದಾಗಿದೆ.

ಇದನ್ನೂ ಓದಿ: ಯಕೃತ್ತಿನ ಆರೋಗ್ಯಕ್ಕಾಗಿ ಆಹಾರದ ಸಲಹೆಗಳು, ಜೀವನಶೈಲಿಯ ಬದಲಾವಣೆಗಳು ಹೀಗೆ ಮಾಡಿಕೊಳ್ಳಿ

ಈ ರೀತಿಯ ಚರ್ಮದ ಕ್ಯಾನ್ಸರ್ ಸಾಮಾನ್ಯ ಲಕ್ಷಣವೆಂದರೆ ಚರ್ಮದ ಮೇಲೆ ಉಂಡೆ ಅಥವಾ ಬಣ್ಣ ಬಣ್ಣದ ತೇಪೆ ಉಂಟಾಗುವುದು. ಇದು ಕೆಲವು ವಾರಗಳ ನಂತರವೂ ನಿಮ್ಮ ಮುಖದಲ್ಲಿರುತ್ತವೆ. ಮೊಡವೆಗಳಾದರೆ ಕೆಲವು ದಿನಗಳ ಬಳಿಕ ಮಾಯವಾಗುತ್ತದೆ. ಆದರೆ ಚರ್ಮದ ಕ್ಯಾನ್ಸರ್ ತಿಂಗಳುಗಳು ಅಥವಾ ಕೆಲವೊಮ್ಮೆ ವರ್ಷಗಳ ಬಳಿಕವೂ ನಿಧಾನವಾಗಿ ಮುಂದುವರಿಯುತ್ತದೆ. ಎನ್ಎಚ್ಎಸ್ ಯುಕೆ ಪ್ರಕಾರ, ಹೆಚ್ಚಿನ ಸಂದರ್ಭಗಳಲ್ಲಿ, ಕ್ಯಾನ್ಸರ್ ಉಂಡೆಗಳು ಕೆಂಪಾಗಿದ್ದು, ಕೆಲವೊಮ್ಮೆ ಹುಣ್ಣುಗಳಾಗಿ ಬದಲಾಗುತ್ತವೆ. ಯಾವುದೇ ಅನುಮಾನಾಸ್ಪದ ಮೊಡವೆಯಾಕೃತಿಯ ಚರ್ಮದ ಅಸಹಜತೆಯನ್ನು ನೀವು ಗಮನಿಸಿದರೆ ನಿಮ್ಮ ವೈದ್ಯರನ್ನು ತಕ್ಷಣವೇ ಸಂಪರ್ಕಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್