Health is Wealth: ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಿ, ಏಕೆಂದರೆ ಆರೋಗ್ಯವೇ ಭಾಗ್ಯ! ಹೇಗೆ? ಇಲ್ಲಿದೆ ಸರಳ ಮಾಹಿತಿ

| Updated By: ಸಾಧು ಶ್ರೀನಾಥ್​

Updated on: May 27, 2022 | 6:06 AM

ಆರೋಗ್ಯವಂತರಾಗಿರಲು ಇವುಗಳನ್ನು ಮಾಡಿ: 1. ನಿಯಮಿತ ಉಪವಾಸ, 2. ಯಥೇಚ್ಛ ನಗು, 3. ವ್ಯಾಯಾಮ/ ಯೋಗ 4. ತೂಕವನ್ನು ಕಡಿಮೆ ಮಾಡಿಕೊಳ್ಳಿ

Health is Wealth: ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಿ, ಏಕೆಂದರೆ ಆರೋಗ್ಯವೇ ಭಾಗ್ಯ! ಹೇಗೆ? ಇಲ್ಲಿದೆ ಸರಳ ಮಾಹಿತಿ
ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಿ, ಏಕೆಂದರೆ ಆರೋಗ್ಯವೇ ಭಾಗ್ಯ! ಹೇಗೆ? ಇಲ್ಲಿದೆ ಸರಳ ಮಾಹಿತಿ
Follow us on

ಇದು ಉಚಿತ ಆರೋಗ್ಯ ಸಲಹೆ. ಉಚಿತವಾಗಿ ಸಿಕ್ಕಿದೆ ಎಂದು ನಿರ್ಲಕ್ಷ್ಯ ಮಾಡಬೇಡಿ. ಏಕೆಂದರೆ ಇದು ಅತ್ಯಂತ ಸಮಯೋಚಿತ, ಅತ್ಯಂತ ಉಚಿತ ಮತ್ತು ಅಷ್ಟೇ ಸರಳ ಮಾಹಿತಿಯಾಗಿದೆ. ಜಸ್ಟ್​ ನೀವು ಗಮನವಿಟ್ಟು ಪಾಲಿಸಿಬೇಕು ಅಷ್ಟೆ. ಈಗಂತೂ ಬಿಡಿ ಕೊರೊನೋತ್ತರ ಕಾಲದಲ್ಲಿ ಜನರಿಗೆ ತಮ್ಮ ಆರೋಗ್ಯದ ಬಗ್ಗೆ ಸಖತ್ ಅರಿವು ಬಂದಿದೆ. ಅದು ಅಗತ್ಯವೂ, ಅನಿವಾರ್ಯವೂ ಆಗಿದೆ. ಹಾಗಾಗಿ Health is Wealth ಅನ್ನುವಂತೆ ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಿ, ಇಲ್ಲಿದೆ ಸರಳ ಮಾಹಿತಿ:

  1. ಈ ಎರಡನ್ನು ಆಗಾಗ ಪರೀಕ್ಷಿಸಿಕೊಳ್ಳಿ: 1. ಬಿ.ಪಿ (BP),  2. ಸಕ್ಕರೆ (Sugar)
  2.  ಈ ನಾಲ್ಕನ್ನು ಸಾಧ್ಯವಾದಷ್ಟೂ ಕಡಿಮೆ ಬಳಸಿ: 1. ಉಪ್ಪು, 2. ಸಕ್ಕರೆ,  3. ಡೈರಿ ಉತ್ಪನ್ನ,  4. ಪಿಷ್ಟ ಪದಾರ್ಥಗಳು
  3.  ಈ ನಾಲ್ಕನ್ನು ಹೆಚ್ಚು ಬಳಸಿ: 1. ಹಸಿರು ಸೊಪ್ಪು,  2. ತರಕಾರಿ,  3. ಹಣ್ಣುಗಳು,  4. ಡ್ರೈ ಫ್ರೂಟ್ಸ್​
  4.  ಈ ಮೂರನ್ನು ಮರೆತು ಬಿಡಿ: 1. ನಿಮ್ಮ ವಯಸ್ಸು,  2. ನಿಮ್ಮ ಹಿಂದಿನದು (ಕಳೆದುಹೋದ ದಿನಗಳು), 3. ದ್ವೇಷ
  5.  ಈ ಮೂರನ್ನು ಹೊಂದಲು ಪ್ರಯತ್ನಿಸಿ: 1. ನೈಜ ಮಿತ್ರರು,  2. ಪ್ರೀತಿಸುವ ಕುಟುಂಬ,  3. ಧನಾತ್ಮಕ ಚಿಂತನೆ
  6.  ಆರೋಗ್ಯವಂತರಾಗಿರಲು ಈ ಕೆಳಗಿನವುಗಳನ್ನು ಮಾಡಿ: 1. ನಿಯಮಿತ ಉಪವಾಸ, 2. ಯಥೇಚ್ಛ ನಗು,  3. ವ್ಯಾಯಾಮ/ ಯೋಗ  4. ತೂಕವನ್ನು ಕಡಿಮೆ ಮಾಡಿಕೊಳ್ಳಿ
  7.  ಈ ನಾಲ್ಕು ವಿಷಯಗಳಿಗೆ ಕಾಯಬೇಡಿ: 1. ನಿದ್ದೆ ಮಾಡಲು ನಿದ್ದೆ ಬರುವವರೆಗೆ ಕಾಯಬೇಡಿ,  2. ವಿಶ್ರಾಂತಿ ತೆಗೆದುಕೊಳ್ಳಲು ಸುಸ್ತಾಗುವವರೆಗೆ ಕಾಯಬೇಡಿ,  3. ಸ್ನೇಹಿತನನ್ನು ಭೇಟಿಯಾಗಲು ಅವರು ಕಾಯಿಲೆ ಬೀಳುವವರೆಗೂ ಕಾಯಬೇಡಿ,  4. ದೇವರನ್ನು ಪ್ರಾರ್ಥಿಸಲು ಕಷ್ಟ ಬರುವವರೆಗೆ ಕಾಯಬೇಡಿ