AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಲ್ಲ vs ಸಕ್ಕರೆ; ಇವೆರಡರಲ್ಲಿ ಮಕ್ಕಳ ಆರೋಗ್ಯಕ್ಕೆ ಯಾವುದು ಉತ್ತಮ ಎಂಬುದನ್ನು ವಿವರಿಸಿದ್ದಾರೆ ಡಾ. ರವಿ ಮಲಿಕ್

ಚಿಕ್ಕ ಮಕ್ಕಳಿಗೆ ಬೆಲ್ಲ ಮತ್ತು ಸಕ್ಕರೆಯಂತಹ ಪದಾರ್ಥಗಳನ್ನು ನೀಡಬೇಕೋ, ಬೇಡವೋ ಎಂಬ ಗೊಂದಲ ಹಲವು ಪೋಷಕರನ್ನು ಕಾಡುತ್ತದೆ. ಇನ್ನು ಕೆಲವರಂತೂ ಇದಾವುದರ ಬಗ್ಗೆಯೂ ಯೋಚಿಸದೆಯೇ ಹೆಚ್ಚಿನ ಸಕ್ಕರೆ ಅಂಶವಿರುವ ಪದಾರ್ಥಗಳನ್ನು ನೀಡುತ್ತಾರೆ. ನೀವು ಕೂಡ ನಿಮ್ಮ ಮಗುವಿಗೆ ಬೆಲ್ಲ ಅಥವಾ ಸಕ್ಕರೆ ನೀಡುವುದು ಸರಿಯೇ ಎಂದು ಎಂದಾದರೂ ಯೋಚಿಸಿದ್ದೀರಾ? ಈ ರೀತಿಯ ಗೊಂದಲಕ್ಕೆ ಡಾ. ರವಿ ಮಲಿಕ್ ಅವರು ಉತ್ತರ ನೀಡಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಇನ್ಸ್ಟಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಬಗೆಗಿನ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.

ಬೆಲ್ಲ vs ಸಕ್ಕರೆ; ಇವೆರಡರಲ್ಲಿ ಮಕ್ಕಳ ಆರೋಗ್ಯಕ್ಕೆ ಯಾವುದು ಉತ್ತಮ ಎಂಬುದನ್ನು ವಿವರಿಸಿದ್ದಾರೆ ಡಾ. ರವಿ ಮಲಿಕ್
ಬೆಲ್ಲ vs ಸಕ್ಕರೆ
ಪ್ರೀತಿ ಭಟ್​, ಗುಣವಂತೆ
|

Updated on: Nov 18, 2025 | 1:57 PM

Share

ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸುವುದು ಪೋಷಕರ ಜವಾಬ್ದಾರಿ. ಯಾವ ರೀತಿಯ ಆಹಾರ ನೀಡಬೇಕು, ಯಾವುದು ಒಳ್ಳೆಯದು, ಹೀಗೆ ನೂರಾರು ಗೊಂದಲದ ನಡುವೆಯೂ ಒಳ್ಳೆಯ ಆಹಾರ ಪದ್ದತಿಗಳ ಪರಿಚಯ ಮಾಡಿಸುವುದು ಪಾಲನೆ, ಪೋಷಣೆ ಮಾಡುವವರ ಕರ್ತವ್ಯವಾಗಿರುತ್ತದೆ. ಅದರಲ್ಲಿಯೂ ಅನೇಕ ಪೋಷಕರಿಗೆ ತಮ್ಮ ಮಕ್ಕಳಿಗೆ ಬೆಲ್ಲ ಕೊಡಬೇಕೋ ಅಥವಾ ಸಕ್ಕರೆಯೋ! ಎನ್ನುವಂತಹ ಅನುಮಾನವಿರುತ್ತದೆ. ಇನ್ನು ಕೆಲವರಂತೂ ಇದಾವುದರ ಬಗ್ಗೆಯೂ ಯೋಚಿಸದೆಯೇ ಹೆಚ್ಚಿನ ಸಕ್ಕರೆ ಅಂಶವಿರುವ ಪದಾರ್ಥಗಳನ್ನು ನೀಡುತ್ತಾರೆ. ಆದರೆ ಇದು ತುಂಬಾ ಅಪಾಯಕಾರಿ. ಹಾಗಾದರೆ ಚಿಕ್ಕ ಮಕ್ಕಳಿಗೆ ಬೆಲ್ಲ ಅಥವಾ ಸಕ್ಕರೆ ಯಾವುದನ್ನು ನೀಡಬೇಕು, ಇವೆರಡರಲ್ಲಿ ಯಾವುದು ಒಳ್ಳೆಯದು, ಎಷ್ಟು ವರ್ಷದ ನಂತರ ಸಿಹಿ ಪದಾರ್ಥಗಳ ಸೇವನೆಯನ್ನು ಮಾಡಿಸಬೇಕು ಎಂಬ ಗೊಂದಲಕ್ಕೆ ಡಾ. ರವಿ ಮಲಿಕ್ (Dr. Ravi Malik) ಎನ್ನುವವರು ಉತ್ತರ ನೀಡಿದ್ದಾರೆ. ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಇನ್ಸ್ಟಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.

ಡಾ ರವಿ ಮಲಿಕ್ ಹೇಳುವ ಪ್ರಕಾರ, ಎರಡು ವರ್ಷದೊಳಗಿನ ಮಕ್ಕಳಿಗೆ ಬೆಲ್ಲ ಅಥವಾ ಸಕ್ಕರೆ ನೀಡಬಾರದು ಎಂದಿದ್ದಾರೆ. ಅದರ ನಂತರ ಅಂದರೆ ಮಕ್ಕಳಿಗೆ ಎರಡು ವರ್ಷ ಆದ ಮೇಲೆ ಬೆಲ್ಲ ನೀಡಬಹುದು, ಆದರೆ ಅದರ ಪ್ರಮಾಣ ಕಡಿಮೆ ಇರಬೇಕು. ಸಕ್ಕರೆಗೆ ಹೋಲಿಸಿದರೆ, ಬೆಲ್ಲ ಮಕ್ಕಳಿಗೆ ನೀಡಬಹುದು. ಆದರೆ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ನೀಡಬೇಕಾಗುತ್ತದೆ. ಸಿಹಿ ಅಂಶದ ಜೊತೆಗೆ, ಬೆಲ್ಲದಲ್ಲಿ ಕಬ್ಬಿಣ ಮತ್ತು ಮೆಗ್ನೀಸಿಯಮ್‌ನಂತಹ ಖನಿಜಗಳು ಸಹ ಇರುತ್ತವೆ, ಇದು ಮಕ್ಕಳ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಬೆಲ್ಲ ಸೇವನೆಯಿಂದಾಗುವ ಪರಿಣಾಮಗಳು:

  • ಬೆಲ್ಲದಲ್ಲಿ ಬಹಳಷ್ಟು ಸಿಹಿ ಅಂಶವಿದ್ದು, ಇದು ಮಕ್ಕಳಿಗೆ ಹಠಾತ್ ಚೈತನ್ಯ ನೀಡಲು ಸಹಾಯ ಮಾಡುತ್ತದೆ. ಆದರೆ ನಂತರ, ಅವರಿಗೆ ದಣಿದ ಅಥವಾ ಸುಸ್ತಾದ ಅನುಭವವಾಗುತ್ತದೆ.
  • ಬೆಲ್ಲದಲ್ಲಿ ಸಕ್ಕರೆಯಂತೆಯೇ ಸಿಹಿ ಅಂಶ ಹೆಚ್ಚಾಗಿರುತ್ತದೆ. ಹಾಗಾಗಿ ಮಕ್ಕಳು ಹಲ್ಲುಜ್ಜದೆ ಇವುಗಳನ್ನು ಅಥವಾ ಇವುಗಳಿಂದ ತಯಾರಾದ ಸಿಹಿತಿಂಡಿಗಳನ್ನು ತಿಂದರೆ, ಅದು ಅವರ ಹಲ್ಲುಗಳ ಮೇಲೆ ಕಲೆಗಳನ್ನು ಉಂಟುಮಾಡಬಹುದು ಮತ್ತು ಹಲ್ಲುಕುಳಿಗಳ ಅಪಾಯವನ್ನು ಹೆಚ್ಚಿಸಬಹುದು.
  • ಹೆಚ್ಚು ಬೆಲ್ಲ ತಿನ್ನುವುದರಿಂದ ದೇಹದ ಉಷ್ಣತೆ ಹೆಚ್ಚಾಗಬಹುದು, ಇದು ಗ್ಯಾಸ್, ಮಲಬದ್ಧತೆ ಅಥವಾ ಹೊಟ್ಟೆ ನೋವಿಗೂ ಕಾರಣವಾಗಬಹುದು.
  • ಮಕ್ಕಳು ಹೆಚ್ಚೆಚ್ಚು ಬೆಲ್ಲ ಸೇವಿಸಿದರೆ, ಅದು ಕಾಲಾನಂತರದಲ್ಲಿ ಅವರ ಇನ್ಸುಲಿನ್ ಸೂಕ್ಷ್ಮತೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: 1 ವರ್ಷದೊಳಗಿನ ಮಕ್ಕಳಿಗೆ ಎಳನೀರನ್ನು ನೀಡಬಹುದೇ? ಆರೋಗ್ಯ ತಜ್ಞರ ಅಭಿಪ್ರಾಯವೇನು ತಿಳಿದುಕೊಳ್ಳಿ

ಇಲ್ಲಿದೆ ನೋಡಿ ಡಾ. ರವಿ ಮಲಿಕ್ ಅವರ ವಿಡಿಯೋ:

ಸಕ್ಕರೆ ಸೇವನೆಯಿಂದ ಯಾವ ರೀತಿಯ ಅಡ್ಡಪರಿಣಾಮಗಳಾಗುತ್ತದೆ?

  • ಸಕ್ಕರೆಯಲ್ಲಿ ಹೆಚ್ಚಿನ ಕ್ಯಾಲೋರಿ ಅಂಶವಿದ್ದು, ಇದು ಮಕ್ಕಳ ತೂಕ ಮತ್ತು ಬೊಜ್ಜಿನ ಅಪಾಯವನ್ನು ಹೆಚ್ಚಿಸುತ್ತದೆ.
  • ಹೆಚ್ಚು ಸಕ್ಕರೆ ತಿನ್ನುವುದರಿಂದ ಮಕ್ಕಳಲ್ಲಿ ಮನಸ್ಥಿತಿಯಲ್ಲಿ ಏರುಪೇರಾಗಬಹುದು. ಸಕ್ಕರೆ ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ, ಇದು ಶಕ್ತಿಯಲ್ಲಿ ಹಠಾತ್ ಕುಸಿತಕ್ಕೆ ಕಾರಣವಾಗಬಹುದು, ಮಕ್ಕಳನ್ನು ಕೆರಳಿಸಬಹುದು ಅಥವಾ ದಣಿದಂತೆ ಮಾಡಬಹುದು.
  • ಸಕ್ಕರೆ ಹಲ್ಲುಗಳಿಗೆ ಅಂಟಿಕೊಳ್ಳುತ್ತದೆ ಮತ್ತು ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಇದು ಹಲ್ಲು ಕೊಳೆತ ಮತ್ತು ಹಲ್ಲು ಕುಳಿಗಳಿಗೆ ಕಾರಣವಾಗುತ್ತದೆ.
  • ಹೆಚ್ಚು ಸಕ್ಕರೆ ಸೇವಿಸುವುದರಿಂದ ದೀರ್ಘಾವಧಿಯಲ್ಲಿ ಹೃದಯದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಇದು ರಕ್ತದಲ್ಲಿ ಟ್ರೈಗ್ಲಿಸರೈಡ್‌ಗಳು ಮತ್ತು ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟವನ್ನು ಹೆಚ್ಚಿಸುತ್ತದೆ.
  • ಮಕ್ಕಳಲ್ಲಿ ಹೆಚ್ಚಿನ ಸಕ್ಕರೆ ಸೇವನೆಯು ಮನಸ್ಥಿತಿ ಬದಲಾವಣೆಗಳು, ಹೈಪರ್ಆಕ್ಟಿವಿಟಿ ಮತ್ತು ಕೇಂದ್ರೀಕರಿಸುವುದಕ್ಕೆ ತೊಂದರೆಯಾಗಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ