Health Tips: ನೈಸರ್ಗಿಕವಾಗಿ ನಮ್ಮ ದೇಹದ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿಸಿಕೊಳ್ಳಲು ಆಯುರ್ವೇದದ ಪರಿಹಾರ ಇಲ್ಲಿವೆ

| Updated By: ಸುಷ್ಮಾ ಚಕ್ರೆ

Updated on: Apr 13, 2022 | 6:32 PM

ಆಯುರ್ವೇದದ ಪ್ರಕಾರ, ಕೂದಲಿನ ಆರೋಗ್ಯವು ಕ್ಯಾಲ್ಸಿಯಂ ಅನ್ನು ಅವಲಂಬಿಸಿರುತ್ತದೆ. ಕ್ಯಾಲ್ಸಿಯಂ ಸ್ನಾಯು, ನರ, ಹೃದಯ ಬಡಿತಗಳನ್ನು ನಿಯಂತ್ರಿಸುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಗೆ ಸಹಾಯ ಮಾಡುತ್ತದೆ.

Health Tips: ನೈಸರ್ಗಿಕವಾಗಿ ನಮ್ಮ ದೇಹದ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿಸಿಕೊಳ್ಳಲು ಆಯುರ್ವೇದದ ಪರಿಹಾರ ಇಲ್ಲಿವೆ
ಕ್ಯಾಲ್ಸಿಯಂ ಅಂಶ ಹೆಚ್ಚಾಗಿರುವ ಪದಾರ್ಥಗಳು
Follow us on

ಮೂಳೆ ಮತ್ತು ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಹೊರತಾಗಿ ರಕ್ತ ಹೆಪ್ಪುಗಟ್ಟುವಿಕೆ, ಹೃದಯದ ಲಯವನ್ನು ನಿಯಂತ್ರಿಸುವುದು ಮತ್ತು ಆರೋಗ್ಯಕರ ನರಗಳ ಕಾರ್ಯನಿರ್ವಹಣೆಯಂತಹ ದೇಹದ ಕಾರ್ಯಗಳಲ್ಲಿ ಕ್ಯಾಲ್ಸಿಯಂ (Calcium) ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಾಕಷ್ಟು ಕ್ಯಾಲ್ಸಿಯಂ ಕೊರತೆಯು ಮಕ್ಕಳು ಮತ್ತು ವಯಸ್ಕರಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಕ್ಯಾಲ್ಸಿಯಂ ಕೊರತೆಯಿಂದ ಸುಸ್ತು, ಹಲ್ಲಿನ ಸಮಸ್ಯೆ, ಒಣ ಚರ್ಮ, ಸ್ನಾಯು ಸೆಳೆತ ಮುಂತಾದ ಲಕ್ಷಣಗಳು ಉಂಟಾಗುತ್ತದೆ.

ಸಾಮಾನ್ಯವಾಗಿ, ಥೈರಾಯ್ಡ್, ಕೂದಲು ಉದುರುವಿಕೆ, ಕೀಲು ನೋವು, ಚಯಾಪಚಯ ಸಮಸ್ಯೆ (ಕಳಪೆ ಕರುಳಿನ ಆರೋಗ್ಯ), ಹಾರ್ಮೋನ್ ಸಮಸ್ಯೆಗಳು, HRTಗೆ (ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿ) ಒಳಗಾಗುವ ಜನರು, ಋತುಬಂಧದ ಸಮಯದಲ್ಲಿ ಅಥವಾ ನಂತರದಲ್ಲಿ ಮಹಿಳೆಯರು ಕ್ಯಾಲ್ಸಿಯಂ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ಡಾ. ದೀಕ್ಷಾ ಭವಸಾರ್ ತನ್ನ ಇತ್ತೀಚಿನ ಇನ್​ಸ್ಟಾಗ್ರಾಂ ಪೋಸ್ಟ್​​ನಲ್ಲಿ ಬರೆದಿದ್ದಾರೆ.

ಕೆಲವೊಮ್ಮೆ ವಿಟಮಿನ್ ಡಿ ಕೊರತೆಯಿಂದಾಗಿ ಕ್ಯಾಲ್ಸಿಯಂ ಕೊರತೆಯನ್ನು ಗಮನಿಸಬಹುದು. ವಿಟಮಿನ್ ಡಿ ನಿಮ್ಮ ದೇಹವು ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ. ಬಲವಾದ ಮೂಳೆಗಳು, ಹಲ್ಲುಗಳು ಮತ್ತು ಕೂದಲನ್ನು ನಿರ್ಮಿಸಲು ಕ್ಯಾಲ್ಸಿಯಂ ಅವಶ್ಯಕವಾಗಿದೆ. ಆಯುರ್ವೇದದ ಪ್ರಕಾರ, ಕೂದಲಿನ ಆರೋಗ್ಯವು ಕ್ಯಾಲ್ಸಿಯಂ ಅನ್ನು ಅವಲಂಬಿಸಿರುತ್ತದೆ. ಕ್ಯಾಲ್ಸಿಯಂ ಸ್ನಾಯು, ನರ, ಹೃದಯ ಬಡಿತಗಳನ್ನು ನಿಯಂತ್ರಿಸುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಗೆ ಸಹಾಯ ಮಾಡುತ್ತದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ.

ವಿಟಮಿನ್ ಡಿ ಪಡೆಯಲು ಒಬ್ಬರು ಕನಿಷ್ಠ 20 ನಿಮಿಷಗಳ ಕಾಲ ಸೂರ್ಯನ ಬೆಳಕನ್ನು ಪಡೆಯಬೇಕು ಎಂದು ಡಾ. ಭವಸಾರ್ ಹೇಳುತ್ತಾರೆ. ಕ್ಯಾಲ್ಸಿಯಂನ ಅಗ್ರ 4 ನೈಸರ್ಗಿಕ ಮೂಲಗಳೆಂದರೆ,

1. ನೆಲ್ಲಿಕಾಯಿ:
ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ, ಕಬ್ಬಿಣದ ಅಂಶ ಸಮೃದ್ಧವಾಗಿದೆ. ನೀವು ಇಷ್ಟಪಡುವ ಯಾವುದೇ ರೂಪದಲ್ಲಿ ನೀವು ಅದನ್ನು ಸೇವಿಸಬಹುದು. ನೆಲ್ಲಿಕಾಯಿಯನ್ನು ಹಸಿಯಾಗಿ, ರಸದ ರೂಪದಲ್ಲಿ, ಪುಡಿಯ ರೂಪದಲ್ಲಿ, ಶರಬತ್ ಇತ್ಯಾದಿ ರೂಪದಲ್ಲಿ ಸೇವಿಸಬಹುದು. ನೆಲ್ಲಿಕಾಯಿ ರುಚಿಯಲ್ಲಿ ಹುಳಿಯಾಗಿರುವುದರಿಂದ, ಕೀಲು ನೋವು ಇರುವ ಜನರು ಇದನ್ನು ಸೇವಿಸದಿರುವುದು ಉತ್ತಮ.

2. ನುಗ್ಗೆಕಾಯಿ:
ನುಗ್ಗೆ ಸೊಪ್ಪು ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ, ಕಬ್ಬಿಣ, ವಿಟಮಿನ್ ಎ, ಸಿ ಮತ್ತು ಮೆಗ್ನೀಸಿಯಮ್‌ಗಳಿಂದ ತುಂಬಿವೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 1 ಟೀಸ್ಪೂನ್ ನುಗ್ಗೆ ಸೊಪ್ಪಿನ ಪುಡಿಯನ್ನು ಸೇವಿಸಿ.

3. ಎಳ್ಳು ಬೀಜಗಳು:
ಸುಮಾರು 1 ಚಮಚ ಕಪ್ಪು ಅಥವಾ ಬಿಳಿ ಎಳ್ಳನ್ನು ಹುರಿದು, ಒಂದು ಚಮಚ ಬೆಲ್ಲ ಮತ್ತು ತುಪ್ಪದೊಂದಿಗೆ ಮಿಶ್ರಣ ಮಾಡಿ ಉಂಡೆ ಮಾಡಿಟ್ಟುಕೊಳ್ಳಿ. ಇದು ನಿಮ್ಮ ಕ್ಯಾಲ್ಸಿಯಂ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

4. ಹಾಲು:
ಹಾಲು ದೇಹದಿಂದ ಸುಲಭವಾಗಿ ದೇಹವನ್ನು ಸೇರುವ ಕ್ಯಾಲ್ಸಿಯಂನ ಅತ್ಯುತ್ತಮ ಮತ್ತು ಸುಲಭವಾಗಿ ಲಭ್ಯವಿರುವ ಮೂಲವಾಗಿದೆ. ಪ್ರತಿದಿನ ಒಂದು ಲೋಟ ಹಾಲು ಕುಡಿಯುವುದರಿಂದ ನಿಮ್ಮ ದೇಹಕ್ಕೆ ಅಗತ್ಯವಾದ ಕ್ಯಾಲ್ಸಿಯಂ ಸಿಗುತ್ತದೆ.

ಇದನ್ನೂ ಓದಿ: Health Tips: ಬೇಸಿಗೆಯಲ್ಲಿ ಅತಿಯಾಗಿ ಬೆವರುವುದರಿಂದ ಪಾರಾಗಲು ಇಲ್ಲಿವೆ 5 ಮಾರ್ಗಗಳು

Summer Health: ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು 5 ಸುಲಭ ಮಾರ್ಗಗಳು ಇಲ್ಲಿವೆ