Rock Salt Benefits: ಕಲ್ಲುಪ್ಪು ಬಳಕೆ ಮಾಡುವುದರಿಂದ ಹಲವು ಆರೋಗ್ಯ ಪ್ರಯೋಜನಗಳು
ಸಾಮಾನ್ಯ ಉಪ್ಪಿಗಿಂತ ಕಲ್ಲುಪ್ಪು ಹೆಚ್ಚಿನ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆಯುರ್ವೇದಲ್ಲಿಯೂ ಕಲ್ಲು ಉಪ್ಪಿನ ಪ್ರಯೋಜನಗಳ ಬಗ್ಗೆ ತಿಳಿಸಲಾಗಿದೆ. ಇದನ್ನು ನೈಸರ್ಗಿಕವಾಗಿ ತಯಾರಿಸುವುದರಿಂದ ಹೆಚ್ಚು ಆರೋಗ್ಯ ಪ್ರಯೋಜನವನ್ನು ಹೊಂದಿದೆ.
ಹಿಂದಿನ ಕಾಲದಲ್ಲಿ ಬರೀ ಕಲ್ಲು ಉಪ್ಪನ್ನು ಮಾತ್ರ ಅಡುಗೆಗಳಲ್ಲಿ ಬಳಸಲಾಗುತ್ತಿತ್ತು. ನಂತರದಲ್ಲಿ ಆಧುನಿಕತೆಯು ಬಂದ ಮೇಲೆ ಉಪ್ಪಿನಲ್ಲಿ ಸೊಡಿಯಂ ಅಂಶ ಇರಬೇಕೆಂದು ಫಿಲ್ಟರ್ ಮಾಡಿದ ಪುಡಿ ಉಪ್ಪುಗಳನ್ನು ಹಲವಾರು ಕಂಪೆನಿಗಳು ಮಾರುಕಟ್ಟೆಗೆ ತರಲಾರಂಭಿಸಿತು. ಜನರು ಹೆಚ್ಚಾಗಿ ಈ ಪುಡಿ ಉಪ್ಪನ್ನು ಬಳಸಲು ಪ್ರಾರಂಭಿಸಿದರು. ಇಂದಿಗೂ ಹೆಚ್ಚಿನ ಜನರು ಎಲ್ಲಾ ಅಡುಗೆಗಳಲ್ಲೂ ಪುಡಿ ಉಪ್ಪನ್ನೇ ಬಳಸುತ್ತಿದ್ದಾರೆ. ಆದರೆ ಇದು ಹೆಚ್ಚಾಗಿ ಕಲ್ಲುಪ್ಪಿನಷ್ಟು ಯಾವುದೇ ಆರೋಗ್ಯ ಪ್ರಯೋಜನವನ್ನು ಹೊಂದಿಲ್ಲ. ಕಲ್ಲುಪ್ಪನ್ನು ಆಯುರ್ವೇದದಲ್ಲಿಯೂ ಪರಿಗಣಿಸಲಾಗಿದೆ ಮತ್ತು ಪ್ರಾಚೀನ ಕಾಲದಲ್ಲಿ ಕಲ್ಲುಪ್ಪಲ್ಲಿ ಔಷಧೀಯ ಗುಣ ಇದೆ ಎಂದು ಪರಿಗಣಿಸಲಾಗಿತ್ತು. ಅದರ ಪ್ರಕಾರ ಕಲ್ಲು ಉಪ್ಪು ಸಾಮಾನ್ಯ ಕೆಮ್ಮು, ಗಂಟಲು ನೋವು, ಶೀತಕ್ಕೆ ಚಿಕಿತ್ಸೆ ನೀಡುವ ಸಾಮಾರ್ಥ್ಯವನ್ನು ಹೊಂದಿದೆ ಮತ್ತು ಜೀರ್ಣಕ್ರಿಯೆಗೂ ಸಹಕಾರಿ.
ಕಲ್ಲುಪ್ಪಿನ ಆರೋಗ್ಯ ಪ್ರಯೋಜನಗಳು:
ಸಾಮಾನ್ಯ ಉಪ್ಪಿಗಿಂತ ಈ ಉಪ್ಪು ಕಡಿಮೆ ಸೋಡಿಯಂ ಅಂಶವನ್ನು ಹೊಂದಿರುವುದರಿಂದ ದೇಹದಲ್ಲಿನ ಸೋಡಿಯಂ ಅಂಶವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಸೋಡಿಯಂನ ಅಧಿಕ ಸೇವನೆ ಮತ್ತು ಸೋಡಿಯಂ ಕೊರತೆ ಇವೆರಡೂ ದೇಹಕ್ಕೆ ಹಾನಿಕಾರಕ. ಆದ್ದರಿಂದ ದೇಹದ ಸೋಡಿಯಂ ನಿಯಂತ್ರಣಕ್ಕಾಗಿ ಕಲ್ಲುಪ್ಪು ಸೇವನೆ ಸೂಕ್ತವಾಗಿದೆ.
ಇದರ ಗಮನಾರ್ಹವಾದ ಎಲೆಕ್ಟೊಲೈಟ್ ಅಂಶದಿಂದಾಗಿ, ಇದು ಸ್ನಾಯು ಸೆಳೆತ ಮತ್ತು ನಮ್ಮ ದೇಹದಲ್ಲಿನ ನರಗಳ ಸರಿಯಾದ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. ಕಲ್ಲು ಉಪ್ಪು ಕಬ್ಬಿಣ, ಸತು, ಮ್ಯಾಂಗನೀಸ್ ಮತ್ತು ಇತರ ಖನಿಜಗಳನ್ನು ಹೊಂದಿದ್ದು, ಅದು ದೇಹಕ್ಕೆ ತುಂಬಾ ಒಳ್ಳೆಯದು.
ಇದನ್ನೂ ಓದಿ: Sea Salt Vs Table Salt: ಸಮುದ್ರದ ಉಪ್ಪು ಅಥವಾ ಪುಡಿ ಉಪ್ಪು ಯಾವುದು ಆರೋಗ್ಯಕ್ಕೆ ಒಳ್ಳೆಯದು?
ಆಯುರ್ವೇದದ ಪ್ರಕಾರ ಕಲ್ಲುಪ್ಪು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಮತ್ತು ಇದು ಬ್ಯಾಕಟೀರಿಯಾದ ಸೋಂಕು, ಅತಿಸಾರ ಇತ್ಯಾದಿಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಆಯುರ್ವೇದವು ಕಲ್ಲುಪ್ಪು ಚರ್ಮದ ಆರೋಗ್ಯವನ್ನು ವೃದ್ಧಿಸಲು ಸಹಾಯ ಮಾಡುತ್ತದೆ ಎಂದು ಹೇಳುತ್ತದೆ. ಇದು ಚರ್ಮವನ್ನು ಬಲಪಡಿಸಿ ಪುನರ್ಯೌವನಗೊಳಿಸುತ್ತದೆ.
ಕಲ್ಲುಪ್ಪು ಆರೋಗ್ಯಕರ ಪರ್ಯಾಯವಾಗಿದೆ. ಇದು ದೇಹಕ್ಕೆ ಪೋಷಕಾಂಶಗಳನ್ನು ಒದಗಿಸುತ್ತದೆ. ಆಯುರ್ವೇದದ ಪ್ರಕಾರ ಇದನ್ನು ಔಷಧೀಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.
ಕಲ್ಲುಪ್ಪನ್ನು ನೈಸರ್ಗಿಕವಾಗಿ ತಯಾರಿಸುವುದರಿಂದ ಇದು ಹೆಚ್ಚು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಆದರೆ ಉಪ್ಪನ್ನು ಸೇವಿಸುವ ಮೊದಲು ಯಾವಾಗಲೂ ನಿಮ್ಮ ಸೋಡಿಯಂ ಮಟ್ಟವನ್ನು ಪರೀಕ್ಷಿಸಲು ಮರೆಯದಿರಿ. ಏಕೆಂದರೆ ಹೆಚ್ಚಿನ ಉಪ್ಪು ಸೇವನೆ ದೇಹಕ್ಕೆ ಹಾನಿಕಾರಕವಾಗಿದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:55 pm, Mon, 27 March 23