Health Tips: ಬಿಳಿ ಚಹಾ ಕುಡಿಯುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತಾ?
Health Tips in kannada: ಬಿಳಿ ಎಲೆಗಳು ಮತ್ತು ಅದರ ಸುತ್ತಲಿನ ಬಿಳಿ ನಾರುಗಳಿಂದ ಈ ಚಹಾ ಮಾಡುವುದರಿಂದ ಇದು ತಿಳಿ ಕಂದು ಅಥವಾ ಬಿಳಿ ಬಣ್ಣವನ್ನು ಹೊಂದಿರುತ್ತವೆ.
Health Benefits of White Tea: ಬಹುತೇಕ ಜನರ ದಿನಚರಿ ಶುರುವಾಗುವುದು ಚಹಾದಿಂದ ಎಂದರೆ ತಪ್ಪಾಗಲಾರದು. ಬೆಳಗ್ಗೆ ಎದ್ದೊಡನೆ ಬಿಸಿ ಬಿಸಿ ಚಹಾ ಕುಡಿದರಷ್ಟೇ ಹೊಸ ಉಲ್ಲಾಸ ಸಿಗುತ್ತದೆ. ಹೀಗಾಗಿಯೇ ಭಾರತ ಸೇರಿದಂತೆ ಹಲವು ದೇಶಗಳ ಮುಖ್ಯ ಪೇಯವಾಗಿ ಚಹಾ ಗುರುತಿಸಿಕೊಂಡಿದೆ. ಸಾಮಾನ್ಯವಾಗಿ ನಾವೆಲ್ಲರೂ ಚಹಾ ಎಂದಾಗ ಹಾಲಿನ ಟೀ ಅಥವಾ ಬ್ಲ್ಯಾಕ್ ಟೀ ಎಂಬ ಎರಡು ಆಯ್ಕೆಯನ್ನು ಹೊಂದಿರುತ್ತೇವೆ. ಇದರ ಹೊರತಾಗಿ ನಿಂಬೆ ಚಹಾ, ಗ್ರೀನ್ ಟೀ ಅನ್ನು ಸೇವಿಸುತ್ತೇವೆ. ಆದರೆ ಬಿಳಿ ಚಹಾ ಅಥವಾ ವೈಟ್ ಟೀ (Health Benefits of White Tea) ಬಗ್ಗೆ ಕೇಳಿರುವವರು ಬಹಳ ವಿರಳ ಎಂದೇ ಹೇಳಬಹುದು. ಹಾಗಿದ್ರೆ ಏನಿದು ವೈಟ್ ಟೀ, ಇದನ್ನು ಕುಡಿಯುವುದರಿಂದ ಸಿಗುವ ಆರೋಗ್ಯಕರ ಪ್ರಯೋಜನಗಳೇನು ಎಂದು ತಿಳಿಯೋಣ.
ಬಿಳಿ ಚಹಾ ಎಂದರೇನು? ಕ್ಯಾಮೆಲಿಯಾ ಗಿಡದ ಎಲೆಗಳಿಂದ ಬಿಳಿ ಚಹಾವನ್ನು ತಯಾರಿಸಲಾಗುತ್ತದೆ. ಬಿಳಿ ಎಲೆಗಳು ಮತ್ತು ಅದರ ಸುತ್ತಲಿನ ಬಿಳಿ ನಾರುಗಳಿಂದ ಈ ಚಹಾ ಮಾಡುವುದರಿಂದ ಇದು ತಿಳಿ ಕಂದು ಅಥವಾ ಬಿಳಿ ಬಣ್ಣವನ್ನು ಹೊಂದಿರುತ್ತವೆ. ಈ ಕಾರಣಕ್ಕೆ ಇದನ್ನು ವೈಟ್ ಟೀ ಅಥವಾ ಬಿಳಿ ಚಹಾ ಎಂದು ಕರೆಯಲಾಗುತ್ತದೆ.
ಇದು ಟ್ಯಾನಿನ್ಸ್, ಫ್ಲೋರೈಡ್ಗಳು, ಫ್ಲೇವನಾಯ್ಡ್ಗಳು ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿರುತ್ತವೆ. ಬಿಳಿ ಚಹಾವು ಹಸಿರು ಚಹಾಕ್ಕಿಂತ ಕಡಿಮೆ ಕೆಫೀನ್ ಅನ್ನು ಹೊಂದಿರುವುದು ಇದರ ವಿಶೇಷತೆ. ಈ ಚಹಾವು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ. ಹಾಗಿದ್ರೆ ವೈಟ್ ಟೀ ಕುಡಿಯುವುದರಿಂದ ಸಿಗುವ ಆರೋಗ್ಯಕರ ಲಾಭಗಳೇನು ನೋಡೋಣ.
ಉರಿಯೂತವನ್ನು ಕಡಿಮೆ ಮಾಡುತ್ತೆ: ವೈಟ್ ಟೀ ಊತವನ್ನು ಕಡಿಮೆ ಮಾಡಲು ಸಹಾಯಕ. ಈ ಚಹಾದಲ್ಲಿ ಪಾಲಿಫಿನಾಲ್‌ಗಳು ಸಮೃದ್ಧವಾಗಿದ್ದು, ಅದು ಉತ್ಕರ್ಷಣ ನಿರೋಧಕಗಳಾಗಿ ಕಾರ್ಯನಿರ್ವಹಿಸುತ್ತದೆ. ಇದು ದೇಹವನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಪ್ರಯೋಜನಕಾರಿ.
ಡಯಬಿಟಿಸ್ ನಿಯಂತ್ರಣ: ಬಿಳಿ ಚಹಾ ಕುಡಿಯುವುದರಿಂದ ಡಯಾಬಿಟಿಸ್ ಅನ್ನು ನಿಯಂತ್ರಿಸಬಹುದು. ಇದು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಅದು ಇನ್ಸುಲಿನ್ ಪ್ರತಿರೋಧದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ನೈಸರ್ಗಿಕ ಗುಣಗಳು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಅಲ್ಲದೆ, ಸ್ನಾಯುಗಳಲ್ಲಿ ಗ್ಲೂಕೋಸ್ ಮಟ್ಟವನ್ನು ಹೆಚ್ಚಳವನ್ನು ತಡೆಯುತ್ತದೆ. ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರು ಇದನ್ನು ಸೇವಿಸುವುದು ಉತ್ತಮ. ಹಾಗೆಯೇ ದೇಹದಲ್ಲಿ ಕಡಿಮೆ ಸಕ್ಕರೆ ಸಮಸ್ಯೆಯಿಂದ ಬಳಲುತ್ತಿರುವವರು ಅಂದರೆ ಹೈಪೊಗ್ಲಿಸಿಮಿಯಾ ಸಮಸ್ಯೆ ಇರುವವರು ಈ ಚಹಾವನ್ನು ಕುಡಿಯಬಾರದು.
ಚರ್ಮದ ಆರೋಗ್ಯ: ಚರ್ಮ ಆರೋಗ್ಯಕ್ಕೂ ಬಿಳಿ ಚಹಾ ತುಂಬಾ ಸಹ ಪ್ರಯೋಜನಕಾರಿ. ಇದು ಅ್ಯಂಟಿ ಏಜಿಂಗ್ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಪ್ರತಿನಿತ್ಯ ವೈಟ್ ಟೀ ಕುಡಿಯುವುದರಿಂದ ಯೌವ್ವನವನ್ನು ಕಾಪಾಡಿಕೊಳ್ಳಬಹುದು. ಅಲ್ಲದೆ ಚರ್ಮದ ಮೇಲೆ ಸುಕ್ಕುಗಳನ್ನು ತಡೆಯುತ್ತದೆ. ಹೀಗಾಗಿ ಬಿಳಿ ಚಹಾ ಕುಡಿಯುವುದು ಸೌಂದರ್ಯದ ವಿಷಯದಲ್ಲೂ ಪ್ರಯೋಜನಕಾರಿ ಎನ್ನಬಹುದು.
ಇದನ್ನೂ ಓದಿ: Health Tips : ಇದು ನಿಮಗೆ ಗೊತ್ತೇ? ಬೆಳ್ಳುಳ್ಳಿ ಸಿಪ್ಪೆಯಿಂದ ಸಿಗುತ್ತೆ ಹಲವು ಪ್ರಯೋಜನಗಳು
ಇದನ್ನೂ ಓದಿ: India vs England 2nd Test: ಟೀಮ್ ಇಂಡಿಯಾದಲ್ಲಿ 2 ಬದಲಾವಣೆ ಸಾಧ್ಯತೆ: ಪ್ಲೇಯಿಂಗ್ 11 ಹೀಗಿರಲಿದೆ
ಇದನ್ನೂ ಓದಿ: India vs England: 2ನೇ ಟೆಸ್ಟ್ ವೇಳೆ ಮಳೆಯಾಗಲಿದೆಯಾ? ಇಲ್ಲಿದೆ 5 ದಿನಗಳ ಸಂಪೂರ್ಣ ಹವಾಮಾನ ವರದಿ
ಇದನ್ನೂ ಓದಿ: Toyota Cars: ಜೋಳ ನೀಡಿ ಟೊಯೋಟಾ ಕಾರು ಖರೀದಿಸುವ ಅವಕಾಶ