- Kannada News Health Health Benefits of Bitter gourd juice is effective for eye and skin health tips in kannada
Bitter gourd: ಚಳಿಗಾಲದ ಆರೋಗ್ಯ ಸಮಸ್ಯೆ ಮತ್ತು ಚರ್ಮದ ಆರೋಗ್ಯಕ್ಕೆ ಹಾಗಲಕಾಯಿ ರಸ ಪರಿಣಾಮಕಾರಿ
ಹಾಗಲಕಾಯಿ ಎಂದರೆ ಸಾಕು ಯಪ್ಪಾ ಕಹಿ ಅಂತ ಮೂಗು ಮುರಿಯುವವರೇ ಹೆಚ್ಚು. ಆದರೆ ಹಾಗಲಕಾಯಿಯಲ್ಲೂ ಆರೋಗ್ಯದ ಪ್ರಯೋಜನಗಳಿದ್ದು, ಇದರ ರಸವನ್ನು ಚಳಿಗಾಲದಲ್ಲಿ ಸೇವನೆ ಮಾಡಿದರೆ ತುಂಬಾ ಪ್ರಯೋಜನಕಾರಿಯಾಗಿದೆ ಎಂದು ನಿಮಗೆ ತಿಳಿದಿದೆಯೇ?
Updated on: Dec 14, 2022 | 6:03 AM

Health Benefits of Bitter gourd juice is effective for eye and skin health tips in kannada

Health Benefits of Bitter gourd juice is effective for eye and skin health tips in kannada

ಹಾಗಲಕಾಯಿ ರಸವನ್ನು ತಯಾರಿಸಲು ನೀವು ಕಷ್ಟಪಡಬೇಕಾಗಿಲ್ಲ, ಏಕೆಂದರೆ ಇದನ್ನು ಮನೆಯಲ್ಲಿ ಲಭ್ಯವಿರುವ ಪದಾರ್ಥಗಳಿಂದ ತಯಾರಿಸಲಾಗುತ್ತದೆ. ಮೊದಲನೆಯದಾಗಿ ಬ್ಲೆಂಡರ್‌ನಲ್ಲಿ ರುಚಿಗೆ ತಕ್ಕಂತೆ ಹಾಗಲಕಾಯಿ, ಸ್ವಲ್ಪ ಶುಂಠಿ, ಕರಿಮೆಣಸು, ಅರಿಶಿನ ಮತ್ತು ಕಪ್ಪು ಉಪ್ಪನ್ನು ಮಿಶ್ರಣ ಮಾಡಿದರೆ ರಸ ಸಿದ್ಧವಾಗಲಿದೆ.

ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಾಗಲಕಾಯಿ ರಸವನ್ನು ಸೇವಿಸಿದರೆ ಅದು ನಿಮ್ಮ ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ಬೆಳಿಗ್ಗೆ ಅದನ್ನು ಕುಡಿಯುವುದರಿಂದ ಹೊಟ್ಟೆಯು ಸಂಪೂರ್ಣವಾಗಿ ಶುದ್ಧವಾಗುತ್ತದೆ.

ಹಾಗಲಕಾರಿ ರಸ ಶೀತ, ಕೆಮ್ಮು ಮುಂತಾದ ಆರೋಗ್ಯ ಸಮಸ್ಯೆಗಳಿಗೆ ಮಾತ್ರವಲ್ಲದೆ ರಕ್ತಕ್ಕೂ ಒಳ್ಳೆಯದು. ಹಾಗಲಕಾಯಿ ರಸ ಸೇವನೆ ಮಾಡುವುದರಿಂದ ರಕ್ತ ಶುದ್ಧೀಕರಣವಾಗುತ್ತದೆ. ಮಾತ್ರವಲ್ಲದೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೂಡ ದೂರವಾಗುತ್ತವೆ.




