ಈ ರೀತಿ ಮಾಡಿದರೆ ಡೊಳ್ಳು ಹೊಟ್ಟೆ ಒಂದೇ ವಾರದಲ್ಲಿ ಕರಗುತ್ತೆ! ನೀವೂ ಟ್ರೈ ಮಾಡಿ ನೋಡಿ

ತೂಕ ಕಡಿಮೆ ಮಾಡಿಕೊಳ್ಳಲು ನಾನಾ ರೀತಿಯ ಕಸರತ್ತು ಪಡುತ್ತೇವೆ. ಆದರೆ ಸರಳವಾಗಿ ಮನೆಯಲ್ಲಿಯೇ ಇರುವ ಪದಾರ್ಥಗಳನ್ನು ಬಳಸಿಕೊಂಡು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಕಂಪೆನಿಗಳಲ್ಲಿ ಎಂಟು ಗಂಟೆ ಒಂದೇ ಕಡೆ ಕುಳಿತುಕೆಲಸ ಮಾಡಿ, ಆಹಾರ ಸರಿಯಾಗಿ ಜೀರ್ಣವಾಗದಿದ್ದಾಗ ಅಥವಾ ಇನ್ನಿತರ ಸಮಸ್ಯೆಗಳಿಂದ ಹೊಟ್ಟೆಯ ಸುತ್ತ ಬೊಜ್ಜು ಬರುತ್ತದೆ. ಅವುಗಳನ್ನು ಕಡಿಮೆ ಮಾಡುವುದು ಸುಲಭವಲ್ಲ. ಆದರೆ ಅಡುಗೆ ಮನೆಯಲ್ಲಿರುವ ಈ ಪದಾರ್ಥವನ್ನು ಒಮ್ಮೆ ಟ್ರೈ ಮಾಡಿ ನೋಡಿ. ನಿಮ್ಮ ಸಮಸ್ಯೆಗೆ ಬಹು ಬೇಗ ಫಲಿತಾಂಶ ಸಿಗುತ್ತದೆ.

ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 10, 2024 | 10:32 AM

ತೂಕ ಕಡಿಮೆ ಮಾಡಿಕೊಳ್ಳಲು ನಾನಾ ರೀತಿಯ ಕಸರತ್ತು ಪಡುತ್ತೇವೆ. ಆದರೆ ಸರಳವಾಗಿ ಮನೆಯಲ್ಲಿಯೇ ಇರುವ ಪದಾರ್ಥಗಳನ್ನು ಬಳಸಿಕೊಂಡು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಕಂಪೆನಿಗಳಲ್ಲಿ ಎಂಟು ಗಂಟೆ ಒಂದೇ ಕಡೆ ಕುಳಿತುಕೆಲಸ ಮಾಡಿ, ಆಹಾರ ಸರಿಯಾಗಿ ಜೀರ್ಣವಾಗದಿದ್ದಾಗ ಅಥವಾ ಇನ್ನಿತರ ಸಮಸ್ಯೆಗಳಿಂದ ಹೊಟ್ಟೆಯ ಸುತ್ತ ಬೊಜ್ಜು ಬರುತ್ತದೆ. ಅವುಗಳನ್ನು ಕಡಿಮೆ ಮಾಡುವುದು ಸುಲಭವಲ್ಲ. ಆದರೆ ಅಡುಗೆ ಮನೆಯಲ್ಲಿರುವ ಈ ಪದಾರ್ಥವನ್ನು ಒಮ್ಮೆ ಟ್ರೈ ಮಾಡಿ ನೋಡಿ. ನಿಮ್ಮ ಸಮಸ್ಯೆಗೆ ಬಹು ಬೇಗ ಫಲಿತಾಂಶ ಸಿಗುತ್ತದೆ.

ಸೋಂಪು ಕಾಳುಗಳನ್ನು ಪ್ರತಿನಿತ್ಯ ಒಂದಲ್ಲಾ ಒಂದು ರೀತಿಯಲ್ಲಿ ಬಳಸಲಾಗುತ್ತದೆ. ಈ ಕಾಳುಗಳ ಸಹಾಯದಿಂದ ನಿಮ್ಮ ತೂಕ ನಷ್ಟದ ಪ್ರಯಾಣವನ್ನು ಸುಲಭ ಮಾಡಬಹುದು. ನಿಮ್ಮ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಬಹಳ ಪರಿಣಾಮಕಾರಿ ಎಂದು ಸಾಬೀತಾಗಿದೆ. ಸೋಂಪು ಕಾಳನ್ನು ಅಗಿದು ತಿನ್ನುವ ಮೂಲಕ ಅಥವಾ ಚಹಾದಲ್ಲಿ ಅಥವಾ ನೀರಿನಲ್ಲಿ ಬೆರೆಸಿ ಸೇವಿಸಬಹುದು.

ಚಯಾಪಚಯಕ್ಕೆ ಸಹಕಾರಿ: ಪ್ರತಿದಿನ ಕೇವಲ ಒಂದು ಚಮಚ ಸೋಂಪು ಕಾಳನ್ನು ಸೇವಿಸುವುದರಿಂದ ಚಯಾಪಚಯ ಕ್ರಿಯೆ ಹೆಚ್ಚಾಗುತ್ತದೆ. ವ್ಯಾಯಾಮದ ಜೊತೆಗೆ ಸೋಂಪು ಕಾಳನ್ನು ತಿನ್ನುವುದರಿಂದ ನಿಮ್ಮ ದೇಹದಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಕೊಬ್ಬನ್ನು ವೇಗವಾಗಿ ಕರಗಿಸಲು ಸಹಾಯ ಮಾಡುತ್ತದೆ.

ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯನ್ನು ನಿವಾರಿಸುತ್ತದೆ: ವಿವಿಧ ರೀತಿಯ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಲು ಸೋಂಪು ಕಾಳನ್ನು ಸೇವಿಸಲು ತಜ್ಞರು ಸಲಹೆ ನೀಡುತ್ತಾರೆ. ಆಯುರ್ವೇದದ ಪ್ರಕಾರ ಈ ಕಾಳಿನಲ್ಲಿರುವ ಎಲ್ಲಾ ಅಂಶಗಳು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು.

ಮೂಳೆಯ ಆರೋಗ್ಯಕ್ಕೆ ಒಳ್ಳೆಯದು: ಈ ಕಾಳಿನಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ, ಪೊಟ್ಯಾಶಿಯಮ್, ಮೆಗ್ನೀಷಿಯಂ ಕಂಡು ಬರುತ್ತದೆ. ಸೋಂಪು ಕಾಳು ನಿಮ್ಮ ಮೂಳೆಯ ಆರೋಗ್ಯವನ್ನು ಹೆಚ್ಚಿಸುತ್ತದೆ ಜೊತೆಗೆ ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಒಂದು ಚಮಚ ಸೋಂಪು ಕಾಳನ್ನು ಸೇವಿಸಿ. ಇದನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಕಣ್ಣಿನ ದೃಷ್ಟಿ ಉತ್ತಮವಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್

ಆರೋಪ ಮಾಡಲು ವಿಷಯಗಳಿಲ್ಲ, ಹಾಗಾಗೇ ಕೊಲೆಗಡುಕ ಅಂತಾರೆ: ಪಲ್ಲವಿ

ಫಾರಂ ಹೌಸ್​ನಲ್ಲಿ ದರ್ಶನ್, ಹಲವು ಎಚ್ಚರಿಕಾ ಕ್ರಮ

ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ

ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್​

ಮಾರ್ಷಲ್​ಗಳ ರಕ್ಷಣೆಯಲ್ಲಿ ಸಭಾಪತಿಯವರ ಕೋಣೆಗೆ ಹೋದೆ: ಸಿಟಿ ರವಿ

CT ರವಿಯನ್ನು ಸುತ್ತಾಡಿಸಿದ ಬೆಳಗಾವಿ ಪೊಲೀಸರಿಗೆ ಫೋನ್​​ಗಳು: ವಿಡಿಯೋ ವೈರಲ್

ರವಿ ಆರೋಪಿಯಾಗಿದ್ದರು, ಆದರೆ ಉಳಿದ ಬಿಜೆಪಿ ಶಾಸಕರು ಠಾಣೆಯಲ್ಲಿ ಯಾಕೆ? ಖರ್ಗೆ

ಆತ್ಮಸಾಕ್ಷಿಯೇ ಎಲ್ಲದಕ್ಕೂ ನ್ಯಾಯ ಒದಗಿಸುತ್ತದೆ: ಶಿವಕುಮಾರ್

ಬಿಜೆಪಿ ಕಚೇರಿಯಲ್ಲಿ ಸಿಟಿ ರವಿ ಸುದ್ದಿಗೋಷ್ಠಿಯ ನೇರಪ್ರಸಾರ