AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆಗಾಲದಲ್ಲಿ ಕಾಲ್ಬೆರಳುಗಳ ನಡುವೆ ಉಂಟಾಗುವ ಸೋಂಕು ನಿವಾರಣೆಗೆ ಸಲಹೆ ಇಲ್ಲಿದೆ

ಮಳೆಗಾಲ ಪ್ರಾರಂಭವಾಯಿತೆಂದರೆ ಸಾಕು, ಬಹುತೇಕರಲ್ಲಿ ಕಾಲ್ಬೆರಳುಗಳ ನಡುವೆ ತುರಿಕೆ ನೋವು ಕಾಣಿಸಿಕೊಳ್ಳುತ್ತದೆ.

ಮಳೆಗಾಲದಲ್ಲಿ ಕಾಲ್ಬೆರಳುಗಳ ನಡುವೆ ಉಂಟಾಗುವ ಸೋಂಕು ನಿವಾರಣೆಗೆ ಸಲಹೆ ಇಲ್ಲಿದೆ
Fungal infectionsImage Credit source: MedlinePlus
Follow us
ಅಕ್ಷತಾ ವರ್ಕಾಡಿ
|

Updated on: Jul 18, 2023 | 6:39 PM

ಮಳೆಗಾಲ ಪ್ರಾರಂಭವಾಯಿತೆಂದರೆ ಸಾಕು, ಬಹುತೇಕರಲ್ಲಿ ಕಾಲ್ಬೆರಳುಗಳ ನಡುವೆ ತುರಿಕೆ ನೋವು ಕಾಣಿಸಿಕೊಳ್ಳುತ್ತದೆ. ಇದನ್ನು ಶಿಲೀಂಧ್ರಗಳ ಸೋಂಕುಗಳು ಎಂದು ಕರೆಯುತ್ತಾರೆ. ಇದನ್ನು ನಿರ್ಲಕ್ಷ್ಯಿಸುತ್ತಾ ಹೋದ ಹಾಗೆ ಸಮಸ್ಯೆ ಹೆಚ್ಚಾಗುತ್ತಾ ಹೋಗಬಹುದು. ತುರಿಕೆ, ದದ್ದು, ಕಜ್ಜಿ, ಕೆಂಪು ಮತ್ತು ತುರಿಕೆ ದದ್ದುಗಳು ಉಂಗುರದ ಆಕಾರದಲ್ಲಿ ಕಂಡುಬರುತ್ತದೆ. ಇದು ಕೇವಲ ಕಾಲ್ಬೆರಳುಗಳಲ್ಲಿ ಮಾತ್ರವಲ್ಲ, ದೇಹದ ಇತರ ಭಾಗಗಳಲ್ಲಿಯೂ ಕಂಡುಬರುತ್ತದೆ.

ಇಂತಹ ಸೋಂಕುಗಳನ್ನು ಸಾಮಾನ್ಯವಾಗಿ ಡರ್ಮಟೊಫೈಟೋಸಿಸ್ ಎಂದು ಕರೆಯಲಾಗುತ್ತದೆ. ಕೆರಾಟಿನ್ ಬೆಳೆಯಲು ಅಗತ್ಯವಿರುವ ಶಿಲೀಂಧ್ರಗಳ ಗುಂಪಾಗಿರುವ ಡರ್ಮಟೊಫೈಟ್‌ಗಳು ವ್ಯಕ್ತಿಯ ಕೂದಲು, ಚರ್ಮ ಅಥವಾ ಉಗುರುಗಳ ಮೇಲೆ ಪರಿಣಾಮ ಬೀರಿದಾಗ ಇದು ಸಂಭವಿಸುತ್ತದೆ. ಇದು ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆಯೂ ಹೆಚ್ಚಿದೆ. ವ್ಯಕ್ತಿಯಿಂದ ವ್ಯಕ್ತಿಗೆ ಸಂಪರ್ಕ, ಒಂದೇ ಟವೆಲ್​​ ಬಳಕೆ, ಬಾಚಣಿಗೆ, ಸಾರ್ವಜನಿಕ ಪೂಲ್‌ಗಳಲ್ಲಿ ಸ್ನಾನದಿಂದಾಗಿ ಹರಡುವ ಸಾಧ್ಯತೆ ಹೆಚ್ಚಿದೆ.

ಇದನ್ನೂ ಓದಿ: ಮನೆಯವರೆಲ್ಲರೂ ಒಂದೇ ಸೋಪ್​​​ ಬಳಸುವುದು ಎಷ್ಟು ಸುರಕ್ಷಿತ? ತಜ್ಞರು ಹೇಳುವುದೇನು?

ಶಿಲೀಂಧ್ರಗಳ ಸೋಂಕಿಗೆ ಕಾರಣಗಳು:

ಮಳೆಗಾಲದಲ್ಲಿ ನೀರಿನಾಂಶಗಳು ಹೆಚ್ಚಾಗಿರುವುದರಿಂದ ತೇವಾಂಶವು ಶಿಲೀಂಧ್ರಗಳು ಮತ್ತು ಬ್ಯಾಕ್ಟೀರಿಯಾಗಳು ಅಭಿವೃದ್ಧಿ ಹೊಂದಲು ಸಂತಾನೋತ್ಪತ್ತಿಯ ನೆಲವನ್ನು ಸೃಷ್ಟಿಸುತ್ತದೆ . ಕಳಪೆ ನೈರ್ಮಲ್ಯ ಮತ್ತು ಕಿಕ್ಕಿರಿದ ಪ್ರದೇಶಗಳು ಮತ್ತಷ್ಟು ಹರಡುವಿಕೆಗೆ ಕಾರಣವಾಗಬಹುದು. ಮಳೆಗಾಲದಲ್ಲಿ ಈ ಶಿಲೀಂಧ್ರ ಸೋಂಕುಗಳು ಹೆಚ್ಚು ಪ್ರಚಲಿತದಲ್ಲಿದ್ದರೂ, ಕಳಪೆ ಶುಚಿತ್ವ, ಆರ್ದ್ರ ವಾತಾವರಣ ಮತ್ತು ಇಕ್ಕಟ್ಟಾದ ವಾಸಸ್ಥಳಗಳು ಶಿಲೀಂಧ್ರಗಳ ಸೋಂಕಿನ ಕೆಲವು ಕಾರಣಗಳಾಗಿವೆ. ಆದ್ದರಿಂದ ಪ್ರತೀ ಭಾರೀ ನೀವು ಹೊರಗಡೆ ಹೋಗಿ ಬಂದ ಮೇಲೆ ಬಿಸಿ ನೀರಿನಿಂದ ಕೈ ಕಾಲುಗಳನ್ನು ತೊಳೆಯಿರಿ ಎಂದು ತಜ್ಞರು ಸಲಹೆ ನೀಡುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಐದು ವರ್ಷದಿಂದ ಸಿಎಂರನ್ನು ಟಾರ್ಗೆಟ್ ಮಾಡಿರುವ ಜೇಲ್ ವಾಚರ್: ಕಾಂಗ್ರೆಸ್
ಕೇದಾರನಾಥದಲ್ಲಿ ಯುವಕರ ಹಾಡು, ಡ್ಯಾನ್ಸ್; ಯುವಕರ ವಿರುದ್ಧ ಕೇಸ್ ದಾಖಲು
ಕೇದಾರನಾಥದಲ್ಲಿ ಯುವಕರ ಹಾಡು, ಡ್ಯಾನ್ಸ್; ಯುವಕರ ವಿರುದ್ಧ ಕೇಸ್ ದಾಖಲು
800 ಕಿ.ಮೀ. ನಾಶ; ಇದು ಭಾರತದ ಮಿಲಿಟರಿಯ ಬ್ರಹ್ಮೋಸ್ ಕ್ಷಿಪಣಿಯ ತಾಕತ್ತು
800 ಕಿ.ಮೀ. ನಾಶ; ಇದು ಭಾರತದ ಮಿಲಿಟರಿಯ ಬ್ರಹ್ಮೋಸ್ ಕ್ಷಿಪಣಿಯ ತಾಕತ್ತು