Growth Problems: ವಯಸ್ಸಿಗೆ ತಕ್ಕಂತೆ ಮಕ್ಕಳು ಬೆಳೆಯುತ್ತಿಲ್ಲವೇ, ಆಹಾರದಲ್ಲಿ ಈ ಸಣ್ಣ ಬದಲಾವಣೆ ಮಾಡಿ
ಕೆಲವು ಮಕ್ಕಳು ತಮ್ಮ ವಯಸ್ಸಿಗೆ ತಕ್ಕಂತೆ ಬೆಳೆಯುವುದಿಲ್ಲ. ಇದು ಪೋಷಕರಿಗೆ ದೊಡ್ಡ ಚಿಂತೆಯಾಗಿರುತ್ತದೆ. ಇದನ್ನು ತಡೆಯಲು ನಾನಾ ರೀತಿಯ ಕಸರತ್ತುಗಳನ್ನು ಮಾಡಿದರೂ ಈ ಸಮಸ್ಯೆಗೆ ಪರಿಹಾರ ಸಿಗದಿದ್ದಲ್ಲಿ, ಈ ವಿಷಯವನ್ನು ನಿರ್ಲಕ್ಷಿಸದೆಯೇ ಪೌಷ್ಠಿಕಾಂಶ, ಜೀವಸತ್ವಗಳಿರುವ ಆಹಾರಗಳನ್ನು ಮಕ್ಕಳಿಗೆ ನೀಡಲು ಪ್ರಯತ್ನಿಸಿ ಇದು ಮಕ್ಕಳ ಬೆಳವಣಿಗೆಗೆ ಪೂರಕವಾಗಿರುತ್ತದೆ. ಅಂದರೆ ನಿಮ್ಮ ಮಕ್ಕಳ ಆಹಾರದಲ್ಲಿ ಸಣ್ಣ ಬದಲಾವಣೆ ಮಾಡಿ. ಏಕೆಂದರೆ ದೇಹದಲ್ಲಿನ ಕೆಲವು ಕೊರತೆಯು ಮಕ್ಕಳ ಬೆಳೆವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಹಾಗಾದರೆ ಯಾವ ಅಂಶಗಳಲಿರುವ ಆಹಾರ ನೀಡಬೇಕು? ಇಲ್ಲಿದೆ ಮಾಹಿತಿ.
ಹೆಚ್ಚಿನ ಮಕ್ಕಳು ತಮ್ಮ ವಯಸ್ಸಿಗೆ ತಕ್ಕಂತೆ ಬೆಳೆಯುವುದಿಲ್ಲ. ಇದು ಪೋಷಕರಿಗೆ ದೊಡ್ಡ ಚಿಂತೆಯಾಗಿರುತ್ತದೆ. ಇದನ್ನು ತಡೆಯಲು ನಾನಾ ರೀತಿಯ ಕಸರತ್ತುಗಳನ್ನು ಮಾಡಿದರೂ ಈ ಸಮಸ್ಯೆಗೆ ಪರಿಹಾರ ಸಿಗದಿದ್ದಲ್ಲಿ, ಈ ವಿಷಯವನ್ನು ನಿರ್ಲಕ್ಷಿಸದೆಯೇ ಪೌಷ್ಠಿಕಾಂಶ, ಜೀವಸತ್ವಗಳಿರುವ ಆಹಾರಗಳನ್ನು ಮಕ್ಕಳಿಗೆ ನೀಡಲು ಪ್ರಯತ್ನಿಸಿ ಇದು ಮಕ್ಕಳ ಬೆಳವಣಿಗೆಗೆ ಪೂರಕವಾಗಿರುತ್ತದೆ. ಅಂದರೆ ನಿಮ್ಮ ಮಕ್ಕಳ ಆಹಾರದಲ್ಲಿ ಸಣ್ಣ ಬದಲಾವಣೆ ಮಾಡಿ. ಏಕೆಂದರೆ ದೇಹದಲ್ಲಿನ ಕೆಲವು ಕೊರತೆಯು ಮಕ್ಕಳ ಬೆಳೆವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಹಾಗಾದರೆ ಯಾವ ಅಂಶಗಳಲಿರುವ ಆಹಾರ ನೀಡಬೇಕು? ಇಲ್ಲಿದೆ ಮಾಹಿತಿ.
ವಿಟಮಿನ್- ಸಿ:
ಮಕ್ಕಳ ಆರೋಗ್ಯ ಮತ್ತು ದೇಹ ಬೆಳವಣಿಗೆಯಲ್ಲಿ ವಿಟಮಿನ್- ಸಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಮೂಳೆಗಳು ಮತ್ತು ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಜೊತೆಗೆ ಮಗುವಿನ ಎತ್ತರ ಹೆಚ್ಚಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಮಕ್ಕಳಿಗೆ ವಿಟಮಿನ್- ಸಿ ಸಮೃದ್ಧವಾಗಿರುವ ಆಹಾರವನ್ನು ನೀಡಬೇಕು.
ವಿಟಮಿನ್- ಡಿ
ಮೂಳೆಗಳನ್ನು ಬಲವಾಗಿಡಲು ವಿಟಮಿನ್- ಡಿ ಅತ್ಯಗತ್ಯ. ಈ ವಿಟಮಿನ್ ಕೊರತೆಯು ಮೂಳೆಗಳ ದುರ್ಬಲತೆಗೆ ಕಾರಣವಾಗಬಹುದು. ಇದರಿಂದ ಮಗುವಿನ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಆದ್ದರಿಂದ ವಿಟಮಿನ್- ಡಿ ಸಮೃದ್ಧವಾಗಿರುವ ಆಹಾರವನ್ನು ಮಕ್ಕಳ ಆಹಾರದಲ್ಲಿ ಸೇರಿಸಲು ಪ್ರಯತ್ನಿಸಿ. ಅದಲ್ಲದೆ ಮಕ್ಕಳು ನಾನಾ ರೀತಿಯ ಹೊರಾಂಗಣ ಕ್ರೀಡೆಗಳಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಿ, ಆಗ ದೇಹವು ಸದೃಢವಾಗಿರುತ್ತದೆ. ಮಕ್ಕಳ ಬೆಳವಣಿಗೆ ಕೂಡ ಉತ್ತಮವಾಗಿರುತ್ತದೆ.
ಕ್ಯಾಲ್ಸಿಯಂ
ಮೂಳೆಯ ಬೆಳವಣಿಗೆಗೆ ಕ್ಯಾಲ್ಸಿಯಂ ಸಹ ಅಗತ್ಯವಾಗಿದೆ. ಮಗುವಿಗೆ ಕ್ಯಾಲ್ಸಿಯಂ ಕೊರತೆಯಿದ್ದರೆ, ಅದು ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಈ ಕೊರತೆಯನ್ನು ಸರಿದೂಗಿಸಲು, ಮಕ್ಕಳ ದೈನಂದಿನ ಆಹಾರದಲ್ಲಿ ಹಾಲು ಮತ್ತು ಡೈರಿ ಉತ್ಪನ್ನಗಳಂತಹ ಕ್ಯಾಲ್ಸಿಯಂ ಸಮೃದ್ಧ ಆಹಾರಗಳನ್ನು ನೀಡಿ.
ಇದನ್ನೂ ಓದಿ: ಹೊಕ್ಕಳಿಗೆ ಇದರಿಂದ ಮಸಾಜ್ ಮಾಡಿದರೆ ಸರ್ವರೋಗಗಳು ಮಾಯ
ವಿಟಮಿನ್ ಬಿ 12
ವಿಟಮಿನ್ ಬಿ 12 ದೇಹದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ನರಮಂಡಲದ ಕಾರ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಆದ್ದರಿಂದ ಈ ವಿಟಮಿನ್ ಕೊರತೆಯಿದ್ದರೆ, ವಯಸ್ಸಿಗೆ ತಕ್ಕಂತೆ ಮಕ್ಕಳು ಬೆಳೆಯುವುದಿಲ್ಲ. ಮಗುವಿನ ದೇಹದಲ್ಲಿನ ಎಲ್ಲಾ ರೀತಿಯ ಜೀವಸತ್ವಗಳನ್ನು ಕಾಪಾಡಿಕೊಳ್ಳಲು ಸಮತೋಲಿತ ಆಹಾರ ಮುಖ್ಯವಾಗಿದೆ. ಆದ್ದರಿಂದ ಮಕ್ಕಳ ದೈನಂದಿನ ಆಹಾರದಲ್ಲಿ ಹಸಿರು ತರಕಾರಿ, ಹಣ್ಣು, ಹಾಲು, ಡೈರಿ ಉತ್ಪನ್ನ, ಮೀನು, ಮಾಂಸ, ಮೊಟ್ಟೆಗಳನ್ನು ಸೇರಿಸುವುದು ಉತ್ತಮ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ