Headache: ಪದೇ ಪದೇ ತಲೆನೋವು ನಿಮ್ಮನ್ನು ಕಾಡುತ್ತಿದೆಯಾ? ಹಾಗಾದರೆ ಇಲ್ಲಿದೆ ಸರಳ ಮನೆಮದ್ದು!
ತಲೆ ನೋವಿಗೆ ಮನೆ ಮದ್ದಿನಿಂದ ಪರಿಹಾರ ಕಂಡುಕೊಳ್ಳಬಹುದು. ಇವು ಮಾತ್ರೆಗಳ ಹಾಗಲ್ಲ. ಪದೇ ಪದೇ ಮಾತ್ರೆ ಸೇವಿಸುವ ಬದಲು, ಮನೆ ಮದ್ದುಗಳನ್ನು ಪ್ರಯತ್ನಿಸಬಹುದು. ಇವು ಆರೋಗ್ಯಕ್ಕೆ ಹಾನಿಯುಂಟುಮಾಡದೇ ನಿಮ್ಮ ತಲೆ ನೋವಿಗೆ ಸೂಕ್ತ ಪರಿಹಾರ ನೀಡುತ್ತವೆ. ಹಾಗಾದರೆ ಆ ಮನೆಮದ್ದುಗಳು ಯಾವುದು? ಇಲ್ಲಿದೆ ಮಾಹಿತಿ.
ಮನುಷ್ಯರಾಗಿ ಹುಟ್ಟಿದ ಮೇಲೆ ಖಾಯಿಲೆ ಬರುವುದು ಸಾಮಾನ್ಯ. ಅದೇ ರೀತಿ ಚಿಕ್ಕ ಮಕ್ಕಳಿಂದ ಹಿಡಿದು, ವಯಸ್ಸಾದವರಿಗೂ ತಲೆ ನೋವು ಬಂದೇ ಬರುತ್ತೆ. ಈ ನೋವು ನಮಗೆ ಯಾವ ಕೆಲಸದ ಮೇಲೂ ನಿಖರವಾಗಿ ಆಲೋಚಿಸಲು ಬಿಡುವುದಿಲ್ಲ. ಅದಕ್ಕಾಗಿಯೇ ನಾವು ತಲೆ ನೋವು ಬಂದ ತಕ್ಷಣ ಅದಕ್ಕೆ ಸೂಕ್ತವಾದ ಮಾತ್ರೆ ಹುಡುಕಲು ಆರಂಭಿಸುತ್ತೇವೆ. ಆದರೆ ಅದು ತಪ್ಪು. ತಲೆ ನೋವು ನಮಗೆ ಜೀವನದಲ್ಲಿ ಒಂದೇ ಬಾರಿ ಬರುವುದಲ್ಲ. ಹಾಗಾಗಿ, ಪ್ರತಿ ಬಾರಿ ಮಾತ್ರೆ ತಿನ್ನುವುದು ದೇಹಕ್ಕೆ ಒಳ್ಳೆಯದೂ ಅಲ್ಲ. ಅದರ ಬದಲಾಗಿ ತಲೆ ನೋವು ಮತ್ತು ಅದರ ಅಡ್ಡಪರಿಣಾಮಗಳನ್ನು ಹೋಗಲಾಡಿಸಿಕೊಳ್ಳಲು ಅಧಿಕ ಶಕ್ತಿಶಾಲಿಯಾದ ಮನೆಮದ್ದುಗಳ ಮೊರೆ ಹೋಗುವುದು ಒಳಿತು.
ತಲೆ ನೋವು ಅನೇಕ ಕಾರಣಗಳಿಂದ ಬರಬಹುದು. ಆದರೆ ನೀವು ಅದನ್ನು ಪತ್ತೆ ಹಚ್ಚಿ ಅದಕ್ಕೆ ಸೂಕ್ತವಾದ ಪರಿಹಾರ ಕಂಡುಕೊಳ್ಳಬೇಕಾಗುತ್ತದೆ. ಅನೇಕ ಬಾರಿ ನಾವು ಬಿಸಿಲು, ಶಾಖ, ಶಬ್ದ ಇತ್ಯಾದಿಗಳಿಂದಾಗಿ ತೀವ್ರ ತಲೆನೋವಿನ ಸಮಸ್ಯೆ ಎದುರಿಸುತ್ತೇವೆ. ಕೆಲವೊಮ್ಮೆ ಅತಿಯಾದ ದೈಹಿಕ ಉಷ್ಣಾಂಶ ಅಥವಾ ಪಿತ್ತದ ಪ್ರಭಾವದಿಂದಲೂ ತಲೆ ನೋವು ಕಾಣಿಸಿಕೊಳ್ಳುತ್ತದೆ. ಇನ್ನು ಕೆಲವರಿಗೆ ತಂಪಾದ ವಾತಾವರಣದಿಂದ ಅಂದರೆ, ಮಳೆಗಾಲ, ಚಳಿಗಾಲ ಅಥವಾ ಎಸಿಯಿಂದ ಸೈನಸ್ ತಲೆನೋವು ಕಂಡುಬರುತ್ತವೆ. ಇಂತಹ ಅನೇಕ ಸಮಸ್ಯೆಗಳಿಗೆ ಮನೆ ಮದ್ದಿನಿಂದ ಪರಿಹಾರ ಕಂಡುಕೊಳ್ಳಬಹುದು. ಇವು ಆರೋಗ್ಯಕ್ಕೆ ಹಾನಿಯಾಗದಂತೆ ತಲೆ ನೋವಿಗೆ ಪರಿಹಾರ ನೀಡುತ್ತವೆ. ಹಾಗಾದರೆ ಆ ಮನೆಮದ್ದುಗಳು ಯಾವುದು? ಇಲ್ಲಿದೆ ಮಾಹಿತಿ.
-ದೈಹಿಕ ಉಷ್ಣಾಂಶ ಅಥವಾ ಪಿತ್ತದ ಪ್ರಭಾವದಿಂದ ತಲೆ ನೋವು ಕಾಣಿಸಿಕೊಂಡರೆ ನೀವು ಮಜ್ಜಿಗೆ ಅಥವಾ ಎಳನೀರು ಕುಡಿಯುವುದು ಅಥವಾ ನಿಮ್ಮ ಮನೆಯಲ್ಲಿ ಹರಳೆಣ್ಣೆ ಇದ್ದರೆ ಅದನ್ನು ನೆತ್ತಿಯ ಭಾಗಕ್ಕೆ ಮತ್ತು ಪಾದಗಳಿಗೆ ಹಚ್ಚುವುದರಿಂದ ತಲೆ ನೋವಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
– ಇನ್ನು ಪದೇ ಪದೇ ತಲೆನೋವು ಬಂದಾಗಲೆಲ್ಲಾ ನೀವು ತುಳಸಿ ಎಲೆಗಳನ್ನು ಒಂದು ಕಪ್ ನೀರಿನಲ್ಲಿ ಹಾಕಿ ಕುದಿಸಿ. ಇದಕ್ಕೆ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ತಲೆ ನೋವು ಕಡಿಮೆಯಾಗುತ್ತದೆ. ಈ ವಿಧಾನವನ್ನು ಪ್ರತಿ ಬಾರಿಯೂ ಮಾಡುವುದರಿಂದ, ತಲೆ ನೋವು ಬಿಟ್ಟು ಬಿಟ್ಟು ಬರುವುದಿಲ್ಲ.
ಇದನ್ನೂ ಓದಿ: ಹೊಟ್ಟೆನೋವಿನಿಂದ ಪಾರಾಗಲು ಬಳಸಿ ದಾಲ್ಚಿನ್ನಿ; ಹೊಟ್ಟೆ ಉರಿ ಶಮನಗೊಳಿಸಲು ಉತ್ತಮ ಪರಿಹಾರ
-ಇದಕ್ಕೆ ಮತ್ತೊಂದು ಅದ್ಭುತ ಪರಿಹಾರವೆಂದರೆ ಲವಂಗ. ಇದನ್ನು ನೀವು, ಬಾಣಲೆಯಲ್ಲಿ ಸ್ವಲ್ಪ ಬಿಸಿ ಮಾಡಿ ನಂತರ ಈ ಬಿಸಿ ಲವಂಗದ ಮೊಗ್ಗುಗಳನ್ನು ಒಂದು ಸ್ವಚ್ಛವಾದ ಕರವಸ್ತ್ರದಲ್ಲಿ ಕಟ್ಟಿಕೊಂಡು ಸ್ವಲ್ಪ ಸಮಯದವರೆಗೆ ಇದರ ಪರಿಮಳವನ್ನು ಆಸ್ವಾದಿಸಿ. ಈ ರೀತಿ ಮಾಡುವುದರಿಂದ ತಲೆನೋವು ಬಹು ಬೇಗ ನಿವಾರಣೆಯಾಗುತ್ತದೆ. ಇದನ್ನು ಚಿಕ್ಕ ಮಕ್ಕಳಿಗೂ ಮಾಡಿಸಬಹುದು. ಅದಲ್ಲದೆ ಲವಂಗ ಮತ್ತು ತೆಂಗಿನ ಎಣ್ಣೆಯ ಮಿಶ್ರಣ ಮಾಡಿ ಆ ಮಿಶ್ರಣವನ್ನು ಹಣೆಗೆ ಹಚ್ಚುವುದರಿಂದ ಮತ್ತು ಲವಂಗ ಉಪ್ಪನ್ನು ಜಜ್ಜಿ ಹಾಲಿನೊಂದಿಗೆ ಬೆರೆಸಿ ಕುಡಿಯುವುದರಿಂದ ತಲೆ ನೋವು ಶಮನವಾಗುತ್ತದೆ.
-ನೀವು ಕರಿಮೆಣಸು ಮತ್ತು ಪುದೀನ ಸೇರಿಸಿ, ಚಹಾ ತಯಾರಿಸಿ ಕುಡಿಯುವುದರಿಂದ ಕೂಡ ತಲೆನೋವಿನಿಂದ ಮುಕ್ತಿ ಪಡೆಯಬಹುದು. ಅಥವಾ ನೀವು ಪ್ರತಿದಿನ ಮಾಡಿಕೊಳ್ಳುವ ಚಹಾದ ಕಣ್ಣಿಗೆ ಕೆಲವು ಪುದೀನ ಎಲೆಗಳು ಮತ್ತು ಕರಿಮೆಣಸಿನ ಪುಡಿಗಳನ್ನು ಸೇರಿಸಿ ಚೆನ್ನಾಗಿ ಕುದಿಸಿ, ಕುಡಿಯಬಹುದು.
– ವೀಳ್ಯದ ಎಲೆಗಳನ್ನು ಯಾವುದೇ ಮಿಶ್ರಣವಿಲ್ಲದೇ ಸೇವಿಸದುವುದರಿಂದ ಕೂಡ ತಲೆ ನೋವು ಕಡಿಮೆಯಾಗುತ್ತದೆ. ಇದು ಸರಳ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ.
ಇದನ್ನೂ ಓದಿ: ಮಧುಮೇಹದಿಂದ ಬಳಲುತ್ತಿರುವ 5ರಲ್ಲಿ ಒಬ್ಬರು 18-30 ವರ್ಷ ವಯಸ್ಸಿನವರು: ಸಂಶೋಧನೆ
-ಬೆಳಿಗ್ಗೆ ಅಥವಾ ರಾತ್ರಿ ಅಥವಾ ಎರಡು ಬಾರಿ 6- 7 ಒಣದ್ರಾಕ್ಷಿ ಸೇವಿಸುವುದರಿಂದ ಪದೇ ಪದೇ ಬರುವ ತಲೆ ನೋವು ಮಾಯವಾಗುತ್ತದೆ. ಇದನ್ನು ಬಿಡದೇ ಪ್ರತಿದಿನ ಒಂದು ತಿಂಗಳು ಮಾಡಬೇಕು. ಅದಲ್ಲದೆ ಇದು ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತದೆ. ಕೆಲವೊಮ್ಮೆ ಜೀರ್ಣ ಶಕ್ತಿ ಆಗದಿದ್ದಾಗಲೂ ತಲೆ ನೋವು ಕಾಣಿಸಿಕೊಳ್ಳುತ್ತದೆ.
– ಇನ್ನೊಂದು ಸರಳ ಮನೆ ಮದ್ದೇನೆಂದರೆ ಒಂದು ಲೋಟದಲ್ಲಿ ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದಕ್ಕೆ ನಿಂಬೆ ರಸವನ್ನು ಸೇರಿಸಿ ಕುಡಿಯಿರಿ. ಇದು ತಲೆನೋವಿಗೆ ಪರಿಹಾರ ನೀಡುತ್ತದೆ. ಕೆಲವೊಮ್ಮೆ ಹೊಟ್ಟೆಯಲ್ಲಿ ಗ್ಯಾಸ್ ಆಗಿ ತಲೆನೋವು ಕಾಣಿಸಿಕೊಳ್ಳುತ್ತದೆ ಹಾಗಾಗಿ ಇದನ್ನು ಕಡಿಮೆ ಮಾಡಲು ನಿಂಬೆ ರಸ ಮತ್ತು ಬೆಚ್ಚಗಿನ ನೀರು ತುಂಬಾ ಉಪಯುಕ್ತವಾಗಿದೆ.
-ತುಳಸಿ ಮತ್ತು ಶುಂಠಿಯು ತಲೆ ನೋವು ದೂರ ಮಾಡಲು ಇರುವ ಉತ್ತಮ ಸಾಮಗ್ರಿಗಳಾಗಿವೆ. ಇವೆರಡನ್ನೂ ಬಳಸಿ ತಲೆ ನೋವು ಕಡಿಮೆ ಮಾಡಿಕೊಳ್ಳಬಹುದು. ತುಳಸಿ ಎಲೆ ಮತ್ತು ಶುಂಠಿಯ ರಸವನ್ನು ಮಿಶ್ರಣ ಮಾಡಿ. ನಂತರ ಅದನ್ನು ಹಣೆಗೆ ಹಚ್ಚಿಕೊಳ್ಳುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಇದನ್ನು ನೀವು ಸೇವಿಸಲೂಬಹುದು. ಆದರೆ ತಲೆಗೆ ಹಚ್ಚುವುದರಿಂದ ಹೆಚ್ಚಿನ ಫಲಿತಾಂಶ ದೊರೆಯುತ್ತದೆ.
-ಇದೆಲ್ಲದರ ಜೊತೆಗೆ ಇನ್ನೊಂದು ಪರಿಣಾಮಕಾರಿ ಮನೆಮದ್ದೆಂದರೆ ಹುಣಸೆ ಬೀಜವನ್ನು ತೈದು ಹಣೆಗೆ ಹಚ್ಚಿಕ್ಕೊಳುವುದು. ಇದು ನಿಮಗೆ ಅತೀ ವೇಗವಾಗಿ ತಲೆ ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
-ಜಾಯಿಕಾಯಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂಬುದು ನಿಮಗೆ ತಿಳಿದಿರಬಹುದು, ಅದರ ಜೊತೆಗೆ ತಲೆ ನೋವು ಬಂದಾಗ ಕೂಡ ಜಾಯಿಕಾಯಿ ಪುಡಿಯನ್ನು ಬಿಸಿ ನೀರಿನಲ್ಲಿ ಬೆರೆಸಿ ಸೇವಿಸುವುದರಿಂದ ತಲೆನೋವಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ