ದಿನವೂ ಒಂದು ಸೇಬು ತಿನ್ನಿ, ಇದು ವೈದ್ಯರನ್ನು ದೂರವಿರಿಸುತ್ತದೆ’ ಎಂಬ ಮಾತನ್ನು ನೀವು ಕೇಳಿರಬಹುದು. ಈ ಮಾತು ಜನಪ್ರಿಯವಾಗಲು ಹಲವಾರು ಕಾರಣಗಳಿವೆ. ಈ ರುಚಿಕರವಾದ ಹಣ್ಣು ಪೋಷಕಾಂಶಗಳಿಂದ ತುಂಬಿದೆ. ಜೀರ್ಣಕ್ರಿಯೆಯಿಂದ ಹಿಡಿದು ಚರ್ಮದ ಆರೋಗ್ಯದವರೆಗೆ ಸೇಬಿನ ಅನೇಕ ಆರೋಗ್ಯ ಪ್ರಯೋಜನಗಳಿವೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಸೇಬು ಅತ್ಯಂತ ಸುಲಭವಾಗಿ ಲಭ್ಯವಿರುವ ಮತ್ತು ಅತ್ಯಂತ ಪೌಷ್ಟಿಕವಾದ ಹಣ್ಣುಗಳಲ್ಲಿ ಒಂದಾಗಿದೆ. ನೀವು ಸೇಬು ಮಾತ್ರ ಸೇವಿಸಬಹುದು ಅಥವಾ ಅದನ್ನು ತುಂಡು ತುಂಡಾಗಿ ಕತ್ತರಿಸಿ ಇತರ ಹಣ್ಣುಗಳೊಂದಿಗೆ ಸಲಾಡ್ ಮಾಡಿಯೂ ತಿನ್ನಬಹುದು ಅಥವಾ ಸೇಬುಗಳನ್ನು ಬಳಸಿ ಸಿಹಿ ತಿಂಡಿ ಮಾಡಬಹುದು. ಸೇಬುಗಳನ್ನು ತಿನ್ನುವ ವಿಧಾನಗಳು ಅನೇಕ. ಹಾಗೆಯೇ ಸೇಬುಗಳ ಆರೋಗ್ಯ ಪ್ರಯೋಜನಗಳು ಇದೆ.
ಸೇಬು ಹಣ್ಣು, ಕರಗುವ ಮತ್ತು ಕರಗದ ನಾರಿನ ಉತ್ತಮ ಮೂಲವಾಗಿದೆ, ಇದು ಆರೋಗ್ಯಕರ ಜೀರ್ಣಕ್ರಿಯೆಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ಮಲಬದ್ಧತೆ ಮತ್ತು ಸಂಬಂಧಿತ ಪರಿಸ್ಥಿತಿಗಳನ್ನು ತಡೆಯುತ್ತದೆ ಎಂದು ಮುಂಬೈನ ನಾನಾವತಿ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಆಹಾರ ತಜ್ಞ ಮತ್ತು ಕ್ಲಿನಿಕಲ್ ನ್ಯೂಟ್ರಿಷನಿಸ್ಟ್ ಡಾ. ಉಷಾಕಿರಣ್ ಸಿಸೋಡಿಯಾ ಹೇಳುತ್ತಾರೆ.
ಅಧಿಕ ಕೊಲೆಸ್ಟ್ರಾಲ್ ಮಟ್ಟವು ಯಾರಿಗೂ ಸಂತೋಷ ತರುವುದಿಲ್ಲ. ಆದರೆ ಸೇಬಿನ ಒಂದು ಆರೋಗ್ಯ ಪ್ರಯೋಜನವೆಂದರೆ, ವಿಶೇಷವಾಗಿ ಕೆಂಪು ಸೇಬು, ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ತಿಳಿದು ಬಂದಿದೆ. ಅಂದರೆ ಇದು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಪೋಷಕಾಂಶ ಭರಿತ ಸೇಬುಗಳಲ್ಲಿ ಕ್ವೆರ್ಸೆಟಿನ್ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಇದು ದೇಹದಲ್ಲಿನ ಫ್ರೀ ರಾಡಿಕಲ್ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಮತ್ತು ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಸೇಬುಗಳ ಹೆಚ್ಚಿನ ಫೈಬರ್ ಅಂಶವು ಆಹಾರ ಸೇವನೆಯ ಬಳಿಕ ಸಂತೃಪ್ತಿ ಮೂಡಿಸಲು ಸಹಾಯ ಮಾಡುತ್ತದೆ. ಹಾಗಾಗಿ ಇದು ಬೊಜ್ಜಿನ ಸಾಧ್ಯತೆಗಳನ್ನು ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.
ನಾವು ಮೂಳೆಯ ಆರೋಗ್ಯದ ಬಗ್ಗೆ ಮಾತನಾಡಿದರೆ, ಹೆಚ್ಚಾಗಿ ಹಾಲು ಮತ್ತು ಡೈರಿ ಉತ್ಪನ್ನಗಳ ಬಗ್ಗೆ ಯೋಚಿಸುತ್ತೇವೆ. ಆದರೆ ಸೇಬುಗಳಲ್ಲಿ ಕಂಡುಬರುವ ಬೋರಾನ್ ನಂತಹ ಕೆಲವು ಸಂಯುಕ್ತಗಳು ಮೂಳೆಗಳನ್ನು ಬಲಪಡಿಸುತ್ತವೆ ಎಂದು ನಂಬಲಾಗಿದೆ.
ಮಧುಮೇಹವು ನಿಧಾನವಾಗಿ ಅನೇಕರ ಜೀವನ ಹಿಂಡುತ್ತಿದೆ. ಹಾಗಾಗಿ ಸೇಬುಗಳನ್ನು ಸೇವಿಸುವುದರಿಂದ ಟೈಪ್ 2 ಮಧುಮೇಹದ ಕಡಿಮೆ ಅಪಾಯದೊಂದಿಗೆ ಸಂಬಂಧ ಹೊಂದಿರಬಹುದು. ಇದು ಬಹುಶಃ ಅವುಗಳ ಫೈಬರ್ ಮತ್ತು ಉತ್ಕರ್ಷಣ ನಿರೋಧಕ ಅಂಶದಿಂದಾಗಿರಬಹುದು ಎಂದು ತಜ್ಞರು ಹೇಳುತ್ತಾರೆ.
ಸೇಬುಗಳಲ್ಲಿ ಕಂಡುಬರುವ ವಿಟಮಿನ್ ಸಿ ಆರೋಗ್ಯಕರ ಕಾಲಜನ್ ಉತ್ಪಾದನೆಗೆ ಕೊಡುಗೆ ನೀಡುತ್ತದೆ, ಇದು ಚರ್ಮದ ಸ್ಥಿತಿಸ್ಥಾಪಕತ್ವ ಮತ್ತು ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಅವಶ್ಯಕವಾಗಿದೆ. ಆದ್ದರಿಂದ ಸೇಬುಗಳು ನಿಮಗೆ ಕೆಲವು ರೀತಿಯಲ್ಲಿ ಯೌವನದ ನೋಟವನ್ನು ನೀಡಲು ಸಹಾಯ ಮಾಡುತ್ತದೆ. ಜೊತೆಗೆ ಚರ್ಮದ ಆರೋಗ್ಯವನ್ನೂ ಕಾಪಾಡುತ್ತದೆ.
ಇದನ್ನೂ ಓದಿ:ಊಟಕ್ಕೆ ಮುಂಚೆ ಬಾದಾಮಿ ತಿಂದರೆ ಆಗುವ ಅರೋಗ್ಯ ಪ್ರಯೋಜನಗಳು ಇಲ್ಲಿವೆ
ಉಸಿರಾಟದ ಸಮಸ್ಯೆಗಳಿಗೆ ಮಾಲಿನ್ಯ ಅಥವಾ ಇತರ ಅಂಶಗಳನ್ನು ನೀವು ದೂಷಿಸಬಹುದು. ಹಾಗಾಗಿ ಸೇಬು ಸೇವನೆಯು ಶ್ವಾಸಕೋಶದ ಕಾರ್ಯವನ್ನು ಸುಧಾರಿಸುತ್ತದೆ ಮತ್ತು ಉಸಿರಾಟದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಹಣ್ಣುಗಳು ಅಥವಾ ತರಕಾರಿಗಳನ್ನು ಹೈಡ್ರೇಟ್ ಮಾಡುವುದು ಕಲ್ಲಂಗಡಿ ಅಥವಾ ಸೌತೆಕಾಯಿ ಮಾತ್ರವಲ್ಲ. ಸೇಬುಗಳಲ್ಲಿ ಹೆಚ್ಚಿನ ನೀರಿನ ಅಂಶವಿದೆ, ಇದು ದೇಹವನ್ನು ಹೈಡ್ರೇಟ್ ಆಗಿಡಲು ಸಹಾಯ ಮಾಡುತ್ತದೆ ಎಂದು ಡಾ. ಸಿಸೋಡಿಯಾ ಹೇಳುತ್ತಾರೆ.
ಒಂದು ದಿನದಲ್ಲಿ ಎಷ್ಟು ಸೇಬುಗಳನ್ನು ತಿನ್ನಬಹುದು ಎಂಬುದಕ್ಕೆ ಯಾವುದೇ ಕಟ್ಟುನಿಟ್ಟಾದ ಮಿತಿಯಿಲ್ಲ ಎಂದು ತಜ್ಞರು ಹೇಳುತ್ತಾರೆ. ಜೊತೆಗೆ ಆರೋಗ್ಯಕರ ಆಹಾರದಂತೆ, ಅವುಗಳನ್ನು ಸಮತೋಲಿತ ಆಹಾರದ ಭಾಗವಾಗಿ ತಿನ್ನಬೇಕು. ಸರಾಸರಿ, ದಿನಕ್ಕೆ ಒಂದು ಅಥವಾ ಎರಡು ಸೇಬುಗಳನ್ನು ಸೇವಿಸುವುದು ಸಾಮಾನ್ಯ ಮತ್ತು ಹೆಚ್ಚಿನ ಜನರಿಗೆ ಪ್ರಯೋಜನಕಾರಿಯೂ ಆಗಿದೆ. ಸೇಬುಗಳು ಶಕ್ತಿಯ ತ್ವರಿತ ಮೂಲವಾಗಿದೆ, ಏಕೆಂದರೆ ಅವು ನೈಸರ್ಗಿಕ ಸಕ್ಕರೆಗಳನ್ನು ಹೊಂದಿರುತ್ತವೆ, ಅದು ನಿಮ್ಮ ದಿನವನ್ನು ಪ್ರಾರಂಭಿಸಲು ಸಹಾಯ ಮಾಡುತ್ತದೆ. ಅದೇ ಸಮಯದಲ್ಲಿ, ಬೆಳಿಗ್ಗೆ ಒಂದು ಸೇಬು ತಿನ್ನುವುದು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ದಿನವಿಡೀ ಉತ್ತೇಜಿಸುತ್ತದೆ. ಆದರೆ ಖಾಲಿ ಹೊಟ್ಟೆಯಲ್ಲಿ ಸೇಬು ಸೇವಿಸಿದರೆ ಕೆಲವರು ಅಸ್ವಸ್ಥತೆ ಅಥವಾ ಆಮ್ಲೀಯತೆಯನ್ನು ಅನುಭವಿಸಬಹುದು. ಆದ್ದರಿಂದ, ನಿಮಗೆ ಹೊಟ್ಟೆಯ ಸಮಸ್ಯೆ ಇದ್ದರೆ, ಖಾಲಿ ಹೊಟ್ಟೆಯಲ್ಲಿ ಈ ಹಣ್ಣನ್ನು ತಿನ್ನದಿರಲು ಪ್ರಯತ್ನಿಸಿ.
Published On - 4:28 pm, Mon, 11 September 23