Omicron in India ಹೊಸ ಕೊವಿಡ್-19 ರೂಪಾಂತರಿ ಆತಂಕ; ಆರೋಗ್ಯದ ಕಾಳಜಿಗೆ ಇಲ್ಲಿದೆ ತಜ್ಞರ ಸಲಹೆ

| Updated By: ರಶ್ಮಿ ಕಲ್ಲಕಟ್ಟ

Updated on: Dec 03, 2021 | 7:59 PM

ನಕಾರಾತ್ಮಕ ಆಲೋಚನೆಗಳು, ಆತಂಕ ಮತ್ತು ಇತರ ಮಾನಸಿಕ ಆರೋಗ್ಯ ಕಾಳಜಿಗಳನ್ನು ದೂರವಿರಿಸಲು ಮಾನಸಿಕ ಆರೋಗ್ಯದ ಕಡೆಗೆ ಗಮನ ಹರಿಸಬೇಕು. "ಕೆಲಸ, ಮನರಂಜನೆ, ಹವ್ಯಾಸಗಳೊಂದಿಗೆ ತನ್ನನ್ನು ತಾನು ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳುವುದು ಮುಖ್ಯವಾಗಿದೆ.

Omicron in India ಹೊಸ ಕೊವಿಡ್-19 ರೂಪಾಂತರಿ ಆತಂಕ; ಆರೋಗ್ಯದ ಕಾಳಜಿಗೆ ಇಲ್ಲಿದೆ ತಜ್ಞರ ಸಲಹೆ
ಪ್ರಾತಿನಿಧಿಕ ಚಿತ್ರ
Follow us on

ಡೆಲ್ಟಾ ರೂಪಾಂತರದಿಂದ ಪ್ರಚೋದಿತವಾದ ಕೊವಿಡ್ -19ರ  (Covid-19) ಎರಡನೇ ಅಲೆ ಕಡಿಮೆಯಾಗಲು ಪ್ರಾರಂಭಿಸಿದಾಗ ಬಹುಶಃ,ಇದು ಸಾಂಕ್ರಾಮಿಕ ರೋಗದಿಂದಾಗಿ ಉಂಟಾದ ದೀರ್ಘಕಾಲದ ಅನಿಶ್ಚಿತತೆ ಮತ್ತು ಆತಂಕದ ಅವಧಿಯ ಅಂತ್ಯ ಎಂದು ಎಲ್ಲರೂ ನಂಬಿದ್ದರು. ಶಾಲೆಗಳು, ಕಾಲೇಜುಗಳು ಮತ್ತು ಕಚೇರಿಗಳು ಕ್ರಮೇಣ ಆಫ್‌ಲೈನ್‌ನಲ್ಲಿ ಪುನರಾರಂಭಗೊಂಡವು. ಜನರು ಹಿಂದಿನಂತೆ ಸಹಜ ದಿನಚರಿಗೆ ಮರಳಿದ್ದರು. ಆದಾಗ್ಯೂ, ಹೊಸ ಕೊವಿಡ್ ರೂಪಾಂತರಿ ಒಮಿಕ್ರಾನ್ (Omicron) ಹೊರಹೊಮ್ಮುವಿಕೆಯೊಂದಿಗೆ ಮತ್ತೊಮ್ಮೆ ಭವಿಷ್ಯದ ಬಗ್ಗೆ ಆತಂಕ ಮತ್ತು ಭಯವಿದೆ. ನಿನ್ನೆ ಕರ್ನಾಟಕದಲ್ಲಿ ಎರಡು ಒಮಿಕ್ರಾನ್ ಪ್ರಕರಣಗಳನ್ನು ವರದಿ ಆಗಿದ್ದು ಇದು ಈಗಾಗಲೇ ಅಸ್ತಿತ್ವದಲ್ಲಿರುವ ಭೀತಿ ಮತ್ತು ಸಂಕಟವನ್ನು ಹೆಚ್ಚಿಸಿದೆ. “ಆರ್ಥಿಕತೆಯಲ್ಲಿ ಭಾರಿ ನಷ್ಟಗಳು, ಶಿಕ್ಷಣದ ಮಾದರಿಗಳಲ್ಲಿನ ಅಡಚಣೆ, ಜನರು ಸಹಜ ಸ್ಥಿತಿಗೆ ಮರಳಲು ಪ್ರಯತ್ನಿಸುತ್ತಿರುವಾಗ ವೈದ್ಯಕೀಯ ತುರ್ತುಸ್ಥಿತಿಗಳ ನಿರ್ಲಕ್ಷ್ಯ, ಒಮಿಕ್ರಾನ್ ರೂಪಾಂತರದ ಆಕ್ರಮಣವು ಜನರಲ್ಲಿ ಆತಂಕ ಮತ್ತು ಭಯವನ್ನು ಉಂಟುಮಾಡಬಹುದು. ಪ್ರಸ್ತುತ ಮತ್ತು ಭವಿಷ್ಯದ ಬಗ್ಗೆ ಅನಿಶ್ಚಿತತೆಯು ಒಬ್ಬರ ನಿಭಾಯಿಸುವ ಕಾರ್ಯವಿಧಾನಗಳ ಮೇಲೆ ಪರಿಣಾಮ ಬೀರಬಹುದು, ಎಂದು ನವದೆಹಲಿಯ ಧರ್ಮಶಿಲಾ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಮಾಲೋಚನೆ ಮನಶ್ಶಾಸ್ತ್ರಜ್ಞರಾದ ಡಾ ನೇಹಾ ದತ್ ಹೇಳುತ್ತಾರೆ.

ಹೊಸ ರೂಪಾಂತರದ ಈ ಹಠಾತ್ ಹೊರಹೊಮ್ಮುವಿಕೆಯು ಭಯದಿಂದ ಅನಿಶ್ಚಿತತೆಯವರೆಗೆ ಮಿಶ್ರ ಭಾವನೆಗಳನ್ನು ಹುಟ್ಟುಹಾಕುತ್ತದೆ. “ಪರಿಸ್ಥಿತಿ ಅಥವಾ ಸುತ್ತಮುತ್ತಲಿನ ಯಾವುದೇ ಹೊಸ ಅನಿರೀಕ್ಷಿತ ರೂಪಾಂತರವು ಕೆಲವು ಅಸ್ವಸ್ಥತೆಯನ್ನು ತರುತ್ತದೆ ಮತ್ತು ನಮ್ಮ ನಡವಳಿಕೆಯ ಮಾದರಿಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಹೆಚ್ಚಿದ ಒತ್ತಡ, ಕಿರಿಕಿರಿ, ಮಾದಕ ದ್ರವ್ಯ ಸೇವನೆ, ಆತಂಕದ ಸಮಸ್ಯೆಗಳು, ತೊಂದರೆಗೊಳಗಾದ ನಿದ್ರೆಯ ಮಾದರಿಗಳು ಇತ್ಯಾದಿಗಳನ್ನು ಪ್ರತಿಬಿಂಬಿಸುತ್ತದೆ ”ಎಂದು ಗುರುಗ್ರಾಮ್ ನಲ್ಲಿರುವ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮನೋವೈದ್ಯ ಡಾ ರಾಹುಲ್ ರೈ ಕಕ್ಕರ್ ಹೇಳಿದ್ದಾರೆ.

ಆದ್ದರಿಂದ ನಕಾರಾತ್ಮಕ ಆಲೋಚನೆಗಳು, ಆತಂಕ ಮತ್ತು ಇತರ ಮಾನಸಿಕ ಆರೋಗ್ಯ ಕಾಳಜಿಗಳನ್ನು ದೂರವಿರಿಸಲು ಮಾನಸಿಕ ಆರೋಗ್ಯದ ಕಡೆಗೆ ಗಮನ ಹರಿಸಬೇಕು. “ಕೆಲಸ, ಮನರಂಜನೆ, ಹವ್ಯಾಸಗಳೊಂದಿಗೆ ತನ್ನನ್ನು ತಾನು ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳುವುದು ಮುಖ್ಯವಾಗಿದೆ. ಅದೇ ಸಮಯದಲ್ಲಿ ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ಕಾಳಜಿ ವಹಿಸಿ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಬೇಕಾದುದುದ ಮುಖ್ಯವಾಗಿದೆ” ಎಂದು ಡಾ ದತ್ ಹೇಳುತ್ತಾರೆ.

ಒಮಿಕ್ರಾನ್ ರೂಪಾಂತರಿಗೆ ಸಂಬಂಧಿಸಿದ ಎಲ್ಲಾ ಬೆಳವಣಿಗೆಗಳಿಂದ ನೀವು ಆತಂಕಗೊಂಡಿದ್ದರೆ, ಡಾ ಕಕ್ಕರ್ ಅವರು ಸೂಚಿಸಿದಂತೆ ಈ ಸಲಹೆಗಳನ್ನು ಅನುಸರಿಸಿ.

ನಿಯಂತ್ರಿತ ನಿದ್ದೆ
* ಮಲಗಲು ಮತ್ತು ಏಳಲು ನಿಗದಿತ ಸಮಯ ಕಾಪಾಡಿಕೊಳ್ಳಿ
* ಹಗಲಿನ ನಿದ್ರೆಯನ್ನು ತಪ್ಪಿಸಿ.
* ಸಂಜೆ 5 ಗಂಟೆಯ ನಂತರ ಕಾಫಿ ಸೇವನೆ ಬೇಡ
* ಮಲಗಿದ ನಂತರ ಫೋನ್‌ ಬಳಕೆ ನಿಲ್ಲಿಸಿ.
* ರಾತ್ರಿ ಭಾರವಾದ ಆಹಾರವನ್ನು ಸೇವಿಸಬೇಡಿ.
* ಮಲಗುವ ಮುನ್ನ ನೀರು ಕುಡಿಯಬೇಡಿ.

ಸಮಯ ನಿರ್ವಹಣೆ
* ಸ್ಮಾರ್ಟ್ ಗುರಿಗಳನ್ನು ಹೊಂದಿಸಿ.
* ಮಾಡಬೇಕಾದ ಕಾರ್ಯಗಳ ಪಟ್ಟಿಯನ್ನು ಮಾಡಿ
* ಡೆಡ್ ಲೈನ್ ಸೆಟ್ ಮಾಡಿಕೊಳ್ಳಿ
* ನಿಮ್ಮ ಕಾರ್ಯಗಳಿಗೆ ಆದ್ಯತೆ ನೀಡಿ.
* ನಿಯಂತ್ರಿತ ವಿರಾಮಗಳನ್ನು ತೆಗೆದುಕೊಳ್ಳಿ.
* ಅಸ್ತವ್ಯಸ್ತತೆಯನ್ನು ನಿವಾರಿಸುವ ದಿನಚರಿಯನ್ನು ಅಭ್ಯಾಸ ಮಾಡಿ.

ನೀವೇ ಮನಸ್ಸು ಹಗುರವಾಗಿಸಿಕೊಳ್ಳಿ
ನಿಮಗೆ ಅಶಾಂತಿಯನ್ನು ಉಂಟುಮಾಡುವದನ್ನು ನಿಕಟ ಮತ್ತು ವಿಶ್ವಾಸಾರ್ಹ ವ್ಯಕ್ತಿಯೊಂದಿಗೆ ಹಂಚಿಕೊಳ್ಳಿ. ಸಮಸ್ಯೆ ಹಂಚಿಕೊಂಡರೆ ಅರ್ಧ ಸಮಸ್ಯೆ ಪರಿಹಾರವಾದಂತೆ.

ಮನಸ್ಸನ್ನು ಬೇರೆಡೆಗೆ ತಿರುಗಿಸಿ

ನೀವು ತುಂಬಾ ಒತ್ತಡದಲ್ಲಿರುವಾಗ ನಿಮ್ಮ ಮನಸ್ಸನ್ನು ಬೇರೆಡೆಗೆ ತಿರುಗಿಸಿ. ಉದಾಹರಣೆಗೆ, 20 ರಿಂದ 10 ರವರೆಗೆ ಹಿಮ್ಮುಖ ಎಣಿಕೆ. ಹಾಗೆಯೇ, ನೀವು ಹೆಚ್ಚಿನ ಏಕಾಗ್ರತೆಯ ಕೆಲಸವನ್ನು ಮಾಡುತ್ತಿರುವಾಗ ನಿಮ್ಮ ಗೊಂದಲವನ್ನು ಕಡಿಮೆ ಮಾಡುವುದು ಹೇಗೆ ಎಂದು ಲೆಕ್ಕಾಚಾರ ಮಾಡಿ.

ದೈಹಿಕ ವ್ಯಾಯಾಮಗಳು
ವ್ಯಾಯಾಮವನ್ನು ದಿನನಿತ್ಯ ಅಭ್ಯಾಸ ಮಾಡಿದರೆ ನಮ್ಮ ದೇಹವು ಸ್ವಾಭಾವಿಕವಾಗಿ ಸಂತೋಷದ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ.

ಸುದ್ದಿ ನೋಡುವುದನ್ನು ಕಡಿಮೆ ಮಾಡಿ
ನಿಯಮಿತವಾಗಿ ಸುದ್ದಿಗಳನ್ನು ನೋಡಿ, ದಿನಕ್ಕೆ ಎರಡು ಬಾರಿ ಸುದ್ದಿಗಳನ್ನು ಗಮನಿಸಿದರೆ ಸಾಕು.
“ಕೆಲವೊಮ್ಮೆ, ನಿಮ್ಮ ಆಲೋಚನಾ ಪ್ರಕ್ರಿಯೆಯ ಕುಣಿಕೆಯಿಂದ ನಿಮ್ಮದೇ ಆದ ಮೇಲೆ ಹೊರಬರಲು ಕಷ್ಟವಾಗುತ್ತದೆ, ಆದ್ದರಿಂದ ವೃತ್ತಿಪರ ಸಹಾಯವನ್ನು ತೆಗೆದುಕೊಳ್ಳುವುದು ಸೂಕ್ತವಾಗಿದೆ. ಮಾನಸಿಕ ಆರೋಗ್ಯ ಸಮಸ್ಯೆಯ ಮೂಲಕ ಹೋಗುವುದು ದೌರ್ಬಲ್ಯದ ಸಂಕೇತವಲ್ಲ, ಸಹಾಯಕ್ಕಾಗಿ ಕೇಳಿ. ಇದು ಶಕ್ತಿಯ ಸಂಕೇತವಾಗಿದೆ, ”ತಜ್ಞರು ಸಲಹೆ ನೀಡುತ್ತಾರೆ.

ಇದನ್ನೂ ಓದಿ: Omicron: ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಒಮಿಕ್ರಾನ್ ವೈರಸ್ ಭೀತಿ; ವಿಶ್ವ ಆರೋಗ್ಯ ಸಂಸ್ಥೆಯಿಂದಲೂ ಎಚ್ಚರಿಕೆ