Momos: ಮೊಮೊಸ್ ಎಷ್ಟು ಅಪಾಯಕಾರಿ ಗೊತ್ತಾ? ಅದರಲ್ಲೂ ನಾನ್ವೆಜ್ ಮೊಮೊಸ್
ರಸ್ತೆಬದಿಯಲ್ಲಿ ನಿಂತು ಮೊಮೊಸ್ ತಿಂದು ಹಸಿವು ನೀಗಿಸಿಕೊಳ್ಳಲು ಹಲವು ಬಾರಿ ಯೋಚಿಸುತ್ತೀರಿ. ಆದರೆ ಈ ಸಿಂಪಲ್ ಮತ್ತು ಟೇಸ್ಟಿ ಮೊಮೊಗಳು ನಿಮ್ಮ ದೇಹಕ್ಕೆ ಎಷ್ಟು ಅಪಾಯಕಾರಿ ಗೊತ್ತಾ?
ಮೊಮೊಸ್ ತಿನ್ನಲು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.. ಶಾಲೆ, ಕಾಲೇಜು, ಕಚೇರಿಯಿಂದ ಹಿಂತಿರುಗುವಾಗ ರಸ್ತೆ ಬದಿ ನಿಂತು ಮೊಮೊಸ್ (Momos) ತಿನ್ನಬೇಕೆನ್ನುವ ಆಸೆ ಇದ್ದೇ ಇರುತ್ತದೆ. ಮನೆಯಲ್ಲೇ ಮಾಡಿ ತಿನ್ನುವುದು ಬೇರೆ ವಿಚಾರ. ಆದರೆ ರಸ್ತೆ ಬದಿಯಲ್ಲಿ ತರಾತುರಿಯಲ್ಲಿ ತಿನ್ನುವ ಮೊಮೊಸ್ ನಿಮ್ಮ ದೇಹಕ್ಕೆ ತುಂಬಾ ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ? ಅದರಲ್ಲಿ ಎಣ್ಣೆ ಮತ್ತು ಮಸಾಲೆಗಳಿಲ್ಲ ಎಂದು ನಮಗೆ ಅನಿಸುತ್ತದೆ. ಎಣ್ಣೆ ಮತ್ತು ಮಸಾಲೆ ಇಲ್ಲದಿರುವಾಗ ಇದು ಹೇಗೆ ಅಪಾಯಕಾರಿ ಎಂದು ಹಲವರು ಕೇಳುತ್ತಾರೆ. ಎಷ್ಟೇ ತಿಂದರೂ ಅದು ದೇಹಕ್ಕೆ ಹಾನಿಕಾರಕವಲ್ಲ ಎಂದು ಭಾವಿಸುವುದು ತುಂಬಾ ತಪ್ಪು.
ಮೊಮೊಗಳನ್ನು ಮೈದಾ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಹಿಟ್ಟಿನಲ್ಲಿ ಅಜೋಡಿಕಾರ್ಬೊನಮೈಡ್ ಮತ್ತು ಬೆಂಜಾಯ್ಲ್ ಪೆರಾಕ್ಸೈಡ್ ಸಮೃದ್ಧವಾಗಿದೆ. ಮೊಮೊಸ್ ಅನ್ನು ಹೆಚ್ಚು ಕಾಲ ಮೃದುವಾಗಿಡಲು ಅಲೋಕ್ಸಾನ್ ಎಂಬ ದ್ರವವನ್ನು ಸೇರಿಸಲಾಗುತ್ತದೆ. ಇದು ನಮ್ಮ ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಮೈದಾ ಹಿಟ್ಟು ಮಾಡಲು ಅದಕ್ಕೆ ಸೇರಿಸುವ ವಿಶೇಷ ವಸ್ತು ದೇಹಕ್ಕೆ ಒಳ್ಳೆಯದಲ್ಲ. ಈ ನಿರ್ದಿಷ್ಟ ವಸ್ತುವು ದೇಹದಲ್ಲಿನ ಮೇದೋಜ್ಜೀರಕ ಗ್ರಂಥಿಯನ್ನು ಹಾನಿಗೊಳಿಸುತ್ತದೆ. ಅಲ್ಲದೆ ಮಧುಮೇಹವನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: Sugar: ಒಂದು ತಿಂಗಳು ಸಕ್ಕರೆ ಸೇವನೆ ನಿಲ್ಲಿಸಿದರೆ ಏನಾಗುತ್ತೆ? ತಜ್ಞರ ಮಾಹಿತಿ ಇಲ್ಲಿದೆ
ನಾನ್-ವೆಜ್ ಮೊಮೊಸ್: ಮಾಂಸಾಹಾರಿ ಮೊಮೊಸ್ ಹೆಚ್ಚು ಅಪಾಯಕಾರಿ. ಮಾಂಸಾಹಾರಿ ಮೊಮೊಗಳನ್ನು ಚಿಕನ್ ಜೊತೆ ನೀಡಲಾಗುತ್ತದೆ. ಇದರ ಗುಣಮಟ್ಟ ತುಂಬಾ ಕಡಿಮೆ. ಇದು ಯಾರನ್ನಾದರೂ ಅನಾರೋಗ್ಯಕ್ಕೆ ಒಳಪಡಿಸಬಹುದು.
ಮೊಮೊಸ್ ಜೊತೆ ಕೆಂಪು ಚಟ್ನಿ: ಮೊಮೊಸ್ ಜೊತೆ ತಿನ್ನುವ ಕೆಂಪು ಚಟ್ನಿ ದೇಹಕ್ಕೆ ತುಂಬಾ ಹಾನಿಕಾರಕವಾಗಿದೆ. ಕೆಂಪು ಚಟ್ನಿಯನ್ನು ಮೊಮೊಸ್ ಜೊತೆ ತಿನ್ನಲಾಗುತ್ತದೆ. ಇದರ ರುಚಿ ಚೆನ್ನಾಗಿದ್ದರೂ ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದಲ್ಲ.
ಸ್ಥೂಲಕಾಯಕ್ಕೆ ಕಾರಣವಾಗಬಹುದು ಎಚ್ಚರ
ಮೊಮೊಸ್ ಮೊನೊ-ಸೋಡಿಯಂ ಗ್ಲುಟಮೇಟ್ (MSG) ನಲ್ಲಿ ಅಧಿಕವಾಗಿದೆ, ಇದು ಬೊಜ್ಜುಗೆ ಕಾರಣವಾಗುವುದು ಮಾತ್ರವಲ್ಲದೆ ನರವೈಜ್ಞಾನಿಕ ಅಸ್ವಸ್ಥತೆಗಳು, ಬೆವರುವುದು, ಎದೆ ನೋವು, ವಾಕರಿಕೆ ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅಷ್ಟೇ ಅಲ್ಲದೆ, ಅಕ್ಕಿ ಹಿಟ್ಟಿನಿಂದ ಮಾಡಿದರೆ ಸ್ವಲ್ಪ ಆರೋಗ್ಯಕ್ಕೆ ಒಳ್ಳೆಯದು. ಆದರೆ ಹೋಟೆಲ್ಗಳಲ್ಲಿ ಹಾಗೆ ಮಾಡುವುದಿಲ್ಲ. ಮೈದಾ ಹಿಟ್ಟು ಬಳಸುತ್ತಾರೆ. ಮೈದಾ ನಮ್ಮ ಆರೋಗ್ಯವನ್ನು ಸಂಪೂರ್ಣವಾಗಿ ಹಾಳು ಮಾಡುತ್ತದೆ.
ಮತ್ತಷ್ಟು ಹೆಲ್ತ್ ನ್ಯೂಸ್ಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ