ಆರೋಗ್ಯಕರ ಆಹಾರ ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ನಿಧಾನಗೊಳಿಸಬಹುದು: ಡಾ ಮೈಕೆಲ್ ಮೊಸ್ಲೆ

|

Updated on: Jul 23, 2023 | 3:00 PM

ನೀವು ಆರೋಗ್ಯಕರ ಆಹಾರ ಕ್ರಮಗಳನ್ನು ರೂಢಿಸಿಕೊಳ್ಳುವುದರ ಮೂಲಕ ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ನಿಧಾನಗೊಳಿಸಬಹುದು ಎಂದು ಯುಕೆ ಮೂಲದ ಲೇಖಕ ಡಾ ಮೈಕೆಲ್ ಮೊಸ್ಲೆ ಸಲಹೆ ನೀಡುತ್ತಾರೆ.

ಆರೋಗ್ಯಕರ ಆಹಾರ ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ನಿಧಾನಗೊಳಿಸಬಹುದು: ಡಾ ಮೈಕೆಲ್ ಮೊಸ್ಲೆ
fermented foods
Follow us on

ವಯಸ್ಸಾಗುವಿಕೆ ಪ್ರಕ್ರಿಯೆಯು ಜೀವನದ ಅನಿವಾರ್ಯ ಭಾಗವಾಗಿದ್ದರೂ ಯಾರೂ ಇಷ್ಟಪಡುವುದಿಲ್ಲ. ಕೂದಲು ಬೆಳ್ಳಗಾಗುವುದು, ಮುಖದಲ್ಲಿ ಸುಕ್ಕು ಹಾಗೂ ದುರ್ಬಲ ಮೂಳೆಗಳು ಸಾಮಾನ್ಯ ಲಕ್ಷಣವಾಗಿದೆ. ಆದರೆ ನೀವು ಆರೋಗ್ಯಕರ ಆಹಾರ ಕ್ರಮಗಳನ್ನು ರೂಢಿಸಿಕೊಳ್ಳುವುದರ ಮೂಲಕ ವಯಸ್ಸಾಗುವಿಕೆ ಪ್ರಕ್ರಿಯೆಯನ್ನು ನಿಧಾನಗೊಳಿಸಬಹುದು ಎಂದು ಯುಕೆ ಮೂಲದ ಲೇಖಕ ಡಾ ಮೈಕೆಲ್ ಮೊಸ್ಲೆ ಸಲಹೆ ನೀಡುತ್ತಾರೆ.

ಆರೋಗ್ಯಕರ ವಯಸ್ಸನ್ನು ಉತ್ತೇಜಿಸುವ ಆಹಾರಗಳ ಕುರಿತು ಡಾ ಮೊಸ್ಲಿ ನೀಡಿರುವ ಉಪಯುಕ್ತ ಮಾಹಿತಿ ಇಲ್ಲಿದೆ. ವಯಸ್ಸಾದಂತೆ ಕರುಳಿನ ಸೂಕ್ಷ್ಮಜೀವಿಗಳ ಸಂಖ್ಯೆಯು ಕ್ಷೀಣಿಸಲು ಪ್ರಾರಂಭಿಸುತ್ತದೆ, ಇದರಿಂದಾಗಿ ಉರಿಯೂತ ಮತ್ತು ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಹುದುಗಿಸಿದ ಆಹಾರಗಳನ್ನು ಹೆಚ್ಚು ತಿನ್ನಬೇಕು ಎಂದು ತಜ್ಞರು ವಿವರಿಸುತ್ತಾರೆ.

ಇದನ್ನೂ ಓದಿ: ಅಸ್ಥಿಪಂಜರದ ಆಕಾರವು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ತಜ್ಞರು ವಿವರಿಸುತ್ತಾರೆ

ವಯಸ್ಸಾಗುವುದನ್ನು ವಿಳಂಬಗೊಳಿಸಲು ಹುದುಗಿಸಿದ ಆಹಾರಗಳು ಹೇಗೆ ಕೆಲಸ ಮಾಡುತ್ತವೆ?

ಹುದುಗಿಸಿದ ಆಹಾರವನ್ನು ಸೇವಿಸುವುದರಿಂದ ಕರುಳಿನ ಸೂಕ್ಷ್ಮಾಣುಜೀವಿಗಳನ್ನು ಪುನರುಜ್ಜೀವನಗೊಳಿಸಬಹುದು. ಪ್ರೋಬಯಾಟಿಕ್‌ಗಳೊಂದಿಗೆ ಸಮೃದ್ಧವಾಗಿರುವ ಈ ಆಹಾರಗಳು ಆರೋಗ್ಯಕರ ವಯಸ್ಸನ್ನು ಉತ್ತೇಜಿಸಲು ಮತ್ತು ಉರಿಯೂತವನ್ನು ತಗ್ಗಿಸಲು ಹೆಸರುವಾಸಿಯಾಗಿದೆ. ಈ ಆಹಾರಗಳು ಒಟ್ಟಾರೆ ಕರುಳಿನ ಸೂಕ್ಷ್ಮಾಣುಜೀವಿಗಳನ್ನು ಸುಧಾರಿಸುವ ಆರೋಗ್ಯಕರ ಬ್ಯಾಕ್ಟೀರಿಯಾವನ್ನು ನೇರವಾಗಿ ಉತ್ಪಾದಿಸುತ್ತವೆ ಎಂದು ಡಾ ಮೊಸ್ಲಿ ಹೇಳುತ್ತಾರೆ. ಕರುಳಿನ ಸೂಕ್ಷ್ಮಜೀವಿಯನ್ನು ಹೆಚ್ಚಿಸಲು, ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಕರುಳಿನ ಸ್ನೇಹಿ ಆಹಾರಗಳನ್ನು ದೀರ್ಘಕಾಲದವರೆಗೆ ಸೇವಿಸಲು ಶಿಫಾರಸು ಮಾಡುತ್ತಾರೆ. ಇದು ವಯಸ್ಸಿಗೆ ಸಂಬಂಧಿಸಿದ ಕಾಯಿಲೆಗಳನ್ನು ಸೋಲಿಸಲು ಸಹಾಯ ಮಾಡುತ್ತದೆ ಎಂಬುದು ತಜ್ಞರ ಸಲಹೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: