ಮಲ್ಲಿಗೆಯ ಸುವಾಸನೆಯಲ್ಲಿದೆ ಆರೋಗ್ಯದ ಗುಟ್ಟು

ಹೆಣ್ಣು ಮಕ್ಕಳಿಗೆ ಮಲ್ಲಿಗೆ ಅಂದ್ರೆ ಅಚ್ಚುಮೆಚ್ಚು. ಸಾಂಪ್ರದಾಯಿಕ ಉಡುಗೆ ತೊಟ್ಟರೆ ಮಲ್ಲಿಗೆ ಇರಲೇಬೇಕು. ಮುಡಿಯನ್ನು ಅಲಂಕರಿಸುವ ಮಲ್ಲಿಗೆ ಹೂವಿನ ಘಮವು ಮೂಗಿಗೆ ಬಡಿದ್ರೆ ಕೆಲವರಿಗೆ ತಲೆನೋವು ಶುರುವಾಗುತ್ತದೆ. ಹೀಗಾಗಿ ಕೆಲವರು ಈ ಮಲ್ಲಿಗೆಯ ಪರಿಮಳವನ್ನು ಅಷ್ಟಾಗಿ ಇಷ್ಟ ಪಡುವುದಿಲ್ಲ. ಆದ್ರೆ ಮಲ್ಲಿಗೆ ಸುವಾಸನೆಯಿಂದಲೂ ಆರೋಗ್ಯ ಪ್ರಯೋಜನಗಳು ಇವೆಯಂತೆ. ಈ ಕುರಿತಾದ ಮಾಹಿತಿ ಇಲ್ಲಿದೆ.

ಮಲ್ಲಿಗೆಯ ಸುವಾಸನೆಯಲ್ಲಿದೆ ಆರೋಗ್ಯದ ಗುಟ್ಟು
ಮಲ್ಲಿಗೆಯ ಪರಿಮಳದ ಆರೋಗ್ಯ ಪ್ರಯೋಜನ
Image Credit source: Pinterest

Updated on: Sep 17, 2025 | 6:53 PM

ಮಲ್ಲಿಗೆ (Jasmine) ಹೆಸರು ಕೇಳಿದ ತಕ್ಷಣ ಹೆಂಗಳೆಯರ ಕಿವಿ ನೆಟ್ಟಗಾಗುತ್ತದೆ. ಹೆಣ್ಣು ಮಕ್ಕಳಿಗೆ ಮಲ್ಲಿಗೆ ಹೂವು ಮುಡಿಯುವುದು ಎಂದರೆ ತುಂಬಾನೇ ಇಷ್ಟ. ಇನ್ನು ಕೆಲವರು ಈ ಹೂವಿನ ಸುವಾಸನೆಯನ್ನು ಇಷ್ಟ ಪಡ್ತಾರೆ. ಮಲ್ಲಿಗೆಯಲ್ಲಿ ಔಷಧೀಯ ಗುಣಗಳನ್ನು ಹೊಂದಿದ್ದು ಇದರ ಲಾಭಗಳು ಅತ್ಯಧಿಕ. ಘಮ ಬೀರುವ ಈ ಹೂವು ಮುಡಿಯುವುದು ಮಾತ್ರ ಇದರಿಂದ ಸುವಾಸನೆಯನ್ನು ತೆಗೆದುಕೊಳ್ಳುವುದರಿಂದ ಆರೋಗ್ಯ ಪ್ರಯೋಜನಗಳಿವೆ (health benefits) ಎಂಬುದು ಎಷ್ಟೋ ಜನರಿಗೆ ತಿಳಿದೇ ಇಲ್ಲ. ಹೂವು ಮುಡಿಯುವ ಮುನ್ನ ಇದರ ಆರೋಗ್ಯ ಲಾಭಗಳನ್ನು ಮೊದಲು ತಿಳಿದುಕೊಳ್ಳಿ.

ಮಲ್ಲಿಗೆಯ ಸುವಾಸನೆಯ ಆರೋಗ್ಯ ಪ್ರಯೋಜನಗಳೇನು?

  • ಮಲ್ಲಿಗೆಯ ಸುವಾಸನೆಯೂ ಮನಸ್ಸನ್ನು ಶಾಂತಗೊಳಿಸಿ, ಇದು ಒತ್ತಡ ಹಾಗೂ ಆತಂಕವನ್ನು ಕಡಿಮೆ ಮಾಡುತ್ತದೆ.
  • ಮಲ್ಲಿಗೆಯ ಘಮವು ನಿದ್ರಾಹೀನತೆಗೆ ಪರಿಣಾಮಕಾರಿ ಚಿಕಿತ್ಸೆಯಾಗಿದೆ. ಇದರ ಘಮ ತೆಗೆದುಕೊಳ್ಳುವುದು ನಿದ್ರೆಯನ್ನು ಉತ್ತೇಜಿಸಲು ಸಹಕಾರಿಯಾಗಿದೆ.
  •  ನಿಯಮಿತವಾಗಿ ಮಲ್ಲಿಗೆ ಸುವಾಸನೆ ತೆಗೆದುಕೊಳ್ಳುವುದರಿಂದ ಮನಸ್ಸು ಹಗುರವಾಗುತ್ತದೆ, ಇದು ಮನಸ್ಥಿತಿಯನ್ನು ಸುಧಾರಿಸಿ ಖಿನ್ನತೆಯನ್ನು ದೂರ ಮಾಡುತ್ತದೆ.

ಇದನ್ನೂ ಓದಿ:ಮಲ್ಲಿಗೆ ಸುವಾಸನೆಗೆ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು! ಇದೇ ಕಾರಣಕ್ಕೆ ಫಸ್ಟ್ ನೈಟ್ ನಲ್ಲಿ ಇಡುವುದು

  • ಮಲ್ಲಿಗೆ ಹೂವಿನಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಪಾಲಿಫಿನಾಲ್‌ಗಳು ಮೆದುಳಿನ ಕಾರ್ಯಚಟುವಟಿಕೆಯನ್ನು ಸುಧಾರಿಸುತ್ತದೆ. ಏಕಾಗ್ರತೆ, ಸ್ಮರಣಾ ಶಕ್ತಿಯನ್ನು ಉತ್ತೇಜಿಸುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ
ದೇಹದಲ್ಲಿ ವಿಟಮಿನ್ ಡಿ3 ಕಡಿಮೆಯಾಗದಂತೆ ನೋಡಿಕೊಳ್ಳುವುದು ಹೇಗೆ?
ನಾರ್ಮಲ್‌ ಟೀ ಬದಲು ಗುಲಾಬಿ ಚಹಾ ಕುಡಿಯಿರಿ, ಹಲವು ಪ್ರಯೋಜನ ಪಡೆಯಿರಿ
ಈ ಹೂವು ಸಾಮಾನ್ಯವಲ್ಲ... ಮಧುಮೇಹಿಗಳಿಗೆ ದಿವ್ಯ ಔಷಧ
ಫಸ್ಟ್ ನೈಟ್ ನಲ್ಲಿ ಮಲ್ಲಿಗೆ ಇಡುವುದು ಇದೆ ಕಾರಣಕ್ಕೆ!

 

Published On - 6:50 pm, Wed, 17 September 25