AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kidney Health: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರು ಅರಿಶಿನ ಸೇವಿಸಬಹುದೇ? ತಜ್ಞರು ಹೇಳುವುದು ಹೀಗೆ

ಕಿಡ್ನಿ ರೋಗಗಳು, ಕಿಡ್ನಿ ದೌರ್ಬಲ್ಯ, ಕಿಡ್ನಿ ಉರಿಯೂತ, ಕಿಡ್ನಿ ಹಾನಿಯಂತಹ ಕಾಯಿಲೆಗಳ ಬಗ್ಗೆ ರೋಗಿಗಳು ಸಾಮಾನ್ಯವಾಗಿ ಯಾರಲ್ಲೂ ಹಂಚಿಕೊಳ್ಳಲ್ಲ. ಮೂತ್ರಪಿಂಡದ ಕಾಯಿಲೆ ಇದ್ದರೆ ಆಹಾರ ಮತ್ತು ಪಾನೀಯವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಕೆಲವು ಆಹಾರಗಳ ಸೇವನೆಯು ಮೂತ್ರಪಿಂಡದ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ.

Kidney Health: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರು ಅರಿಶಿನ ಸೇವಿಸಬಹುದೇ? ತಜ್ಞರು ಹೇಳುವುದು ಹೀಗೆ
ಅರಿಶಿನ
TV9 Web
| Updated By: Rakesh Nayak Manchi|

Updated on: Jan 31, 2023 | 7:54 PM

Share

ಮೂತ್ರಪಿಂಡವು ನಮ್ಮ ದೇಹದ ಪ್ರಮುಖ ಅಂಗವಾಗಿದೆ. ಇದು ದೇಹದಿಂದ ಹಾನಿಕಾರಕ, ವಿಷಕಾರಿ ತ್ಯಾಜ್ಯ ವಸ್ತುಗಳನ್ನು ತೆಗೆದುಹಾಕುತ್ತದೆ. ಆದರೆ ಕೆಟ್ಟ ಆಹಾರ ಮತ್ತು ಹದಗೆಡುತ್ತಿರುವ ಜೀವನಶೈಲಿಯು ನಮ್ಮ ಮೂತ್ರಪಿಂಡಗಳು ಅನಾರೋಗ್ಯಕ್ಕೆ ತುತ್ತಾಗುತ್ತಿದೆ. ಆರೋಗ್ಯ ತಜ್ಞರ ಪ್ರಕಾರ, ಕಿಡ್ನಿ ಸರಿಯಾಗಿ ಕೆಲಸ ಮಾಡದೇ (Kidney Problem) ಇದ್ದಾಗ ದೇಹದಲ್ಲಿ ಟಾಕ್ಸಿನ್ ಸಂಗ್ರಹವಾಗುತ್ತದೆ. ಇದರಿಂದ ನಮ್ಮ ದೇಹದಲ್ಲಿ ಹಲವಾರು ರೋಗಗಳು ಉದ್ಭವಿಸುತ್ತವೆ. ಕಿಡ್ನಿ ರೋಗಗಳು, ಕಿಡ್ನಿ ದೌರ್ಬಲ್ಯ, ಕಿಡ್ನಿ ಉರಿಯೂತ, ಕಿಡ್ನಿ ಹಾನಿಯಂತಹ ಕಾಯಿಲೆಗಳ ಬಗ್ಗೆ ರೋಗಿಗಳು ಎಲ್ಲೂ ಹೇಳಿಕೊಳ್ಳುವುದಿಲ್ಲ. ಆದರೆ ಮೂತ್ರಪಿಂಡದ ಸಮಸ್ಯೆ ಕಡಿಮೆ ಮಾಡಲು ಆಹಾರ ಮತ್ತು ಪಾನೀಯವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಕೆಲವು ಆಹಾರಗಳ ಸೇವನೆಯು ಮೂತ್ರಪಿಂಡದ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ.

ಕಿಡ್ನಿ ರೋಗಿಗಳು ಅರಿಶಿನವನ್ನು ತಿನ್ನಬಾರದು ಎಂದು ಜನರು ಸಾಮಾನ್ಯವಾಗಿ ಹೇಳುತ್ತಾರೆ. ಆದರೆ ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಅರಿಶಿನವನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ ಮತ್ತು ದೇಹವು ಆರೋಗ್ಯಕರವಾಗಿರುತ್ತದೆ. ಅರಿಶಿನ ಸೇವನೆಯಿಂದ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ. ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ. ಅರಿಶಿನ ಸೇವನೆಯು ದೇಹದ ಮೇಲೆ ಔಷಧೀಯ ಪರಿಣಾಮವನ್ನು ಬೀರುತ್ತದೆ.

ಇದನ್ನೂ ಓದಿ: Uttar Pradesh: ಎದೆ ಹಾಲು ಸೇವಿಸಿ 111 ನವಜಾತ ಶಿಶುಗಳು ಸಾವು! ಇದಕ್ಕೆ ಕಾರಣ ಮಾಂಸಾಹಾರ ಎನ್ನತ್ತಿದ್ದಾರೆ ವೈದ್ಯರು

ಅರಿಶಿನವು ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ. ಕಿಡ್ನಿ ಸಮಸ್ಯೆಗಳಲ್ಲಿ ಅರಿಶಿನವನ್ನು ಸೇವಿಸಬಹುದು ಎಂದು ತಜ್ಞರು ಹೇಳುತ್ತಾರೆ. ಈ ಮಸಾಲೆ ಸೇವನೆಯಿಂದ ದೇಹಕ್ಕೆ ಆಗುವ ಲಾಭಗಳೇನು? ಇಲ್ಲಿದೆ ನೋಡಿ.

ಹೆಲ್ತ್‌ಮ್ಯಾಚ್ ತಜ್ಞರ ಪ್ರಕಾರ, ಅರಿಶಿನವು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸಬಹುದಾದ ಮಸಾಲೆಯಾಗಿದೆ. ಅರಿಶಿನದಲ್ಲಿ ಕರ್ಕ್ಯುಮಿನ್ ಮುಖ್ಯ ಅಂಶವಾಗಿದೆ. ಈ ಅಂಶವು ನೋವನ್ನು ನಿವಾರಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದನ್ನು ಸೇವಿಸುವುದರಿಂದ ಸೋಂಕಿನ ಅಪಾಯ ಕಡಿಮೆಯಾಗುತ್ತದೆ. ಈ ಮಸಾಲಾ ದೇಹದಲ್ಲಿನ ಎಲ್ಲವನ್ನೂ ಗುಣಪಡಿಸುತ್ತದೆ.

ಅರಿಶಿನ ಸೇವನೆಯಿಂದ ಕಿಡ್ನಿ ಸಮಸ್ಯೆ ಹೆಚ್ಚುತ್ತದೆಯೇ ಎಂಬ ಪ್ರಶ್ನೆ ಈಗ ಎದ್ದಿದೆ. ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಮತ್ತು ಇತರ ಆರೋಗ್ಯ ಪರಿಸ್ಥಿತಿಗಳಿಂದ ಬಳಲುತ್ತಿರುವ ಜನರಿಗೆ ಅರಿಶಿನವು ತುಂಬಾ ಉಪಯುಕ್ತವಾಗಿದೆ. ಈ ಮಸಾಲದ ಸೀಮಿತ ಸೇವನೆಯು ಯಾವುದೇ ಮೂತ್ರಪಿಂಡದ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ.

ಅರಿಶಿನದ ಅತಿಯಾದ ಸೇವನೆಯು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ

ಹೆಲ್ತ್‌ಲೈನ್ ನ್ಯೂಸ್ ಪ್ರಕಾರ, ಅರಿಶಿನದ ಅತಿಯಾದ ಸೇವನೆಯು ದೇಹದಲ್ಲಿ ಅನೇಕ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಅರಿಶಿನದಲ್ಲಿರುವ ಕರ್ಕ್ಯುಮಿನ್ ಹೆಚ್ಚಿನ ಪ್ರಮಾಣದ ಆಕ್ಸಲೇಟ್‌ಗಳನ್ನು ಹೊಂದಿರುತ್ತದೆ, ಇದು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಹೆಚ್ಚಿಸುತ್ತದೆ. ಇದು ಈ ಪ್ರಮುಖ ಅಂಗದ ಕಾರ್ಯನಿರ್ವಹಣೆಗೆ ಅಡ್ಡಿಯಾಗಬಹುದು.

ಇದಲ್ಲದೆ, ಕರ್ಕ್ಯುಮಿನ್ ಪರಿಣಾಮವು ಬಿಸಿಯಾಗಿರುತ್ತದೆ, ಇದು ಅತಿಸಾರ ಮತ್ತು ಅಜೀರ್ಣವನ್ನು ಉಂಟುಮಾಡುತ್ತದೆ. ಅರಿಶಿನದ ಹೆಚ್ಚಿನ ಸೇವನೆಯು ರಕ್ತ ತೆಳುವಾಗಲು ಕಾರಣವಾಗಬಹುದು. ಏಕೆಂದರೆ ಇದು ರಕ್ತ ಹೆಪ್ಪುಗಟ್ಟುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅರಿಶಿನದ ಹೆಚ್ಚಿನ ಸೇವನೆಯು ಯಕೃತ್ತಿನ ಆರೋಗ್ಯವನ್ನು ಸಹ ಹಾನಿಗೊಳಿಸುತ್ತದೆ.

(ಗಮನಿಸಿ: ವಿಷಯಗಳು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ಇದನ್ನು ಆರೋಗ್ಯ ವೃತ್ತಿಪರರ ಸಲಹೆಯ ಮೇರೆಗೆ ಒದಗಿಸಲಾಗಿದೆ. ನಿಮಗೆ ಯಾವುದೇ ಸಂದೇಹಗಳಿದ್ದರೆ ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸಿ.)

ಮತ್ತಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ