Walking Benefits: ನಡೆಯುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ?

| Updated By: Rakesh Nayak Manchi

Updated on: Oct 27, 2022 | 6:15 AM

ದಿನನಿತ್ಯ ಒಂದಷ್ಟು ದೂರ ನಡಿಯುವುದರಿಂದ ದೇಹಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನವಾಗಲಿದೆ. ಇದೇ ಕಾರಣಕ್ಕೆ ಒಂದಷ್ಟು ಮಂದಿ ಕನಿಷ್ಠ 15-30 ನಿಮಿಷಗಳ ಕಾಲ ವಾಕಿಂಗ್ ಮಾಡುತ್ತಾರೆ.

Walking Benefits: ನಡೆಯುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ?
ನಡಿಗೆಯ ಪ್ರಯೋಜನಗಳು
Follow us on

ಪ್ರತಿನಿತ್ಯ ನಡೆಯುವುದರಿಂದ ದೇಹಕ್ಕೆ ನಾನಾ ರೀತಿಯಲ್ಲಿ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಅದಕ್ಕಾಗಿಯೇ ಪ್ರತಿಯೊಬ್ಬರೂ ದಿನಕ್ಕೆ ಕನಿಷ್ಠ ಮೂವತ್ತು ನಿಮಿಷಗಳ ಕಾಲ ನಡೆಯಬೇಕು ಎಂದು ತಜ್ಞರು ಹೇಳುತ್ತಾರೆ. ವಾಕಿಂಗ್, ಇತರ ಯಾವುದೇ ವ್ಯಾಯಾಮಗಳು ಕ್ಯಾಲೊರಿಗಳನ್ನು ಸುಡುತ್ತದೆ. ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ವಾಕಿಂಗ್ ದೇಹವನ್ನು ಫಿಟ್ ಆಗಿ ಇಡುತ್ತದೆ. ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ತಡೆಯುತ್ತದೆ. ನಡಿಗೆಯ ಅದ್ಭುತ ಪ್ರಯೋಜನಗಳು ಇಲ್ಲಿವೆ ನೋಡಿ.

  1. ಕ್ಯಾಲೊರಿಗಳನ್ನು ಬರ್ನ್ ಮಾಡಲು ಸಹಕಾರಿ: ಕ್ಯಾಲೊರಿಗಳನ್ನು ಸುಡಲು ಮತ್ತು ತೂಕವನ್ನು ಕಳೆದುಕೊಳ್ಳಲು ವಾಕಿಂಗ್ ಅದ್ಭುತವಾದ ಮಾರ್ಗವಾಗಿದೆ. ಸಾಮಾನ್ಯವಾಗಿ ನಡೆಯುವುದಕ್ಕಿಂತ ಚುರುಕಾಗಿ ನಡೆಯುವುದು ಹೆಚ್ಚು ಪ್ರಯೋಜನಕಾರಿ. ಅದೇ ರೀತಿ ಸುಗಮ ಹಾದಿಯಲ್ಲಿ ನಡೆಯುವುದಕ್ಕಿಂತ ಅಂಕುಡೊಂಕಾದ ಹಾದಿಯಲ್ಲಿ ನಡೆಯುವುದರಿಂದ ಹೆಚ್ಚಿನ ಕ್ಯಾಲೊರಿಗಳನ್ನು ದಹಿಸಲು ಸಹಕಾರಿಯಾಗಲಿದೆ.
  2. ಟೋನಿಂಗ್: ವಾಕಿಂಗ್ ನಿಮ್ಮ ಕಾಲಿನ ಸ್ನಾಯುಗಳನ್ನು ಬಲಪಡಿಸುತ್ತದೆ. ಇದು ಹೆಚ್ಚು ಟೋನ್ ಆಗಿ ಕಾಣುವಂತೆ ಮಾಡುತ್ತದೆ. ಜಾಗಿಂಗ್, ಸೈಕ್ಲಿಂಗ್, ಸ್ಕ್ವಾಟ್‌ಗಳು, ಲುಂಜ್‌ಗಳಂತಹ ಇತರ ವ್ಯಾಯಾಮಗಳಿಂದ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು
  3. ಹೃದಯರಕ್ತನಾಳದ ಆರೋಗ್ಯದಲ್ಲಿ ಸುಧಾರಣೆ: ಪ್ರತಿದಿನ 30 ನಿಮಿಷಗಳ ನಡಿಗೆಯು ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಇದು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಹೃದಯದ ಆರೋಗ್ಯವು ನೀವು ಎಷ್ಟು ದೂರ ನಡೆಯುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
  4. ಸಕ್ಕರೆ ಮಟ್ಟದ ನಿಯಂತ್ರಣ: ನಿಯಮಿತವಾದ ನಡಿಗೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಅಮೇರಿಕನ್ ಡಯಾಬಿಟಿಸ್ ಅಸೋಸಿಯೇಷನ್ ​​​​ಪ್ರಕಟಿಸಿದ ಅಧ್ಯಯನದ ಪ್ರಕಾರ, ವಾಕಿಂಗ್ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ವ್ಯಾಯಾಮ ಮತ್ತು ಆರೋಗ್ಯಕ್ಕಾಗಿ ಊಟದ ನಂತರ ನಡೆಯುವುದು ಉತ್ತಮ ಪರಿಣಾಮಗಳನ್ನು ಹೊಂದಿದೆ.
  5. ಶಕ್ತಿಯನ್ನು ಹೆಚ್ಚಿಸುತ್ತದೆ: ನಿಮ್ಮ ನಿಯಮಿತ ಕೆಫೀನ್ ಸೇವನೆಯ ಬದಲಿಗೆ ಶಕ್ತಿಯನ್ನು ಹೆಚ್ಚಿಸಲು ಮನೆ ಅಥವಾ ಕಚೇರಿಯಲ್ಲಿ ಸ್ವಲ್ಪ ವಾಕಿಂಗ್ ಮಾಡಿ. ದಣಿದಿರುವಾಗ ಅಥವಾ ನಿದ್ದೆ ಬಂದಾಗ ನಿಮ್ಮ ಶಕ್ತಿಯನ್ನು ಹೆಚ್ಚಿಸಲು ವಾಕಿಂಗ್ ಹೆಚ್ಚು ಪರಿಣಾಮಕಾರಿಯಾಗಿದೆ. ಏಕೆಂದರೆ ಇದು ದೇಹದಲ್ಲಿ ಆಮ್ಲಜನಕ, ಕಾರ್ಟಿಸೋಲ್, ಎಪಿನ್‌ಫ್ರಿನ್, ನೊರ್‌ಪೈನ್ಫ್ರಿನ್‌ನಂತಹ ಹಾರ್ಮೋನ್‌ಗಳ ಮಟ್ಟವನ್ನು ಹೆಚ್ಚಿಸುತ್ತದೆ.
  6. ಸೃಜನಶೀಲರನ್ನಾಗಿಸಲು ಸಹಕಾರಿ: ನಡಿಗೆಯಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಮನಸ್ಸನ್ನು ರಿಲ್ಯಾಕ್ಸ್ ಮಾಡಲು ಉಪಯುಕ್ತವಾಗಿದೆ. ಇದಲ್ಲದೆ ಇದು ಚಿಂತನೆಯ ಪ್ರಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕಚೇರಿಯಲ್ಲಿರಲಿ ಅಥವಾ ಮನೆಯಲ್ಲಿಯೇ ಇರಲಿ ನಡಿಗೆಗಾಗಿ ಒಂದಷ್ಟು ಸಮಯ ತೆಗೆದುಕೊಳ್ಳುವುದರಿಂದ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು.

ಮತ್ತಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ