Google AI: ಕೆಮ್ಮು, ಉಸಿರಾಟ ಆಲಿಸಿ ಕ್ಷಯರೋಗವನ್ನು ಗುರುತಿಸುತ್ತೆ ಗೂಗಲ್ ಎಐ

ತಂತ್ರಜ್ಞಾನ ಎಷ್ಟು ಮುಂದುವರೆದಿದೆ ಎಂದರೆ ನಿಮ್ಮ ಕೆಮ್ಮು ಮತ್ತು ಉಸಿರಾಟದ ಶಬ್ದಗಳನ್ನು ಆಲಿಸುವ ಮೂಲಕ ಕ್ಷಯ ಮತ್ತು ಇನ್ನಿತರ ಉಸಿರಾಟಕ್ಕೆ ಸಂಬಂಧ ಪಟ್ಟ ಕಾಯಿಲೆಗಳನ್ನು ಪತ್ತೆ ಹಚ್ಚುವ ಅದ್ಭುತ ಎಐ ವ್ಯವಸ್ಥೆಯನ್ನು ಗೂಗಲ್ ಅನಾವರಣಗೊಳಿಸಿದೆ. ಕೆಮ್ಮು, ಸ್ನಿಫಿಲ್ಸ್ ಮತ್ತು ನಿಮ್ಮ ಉಸಿರಾಟದ ರೀತಿ ಸೇರಿದಂತೆ ತರಬೇತಿ ಪಡೆದ 300 ಮಿಲಿಯನ್ ಆಡಿಯೊ ಮಾದರಿಗಳು, ನಿಮ್ಮ ಧ್ವನಿ ಮತ್ತು ಸೂಚನೆಗಳ ಮೂಲಕ ಟಿಬಿಯಂತಹ ರೋಗಗಳನ್ನು ಗುರುತಿಸುವ ಗುರಿಯನ್ನು ಹೊಂದಿದೆ.

Google AI: ಕೆಮ್ಮು, ಉಸಿರಾಟ ಆಲಿಸಿ ಕ್ಷಯರೋಗವನ್ನು ಗುರುತಿಸುತ್ತೆ ಗೂಗಲ್ ಎಐ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Sep 03, 2024 | 2:22 PM

ತಂತ್ರಜ್ಞಾನ ಎಷ್ಟು ಮುಂದುವರೆದಿದೆ ಎಂದರೆ ನಿಮ್ಮ ಕೆಮ್ಮು ಮತ್ತು ಉಸಿರಾಟದ ಶಬ್ದಗಳನ್ನು ಆಲಿಸುವ ಮೂಲಕ ಕ್ಷಯ ಮತ್ತು ಇನ್ನಿತರ ಉಸಿರಾಟಕ್ಕೆ ಸಂಬಂಧ ಪಟ್ಟ ಕಾಯಿಲೆಗಳನ್ನು ಪತ್ತೆ ಹಚ್ಚುವ ಅದ್ಭುತ ಎಐ ವ್ಯವಸ್ಥೆಯನ್ನು ಗೂಗಲ್ ಅನಾವರಣಗೊಳಿಸಿದೆ. ಕೆಮ್ಮು, ಸ್ನಿಫಿಲ್ಸ್ ಮತ್ತು ನಿಮ್ಮ ಉಸಿರಾಟದ ರೀತಿ ಸೇರಿದಂತೆ ತರಬೇತಿ ಪಡೆದ 300 ಮಿಲಿಯನ್ ಆಡಿಯೊ ಮಾದರಿಗಳು, ನಿಮ್ಮ ಧ್ವನಿ ಮತ್ತು ಸೂಚನೆಗಳ ಮೂಲಕ ಟಿಬಿಯಂತಹ ರೋಗಗಳನ್ನು ಗುರುತಿಸುವ ಗುರಿಯನ್ನು ಹೊಂದಿದೆ. ಇಂಡಿಯನ್ ರೆಸ್ಪಿರೇಟರಿ ಹೆಲ್ತ್ ಕೇರ್ (indian respiratory healthcare) ಎಐ ಸ್ಟಾರ್ಟ್ಅಪ್, ಸಾಲ್ಸಿಟ್ ಟೆಕ್ನಾಲಜೀಸ್ ಜೊತೆಯಲ್ಲಿ ಪಾಲುದಾರಿಕೆ ಹೊಂದಿರುವ ಗೂಗಲ್, ಸೀಮಿತ ಆರೋಗ್ಯ ಸಂಪನ್ಮೂಲಗಳನ್ನು ಹೊಂದಿರುವ ಪ್ರದೇಶಗಳಲ್ಲಿ ಅಂದರೆ ಹೆಚ್ಚಿನ ಅಪಾಯವಿರುವ ಪ್ರದೇಶದಲ್ಲಿ, ಜನರಿಗೆ ಸುಲಭವಾಗಿ ಆರೋಗ್ಯ ಸಲಹೆಗಳು ಸಿಗಲು ಸ್ಮಾರ್ಟ್ಫೋನ್ಗಳಲ್ಲಿ ಈ ತಂತ್ರಜ್ಞಾನವನ್ನು ರೂಪಿಸಲು ಯೋಜನೆ ಹಾಕಿಕೊಂಡಿದೆ.

“ಎಚ್ಇಆರ್ (HeAR) ಎಐ ಮಾದರಿಯು ಕೆಮ್ಮಿನ ಮಾದರಿಗಳಲ್ಲಿನ ಸೂಕ್ಷ್ಮ ವ್ಯತ್ಯಾಸಗಳನ್ನು ಪತ್ತೆ ಹಚ್ಚುವ ಮೂಲಕ ಕ್ಷಯರೋಗದ ನಿಖರತೆಯನ್ನು ತಿಳಿಸಲು ಸಹಾಯ ಮಾಡುತ್ತದೆ. ರೋಗಿಗಳ ಕೆಮ್ಮನ್ನು ಸರಿಯಾಗಿ ಆಲಿಸುವ ಮೂಲಕ ರೋಗಿಗಳಿಗೆ ಅವರ ಆರೋಗ್ಯ ಪ್ರಯಾಣದಲ್ಲಿ ಬಹಳ ಮುಂಚಿತವಾಗಿ ಸಮಸ್ಯೆಗಳನ್ನು ಪತ್ತೆಹಚ್ಚಿ ಅದಕ್ಕೆ ಸಂಬಂಧ ಪಟ್ಟಂತೆ ಚಿಕಿತ್ಸೆ ತೆಗೆದುಕೊಳ್ಳಬಹುದಾಗಿದೆ. ಇದರರ್ಥ ರೋಗಿಗಳು ಹೆಚ್ಚಿನ ಅಪಾಯದಲ್ಲಿದ್ದರೆ ಅವರನ್ನು ಬೇಗ ಗುರುತಿಸಬಹುದು. ಜೊತೆಗೆ ಅದು ಕ್ಷಯರೋಗವೇ ಅಥವಾ ಅಲ್ಲವೇ ಎಂದು ಬಹುಬೇಗ ಖಚಿತಪಡಿಸಿಕೊಂಡು ಅದಕ್ಕೆ ಇನ್ನಿತರ ಪರೀಕ್ಷೆಯ ಅಗತ್ಯವಿದೆಯೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಬಹುದು “ಎಂದು ಗೂಗಲ್ ಹೆಲ್ತ್ ನಿರ್ದೇಶಕಿ ಮತ್ತು ಮುಖ್ಯಸ್ಥೆ ಶ್ರಾವ್ಯ ಶೆಟ್ಟಿ ಇತ್ತೀಚೆಗೆ ನಡೆದಂತಹ ಸಭೆಯಲ್ಲಿ ಹೇಳಿದ್ದಾರೆ.

ತಜ್ಞರ ಪ್ರಕಾರ, ಕ್ಷಯರೋಗ ಹೆಚ್ಚಾಗಿ ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ಮತ್ತು ಗಾಳಿಯ ಮೂಲಕ ಹರಡುವ ಒಂದು ರೀತಿಯ ಬ್ಯಾಕ್ಟೀರಿಯಾದಿಂದ ಉಂಟಾಗುವ ಸಾಂಕ್ರಾಮಿಕ ರೋಗ ಹಾಗಾಗಿ ಆರಂಭಿಕ ರೋಗನಿರ್ಣಯ ಮಾಡಿದ ನಂತರ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದಾಗಿದೆ.

ಇದನ್ನೂ ಓದಿ: ಆಗಾಗ ಶೀತವಾಗಿ, ಗಂಟಲು ನೋವು ಕಾಡುತ್ತಿದೆಯೇ? ಈ ಕ್ಯಾನ್ಸರ್ ಆಗಿರಬಹುದು ಎಚ್ಚರ

ಎಚ್ಇಎಆರ್ (HeAR) ಎಐ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ?

ಇಂಡಸ್ಟ್ರಿ ಗೈನ್ಟ್ ಪ್ರಕಾರ, ತಂತ್ರಜ್ಞಾನವು ಎರಡು ಸೆಕೆಂಡುಗಳ ಉದ್ದದ ಆಡಿಯೊ ತುಣುಕುಗಳನ್ನು ಬಳಸಿಕೊಳ್ಳುತ್ತದೆ. ಇದರಲ್ಲಿ ಜನರು ಕೆಮ್ಮುವ, ಸೀನುವಿಕೆ, ಉಸಿರಾಟ ಮತ್ತು ಸ್ನಿಫ್ಲಿಂಗ್ ಅನ್ನು ಒಳಗೊಂಡಿದೆ. ತರಬೇತಿ ಪಡೆದ ಎಐ ಮಾದರಿಯು ರೋಗಿಯು ಒದಗಿಸಿದ ಆಡಿಯೊ ಮಾದರಿಯಲ್ಲಿನ ಸಮಸ್ಯೆಗಳನ್ನು ತಿಳಿಯಲು ಅದರ ಜ್ಞಾನವನ್ನು ಬಳಸಿಕೊಂಡು ಸಂಭಾವ್ಯ ಆರೋಗ್ಯ ಅಪಾಯವನ್ನು ನಿಮಗೆ ಸೂಚಿಸುತ್ತದೆ. ಮಾರಣಾಂತಿಕವಾಗಿದ್ದರೆ ಅದಕ್ಕೆ ನೀಡಬಹುದಾದ ಚಿಕಿತ್ಸೆಗಳ ಮಾಹಿತಿ ನೀಡುತ್ತದೆ. ಬಳಿಕ ರೋಗಿಗಳು ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರನ್ನು ಸಂಪರ್ಕಿಸಬಹುದು.

ಅಂಕಿಅಂಶಗಳ ಪ್ರಕಾರ, ವಿಶ್ವದಾದ್ಯಂತ 2022 ರಲ್ಲಿ ಸುಮಾರು 1.3 ಮಿಲಿಯನ್ ಜನರು ಕ್ಷಯರೋಗದಿಂದ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ವಾರ್ಷಿಕವಾಗಿ ಈ ಸಾವುಗಳಲ್ಲಿ ಸುಮಾರು 25 ಪ್ರತಿಶತದಷ್ಟು ನಮ್ಮ ದೇಶದ್ದಾಗಿದೆ.

ಇತರ ಕಾಯಿಲೆಗಳಿಗೂ ಪರಿಣಾಮಕಾರಿಯಾಗಿರಬಹುದು;

ಸಂಭಾವ್ಯ ಕ್ಯಾನ್ಸರ್ ಗಡ್ಡೆಗಳನ್ನು ಪರೀಕ್ಷಿಸುವಲ್ಲಿ ಈ ಮಾದರಿಗಳು ಸಂಪೂರ್ಣವಾಗಿ ಪರಿಣಾಮಕಾರಿಯಾಗಿವೆ ಎಂದು ಸಂಶೋಧನೆ ಹೇಳುತ್ತದೆ. ಸ್ತನ ಕ್ಯಾನ್ಸರ್, ಮಯೋಪಿಯಾ ಮತ್ತು ಹೃದ್ರೋಗದ ಆರಂಭಿಕ ಲಕ್ಷಣಗಳನ್ನು ಪತ್ತೆಹಚ್ಚಲು ಈ ಮಾದರಿಗಳನ್ನು ಬಳಸಿಕೊಳ್ಳಲಾಗುತ್ತಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:05 pm, Tue, 3 September 24