ತಲೆಹೊಟ್ಟು ಮತ್ತು ಗುಂಗುರು ಕೂದಲಿನ ಸಮಸ್ಯೆಗೆ ಕರಿಬೇವು ಮತ್ತು ಮೊಸರು ಉತ್ತಮ ಪರಿಹಾರ
ಕೂದಲು ಉದುರುವುದು, ತಲೆಹೊಟ್ಟು ಮತ್ತು ಗುಂಗುರು ಕೂದಲಿನ ಸಮಸ್ಯೆ ಸಾಮಾನ್ಯವಾಗಿದೆ. ನೀವು ಸಹ ಈ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಕರಿಬೇವಿನ ಎಲೆಗಳು ಮತ್ತು ಮೊಸರಿನ ಹೇರ್ ಪ್ಯಾಕ್ ಟ್ರೈ ಮಾಡಬಹುದು.
ಪ್ರತಿ ಮಹಿಳೆಯರು, ಯುವತಿಯರು ತನ್ನ ಕೂದಲು ದಟ್ಟವಾಗಿ ಮತ್ತು ಉದ್ದವಾಗಿ ಬೆಳೆಯಬೇಕೆಂದು ಬಯಸುತ್ತಾರೆ. ಅಂದವಾದ ಕೂದಲು ಮುಖದ ಸೌಂದರ್ಯ ಹೆಚ್ಚಿಸುತ್ತದೆ. ಕೂದಲಿನ ಆರೈಕೆ ಮಾಡುವುದು ಒಂದು ಸವಾಲಾಗಿದೆ. ದೇಹದಲ್ಲಿ ಪೌಷ್ಟಿಕಾಂಶದ ಕೊರತೆ, ಧೂಳು-ಮಣ್ಣು ಮತ್ತು ಮಾಲಿನ್ಯದಿಂದ ಕೂದಲಿನ ಆರೋಗ್ಯ ಹದಗೆಡುತ್ತದೆ ಪರಿಣಾಮ ಕೂದಲಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಕೂದಲು ಉದುರುವುದು, ತಲೆಹೊಟ್ಟು ಮತ್ತು ಗುಂಗುರು ಕೂದಲಿನ ಸಮಸ್ಯೆ (Hair Problem) ಅವರಲ್ಲಿ ಸಾಮಾನ್ಯವಾಗಿದೆ. ನೀವು ಸಹ ಈ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಕರಿಬೇವಿನ ಎಲೆಗಳು ಮತ್ತು ಮೊಸರು ಹೇರ್ ಪ್ಯಾಕ್ ಅನ್ನು ಬಳಸಬಹುದು.
ಮೊಸರು ಮತ್ತು ಕರಿಬೇವಿನ ಎಲೆಗಳಿಂದ ಮಾಡಿದ ಪ್ಯಾಕ್ ಕೂದಲನ್ನು ದಪ್ಪ, ಸದೃಢವಾಗಿಸುತ್ತದೆ. ಕರಿಬೇವಿನ ಎಲೆಗಳು ಮತ್ತು ಮೊಸರು ಉತ್ಕರ್ಷಣ ನಿರೋಧಕಗಳು, ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳಲ್ಲಿ ಸಮೃದ್ಧವಾಗಿದೆ. ಇದು ನಿಮ್ಮ ಕೂದಲನ್ನು ಹೊಳೆಯುವಂತೆ ಮಾಡುತ್ತದೆ. ತಲೆಹೊಟ್ಟು ಮುಕ್ತವಾಗಿಸುತ್ತದೆ. ಇದರ ತಯಾರಿಕೆಯ ವಿಧಾನ ಮತ್ತು ಅದರ ಪ್ರಯೋಜನಗಳ ಬಗ್ಗೆ ತಿಳಿಯೋಣ.
ಕರಿಬೇವು ಮತ್ತು ಮೊಸರು ಎರಡೂ ಕೂದಲಿಗೆ ತುಂಬಾ ಒಳ್ಳೆಯದು. ಇವೆರಡೂ ಕೂಡ ಆರ್ಧ್ರಕ ಗುಣಗಳನ್ನು ಹೊಂದಿದ್ದು ಕೂದಲಿನಲ್ಲಿ ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ, ಇದು ಹೊಳೆಯುವಂತೆ ಮಾಡುತ್ತದೆ. ಇವೆರಡೂ ಅಗತ್ಯ ಪೋಷಕಾಂಶಗಳು ಮತ್ತು ಔಷಧೀಯ ಗುಣಗಳನ್ನು ಒಳಗೊಂಡಿದ್ದು ಕೂದಲನ್ನು ಆರೋಗ್ಯವಾಗಿಡುತ್ತದೆ. ಕೂದಲಿಗೆ ಮೊಸರು-ಕರಿಬೇವು ಸೊಪ್ಪಿನ ಪ್ಯಾಕ್ನಿಂದಾಗುವ ಪ್ರಯೋಜನಗಳನ್ನು ಮೊದಲು ತಿಳಿಯೋಣ.
ಮೊಸರು-ಕರಿಬೇವು ಪ್ಯಾಕ್ ಬಳಿಕೆಯಿಂದ ಆಗುವ ಪ್ರಯೋಜನಗಳು
- ಮೊಸರು ಮತ್ತು ಕರಿಬೇವಿನ ಪ್ಯಾಕ್ ಫಂಗಸ್, ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ತಲೆಹೊಟ್ಟುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
- ಕೂದಲಿನ ಕಿರುಚೀಲಗಳನ್ನು ಪೋಷಿಸುತ್ತದೆ, ಇದರಿಂದಾಗಿ ಕೂದಲನ್ನು ಬಲಪಡಿಸುತ್ತದೆ. ಪರಿಣಾಮ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ.
- ಈ ಹೇರ್ ಮಾಸ್ಕ್ ಕೂದಲಿಗೆ ತೇವಾಂಶವನ್ನು ನೀಡುತ್ತದೆ, ಇದರಿಂದಾಗಿ ಹಾನಿಗೊಳಗಾದ ಕೂದಲನ್ನು ಸರಿಪಡಿಸಲಾಗುತ್ತದೆ.
- ಕರಿಬೇವು ಮತ್ತು ಮೊಸರು ಹೇರ್ ಮಾಸ್ಕ್ ಬೂದು ಕೂದಲನ್ನು ತಡೆಯಲು ಸಹಾಯ ಮಾಡುತ್ತದೆ.
- ಇದು ಕೂದಲಿನ ಬೆಳವಣಿಗೆಗೂ ಸಹಾಯ ಮಾಡುತ್ತದೆ. ಮೊಸರು ಮತ್ತು ಕರಿಬೇವಿನ ಎಲೆಗಳಲ್ಲಿನ ಪೋಷಕಾಂಶಗಳು ಕೂದಲಿನ ಬೆಳವಣಿಗೆಗೆ ಪರಿಣಾಮಕಾರಿಯಾಗಿದೆ.
ಕರಿಬೇವು-ಮೊಸರಿನ ಪ್ಯಾಕ್ ತಯಾರಿಸುವ ವಿಧಾನ
ಕೆಲವು ಕರಿಬೇವಿನ ಎಲೆಗಳನ್ನು ತೊಳೆದು ನುಣ್ಣಗೆ ರುಬ್ಬಿಕೊಳ್ಳಿ. 3 ಚಮಚ ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮೊಸರು-ಕರಿಬೇವಿನ ಸೊಪ್ಪನ್ನೂ ಮಿಕ್ಸಿಯಲ್ಲಿ ಸೇರಿಸಿ ರುಬ್ಬಬಹುದು. ನಂತರ ನೀವು ಅದಕ್ಕೆ 1-2 ಚಮಚ ಕ್ಯಾಸ್ಟರ್ ಆಯಿಲ್ ಅನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ 1 ಗಂಟೆಯ ನಂತರ ಶುದ್ಧ ನೀರಿನಿಂದ ತೊಳೆಯಿರಿ. ಈ ಪ್ಯಾಕ್ ಅನ್ನು ವಾರಕ್ಕೆ 2-3 ಬಾರಿ ಬಳಸಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ