AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Urine Bad Smell: ಮೂತ್ರವು ಕೆಟ್ಟವಾಸನೆಯಿಂದ ಕೂಡಿದೆಯೇ? ಈ ಗಂಭೀರ ಕಾಯಿಲೆಗಳು ನಿಮಗಿರಬಹುದು

ಸಾಮಾನ್ಯವಾಗಿ ನಿಮ್ಮ ಜೀವನಶೈಲಿ(Lifestyle), ಆಹಾರ ಸೇವನೆಗೆ ತಕ್ಕಂತೆ ಮೂತ್ರದ ಬಣ್ಣ ಬದಲಾಗುತ್ತಿರುತ್ತದೆ. ಆದರೆ ಮೂತ್ರ(Urine) ದ ವಾಸನೆ ಬದಲಾದರೆ ನೀವು ಎಚ್ಚೆತ್ತುಕೊಳ್ಳಲೇಬೇಕು.

Urine Bad Smell: ಮೂತ್ರವು ಕೆಟ್ಟವಾಸನೆಯಿಂದ ಕೂಡಿದೆಯೇ? ಈ ಗಂಭೀರ ಕಾಯಿಲೆಗಳು ನಿಮಗಿರಬಹುದು
ಮೂತ್ರ
TV9 Web
| Updated By: ನಯನಾ ರಾಜೀವ್|

Updated on: Dec 13, 2022 | 12:32 PM

Share

ಸಾಮಾನ್ಯವಾಗಿ ನಿಮ್ಮ ಜೀವನಶೈಲಿ(Lifestyle), ಆಹಾರ ಸೇವನೆಗೆ ತಕ್ಕಂತೆ ಮೂತ್ರದ ಬಣ್ಣ ಬದಲಾಗುತ್ತಿರುತ್ತದೆ. ಆದರೆ ಮೂತ್ರ(Urine) ದ ವಾಸನೆ ಬದಲಾದರೆ ನೀವು ಎಚ್ಚೆತ್ತುಕೊಳ್ಳಲೇಬೇಕು. ಇವುಗಳ ಬಗ್ಗೆ ನಿರ್ಲಕ್ಷ್ಯ ವಹಿಸಬೇಡಿ. ಏಕೆಂದರೆ ಇವುಗಳು ಗಂಭೀರ ಕಾಯಿಲೆಗಳ ಮುನ್ಸೂಚನೆಯಾಗಿರಬಹುದು. ಒಂದೊಮ್ಮೆ ನಿಮ್ಮ ದೇಹವು ನಿರ್ಜಲೀಕರಣಗೊಂಡಾಗ ಮೂತ್ರದ ಬಣ್ಣ ಮತ್ತು ವಾಸನೆ ಬದಲಾಗುತ್ತದೆ. ಅಷ್ಟೇ ಅಲ್ಲದೆ, ಇವು ಕೆಲವು ಆರೋಗ್ಯ ಸಮಸ್ಯೆಗಳ ಮುನ್ಸೂಚನೆಯನ್ನೂ ಕೂಡ ನಿಮಗೆ ನೀಡುತ್ತದೆ, ಆಗ ಎಚ್ಚೆತ್ತುಕೊಳ್ಳಲೇಬೇಕು.

ಮೂತ್ರದಲ್ಲಿ ಹೆಚ್ಚಿನ ಪ್ರಮಾಣ ನೀರಿರುತ್ತದೆ, ಕೆಲವು ಭಾಗ ಸೋಡಿಯಂ, ಪೊಟ್ಯಾಷಿಯಂ, ಕ್ಯಾಲ್ಸಿಯಂ, ಅಮೋನಿಯಾ, ಕ್ಲೋರೈಡ್ ಇರುತ್ತದೆ. ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಮೂತ್ರದ ಬಣ್ಣವು ನೀರಿನಂತೆ ಇರುತ್ತದೆ. ಒಂದು ವೇಳೆ ದೇಹವು ನಿರ್ಜಲೀಕರಣಗೊಂಡಾಗ ಮೂತ್ರದ ಬಣ್ಣ ಮತ್ತು ವಾಸನೆ ಬದಲಾಗುತ್ತದೆ. ಅಷ್ಟೇ ಅಲ್ಲದೆ, ಇವು ಕೆಲವು ಆರೋಗ್ಯ ಸಮಸ್ಯೆಗಳ ಮುನ್ಸೂಚನೆಯನ್ನೂ ನೀಡುತ್ತದೆ.

ಮೂತ್ರನಾಳದಲ್ಲಿ ಸಮಸ್ಯೆಯಿದ್ದರೆ, ಮೂತ್ರದಲ್ಲಿ ಅಮೋನಿಯಾ ವಾಸನೆ ಕಂಡುಬರುತ್ತದೆ. ಇದರ ಜೊತೆಗೆ ಮೂತ್ರ ಮಾಡುವ ಸಂದರ್ಭದಲ್ಲಿ ಉರಿಯುವುದು, ರಕ್ತ ವಿಸರ್ಜನೆ ಆಗುವುದು ಎಲ್ಲಾ ಮೂತ್ರನಾಳದ ಸಮಸ್ಯೆಯ ಲಕ್ಷಣಗಳು. ಹೀಗಿರುವಾಗ ವೈದ್ಯರನ್ನು ತಕ್ಷಣ ಸಂಪರ್ಕಿಸುವುದು ಸೂಕ್ತ.

ಮತ್ತಷ್ಟು ಓದಿ: In Pics: ಪದೇ ಪದೇ ನೀವು ಮೂತ್ರ ವಿಸರ್ಜನೆ ಮಾಡುತ್ತಿದ್ದರೆ ಮಧುಮೇಹ ಮಾತ್ರವಲ್ಲ ಈ ಆರೋಗ್ಯ ಸಮಸ್ಯೆಯೂ ನಿಮಗಿರಬಹುದು

ಲಿವರ್ ಸಮಸ್ಯೆ: ಅಮೋನಿಯ ಅಥವಾ ಮಸ್ಟಿನೆಸ್ನ ವಾಸನೆ ಬಂದರೆ ಅದು ಯಕೃತ್ತಿನ ರೋಗದ ಸಂಕೇತ. ಯಕೃತ್ತು ಸರಿಯಾಗಿ ಕೆಲಸ ಮಾಡದಿದ್ದರೆ ಮೂತ್ರ ಮತ್ತು ರಕ್ತದಲ್ಲಿ ಅಮೋನಿಯಾ ಸಂಗ್ರಹ ಆಗುತ್ತದೆ. ಆಗ ಕೆಟ್ಟ ವಾಸನೆ ಬರಲು ಪ್ರಾರಂಭವಾಗುತ್ತದೆ.

ಮಧುಮೇಹ ಸಮಸ್ಯೆ: ಹಲವು ಮಂದಿ ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆ ಉಳ್ಳವರ ಮೂತ್ರದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಿರುತ್ತದೆ, ಹಾಗೆಯೇ ಮಧುಮೇಹಿಗಳ ಮೂತ್ರವು ತುಂಬಾ ಕೆಟ್ಟ ವಾಸನೆಯಿದ್ದು, ಕೊಳೆತ ಹಣ್ಣಿನ ವಾಸನೆಯಿಂದ ಕೂಡಿರುತ್ತದೆ.

ಕಡಿಮೆ ನೀರು ಕುಡಿಯುವುದು: ನಮ್ಮ ದೇಹದಲ್ಲಿನ ತ್ಯಾಜ್ಯ ಉತ್ಪನ್ನಗಳು ಮೂತ್ರದ ಮೂಲಕ ಹೊರ ಬರುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಸಾಕಷ್ಟು ನೀರನ್ನು ಸೇವಿಸದಿದ್ದಾಗ, ಈ ತ್ಯಾಜ್ಯವು ಸುಲಭವಾಗಿ ಹೊರ ಬರಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ ಮೂತ್ರ ತುಂಬಾ ದುರ್ವಾಸನೆ ಉಂಟು ಮಾಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಕುಡಿಯುವುದು ಅವಶ್ಯಕ. ಯೀಸ್ಟ್ ಸೋಂಕು

ಕ್ಯಾಂಡಿಡಾ ಎಂಬ ಶಿಲೀಂಧ್ರವು ಸಾಮಾನ್ಯವಾಗಿ ನಮ್ಮ ಚರ್ಮದ ಮೇಲೆ ಇರುತ್ತದೆ. ಈ ಶಿಲೀಂಧ್ರವು ಮಹಿಳೆಯರ ಖಾಸಗಿ ಭಾಗ ಸೇರಿದಂತೆ ದೇಹದ ಯಾವುದೇ ಭಾಗದಲ್ಲಿ ಕಂಡು ಬರುತ್ತದೆ. ಒದ್ದೆಯಾದ ಬಟ್ಟೆಗಳನ್ನು ಧರಿಸುವುದು ಅಥವಾ ಕೊಳೆಯಲ್ಲಿ ವಾಸಿಸುವುದು ಮುಂತಾದವು ಯೀಸ್ಟ್ ಸೋಂಕು ಹೆಚ್ಚಾಗಲು ಕಾರಣವಾಗುತ್ತದೆ. ಪುರುಷರಿಗೆ ಹೋಲಿಸಿದರೆ, ಮಹಿಳೆಯರು ಯೀಸ್ಟ್ ಸೋಂಕಿನ ಸಮಸ್ಯೆಯನ್ನು ಹೆಚ್ಚು ಎದುರಿಸುತ್ತಾರೆ.

ಪಿತ್ತಜನಕಾಂಗದಲ್ಲಿ ಅಡಚಣೆ ಒಂದೊಮ್ಮೆ ಪಿತ್ತಜನಕಾಂಗದಲ್ಲಿ ಅಡಚಣೆಯಿದ್ದರೆ, ಚರ್ಮ ಮತ್ತು ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಕಿಬ್ಬೊಟ್ಟೆಯಲ್ಲಿ ನೋವು, ವಾಂತಿ, ಊತ ಮತ್ತು ರಕ್ತಸ್ರಾವದಂತಹ ಕೆಲ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಫಿಸ್ಟುಲಾ ಸಮಸ್ಯೆ ಇದ್ದರೆ: ಜಠರ ಕರುಳಿನ ಗಾಳಿಗುಳ್ಳೆಯ ಫಿಸ್ಟುಲಾ ಸಮಸ್ಯೆಯು ಮೂತ್ರದಲ್ಲಿ ಮಲ ವಾಸನೆ ಬರಬಹುದು,  ಒಮ್ಮೊಮ್ಮೆ  ಈ ಸಮಸ್ಯೆಯ ಪರಿಹಾರಕ್ಕೆಂದು ಶಸ್ತ್ರಚಿಕಿತ್ಸೆಯ ಮೊರೆ ಹೋಗಬೇಕಾಗಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ