Health Tips: ಅವಲಕ್ಕಿ ಸೇವನೆ ಮಾಡುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನವಿದೆ ನೋಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 03, 2024 | 9:23 AM

ಕೃಷ್ಣ, ಸುಧಾಮರ ಸ್ನೇಹದ ಪ್ರತೀಕವಾದ ಅವಲಕ್ಕಿಯಿಂದ, ವಿವಿಧ ರೀತಿಯ ಆಹಾರಗಳನ್ನು ಮಾಡುವುದು ಸುಲಭ ಒಂದೇ ಅಲ್ಲ, ಅದನ್ನು ಜೀರ್ಣಿಸಿಕೊಳ್ಳುವುದು ಕೂಡ ಅಷ್ಟೇ ಸುಲಭವಾಗಿರುತ್ತದೆ. ಅದರಲ್ಲಿಯೂ ನಾವು ಪ್ರತಿನಿತ್ಯ ಸೇವನೆ ಮಾಡುವ ಅನ್ನಕ್ಕಿಂತಲೂ ಹೆಚ್ಚು ಆರೋಗ್ಯ ಪ್ರಯೋಜನ ಇದರಲ್ಲಿ ಇದೆ. ಇದಲ್ಲದೆ ಅವಲಕ್ಕಿಯನ್ನು ಉಪಹಾರ ಮತ್ತು ಸಂಜೆಯ ತಿಂಡಿಯಾಗಿಯೂ ಕೂಡ ಸೇವನೆ ಮಾಡಬಹುದು. ಹಾಗಾದರೆ ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಡಾ. ರಾಹುಲ್ ದೇವರಾಜ್ ಅವರು ಹೇಳಿರುವ ಉಪಯುಕ್ತ ಮಾಹಿತಿ ಇಲ್ಲಿದೆ.

Health Tips: ಅವಲಕ್ಕಿ ಸೇವನೆ ಮಾಡುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನವಿದೆ ನೋಡಿ
Follow us on

ಅವಲಕ್ಕಿ ಕಂಡರೆ ಕೆಲವರಿಗೆ ಅಷ್ಟಕಷ್ಟೇ. ಅದರಲ್ಲಿ ಏನು ವಿಶೇಷತೆ ಇದೆ ಎಂದು ಮುಗುಮುರಿಯುವರೇ ಜಾಸ್ತಿ. ಆದರೆ ಇದು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂಬುದನ್ನು ತಿಳಿದರೆ ನಿಜವಾಗಲೂ ಆಶ್ಚರ್ಯ ಪಡುತ್ತೀರಿ. ಕೃಷ್ಣ, ಸುಧಾಮರ ಸ್ನೇಹದ ಪ್ರತೀಕವಾದ ಈ ಅವಲಕ್ಕಿಯಿಂದ, ವಿವಿಧ ರೀತಿಯ ಆಹಾರಗಳನ್ನು ಮಾಡುವುದು ಸುಲಭ ಒಂದೇ ಅಲ್ಲ, ಅದನ್ನು ಜೀರ್ಣಿಸಿಕೊಳ್ಳುವುದು ಕೂಡ ಅಷ್ಟೇ ಸುಲಭವಾಗಿರುತ್ತದೆ. ಅದರಲ್ಲಿಯೂ ನಾವು ಪ್ರತಿನಿತ್ಯ ಸೇವನೆ ಮಾಡುವ ಅನ್ನಕ್ಕಿಂತಲೂ ಹೆಚ್ಚು ಆರೋಗ್ಯ ಪ್ರಯೋಜನ ಇದರಲ್ಲಿ ಇದೆ. ಇದಲ್ಲದೆ ಅವಲಕ್ಕಿಯನ್ನು ಉಪಹಾರ ಮತ್ತು ಸಂಜೆಯ ತಿಂಡಿಯಾಗಿಯೂ ಕೂಡ ಸೇವನೆ ಮಾಡಬಹುದು. ಹಾಗಾದರೆ ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಡಾ. ರಾಹುಲ್ ದೇವರಾಜ್ ಅವರು ಹೇಳಿರುವ ಉಪಯುಕ್ತ ಮಾಹಿತಿ ಇಲ್ಲಿದೆ.

  • ಅವಲಕ್ಕಿಯಲ್ಲಿ ಅನ್ನಕ್ಕಿಂತ ಕಡಿಮೆ ಕ್ಯಾಲೋರಿ ಇರುವುದರಿಂದ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಇದನ್ನು ಸೇವನೆ ಮಾಡಬಹುದು. ಅದರಲ್ಲಿಯೂ ನಿಮಗೆ ಚಪಾತಿ, ಓಟ್ಸ್ ತಿಂದು ಬೇಸರವಾಗಿದ್ದರೆ ನೀವು ಅವಲಕ್ಕಿ ಸೇವನೆ ಮಾಡಬಹುದು.
  • ಅವಲಕ್ಕಿ ಬಹು ಬೇಗ ಜೀರ್ಣವಾಗುವುದರಿಂದ ಇದನ್ನು ಯಾವುದೇ ತೊಂದರೆ ಇಲ್ಲದೆಯೇ ಸೇವನೆ ಮಾಡಬಹುದು.
  • ಅವಲಕ್ಕಿ ಪ್ರೋಬಯಾಟಿಕ್ ಗುಣಗಳನ್ನು ಹೊಂದಿದ್ದು, ಕರುಳನ್ನು ಆರೋಗ್ಯಕರವಾಗಿಡಲು ಸಹಕಾರಿಯಾಗಿದೆ.
  • ಅವಲಕ್ಕಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಮಧುಮೇಹ ಸಮಸ್ಯೆ ಇರುವವರು ಕೂಡ ಅವಲಕ್ಕಿಯ ಸೇವನೆ ಮಾಡಬಹುದು.
  • ಅವಲಕ್ಕಿಯಲ್ಲಿ ಕಬ್ಬಿಣ ಮತ್ತು ಕಾರ್ಬೋಹೈಡ್ರೇಟ್‌ಗಳು ಸಮೃದ್ಧವಾಗಿದ್ದು, ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುತ್ತದೆ. ಹಾಗಾಗಿ ಅಕ್ಕಿಗಿಂತ ಅವಲಕ್ಕಿ ಹೆಚ್ಚು ಆರೋಗ್ಯಕರ ಎಂದು ತಜ್ಞರು ಹೇಳುತ್ತಾರೆ.
  • ಗರ್ಭಾವಸ್ಥೆಯಲ್ಲಿ ರಕ್ತಹೀನತೆ, ಅನಿಮಿಯಾ ಸಮಸ್ಯೆಯಿಂದ ಬಳಲುತ್ತಿದ್ದರೆ ಅದನ್ನು ನಿವಾರಣೆ ಮಾಡಲು ವಾರದಲ್ಲಿ ನಾಲ್ಕು ಅಥವಾ ಐದು ಬಾರಿ ಅವಲಕ್ಕಿಯನ್ನು ಸೇವನೆ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ