ಆಯುರ್ವೇದ ಗಿಡಮೂಲಿಕೆಗಳು ಆತಂಕವನ್ನು ನಿವಾರಿಸುತ್ತದೆ; ಬಳಸುವ ಕ್ರಮ ತಿಳಿಯಿರಿ

| Updated By: shruti hegde

Updated on: Aug 15, 2021 | 3:51 PM

ದೇಹದಕ್ಕೆ ಸುಸ್ತು, ಮಾನಸಿಕ ಒತ್ತಡದಿಂದ ದೂರವಿರಲು ಗಿಡಮೂಲಿಕೆಗಳನ್ನು ಬಳಸಬಹುದು. ಆಯುರ್ವೇದ ಔಷಧಿಗಳನ್ನು ಬಳಸುವ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ.

ಆಯುರ್ವೇದ ಗಿಡಮೂಲಿಕೆಗಳು ಆತಂಕವನ್ನು ನಿವಾರಿಸುತ್ತದೆ; ಬಳಸುವ ಕ್ರಮ ತಿಳಿಯಿರಿ
ಸಾಂದರ್ಭಿಕ ಚಿತ್ರ
Follow us on

ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚು ಹೊರಗಡೆ ತಿರುಗಾಡದೇ ಮನೆಯಲ್ಲಿಯೇ ವಾಸಿಸುತ್ತಿದ್ದೇವೆ. ಹಾಗಿರುವಾಗ ಅನೇಕರು ಒತ್ತಡ ಮತ್ತು ಖಿನ್ನತೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದರ ಪರಿಣಾಮ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕವಾಗಿ ಕುಗ್ಗಿದ್ದಾರೆ. ಹಾಗಿರುವಾಗ ಒತ್ತಡ ಮತ್ತು ಖಿನ್ನತೆಯನ್ನು ದೂರವಾಗಿಸಲು ಮನೆ ಮದ್ದುಗಳು ಸಹಾಯಕವಾಗಿದೆ. ಅದರಲ್ಲಿಯೂ ಗಿಡಮೂಲಿಕೆಗಳಿಂದ ಖಿನ್ನತೆಯನ್ನು ದೂರ ಮಾಡಿಕೊಳ್ಳಬಹುದಾಗಿದೆ.

ದೇಹದಕ್ಕೆ ಸುಸ್ತು, ಮಾನಸಿಕ ಒತ್ತಡದಿಂದ ದೂರವಿರಲು ಗಿಡಮೂಲಿಕೆಗಳನ್ನು ಬಳಸಬಹುದು. ಆಯುರ್ವೇದ ಔಷಧಿಗಳನ್ನು ಬಳಸುವ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ. ಆಯುರ್ವೇದದಲ್ಲಿ ಅನೇಕ ಗಿಡಮೂಲಿಕೆಗಳು ದೇಹದ ಒತ್ತಡದಿಂದ ದೂರವಿರಲು ಸಹಾಯ ಮಾಡುತ್ತದೆ. ಇದರಲ್ಲಿರುವ ಔಷಧೀಯ ಗುಣಗಳು ಆರೋಗ್ಯವನ್ನು ಸುಧಾರಿಸುತ್ತದೆ.

ಬ್ರಾಹ್ಮೀ
ಬ್ರಾಹ್ಮೀ ಸಸ್ಯ ಔಷಧೀಯ ಗುಣಗಳನ್ನು ಹೊಂದಿದ್ದು, ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ. ನೆನಪಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಹೆಚ್ಚು ಬ್ರಾಹ್ಮೀ ಎಲೆಗಳನ್ನು ಬಳಸಲಾಗುತ್ತದೆ. ದೇಹಕ್ಕೆ ಆಯಾಸ ಅಥವಾ ಸುಸ್ತಾದಾಗ ಬ್ರಾಹ್ಮೀ ಎಲೆಗಳಿಂದ ತಯಾರಿಸಿದ ಎಣ್ಣೆಯಿಂದ ಮಸಾಜ್ ಮಾಡುವ ಮೂಲಕ ದೇಹದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು.

ಅಶ್ವಗಂಧ
ಈ ಸಸ್ಯ ಉರಿಯೂತ, ಒತ್ತಡ, ಆತಂಕವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅಶ್ವಗಂಧದ ನಿಯಮಿತ ಸೇವನೆಯು ಉತ್ತಮ ನಿದ್ರೆಗೆ ಕಾರಣವಾಗುತ್ತದೆ. ದೇಹಕ್ಕೆ ಶಕ್ತಿಯನ್ನು ತುಂಬಲು ಸಹಾಯ ಮಾಡುತ್ತದೆ. ಅಶ್ವಗಂಧದ ಕಷಾಯ ಅಥವಾ ಉಗುರು ಬೆಚ್ಚಗಿನ ನೀರು ಅಥವಾ ಹಾಲಿನಲ್ಲಿ ಮಿಶ್ರಣ ಮಾಡಿ ಸೇವಿಸುವುದರಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ.

ಭೃಂಗರಾಜ
ದೇಹದಲ್ಲಿ ರಕ್ತಪರಿಚಲನೆಯನ್ನು ಹೆಚ್ಚಿಸಲು ಭರಂಗರಾಜ ಸಹಾಯ ಮಾಡುತ್ತದೆ. ತಲೆ ಕೂದಲಿನ ಉತ್ತಮ ಬೆಳವಣಿಗೆ ಭೃಂಗರಾಜ ಸಹಾಯಕವಾಗಿದೆ. ಒಣ ನೆತ್ತಿ, ಬಿಳಿ ಕೂದಲಿನಿಂದ ಪರಿಹಾರ ಪಡೆಯಲು ಭಂಗರಾಜವನ್ನು ಬಳಸಲಾಗುತ್ತದೆ. ಭರಂಗರಾಜದಿಂದ ತಯಾರಿಸಿದ ಎಣ್ಣೆಯನ್ನು ವಾರಕ್ಕೆ ಒಮ್ಮೆಯಾದರೂ ತಲೆ ಕೂದಲಿಗೆ ಹಚ್ಚಿ ಮಸಾಜ್ ಮಾಡುವ ಅಭ್ಯಾಸ ರೂಢಿಯಲ್ಲಿಟ್ಟುಕೊಳ್ಳಿ.

ಇದನ್ನೂ ಓದಿ:

Health Tips: ಈ 5 ಗಿಡಮೂಲಿಕೆಗಳು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ

Health Tips: ಬಿಳಿ ಚಹಾ ಕುಡಿಯುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾ?