
ಪ್ರಸವಾನಂತರ (Postpartum) ಅಂದರೆ ಹೆರಿಗೆಯಾದ ಮೇಲೆ ಕೆಲವು ಮಹಿಳೆಯರಲ್ಲಿ ಮೂತ್ರ ಸೋರಿಕೆಯಾಗುತ್ತದೆ. ಹೆಚ್ಚಿನವರಲ್ಲಿ ಈ ರೀತಿಯ ಸಮಸ್ಯೆ ಕಂಡುಬರುತ್ತದೆ. ಅದರಲ್ಲಿಯೂ ಹೆರಿಗೆಯ ನಂತರ ಕೆಲವು ವಾರಗಳ ನಂತರ ಈ ಸಮಸ್ಯೆ ಪ್ರಾರಂಭವಾಗುತ್ತದೆ. ಮೂತ್ರ ಅಸಂಯಮ ಅಥವಾ ಮೂತ್ರ ಸೋರಿಕೆ (Urine Leakage) ಪ್ರಸವಾನಂತರದ ಸ್ಥಿತಿಯಾಗಿದ್ದು, ಮೂತ್ರಕೋಶದ ಮೇಲೆ ನಿಯಂತ್ರಣ ಕಡಿಮೆಯಾಗುವುದೇ ಇದಕ್ಕೆ ಕಾರಣ ಎನ್ನಲಾಗುತ್ತದೆ. ಹಾಗಾಗಿ ದಿನಕ್ಕೆ ಹಲವು ಬಾರಿ ಈ ರೀತಿಯಾಗುತ್ತದೆ. ಹಾಗಾದರೆ ಇದನ್ನು ತಡೆಯಲು ಏನು ಮಾಡಬಹುದು, ಯಾಕೆ ಈ ರೀತಿಯಾಗುತ್ತದೆ, ಈ ಬಗ್ಗೆ ಸ್ತ್ರೀರೋಗ ತಜ್ಞರ ಅಭಿಪ್ರಾಯವೇನು ಎಂಬುದರ ಕುರಿತ ಸಂಕ್ಷಿಪ್ತ ಮಾಹಿತಿ ಈ ಸ್ಟೋರಿಯಲ್ಲಿದೆ.
ಸ್ತ್ರೀರೋಗ ತಜ್ಞರು ಹೇಳುವ ಪ್ರಕಾರ, ಮಹಿಳೆಯರಲ್ಲಿ ನಿಯಂತ್ರಣವಿಲ್ಲದೆ ಮೂತ್ರ ವಿಸರ್ಜನೆ ಅಥವಾ ಮೂತ್ರ ಸೋರಿಕೆ ಅಥವಾ ಮೂತ್ರ ಅಸಂಯಮ ಎಂದರೆ ಮೂತ್ರದ ನಿಯಂತ್ರಣವನ್ನು ಕಳೆದುಕೊಂಡು ಅನಿರೀಕ್ಷಿತವಾಗಿ ಮೂತ್ರ ಸೋರಿಕೆಯಾಗುವ ಸ್ಥಿತಿಯಾಗಿದೆ. ಇವುಗಳಲ್ಲಿ ಎರಡು ವಿಧಗಳಿವೆ. ಮೊದಲನೆಯದು ನಗುವುದು, ಸೀನುವುದು, ಬಿಕ್ಕಳಿಸುವುದು ಅಥವಾ ನಡೆಯುವಾಗ ಶ್ರೋಣಿಯ ಪ್ರದೇಶದಲ್ಲಿ ನೋವಿನಿಂದಾಗಿ ಮೂತ್ರ ಸೋರಿಕೆಯಾಗುತ್ತದೆ, ಇದನ್ನು ಒತ್ತಡದ ಅಸಂಯಮ ಎಂದು ಕರೆಯಲಾಗುತ್ತದೆ. ಎರಡನೆಯದು ಪ್ರಚೋದನೆಯ ಅಸಂಯಮ. ಅಂದರೆ ವಯಸ್ಸಾದಂತೆ, ಮೂತ್ರಕೋಶ ಮತ್ತು ಮೂತ್ರಪಿಂಡಗಳ ಸ್ನಾಯುಗಳು ತುಂಬಾ ದುರ್ಬಲವಾಗುತ್ತವೆ, ಅವು ಸ್ವಲ್ಪ ಸಮಯದ ವರೆಗೆ ಮೂತ್ರದ ಒತ್ತಡವನ್ನು ತಡೆದುಕೊಳ್ಳಲು ಸಾಧ್ಯವಾಗುವುದಿಲ್ಲ ಮತ್ತು ಶೌಚಾಲಯಕ್ಕೆ ಹೋಗುವ ಮೊದಲೇ ಮೂತ್ರ ಸೋರಿಕೆಯಾಗುತ್ತದೆ. ಇದನ್ನು ಪ್ರಚೋದನೆಯ ಅಸಂಯಮ ಎಂದು ಕರೆಯಲಾಗುತ್ತದೆ. ಕೆಲವು ಮಹಿಳೆಯರು ಒತ್ತಡದ ಅಸಂಯಮವನ್ನು ಅನುಭವಿಸಿದರೆ, ಇನ್ನು ಕೆಲವರು ತುರ್ತು ಲಕ್ಷಣಗಳನ್ನು ಅನುಭವಿಸುತ್ತಾರೆ. ಇನ್ನು ಕೆಲವರು ಇವೆರಡನ್ನೂ ಅನುಭವಿಸುತ್ತಾರೆ.
ಗರ್ಭಾವಸ್ಥೆಯಲ್ಲಿ ಪ್ರೊಜೆಸ್ಟರಾನ್ ಎಂಬ ಹಾರ್ಮೋನ್ ಹೆಚ್ಚಾಗಲು ಪ್ರಾರಂಭಿಸುತ್ತದೆ. ಇದು ಗರ್ಭಾಶಯ ಮತ್ತು ಮೂತ್ರಕೋಶ ಎರಡರ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ. ಇನ್ನು ಹೆರಿಗೆಯ ಸಮಯದಲ್ಲಿ, ಮಗು ಯೋನಿ ಮೂಲಕ ಹೊರಬಂದಾಗ ಶ್ರೋಣಿಯ ಸ್ನಾಯುಗಳಲ್ಲಿ ಒತ್ತಡ ಉಂಟಾಗಿ, ಯೋನಿಯಲ್ಲಿ ಎಳೆಯುವ ಸಂವೇದನೆ ಇರುತ್ತದೆ. ಈ ರೀತಿ ಹಾರ್ಮೋನುಗಳ ಅಸಮತೋಲನ ಮತ್ತು ಸ್ನಾಯುಗಳ ಹಿಗ್ಗುವಿಕೆಯ ಪರಿಣಾಮ ಮೂತ್ರ ಸೋರಿಕೆಗೆ ಕಾರಣವಾಗಬಹುದು. ಅದರಲ್ಲಿಯೂ ಹೆರಿಗೆಯ ನಂತರದ ಕೆಲವು ದಿನಗಳು ಅಥವಾ ವಾರಗಳ ಬಳಿಕ ಈ ಸಮಸ್ಯೆ ಉಂಟಾಗುತ್ತದೆ.
ಇದನ್ನೂ ಓದಿ: ಪ್ರೆಗ್ನೆನ್ಸಿಯಲ್ಲಿ ಕಾಡುವ ಒತ್ತಡ ಕಡಿಮೆ ಮಾಡಲು ಆಯುರ್ವೇದದಲ್ಲಿ ತಿಳಿಸಿದ ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಿ
ಸಾಮಾನ್ಯವಾಗಿ ಮೂತ್ರ ಸೋರಿಕೆಯಾಗುವುದನ್ನು ತಡೆಯಲು ಮಹಿಳೆಯರು ಹೆರಿಗೆಯ ನಂತರ ಪೆಲ್ವಿಕ್ ಫ್ಲೋರ್ ಅಥವಾ ಕೆಗೆಲ್ ವ್ಯಾಯಾಮಗಳನ್ನು ಮಾಡಬೇಕು. ಆಸ್ಪತ್ರೆಯಿಂದ ಬರುವ ಮೊದಲು, ಮಹಿಳೆಯರು ಇಂತಹ ವ್ಯಾಯಾಮಗಳ ತರಬೇತಿಯನ್ನು ಪಡೆಯುತ್ತಾರೆ. ಈ ವ್ಯಾಯಾಮಗಳನ್ನು ಪ್ರತಿದಿನ ಮಾಡಬೇಕು. ಇನ್ನು ಜೀವನಶೈಲಿಯಲ್ಲಿ ಮಾಡಿಕೊಂಡ ಬದಲಾವಣೆಗಳು ಕೂಡ ಮೂತ್ರದ ಅಸಂಯಮ ಅಥವಾ ಮೂತ್ರ ಸೋರಿಕೆಯನ್ನು ತಡೆಯಲು ಸಹಾಯ ಮಾಡಬಹುದು. ಆದರೆ ಹೆರಿಗೆಯ ನಂತರ ತೂಕ ಇಳಿಸುವುದು, ಹೆಚ್ಚು ಫೈಬರ್ ಭರಿತ ಆಹಾರವನ್ನು ಸೇವಿಸುವುದು, ಹೆಚ್ಚು ನೀರು ಕುಡಿಯುವುದು ಮತ್ತು ಭಾರವಾದ ವಸ್ತುಗಳನ್ನು ಎತ್ತುವುದನ್ನು ತಪ್ಪಿಸಬೇಕು.
ಮೂತ್ರದ ಸೋರಿಕೆ ಸಾಮಾನ್ಯವಾಗಿ ಕೆಲವು ವಾರಗಳಲ್ಲಿ ನಿಯಂತ್ರಣಕ್ಕೆ ಬರುತ್ತದೆ. ಇದು ಕಂಡುಬರದಿದ್ದರೆ ಮತ್ತು ಹೆರಿಗೆಯ ನಂತರ ಎರಡು ಮೂರು ತಿಂಗಳ ವರೆಗೆ ಈ ಸಮಸ್ಯೆ ಮುಂದುವರಿದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಅದರ ಜೊತೆಗೆ ಖಾಸಗಿ ಭಾಗಗಳನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಿ. ಸಾಕಷ್ಟು ನೀರು ಕುಡಿಯಿರಿ ಮತ್ತು ಸಮತೋಲಿತ ಆಹಾರವನ್ನು ಸೇವಿಸಿ. ಒತ್ತಡವನ್ನು ಕಡಿಮೆ ಮಾಡಿಕೊಂಡು ಸಾಕಷ್ಟು ನಿದ್ರೆ ಮಾಡಿ, ಏಕೆಂದರೆ ಹಾರ್ಮೋನುಗಳ ಅಸಮತೋಲನವು ಸ್ರಾವವನ್ನು ಹೆಚ್ಚಿಸುತ್ತದೆ. ಹಾಗಾಗಿ ಆರೋಗ್ಯ ಕಾಪಾಡಿಕೊಳ್ಳಲು ಒಳ್ಳೆಯ ಸಲಹೆಗಳನ್ನು ಪಾಲಿಸಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ